HomeದಿಟನಾಗರFact Check: ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ರಾ!?

Fact Check: ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ರಾ!?

- Advertisement -
- Advertisement -

“ಒಂದು ಕಡೆ ಬಿಜೆಪಿ ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಧರ್ಮ, ಪ್ರದೇಶದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದೆ” ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿರುವುದಾಗಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ಇಂಟರ್‌ನಲ್ಲಿ ಸಂಬಂಧಿತ ಕೀವರ್ಡ್ ಹಾಕಿ ಹುಡುಕಾಡಿದ್ದೇವೆ. ಈ ವೇಳೆ ರಾಹುಲ್ ಗಾಂಧಿಯವರ ಭಾಷಣದ ಮೂಲ ವಿಡಿಯೋ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ನಮಗೆ ದೊರೆತಿದೆ.

ಈ ವಿಡಿಯೋ ಮಾರ್ಚ್‌ 2,2024ರಂದು ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಪುನರಾರಂಭದ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾಡಿರುವ ಭಾಷಣದ್ದು ಎಂದು ತಿಳಿದು ಬಂದಿದೆ.

“Bharat Jodo Nyay Yatra flag handover ceremony in Morena, Madhya Pradesh”ಎಂಬ ಶೀರ್ಷಿಕೆಯ ನೇರ ಪ್ರಸಾರದ ವಿಡಿಯೋ, ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯು 2 ಮಾರ್ಚ್ 2024 ರಂದು ರಾಜಸ್ಥಾನದಿಂದ ಮಧ್ಯಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಮೊರೆನಾ ನಗರದ ಭೀಮರಾವ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಧ್ವಜ ಹಸ್ತಾಂತರ ಸಮಾರಂಭದ್ದು ಎಂದು ಗೊತ್ತಾಗಿದೆ.

ಒಟ್ಟು 43 ನಿಮಿಷ 35 ಸೆಕೆಂಡ್‌ನ ಸಂಪೂರ್ಣ ವಿಡಿಯೋ ಪರಿಶೀಲಿಸಿದಾಗ, 20 ನಿಮಿಷ 11 ಸೆಕೆಂಡ್‌ನಿಂದ 20 ನಿಮಿಷ 30 ಸೆಕೆಂಡ್‌ ನಡುವೆ ರಾಹುಲ್ ಗಾಂಧಿಯವರು ವೈರಲ್ ಕ್ಲಿಪ್‌ಗೆ ಸಂಬಂಧಿತ ಹೇಳಿಕೆ ನೀಡಿರುವುದು ಕಂಡು ಬಂದಿದೆ. ಆದರೆ, ಇಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನು ಎಡಿಟ್‌ ಮಾಡಲಾಗಿದೆ.

ಕಾಂಗ್ರೆಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿರುವ ರಾಹುಲ್ ಗಾಂಧಿಯವರ ಮೂಲ ವಿಡಿಯೋದಲ್ಲಿ “ಬಿಜೆಪಿ ಕೆ ಲೋಗ್ ಏಕ್ ಧರ್ಮ್ ಕೋ ದುಸ್ರೇ ಧರ್ಮ್ ಸೇ ಬಾಟ್‌ ರಹೇ ಹೈ, ಏಕ್ ಜಾಥ್ ಕೋ ದುಸ್ರೆ ಜಾತ್ ಸೆ ಬಾಟ್‌ ರಹೇ ಹೈ, ಏಕ್ ಪ್ರದೇಶ್ ಕೋ ದುಸ್ರೆ ಪ್ರದೇಶ್ ಸೇ ಬಾಟ್‌ ರಹೇ ಹೈ, ಔರ್ ದುಸ್ರಿ ಸಾಬ್ ತರಫ್ ಕಾಂಗ್ರೆಸ್ ಪಾರ್ಟಿ ಕೋ ಏಕ್ ಸಾಥ್ ಲೇನ್ ಕಿ ಕೋಶಿಶ್ ಕರ್ ರಹೀ ಹೈ” ಎಂದು ಹೇಳಿದ್ದಾರೆ. ಇದನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದಾಗ, “ಬಿಜೆಪಿಯವರು ಧರ್ಮ, ಜಾತಿ ಮತ್ತು ಪ್ರದೇಶದ ಆಧಾರದ ಮೇಲೆ ಜನರನ್ನು ವಿಭಜಿಸುತ್ತಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಜನರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮಾಧ್ಯಮ ವರದಿಗಳು ಕೂಡ ಮಧ್ಯಪ್ರದೇಶದ ಮೊರೆನಾದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣದ ಮೂಲ ಸಾರಾಂಶವನ್ನು ಹೇಳಿವೆ. ಮೂಲ ವಿಡಿಯೋವನ್ನು 20 ನಿಮಿಷ 11 ಸೆಕೆಂಡ್‌ನಿಂದ 20 ನಿಮಿಷ 30 ಸೆಕೆಂಡ್‌ಗಳ ನಡುವೆ ಎಡಿಟ್ ಮಾಡಲಾಗಿದೆ ಮತ್ತು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೊನೆಯದಾಗಿ ಹೇಳುವುದಾದರೆ, “ಕಾಂಗ್ರೆಸ್ ಪಕ್ಷವು ಧರ್ಮ, ಜಾತಿ ಮತ್ತು ಪ್ರದೇಶಗಳ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿರುವುದಾಗಿ ಆರೋಪಿಸಿ, ರಾಹುಲ್ ಗಾಂಧಿಯವರ ಎಡಿಟೆಡ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Fact Check: ಅಖಿಲೇಶ್ ಯಾದವ್ ದಂಪತಿ ಅತೀಕ್ ಅಹ್ಮದ್ ಸಮಾಧಿಗೆ ನಮಸ್ಕರಿಸಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...