HomeದಿಟನಾಗರFact Check: ಸ್ವತಃ ಅಂಬೇಡ್ಕರ್ ಮಾತನಾಡಿರುವುದು ಎಂದು ಸಿನಿಮಾ ವಿಡಿಯೋ ಹಂಚಿಕೆ

Fact Check: ಸ್ವತಃ ಅಂಬೇಡ್ಕರ್ ಮಾತನಾಡಿರುವುದು ಎಂದು ಸಿನಿಮಾ ವಿಡಿಯೋ ಹಂಚಿಕೆ

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಭಾಷಣ ಮಾಡಿದ್ದು ಎನ್ನಲಾದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘Rastriya Dalitha Sangha’ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, “ಅಂಬೇಡ್ಕರ್ ಹೆಸರು ಹೇಳಿ ಜಾತ್ಯಾತೀತತೆ ಪಾಠ ಹೇಳುವ ಲದ್ದಿ ಜೀವಿಗಳೇ ಇಲ್ಲಿ ಕೇಳಿ, ಜೈ ಶ್ರೀ ರಾಮ್, ಜೈ ಭೀಮ್, ಜೈ ಹಿಂದು ರಾಷ್ಟ್ರ” ಎಂದು ಬರೆದುಕೊಳ್ಳಲಾಗಿದೆ.

ಪೋಸ್ಟ್‌ ಲಿಂಕ್ ಇಲ್ಲಿದೆ

ವಿಡಿಯೋದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರಂತೆ ಹೋಲುವ ವ್ಯಕ್ತಿಯೊಬ್ಬರು “ಜಗತ್ತಿನ ಯಾವುದೇ ಶಕ್ತಿಗೂ ಭಾರತೀಯರ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ. ಮುಸ್ಲಿಂ ಲೀಗ್ ಭಾರತವನ್ನು ಇಬ್ಬಾಗ ಮಾಡಿತು ತನ್ನ ಹಿತಾಸಕ್ತಿಗಾಗಿ. ಒಂದಲ್ಲಾ ಒಂದು ದಿನ ಎಲ್ಲರಿಗೂ ಅರಿವಾಗುವುದು ಭಾರತೀಯರದ್ದು ಸ್ವಹಿತಾಸಕ್ತಿಯಲ್ಲ ಭಾರತವನ್ನು ಅಖಂಡವಾಗಿಸುವುದು” ಎಂದು ಭಾಷಣ ಮಾಡಿರುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್ : ಅಂಬೇಡ್ಕರ್ ಹೆಸರಿನಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಗೂಗಲ್ ಸರ್ಚ್‌ ಮಾಡಿದ್ದೇವೆ. ಈ ವೇಳೆ ಇದು ‘2000ರಲ್ಲಿ ಬಿಡುಗಡೆಯಾದ ಜಬ್ಬಾರ್ ಪಟೇಲ್ ನಿರ್ದೇಶಿಸಿದ ‘ಡಾ. ಬಾಬಾ ಸಾಹೆಬ್ ಅಂಬೇಡ್ಕರ್’ ಎಂಬ ಇಂಗ್ಲಿಷ್-ಹಿಂದಿ ದ್ವಿಭಾಷಾ ಚಲನಚಿತ್ರದ ದೃಶ್ಯ’ ಎಂದು ತಿಳಿದು ಬಂದಿದೆ.

ವಿಕಿಪೀಡಿಯಲ್ಲಿ ದೊರೆತ ಮಾಹಿತಿ ಪ್ರಕಾರ, ಅಂಬೇಡ್ಕರ್ ಚಿತ್ರದಲ್ಲಿ ಮಳಯಾಳಂ ಚಿತ್ರರಂಗದ ಪ್ರಸಿದ್ಧ ನಟ ಮಮ್ಮುಟ್ಟಿ ಅಂಬೇಡ್ಕರ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ 1999 ರಲ್ಲಿ ಇಂಗ್ಲಿಷ್‌ನಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಮಮ್ಮುಟ್ಟಿ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ನಿತಿನ್ ಚಂದ್ರಕಾಂತ್ ದೇಸಾಯಿ) ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದೊರೆತಿವೆ.

ಚಿತ್ರದ ಕುರಿತ ಮಾಹಿತಿಗಾಗಿ ವಿಕಿಪೀಡಿಯ ಲಿಂಕ್ ಇಲ್ಲಿದೆ.

‘Buddhist Youth of India’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಪೂರ್ಣ ಸಿನಿಮಾ ಲಭ್ಯವಿದೆ. ಮೂರು ಗಂಟೆಗಳ ಅವಧಿಯ ಸಿನಿಮಾದಲ್ಲಿ 2 ಗಂಟೆ 30 ನಿಮಿಷ 18 ಸೆಕೆಂಡ್‌ನಿಂದ 2 ಗಂಟೆ 31 ನಿಮಿಷ 27 ಸೆಕೆಂಡ್‌ ನಡುವೆ ವೈರಲ್ ವಿಡಿಯೋದಲ್ಲಿರುವ ದೃಶ್ಯವಿದೆ. ಮುಸ್ಲಿಂ ಲೀಗ್ ಸಂವಿಧಾನ ರಚನಾ ಸಭೆಯನ್ನು ಧಿಕ್ಕರಿಸಿದಾಗ ಮತ್ತು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಬೇಡಿಕೆ ಇಟ್ಟಾಗ ನಡೆದ ಚರ್ಚೆಯ ಸಂದರ್ಭದ ದೃಶ್ಯ ಇದಾಗಿದೆ. ಆದರೆ, ಈ ಭಾಷಣದಲ್ಲಿ ಅಂಬೇಡ್ಕರ್ ಅಖಂಡ ಭಾರತವನ್ನು ರಚಿಸುವುದು ಭಾರತೀಯರ ಗುರಿ ಎಂದಿದ್ದಾರೆಯೇ ಹೊರತು, ಯಾವುದೇ ಧರ್ಮದ ಆಧಾರದ ಮೇಲೆ ಅಖಂಡ ಭಾರತ ನಿರ್ಮಿಸುತ್ತೇವೆ ಎಂದಿಲ್ಲ.

ಸಿನಿಮಾದ ಯೂಟ್ಯೂಬ್ ಲಿಂಕ್ ಇಲ್ಲಿದೆ

ನಾವು ಮೇಲ್ಗಡೆ ಉಲ್ಲೇಖಿಸಿದ ಮೂಲಗಳ ಪ್ರಕಾರ ಇದೊಂದು ಸಿನಿಮಾ ದೃಶ್ಯ ಎಂಬುವುದು ಖಚಿತವಾಗಿದೆ. ಅಲ್ಲದೆ, ಇಲ್ಲಿ ಅಂಬೇಡ್ಕರ್ ಅವರ ಪಾತ್ರದಲ್ಲಿ ಆಡಿರುವ ಮಾತು ಭಾರತದ ಯಾವುದೇ ಧರ್ಮದ ವಿರುದ್ದ ದ್ವೇಷ ಕಾರುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Fact Check: ರಾಹುಲ್ ಗಾಂಧಿ ತಪ್ಪು ಲೆಕ್ಕ ಹೇಳಿದ್ದಾರೆಂದು ಎಡಿಟೆಡ್ ವಿಡಿಯೋ ಹಂಚಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...