Homeಕರ್ನಾಟಕರಾಷ್ಟ್ರಧ್ವಜ ಕುರಿತ ಹೇಳಿಕೆ: ಈಶ್ವರಪ್ಪಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

ರಾಷ್ಟ್ರಧ್ವಜ ಕುರಿತ ಹೇಳಿಕೆ: ಈಶ್ವರಪ್ಪಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

’ನಾವು ರಾಷ್ಟ್ರೀಯವಾದಿಗಳು. ಇಂತಹ ತಪ್ಪು ಮಾಹಿತಿ, ಬೇಜವಾಬ್ದಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ.’

- Advertisement -
- Advertisement -

ರಾಷ್ಟ್ರಧ್ವಜದ ಬದಲಿಗೆ ಭಗವಾಧ್ವಜವೇ ರಾಷ್ಟ್ರಧ್ವಜ ಆಗಬಹುದು ಎಂದು ವಿವಾದಿತ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಚಿವರಿಗೆ ಈ ಕುರಿತು ಛೀಮಾರಿ ಹಾಕಿರುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ಬೆಂಬಲಿತ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿರುವ ವಿವಾದದ ಬಗ್ಗೆ ಫೆಬ್ರವರಿ 9ರಂದು ಪ್ರತಿಕ್ರಿಯಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ, “ಈ ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಅವತ್ತು ಕೆಂಪು ಕೋಟೆಯ ಮೇಲೆ ಕೂಡಾ ಕೇಸರಿ ಧ್ವಜ ಹಾರಿಸುತ್ತೇವೆ. ಮುಂದೊಂದು ದಿನ ಭಗವಾಧ್ವಜವೇ ರಾಷ್ಟ್ರಧ್ವಜ ಆಗಬಹುದು” ಎಂದು ವಿವಾದಿತ ಹೇಳಿಕೆ ನೀಡಿದ್ದರು.

 ಇಂಡಿಯಾ ಟುಡೇ ನ್ಯೂಸ್ ನಿರ್ದೇಶಕ ರಾಹುಲ್ ಕನ್ವಾಲ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಜೆ.ಪಿ.ನಡ್ಡಾ ಅವರು, “ನಾನು ಈಶ್ವರಪ್ಪ ಅವರಿಗೆ ಕರೆ ಮಾಡಿ ಕೇಸರಿ ಧ್ವಜದ ಕುರಿತ ಅವರ ಹೇಳಿಕೆಗಾಗಿ ಅವರನ್ನು ಬೈದಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶದ್ರೋಹ ಎಸಗಿದ ಈಶ್ವರಪ್ಪ; ಸದನದಲ್ಲಿ ಸ್ಪೀಕರ್‌ ಏಕಪಕ್ಷೀಯ ನಡೆ- ಡಿ.ಕೆ.ಶಿವಕುಮಾರ್‌ ಆರೋಪ

“ಇದು ಸಾಧ್ಯವೆ ಇಲ್ಲ. ಇಂತಹ ಮಾತಗಳನ್ನು ಆಡಬಾರದು. ಇಂತಹ ವಿಷಯಗಳಲ್ಲಿ ನಾನು ತಡ ಮಾಡುವುದೇ ಇಲ್ಲ. ನಾವು ಕಾನೂನಿನ ಆಧಾರದಲ್ಲಿ ನಡೆದುಕೊಳ್ಳುವ ಜನ. ಸಂವಿಧಾನವನ್ನು ಒಪ್ಪುವವರು, ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಇರುವವರು. ನಾವು ರಾಷ್ಟ್ರೀಯವಾದಿಗಳು. ಇಂತಹ ತಪ್ಪು ಮಾಹಿತಿ, ಬೇಜವಾಬ್ದಾರಿ ಹೇಳಿಕೆಗಳನ್ನು ನಾವು ಸಹಿಸುವುದಿಲ್ಲ. ಕ್ಷಮೆ ಇರಲಿ.. ಕೆಲವೊಮ್ಮೆ ಏನಾಗುತ್ತದೆ ಎಂದರೆ ಜನ ಅತಿ ಉತ್ಸಾಹಿಗಳಾಗಿ ಬಿಡುತ್ತಾರೆ. ಅವರಿಗೆ ಗೊತ್ತಿರುತ್ತದೆ ಈಗ ಪೋನ್ ಬರುತ್ತದೆ ಎಂದು. ನಾನು ಕರೆ ಮಾಡಿದೆ ಅವರು ಏನೇನೋ ಹೇಳಲು ಆರಂಭಿಸಿದ್ದರು ಶಿವಕುಮಾರ್‌ ಹಾಗಂದರು.. ಅದು ಇದು ಎಂದು. ತಕ್ಷಣ ನಾನು ಏನು ಹೇಳಬೇಡಿ ಎಂದು ಖಡಕ್ ಆಗಿ ತಿಳಿಸಿದೆ” ಎಂದು ಹೇಳಿದ್ದಾರೆ.

ಬಳಿಕ ನೀವು ಅವರನನ್ನು ಟೈಟ್ ಮಾಡಿದ್ರಿ ಎಂಬ ರಾಹುಲ್ ಕನ್ವಾಲ್ ಹೇಳಿಕೆಗೆ ಹೌದು. ಆದರೆ, ಅದನ್ನು ಟೈಟ್ ಎನ್ನುವ ಹಾಗಿಲ್ಲ. ಅವರು ಹಿರಿಯ ನಾಯಕರು. ಅವರೇ ಹೀಗೆಲ್ಲಾ ತಪ್ಪು ತಪ್ಪಾಗಿ ಹೇಳಿ ನೀಡಬಾರದು ಎಂದಿದ್ದಾರೆ.

“ಮುಖ್ಯಮಂತ್ರಿಗಳು ಸ್ವಯಂ ಪ್ರೇರಿತ ಕ್ರಮ ಕೈಗೊಂಡು ಈಶ್ವರಪ್ಪ ಅವರನ್ನು ಈಗಲೇ ವಜಾ ಮಾಡಬೇಕಿತ್ತು. ಸಚಿವರ ಹೇಳಿಕೆಯು 1971ರ ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಉಲ್ಲಂಘನೆಯಾಗಿದ್ದು, ಇದನ್ನು ದೇಶದ್ರೋಹವೆಂದು ಗುರುತಿಸಿ ಜೈಲು ಶಿಕ್ಷೆ ವಿಧಿಸಬೇಕು. ಕೂಡಲೇ ಈಶ್ವರಪ್ಪ ಅವರನ್ನು ವಜಾಗೊಳಿಸಿ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು.


ಇದನ್ನೂ ಓದಿ: ದೇಶದಲ್ಲಿ ಹಿಂದೂ ಧರ್ಮ ಬರುತ್ತದೆ, ಭಗವಾಧ್ವಜ ರಾಷ್ಟ್ರಧ್ವಜ ಆಗುತ್ತದೆ; ಕೆಂಪುಕೋಟೆಯಲ್ಲಿ ಅದನ್ನು ಹಾರಿಸುತ್ತೇವೆ: ಕೆ.ಎಸ್‌. ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...