Homeಮುಖಪುಟಕಲಬುರ್ಗಿ: ‘ಈ ಸಲ ಖರ್ಗೆಯವರಿಗೆ ಟಫ್ ಇದೆ’

ಕಲಬುರ್ಗಿ: ‘ಈ ಸಲ ಖರ್ಗೆಯವರಿಗೆ ಟಫ್ ಇದೆ’

- Advertisement -
- Advertisement -

ಹಾಗಂತ ಖರ್ಗೆ ತುಂಬ ತೊಂದರೆಯಲ್ಲಿ ಏನಿಲ್ಲ. ಆದರೆ ಅಲ್ಲಿನ ಲೋಕಲ್ ರಾಜಕೀಯ ವಿದ್ಯಮಾನಗಳಿಗೆ ಕುರುಡಾದ ಅವರು, ಪುತ್ರ ವಾತ್ಸಲ್ಯಕ್ಕೆ ಜೋತು ಬಿದ್ದುದರ ಪರಿಣಾಮವಿದು. ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಅವರನ್ನು ಹಣಿಯಲು ‘ಮೋದಿ ಪ್ರೇರಿತ’ ಸಂಘ ಟೀಮ್ ಇಲ್ಲಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದೆ. ಹಾಗಾಗಿ ಖರ್ಗೆಗೆ ಈ ಸಲ ‘ಟಪ್ಫು’ ಎನ್ನುವುದು ಮೇಲ್ನೋಟಕ್ಕೆ ನಿಚ್ಚಳವಾದರೂ, ಖರ್ಗೆ ಕಡಿಮೆ ಅಂತರದಲ್ಲಿ ಗೆಲ್ಲುವ ಸೂಚನೆಗಳು ದಟ್ಟವಾಗಿವೆ…

‘ಈ ಸಲ ಖರ್ಗೆಯವರಿಗೆ ಟಪ್ಫು ಇದೆ’
ಕಷ್ಟವಾದರೂ ಖರ್ಗೆ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್‍ನವರು, ಪ್ರಗತಿಪರರು ಹೇಳುತ್ತಾರೆ. ಬಿಜೆಪಿ, ಸಂಘ ಪರಿವಾರದವರಂತೂ ಈ ಸಲ ನಮ್ಮದೇ ಗೆಲುವು ಅನ್ನುತ್ತಿದ್ದಾರೆ. ಸತ್ಯ ಇವೆರಡರ ನಡುವೆ ತೇಲುತ್ತಿದೆಯಾದರೂ, ಅದು ಒಂದು ಕಡೆಯೇ ಹೆಚ್ಚಿಗೆ ವಾಲುತ್ತಿದೆ!

ಎಲ್ಲ ಕಡೆಯಂತೆ ಇಲ್ಲಿ ಜಾತಿ ಇಕ್ವೇಶನ್ ಇದೆ. ಹಳೆ ಸಮೀಕರಣದ ಲೆಕ್ಕದಲ್ಲಿ ಖರ್ಗೆಗೆ ಗೆಲುವು ಲಭಿಸಬಹುದಿತ್ತು. ಸಮೀಕರಣಗಳು ಬದಲಾಗುವ ಪರಿಯನ್ನು ಖರ್ಗೆ ಅಂದಾಜು ಮಾಡಿದ್ದಾರಾದರೂ, ಸಮೀಕರಣಗಳ ಆಚೆ ನಡೆಯುವ ‘ಧರ್ಮ’ದ ಆಟ ಅವರ ಕ್ಷೇತ್ರದಲ್ಲಿ ಎರಡು ವರ್ಷಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಅವರು ಗುರುತಿಸಿಲ್ಲ ಅನಿಸುತ್ತದೆ.

ಇಲ್ಲಿ ಅವರ ಜಯಕ್ಕೆ ತೊಡಕಾಗಿರುವ ಹಲವು ಸಂಗತಿಗಳಿವೆ:
ಮಗನನ್ನು ಮಿನಿಸ್ಟರ್ ಮಾಡಿದ್ದು ಖರ್ಗೆ ಅವರಿಗೆ, ಅವರ ಮಗನಿಗೆ ಮತ್ತು ಅಂಧಾಭಿಮಾನಿಗಳಿಗೆ ಖುಷಿ ತಂದಿರಬಹುದು. ಆದರೆ ಇದೇ ಅವರಿಗೆ ಈ ಸಲದ ಚುನಾವಣೆಯಲ್ಲಿ ತೊಂದರೆ ಮಾಡಲೂಬಹುದು. ಕಾಂಗ್ರೆಸ್‍ನಿಂದ ಸೋತ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚಸನೂರು ಈಗ ಬಿಜೆಪಿಯಲ್ಲಿದ್ದು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಕಾಂಗ್ರೆಸ್‍ನ ಮಲಕರೆಡ್ಡಿ ಕೂಡ ಖರ್ಗೆ ಪರವಿಲ್ಲ.

2013ರಲ್ಲಿ ಈ ಲೋಕಸಭಾ ಕ್ಷೇತ್ರದಲ್ಲಿ 7 ಸ್ಥಾನ ಹೊಂದಿದ್ದ ಕಾಂಗ್ರೆಸ್ ಈಗ ನಾಲ್ಕಕ್ಕೆ ಕುಸಿದಿದೆ. ಬಿಜೆಪಿ ಈಗ 3 ಸ್ಥಾನ ಹೊಂದಿದ್ದರೆ, ಜೆಡಿಎಸ್ ಒಂದು ಸ್ಥಾನ ಹೊಂದಿದೆ. ಇಷ್ಟಾದರೂ ಖರ್ಗೆಗೆ ಗೆಲುವಿನ ಹಾದಿ ಕಷ್ಟ ಆಗುತ್ತಿರಲಿಲ್ಲ. ಆದರೆ ಅವರು ತಮ್ಮ ಮಗನನ್ನು ಪ್ರಮೋಟ್ ಮಾಡಿದ್ದೇ ಇಲ್ಲಿ ಹಲವು ಲಿಂಗಾಯತರು ಮತ್ತು ಇತರ ಹಿಂದುಳಿದ ಜಾತಿಗಳು ಹಾಗೂ ಎಸ್‍ಸಿ ಎಡಗೈ ಸಮುದಾಯದಲ್ಲಿ ಅಸಮಾಧಾನ ಉಂಟು ಮಾಡಿದೆ.

ಈ ಭಾಗದಲ್ಲಿ ಹಲವಷ್ಟು ಬಹುಮುಖ್ಯ ಯೋಜನೆಗಳು ಜಾರಿಯಾಗಲು ಖರ್ಗೆಯವರೇ ಕಾರಣ. 371 ಜೆ, ಇಪಿಎಫ್ ಹಾಸ್ಪಿಟಲ್, ಕೇಂದ್ರೀಯ ವಿವಿ… ಜೊತೆಗೆ ಕೇಂದ್ರದ ಹಲವಾರು ಕಾರ್ಯಕ್ರಮಗಳ ಅನುಷ್ಠಾನ…. ಲೋಕಸಭೆಯಲ್ಲಿ ಮೋದಿಯ ಸುಳ್ಳುಗಳಿಗೆ ತಿರುಗೇಟು ನೀಡುವಲ್ಲಿ ಸಫಲರಾದವರು ಖರ್ಗೆ. ಆಗಿಂದಲೇ ಮೋದಿಗೆ ಖರ್ಗೆ ಬಗ್ಗೆ ಅಸಮಾಧಾನವಿದ್ದು, ಖರ್ಗೆ ಲೋಕಸಭೆಯಲ್ಲಿ ಜಾಡಿಸಿದ ನಂತರ, ಅಂತಿಮದಲ್ಲಿ ಮಾತಾಡಿದ್ದ ಮೋದಿ, ಖರ್ಗೆಜೀ, ಇದು ಲೋಕಸಭೆಯಲ್ಲಿ ನಿಮ್ಮ ಕೊನೆ ಭಷಣ ಎಂದು ಗೇಲಿ ಮಾಡಿದ್ದರು.

ಆದರೆ ಆಗಿಂದ ಇಲ್ಲಿ ಚೆಡ್ಡಿಗಳು ಫುಲ್ ಆಕ್ಟಿವ್ ಆಗಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಂಗಳಿಂದ ಕಲಬುರ್ಗಿಯಲ್ಲೇ ಟೆಂಟು ಹೊಡೆದಿದ್ದಾರೆ. ಇಲ್ಲಿನ ಲಿಂಗಾಯತ ಯುವಕರಲ್ಲಿ ಮೋದಿ ಕ್ರೇಜ್ ಇನ್ನೂ ಇದೆ. ಆದರೆ ಬಲಗೈ ದಲಿತರು, ಮುಸ್ಲಿಮರು, ಲಿಂಗಾಯತರು ಇವರೆಲ್ಲ ಸದ್ಯ ಖರ್ಗೆ ಪರ ಎಂದು ಕಾಣಿಸುತ್ತಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ನೆಪಕ್ಕಷ್ಟೇ.

ಖರ್ಗೆ ವಿರುದ್ಧ ಎಲ್ಲ ಪಟ್ಟಭದ್ರ ಶಕ್ತಿಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಂದಾಗುತ್ತಿರುವಂತೆ ಕಂಡರೂ, ಅದು ಪೂರ್ತಿ ಸತ್ಯವಲ್ಲ.
ಇಲ್ಲಿ ಖರ್ಗೆಗೇ ಗೆಲುವಿನ ಅವಕಾಶ ಜಾಸ್ತಿ, ಅಂತರ ಮಾತ್ರ ಕಡಿಮೆಯಾಗಲಿದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...