HomeದಿಟನಾಗರFact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

- Advertisement -
- Advertisement -

ಅಮೆರಿಕದಲ್ಲಿ ಮುಸ್ಲಿಮರ ಗುಂಪೊಂದು ಹಿಂದೂಗಳ ವಿರುದ್ದ ಪ್ರತಿಭಟನೆ ನಡೆಸಿದೆ. ‘ಪ್ರವಾದಿಯನ್ನು ಉಳಿಸಿ, ಹಿಂದೂ ವ್ಯವಹಾರವನ್ನು ಬಹಿಷ್ಕರಿಸಿ, ಹಿಂದುತ್ವವನ್ನು ಯುಎಸ್‌ಎಯಿಂದ ಬಹಿಷ್ಕರಿಸಿ’ ಇತ್ಯಾದಿ ಭಿತ್ತಿ ಪತ್ರಗಳನ್ನು ಅವರು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಲಪಂಥೀಯ ಮಾಧ್ಯಮವಾದ ಮೇಘ್ ಅಪ್ಡೇಟ್ ಸೇರಿದಂತೆ ಹಲವಾರು ಜನ ಈ ವಿಡಿಯೋ ಹಂಚಿಕೊಂಡಿದ್ದಾರೆ.

‘ಮಹರ್ಷಿ ಜಿ ಸ್ವಾಮೀಜಿ ಮಹಾಮಂಡಲೇಶ್ವರ್’ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಚಿಕಾಗೋದಲ್ಲಿ ಮುಸ್ಲಿಮರು ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ನೋಡಿ!” ಎಂದು ಬರೆದುಕೊಳ್ಳಲಾಗಿದೆ.

‘ಜೋಕರ್ಮಾನಿ’ ಎಂಬ ಮತ್ತೊಂದು ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಚಿಕಾಗೋದಲ್ಲಿ ಮುಸ್ಲಿಮರು ಹೇಗೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ನೋಡಿ! ನಾವೂ ಅದನ್ನೇ ಮಾಡಬೇಕು… “ಶಾಂತಿ ಪ್ರಿಯರನ್ನು” ಬಹಿಷ್ಕರಿಸಬೇಕು” ಎಂದು ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್‌ : ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ನಡೆಸಲು ನಾವು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಹಿಂದೂಗಳೊಂದಿಗೆ ವ್ಯಾಪಾರ ಬಹಿಷ್ಕರಿಸಿ ಎಂದು ಮುಸ್ಲಿಮರು ಪ್ರತಿಭಟಿಸಿದ ಯಾವುದೇ ವರದಿಗಳು ಕಂಡು ಬಂದಿಲ್ಲ.

ನಾವು ಇನ್ನಷ್ಟು ಹುಡುಕಾಡಿದಾಗ ಕೆಲವೊಂದು ಪತ್ರಿಕಾ ವರದಿಗಳು ನಮಗೆ ದೊರೆತಿವೆ. ‘ಮುಸ್ಲಿಂ ಮಿರರ್ ಡಾಟ್ ಕಾಂ’ (muslimmirror.com)ಎಂಬ ವೆಬ್‌ಸೈಟ್ 19 ಜೂನ್ 2022ರಂದು ‘Protest held outside Indian consulate in Chicago over remarks on Prophet Muhammad’ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ವರದಿಯಲ್ಲಿ “ಭಾರತದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ವಿರೋಧಿಸಿ ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಗೆ ಮುಸ್ಲಿಂ ಗುಂಪುಗಳು ಪ್ರತಿಭಟನೆ ನಡೆಸಿದವು. ಭಾರತದಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು” ಎಂದು ಹೇಳಲಾಗಿದೆ.

ವರದಿಯಲ್ಲಿ ಹೇಳಲಾದ ವಿಷಯ ಗಮನಿಸಿದಾಗ, ಇದು ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರೆಯಾದ ನೂಪುರ್ ಶರ್ಮಾ ವಿರುದ್ಧ ಜೂನ್ 2022 ರಲ್ಲಿ ಚಿಕಾಗೋದಲ್ಲಿ ಭಾರತೀಯ ರಾಯಭಾರ ಕಚೇರಿ ಹೊರಗೆ ನಡೆಸಿದ ಪ್ರತಿಭಟನೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಇದು ಹಿಂದೂಗಳ ವ್ಯವಹಾರ ಬಹಿಷ್ಕರಿಸಿ ಎಂದು ಮಾಡಿದ ಪ್ರತಿಭಟನೆ ಅಲ್ಲ.

ಸುದ್ದಿಯ ಲಿಂಕ್ ಇಲ್ಲಿದೆ 

ಮತ್ತೊಂದು ಪ್ರಮುಖ ಅಂಶವೆಂದರೆ, ಮುಸ್ಲಿಂ ಮಿರರ್ ವೆಬ್‌ಸೈಟ್ ಪ್ರಕಟಿಸಿದ ಸುದ್ದಿಯಲ್ಲಿರುವ ಫೋಟೊದಲ್ಲಿ ಭಿತ್ತಿ ಪತ್ರ ಹಿಡಿದ ವ್ಯಕ್ತಿಯೊಬ್ಬರನ್ನು ಕಾಣಬಹುದು. ಇದೇ ವ್ಯಕ್ತಿ ವೈರಲ್ ವಿಡಿಯೋದಲ್ಲೂ ಇದ್ದಾರೆ. ಹಾಗಾಗಿ, ವೈರಲ್ ವಿಡಿಯೋ ಮುಸ್ಲಿಂ ಮಿರರ್ ವೆಬ್‌ಸೈಟ್‌ ಪ್ರಕಟಿಸಿದ ಸುದ್ದಿಗೆ ಸಂಬಂಧಿಸಿದ್ದು ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ : Fact Check: ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ರಾ!?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...