Homeಮುಖಪುಟನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

ನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

- Advertisement -
- Advertisement -

Sorry (ಸಾರಿ-ಕ್ಷಮಿಸಿ): ಸಂಬಂಧವಿರುವ ವ್ಯಕ್ತಿಗಳ ಮಧ್ಯೆ ಸಾಮಾನ್ಯವಾಗಿ ಬಳಕೆಯಾಗುವ ಪದ.

ನಮ್ಮ ದೈನಂದಿನ ಜೀವನದಲ್ಲಿ ಈ ಪದವನ್ನು ಕೇಳುತ್ತಲೇ ಇರುತ್ತೇವೆ. ಈ ಪದ ಕಳೆದ ಒಂದು ಸಾವಿರ ವರ್ಷಗಳಿಂದ ಬಳಕೆಯಲ್ಲಿದೆ. ಹಳೆಯ ಜರ್ಮನ್ ಭಾಷೆಯಲ್ಲಿ ಇದು ಸೋರ್ ಎಂಬುದಾಗಿ ಬಳವಳಿ ಪಡೆದಿತ್ತು, ಅಂದರೆ ನೋವು. ನಂತರ ಅದು ಹಳೆಯ ಇಂಗ್ಲಿಷ್‌ನಲ್ಲಿ ಸರಿಗ್ ಎಂದಾಯಿತು, ಅದರರ್ಥ ನೋವಾಗಿದೆ ಅಥವಾ ಸಂಕಟವಾಗಿದೆ ಎಂದು. ಅದು ನಂತರ ಸಾರಿ ಎಂದು ಮುಂದುವರೆಯಿತು. ಹೇಳುವ ಅವಶ್ಯಕತೆ ಬಿದ್ದಾಗ ತುಂಬಾ ಸುಲಭವಾಗಿ ಹೇಳುವಂತ ಪದ. ಆದರೆ ಕೆಲವು ವಿರಳ ಸಂದರ್ಭಗಳಲ್ಲಿ ಅತ್ಯಂತ ಸರಳ ಪದಗಳನ್ನು ಉಚ್ಚಾರಿಸುವುದೂ ಕಷ್ಟದ ಕೆಲಸವಾಗಿಬಿಡುತ್ತದೆ. ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಕಿಂಗ್‌ನನ್ನು ಕೊಂದ ಮೇಲೆ ನೀಡುವ ತಪ್ಪೊಪ್ಪಿಕೆಯ ಹೇಳಿಕೆ ಏನೆಂದರೆ, ಚರ್ಚ್‌ನ ಗಂಟೆಗಳು ಬಾರಿಸಿದ ನಂತರ ಅದಕ್ಕೆ ಪ್ರತಿಕ್ರಿಯೆಯಾಗಿ ಅವನಿಗೆ ’ಆಮೆನ್’ ಎಂದು ಹೇಳಲು ಸಾಧ್ಯವಾಗಲಿಲ್ಲ ಎಂದು. ಆ ಪದ ಅವನ ಗಂಟಲೊಳಗೇ ಸಿಕ್ಕಿಕೊಂಡಿತ್ತು. ಅದು ಮಧ್ಯಪ್ರಾಚೀನ ಕಾಲ. ಇತ್ತೀಚಿಗೆ 2007ರಲ್ಲಿ ಪತ್ರಕರ್ತ ಕರಣ್ ಥಾಪರ್ ಆಗಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಸಂದರ್ಶನ ಮಾಡುತ್ತಿರುವಾಗ ಆ ಮುಖ್ಯಮಂತ್ರಿ ಒಂದು ಲೋಟ ನೀರಿನ ಮೊರೆಹೋಗಬೇಕಾಗಿ ಆ ಸಂದರ್ಶನವನ್ನು ಅಚಾನಕ್ಕಾಗಿ ನಿಲ್ಲಿಸುವಂತಾಗುತ್ತದೆ. ಅಲ್ಲಿ ಥಾಪರ್ ಮಾತನಾಡುತ್ತ, “ಆಗ ಆದ ಹತ್ಯೆಗಳಿಗೆ ನೀವು ವಿಷಾದ ವ್ಯಕ್ತಪಡಿಸುತ್ತೀರಿ ಎಂದು ಯಾಕೆ ಹೇಳುವುದಿಲ್ಲ? ಮುಸ್ಲಿಮರನ್ನು ರಕ್ಷಿಸಲು ಸರಕಾರ ಬಹುಶಃ ಇನ್ನಷ್ಟು ಶ್ರಮ ಪಡಬಹುದಿತ್ತು ಎಂದು ನೀವು ಯಾಕೆ ಹೇಳುವುದಿಲ್ಲ?” ಅದಕ್ಕೆ ಉತ್ತರವಾಗಿ, “ನನಗೆ ಏನು ಹೇಳಬೇಕಿದೆಯೋ ಅದನ್ನು ನಾನು ಆ ಸಮಯದಲ್ಲಿಯೇ ಹೇಳಿದ್ದೇನೆ ಹಾಗೂ ನೀವು ಅಲ್ಲಿಂದ ನನ್ನ ಹೇಳಿಕೆಯನ್ನು ಪಡೆಯಬಹುದು.” ಆದರೆ ಅವರು ನೀಡಿದ್ದ ಹೇಳಿಕೆ ’ಕ್ರಿಯೆಯು ಪ್ರತಿಕ್ರಿಯೆಗೆ ಎಡೆಮಾಡಿಕೊಡುತ್ತದೆ’ ಎಂಬುದು. ಆ ಸಂದರ್ಶನವು ಹಠಾತ್ತನೆ ಮುಕ್ತಾಯಗೊಳಿಸಲಾಯಿತು.

ಈ Sorry ಎಂಬ ಪದದ ಬಗ್ಗೆ ಆಗಿನ ಗುಜರಾತಿನ ಮುಖ್ಯಮಂತ್ರಿ, ಈಗಿನ ಭಾರತದ ಪ್ರಧಾನಿಗೆ ಒಂದು ವಿಚಿತ್ರವಾಗಿ ಸಮಸ್ಯೆಯಿದೆ. ಈ ಸಮಸ್ಯೆಯ ಗಾತ್ರ ಹೆಚ್ಚಾಗುತ್ತಲೇ ಹೋಗಿದೆ. ಎರಡು ವರ್ಷಗಳ ಹಿಂದೆ ಸಾಕಷ್ಟು ತಯ್ಯಾರಿ ಇಲ್ಲದೇ ಲಾಕ್‌ಡೌನ್‌ಅನ್ನು ಹೇರಿದ ನಂತರ ಸಾವಿರಾರು ವಲಸೆ ಕಾರ್ಮಿಕರು ಅತ್ಯಂತ ಉದ್ದನೆಯ ಸಾಲುಗಳಲ್ಲಿ ತಮ್ಮತಮ್ಮ ಮನೆಗಳ ಕಡೆಗೆ ನಡೆಯುತ್ತ ಹೋಗುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಈ ತಪ್ಪಾದ ಲೆಕ್ಕಾಚಾರದ ನಿರ್ಧಾರಕ್ಕೆ ಖಂಡಿತವಾಗಿಯೂ ಯಾರೋ ಒಬ್ಬರು ಹೊಣೆಗಾರರಾಗಿದ್ದರು. ಆದರೆ ಸಾರಿ ಎಂದು ಹೇಳುವುದನ್ನು ಅತ್ಯಂತ ಎಚ್ಚರಿಕೆಯಿಂದ ಸೂಕ್ಷ್ಮವಾಗಿ ತಪ್ಪಿಸಲಾಯಿತು. ಕೃಷಿ ಕಾನೂನುಗಳ ವಿರುದ್ಧ ವರ್ಷಾದ್ಯಂತ ನಡೆದ ಅಂದೋಲನವನ್ನು ನೆನಪಿಸಿಕೊಳ್ಳಿ. ಈ ಶಾಂತಿಯುತ ಪ್ರತಿಭಟನೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೃಷಿಕರು ಸಾವನ್ನಪ್ಪಿದರು. ಮತ್ತೆ, ಯಾರು ಇದಕ್ಕೆ ವಿಷಾದ ವ್ಯಕ್ತಪಡಿಸಬೇಕಾಗಿತ್ತೋ, ಅವರ ಬಾಯಿಂದ ಸಾರಿ ಎಂಬ ಪದ ಹೊರಬರದೇ ಗಂಟಲಲ್ಲೇ ಸಿಕ್ಕಿಹಾಕಿಕೊಂಡಿತು. ಫ್ರಿಂಜ್ ಅಂದರೆ
ಅಂಚಿನಲ್ಲಿರುವ ಕುತ್ಸಿತ ಶಕ್ತಿಗಳಿಂದ ಮಾಬ್ ಲಿಂಚಿಂಗ್‌ಗಳಾದವು; ’ವಿದೇಶಿ ನುಸುಳುಕೋರರು’ ಎಂಬುವವರೊಂದಿಗೆ ಹೋರಾಡಲು ಆದ ನಕಲಿ ಎನ್‌ಕೌಂಟರ್‌ಗಳು, ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಆಗುವ ಪಿತೂರಿಗಳನ್ನು ನಿಲ್ಲಿಸಲು ಎಂದು ಹೇಳಿ ಚಿಂತಕರನ್ನು ಬಂಧಿಸುವುದು; ಆದರೆ ಬಹುತೇಕ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜಾರಿಗೊಂಡ ಮತಾಂತರ ವಿರೋಧಿ ಕಾಯಿದೆಗಳನ್ನು ಜಾರಿಗೊಳಿಸಿದ್ದು ಈ ಫ್ರಿಂಜ್ ಅಂದರೆ ಅಂಚಿನಲ್ಲಿರುವ ಅಥವಾ ಸರಕಾರೇತರ ಶಕ್ತಿಗಳಿಂದಲ್ಲ.

ಆದರೂ ಈ ಆತಂಕದ ಮತ್ತು ಬೆದರಿಕೆಯ ವಾತಾವರಣಕ್ಕೆ ಸಾರಿ ಎಂದು ಹೇಳಲು ಯಾರೂ ಇರಲಿಲ್ಲ. ಕೋವಿಡ್‌ನಿಂದಾದ ಸಾವುಗಳ ಸಂಖ್ಯೆಯನ್ನು ಅದರ ಅಂಕಿಅಂಶಗಳನ್ನು ವಿರೂಪಗೊಳಿಸಿದ್ದಕ್ಕೆ ಯಾರೂ ಸಾರಿ ಹೇಳಲಿಲ್ಲ. ಸಿಬಿಐ, ಎನ್‌ಸಿಬಿ, ಇಡಿ ಮತ್ತು ಪೊಲೀಸ್ ವ್ಯವಸ್ಥೆಗಳ ದುರುದ್ದೇಶಪೂರಿತ ಬಳಕೆಗೆ ಯಾರೂ ಸಾರಿ ಹೇಳಿಲ್ಲ. ಹೆದರಿಸುವ ಮತ್ತು ಬೆದರಿಸುವ ಉದ್ದೇಶ ತಮಗೆ ಇದ್ದಿಲ್ಲ ಎಂದು ಯಾರೂ ಹೇಳಿಲ್ಲ, ಆ ’ಉದ್ದೇಶ’ ಹೊಂದದೇ ಇರುವುದಕ್ಕೆ ಯಾರೂ ಸಾರಿ ಹೇಳಲಿಲ್ಲ. ಡಿಜಿಟಲ್ ಹೈವೇಗಳಲ್ಲಿ ಯಾವಾಗ ಟ್ರೋಲ್‌ಗಳು ಅಡೆತಡೆಯಿಲ್ಲದೇ ರಾಜಾರೋಷವಾಗಿ ತಿರುಗಾಡುತ್ತವೋ, ಯಾವಾಗ ಅನೈತಿಕ ಪೊಲೀಸ್‌ಗಿರಿ ಮಾಡುವ ಗುಂಪುಗಳು (ವಿಜಿಲಾಂಟೆ ಮಾಬ್‌ಗಳು) ಭೌತಿಕ ಹೈವೆಗಳಲ್ಲಿ ರಾಜಾರೋಷವಾಗಿ ತಿರುಗಾಡಿ ಹಾಗೂ ಆಹಾರ ಮತ್ತು ಉಡುಪಿನ ವ್ಯತ್ಯಾಸಕ್ಕಾಗಿ ಬಹಿರಂಗವಾಗಿ ಹಲ್ಲೆ ಮಾಡುತ್ತವೋ, ಆಗ ಅವರಿಗೆ ’ಸಾರಿ ಗಯ್ಸ್, ವ್ಯತ್ಯಾಸಗಳನ್ನು ಬಗೆಹರಿಸಲು ಒತ್ತಾಯದ ದಾರಿಗಳನ್ನು ಬಳಸಲು ಸಾಧ್ಯವಿಲ್ಲ, ಅದಕ್ಕೆ ತಡವಾಗಿದೆ; ನಾವು ನಾಗರಿಕ ರಾಷ್ಟ್ರದಲ್ಲಿ ಜೀವಿಸುತ್ತಿದ್ದೇವೆ.’ ಎಂದು ಯಾರೂ ಹೇಳಲಿಲ್ಲ. ಯಾವಾಗ ಒಬ್ಬ ನಾಯಕ ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಲ್ಲಿ ಎಂದು ಬಹಿರಂಗವಾಗಿ ಮನವಿ ಮಾಡಿದನೋ, ಯಾವಾಗ ಒಂದು ಧರ್ಮ-ಸಂಸತ್ತು ಕೋಮು ಆಧಾರದ ಮೇಲೆ ಸ್ವಚ್ಛಗೊಳಿಸಬೇಕು ಎಂಬ ಕರೆ ಕೊಟ್ಟಿತೋ, ಯಾವಾಗ ಒಬ್ಬ ಲೋಕಸಭೆಯ ಸದಸ್ಯ ಹಿಂಸೆಯನ್ನು ’ಕರ್ಮ’ ಬದದ ಬಳಕೆಯೊಂದಿಗೆ ಬಣ್ಣಿಸುತ್ತಾನೋ, ಆಗ ಸಾರ್ವಜನಿಕ ಸಂವಾದದಿಂದ ಸಾರಿ ಎಂಬ ಪದವೇ ಕಾಣೆಯಾಗುವಂತೆ ಆಗುತ್ತದೆ. ಹಾಗಾದರೆ ಹಠಾತ್ತನೇ, ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಡಿಕ್ಷನರಿಯಲ್ಲಿ ಸಾರಿ ಎಂಬ ಪದ ಇನ್ನೂ ಇದೆ ಎಂದು ಗೊತ್ತಾಗಿದ್ದು? ಸಾಮಾನ್ಯವಾಗಿ ಕೇಳಿರಬರುವ ಈ ಮಾತನ್ನು ಬಳಸಿದ ಈ ಕ್ರೊನಾಲಜಿಯನ್ನು ಗಮನಿಸಿ. ಮೊದಲಿಗೆ, ಆರ್‌ಎಸ್‌ಎಸ್
ಮುಖ್ಯಸ್ಥ ತನ್ನ ಸಂಘಟನೆಗೆ ಭಾರತಕ್ಕೆ ಒಂದು ಸಂವಿಧಾನವಿದೆ ಎಂದು ವಿವರಿಸುತ್ತಾನೆ, ಹಾಗಾಗಿ ಎಲ್ಲಾ ಪ್ರಜೆಗಳಿಗೂ ಒಂದೇ ತೆರನಾಗಿ ಪರಿಗಣಿಸಬೇಕಾಗುತ್ತದೆ ಹಾಗೂ ಎಲ್ಲಾ ಪ್ರಜೆಗಳಿಗೂ ತಮ್ಮ ಆಯ್ಕೆಯ ಧರ್ಮವನ್ನು ಆಚರಿಸುವ ಹಕ್ಕಿದೆ ಎಂದು ಹೇಳುತ್ತಾನೆ. ಅದರ ನಂತರ ಭಾರತದ ಸರಕಾರವು ಏಷಿಯಾದ ಅನೇಕ ರಾಷ್ಟ್ರಗಳಿಗೆ ಭಾರತವು ಯಾವುದೇ ಧರ್ಮದ ವಿರುದ್ಧ ದ್ವೇಷವನ್ನು ಸಹಿಸುವುದಿಲ್ಲ ಎಂದು ಭರವಸೆ ನೀಡುತ್ತದೆ. ಅದಾದ ನಂತರ ಕರ್ನಾಟಕದ ಮುಖ್ಯಮಂತ್ರಿಯು ಕರ್ನಾಟಕದ ಜನತೆಗೆ ಮನವರಿಕೆ ಮಾಡುವುದೇನೆಂದರೆ, ಪಠ್ಯಪುಸ್ತಕಗಳಲ್ಲಿ ಬಸವ ಮತ್ತು ಅಂಬೇಡ್ಕರ್ ಬಗ್ಗೆ ಆದ ತಪ್ಪುಗಳನ್ನು ಸರಿಪಡಿಸಲಾಗುವುದು ಮತ್ತು ಶಾಲಾ ಪಠ್ಯಪುಸ್ತಕಗಳನ್ನು ಮಾರ್ಪಾಡಿಸಲಾಗುವುದು ಎಂದು.

ಇದರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಅಮೆರಿಕದ ವಿದೇಶಾಂಗ ಸಚಿವನ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯ ಕ್ರೊನಾಲಜಿಯನ್ನೂ ಗಮನಿಸಿ. ಅಮೆರಿಕದ ವಿದೇಶಾಂಗ ಸಚಿವ ಭಾರತದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷದ ಬಗ್ಗೆ ಬೊಟ್ಟುತೋರಿಸಿ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ನೀಡಿದ್ದ ಹೇಳಿಕೆಯನ್ನು ಬಳಸಿ, ಈಗಿನ ಪ್ರಸಕ್ತ ರಾಜಕೀಯಕ್ಕೆ (ಬಿಜೆಪಿಗೆ) ಬದ್ಧವಾಗಿರುವ ಟಿವಿ ಮಾಧ್ಯಮಗಳು, ಭಾರತ ಇಂದು ಹೇಗೆ ಹೆಚ್ಚಿನ ಆತ್ಮವಿಶ್ವಾಸವುಳ್ಳ ದೇಶವಾಗಿ ಹೊರಹೊಮ್ಮಿದೆ ಎಂದು ವಿವರಿಸಲು ಚರ್ಚೆಯ ಹೆಚ್ಚಿನ ಸಮಯವನ್ನು ಮೀಸಲಿಟ್ಟವು. ಇತ್ತೀಚಿಗೆ ಅಂದರೆ ತಿಂಗಳ ಹಿಂದೆಯಷ್ಟೇ ಹಿಂದೂ ದೇವಸ್ಥಾನಗಳ ಜಾಗಗಳಿಂದ ಮುಸ್ಲಿಂ ವರ್ತಕರನ್ನು ಹೊರಗೆ ಅಟ್ಟುವ ಕೆಲಸ ನಡೆದಾಗ, ನಮ್ಮ ಮುಖ್ಯಮಂತ್ರಿ ಯಾವುದೋ ಒಂದು ಹಳೆಯ ಕಾನೂನನ್ನು ಉಲ್ಲೇಖಿಸಿ, ಆ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದರು. ಎರಡು ವಾರಗಳ ಹಿಂದೆಯಷ್ಟೇ, ಹಿಂದುತ್ವದ ಸ್ಕ್ಯಾನರ್‌ನಲ್ಲಿ ಬಂದ ಮಸೀದಿಗಳ ಪಟ್ಟಿಯು ಉತ್ತರಪ್ರದೇಶದಲ್ಲಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸಂದರ್ಭಗಳಲ್ಲಿ ಸಾರಿ ಎಂಬ ಪದವು ತೀವ್ರವಾದ ಅಭಾವ ಎದುರಿಸುತ್ತಿತ್ತು.

ಗ್ರೀಕ್‌ನ ಪೌರಾಣಿಕ ವ್ಯಕ್ತಿ ಜಾನಸ್‌ಗೆ ಎರಡು ತಲೆಗಳಿದ್ದವಂತೆ, ಅವೆರಡೂ ವಿರುದ್ಧ ದಿಕ್ಕಿಗೆ ನೋಡುತ್ತಿದ್ದವಂತೆ. ಜನವರಿ ತಿಂಗಳು ಕಳೆದುಹೋದ ವರ್ಷವನ್ನು ಹಾಗೂ ಹೊಸ ವರ್ಷ ಎರಡನ್ನು ನೋಡುವುದರಿಂದ ಅದಕ್ಕೆ ಜಾನಸ್‌ನ ಹೆಸರು ನೀಡಲಾಯಿತು ಎಂತಿದೆ. ಆದರೆ ಬಿಜೆಪಿಯು ಜೂನ್ ತಿಂಗಳಲ್ಲಿ ಜಾನಸ್‌ನಂತೆ ಯಾಕೆ ವರ್ತಿಸುತ್ತಿದೆ? ಇದು, ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರಗಳು, ಬಿಜೆಪಿಯ ನಾಯಕರು ದ್ವೇಷದ ಭಾಷೆಯನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಕ್ಕಾಗಿಯೇ? ಅಥವಾ ಅಲ್ಪಸಂಖ್ಯಾತರನ್ನು ಗುರಿಮಾಡಿ ನಿರಂತರವಾಗಿ ನಡೆಯುತ್ತಿರುವ ದಾಳಿಗೆ ಹಿಂದೂ ಮತದಾರರು ಬೇಸತ್ತಿದ್ದಾರೆ ಎಂಬ ಸ್ಪಷ್ಟ ಸೂಚನೆಗಳು ಬಂದಿವೆ ಎಂಬ ಕಾರಣಕ್ಕಾಗಿಯೇ? ಅಥವಾ, ಚೈನಾದಿಂದ ಬಂದಿರುವ ಬೆದರಿಕೆಯ ವಾಸ್ತವಿಕವಾದ ಅಳತೆಯೇ, ಅದರಿಂದ ಹಿಂದೂ ರಾಷ್ಟ್ರದ ಪರಿಕಲ್ಪನೆಗಿಂತ QUAD ಮೈತ್ರಿ ಆದ್ಯತೆ ಪಡೆಯಬಹುದು ಎಂಬ ಆತಂಕವೇ? ಅಥವಾ ಅನಾರ್ಕಿಸ್ಟ್ ಜನರ ಗುಂಪುಗಳು ರಸ್ತೆಗೆ ಬಂದು ಶ್ರೀಲಂಕಾದಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂಬ ಆತಂಕವೇ? ಅಥವಾ ಇವೆಲ್ಲವೂ ಒಟ್ಟಾರೆಯಾಗಿ ಕಾರಣಗಳೇ?

ಬಿಜೆಪಿಯ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಈ ಇಬ್ಬರಿಗೆ ವಿಧಿಸಿದ ಶಿಕ್ಷೆಯು ಆಶ್ಚರ್ಯಕರವಾಗಿದೆ. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸದಸ್ಯರಿಗೆ ಗೊಂದಲ ಉಂಟುಮಾಡಿದೆ. ಆದರೂ, ಪಾರ್ಲಿಮೆಂಟ್ ಭವನಕ್ಕೆ ನರೇಂದ್ರ ಮೋದಿ ’ಪ್ರಣಾಮ’ ಮಾಡಿದ್ದನ್ನು ನೆನಪಿಸಿಕೊಳ್ಳಿ ಹಾಗೂ ನಂತರ ಮಾಡಿದ್ದೇನು, ಚರ್ಚೆಯ ಭವನವಾಗಿದ್ದ ಸಂಸತ್ತು ಎಂಬ ಕೇಂದ್ರಸ್ಥಾನ ಮಹತ್ವವನ್ನು ಅವರ ಅವಧಿಯಲ್ಲಿ ಸ್ಪಷ್ಟವಾಗಿ ಕುಗ್ಗಿಸಲಾಗಿದೆ.

ಅನೇಕ ದಶಕಗಳ ಹಿಂದೆ, ನಾನು ಒಂದು ಜಾನಪದ ರಾಮಾಯಣದ ಪ್ರದರ್ಶನ ನೋಡುತ್ತಿದ್ದೆ. ರಾವಣನ ಪಾತ್ರ ಮಾಡುತ್ತಿದ್ದ ನಟನು ಹತ್ತು ತಲೆಗಳನ್ನು ಸೂಚಿಸುವಂತೆ ಸಜ್ಜಾಗಿದ್ದ. ಆ ಪ್ರದರ್ಶನ ರಾತ್ರಿಯಿಡೀ ನಡೆಯಿತು. ಮಧ್ಯೆಮಧ್ಯೆ ಬಿಡುವು ನೀಡಲಾಗುತ್ತಿತ್ತು. ಅಂತಹ ಒಂದು ಬಿಡುವಿನ ವೇಳೆಯಲ್ಲಿ ರಾವಣನ ಪಾತ್ರಧಾರಿಯು ಊಟ ಮಾಡಬೇಕಿತ್ತು. ಅವನು ಊಟ ಮಾಡುತ್ತಿರುವಾಗ ಅಲ್ಲಿಯ ಕುತೂಹಲಕಾರಿ ಮಕ್ಕಳು ಅವನ ನಿಜವಾದ ತಲೆ ಯಾವುದು ಎಂದು ಕಂಡುಹಿಡಿದೇಬಿಟ್ಟರು. ಗ್ರೀಕ್ ಪುರಾಣದ ಜಾನಸ್‌ಗೂ ಎರಡು ತಲೆಗಳಲ್ಲಿ ಒಂದು ತಲೆ ತಿನ್ನಲು ಇತ್ತು. ಹಿಂದೆ ತಾವು ಮಾಡಿದ ಕೃತ್ಯಗಳ ಗುರುತುಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖದಲ್ಲಿವೆ. ಅವುಗಳಲ್ಲಿ ಕೆಲವು ಎಷ್ಟು ಸ್ಪಷ್ಟವಾಗಿವೆಯೆಂದರೆ ಎಷ್ಟೇ ಮೇಕ್‌ಅಪ್ ಮಾಡಿದರೂ ಅವುಗಳನ್ನು ಮರೆಮಾಚಲು ಸಾಧ್ಯವಿಲ್ಲ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಭಾರತ: ಒಂದು ಭಾಷಾ ನಾಗರಿಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ...