Homeಮುಖಪುಟಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ರೈತರು: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಜೆಜೆಪಿ ಶಾಸಕ

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ರೈತರು: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಜೆಜೆಪಿ ಶಾಸಕ

- Advertisement -
- Advertisement -

ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದ ತೋಹಾನಾ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ಹರಿಯಾಣ ಜೆಜೆಪಿ ಶಾಸಕ ದೇವೇಂದ್ರ ಸಿಂಗ್‌ ಬಾಬ್ಲಿ ಕೊನೆಗೂ ತಪ್ಪೊಪ್ಪಿಕೊಂಡು ರೈತರ ಬಳಿ ಕ್ಷಮೆ ಯಾಚಿಸಿದ್ದಾರೆ.

ಹರಿಯಾಣದಲ್ಲಿ ಜಜೆಪಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದೆ. ಅದರ ಶಾಸಕ ಜೂನ್ 1 ರಂದು ತೋಹಾನಾದಲ್ಲಿ ಪ್ರತಿಭಟಿಸಿದ ರೈತರ ಕುರಿತು ಹಗುರವಾಗಿ ಮಾತನಾಡಿದ್ದರು. ವಿವಾದ ಭುಗಿಲೆದ್ದ ನಂತರ ಹೋರಾಟನಿರತ ರೈತರೊಂದಿಗೆ ಸಭೆ ನಡೆಸಿ ಕ್ಷಮೆ ಕೋರಿದ್ದಾರೆ.

`ಜೂನ್‌ 1 ರಂದು ನಡೆದ ಘಟನೆಯಲ್ಲಿ ಭಾಗಿಯಾದವರನ್ನು ನಾನು ಕ್ಷಮಿಸುತ್ತೇನೆ ಹಾಗೂ ಒಬ್ಬ ಜನಪ್ರತಿನಿಧಿಯಾಗಿ ಅಂದು ನಾನು ಆ ಪದಗಳನ್ನು ಬಳಸಿದ್ದಾಕ್ಕಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಯಾಚಿಸುತ್ತೇನೆ’ ಎಂದು ಶನಿವಾರ ಸಂಜೆ ರೈತ ಮುಖಂಡರೊಂದಿಗಿನ ಸಭೆಯ ನಂತರ ಅವರು ತಿಳಿಸಿದರು.

ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ರವರು ದೇವೇಂದ್ರ ಸಿಂಗ್‌ ಬಾಬ್ಲಿಯವರ ಕ್ಷಮೆಯಾಚನೆಯನ್ನು ಸ್ವೀಕರಿಸಿದ್ದಾರೆ. `ಶಾಸಕರು ಕ್ಷಮೆಯಾಚಿಸಿರುವುದು ಒಳ್ಳೆಯದು… ಈಗ ರೈತ ಸಮಿತಿ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದು ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ರಾಕೇಶ್‌ ಟಿಕಾಯತ್‌ ತಿಳಿಸಿದ್ದಾರೆ.

ಶಾಸಕರ ಕ್ಷಮೆಯಾಚನೆಯ ಹೊರತಾಗಿಯೂ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಮಂಗಳವಾರದ ಘರ್ಷಣೆಯ ನಂತರ ಬಂಧಿಸಲ್ಪಟ್ಟ ಮೂವರು ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಸಂಯುಕ್ತ ಕಿಸಾನ್‌ ಮೋರ್ಚಾ ಬ್ಯಾನರ್‌ ಅಡಿಯಲ್ಲಿ ರಾಕೇಶ್‌ ಟಿಕಾಯತ್‌, ಗುರ್ನಾಮ್‌ ಸಿಂಗ್‌ ಚುದಾನಿ ಹಾಗೂ ಯೋಗೇಂದ್ರ ಯಾದವ್‌ ಅವರ ನೇತೃತ್ವದಲ್ಲಿ ನೂರಾರು ರೈತರು ತೋಹಾನ ಪೊಲೀಸ್‌ ಠಾಣೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ದೇವೇಂದ್ರ ಬಾಬ್ಲಿ ಅವರು ಕ್ಷಮೆಯಾಚಿಸಿದ್ದಾರೆ.

ಶಾಸಕರ ಹೇಳಿಕೆ ಮತ್ತು ಘರ್ಷಣೆಗೆ ಸಂಬಂಧಿಸಿದಂತೆ ಮೂವರು ರೈತರನ್ನು ಬಂಧಿಸಿರುವುದನ್ನು ವಿರೋಧಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಬಾಬ್ಲಿ ಅವರು ಕ್ಷಮೆಯಾಚಿಸದಿದ್ದರೆ ಸೋಮವಾರ ಹರಿಯಾಣದಾದ್ಯಂತ ಪೊಲೀಸ್‌ ಠಾಣೆಗಳನ್ನು  ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಸಿದ್ದರು.

ತೋಹಾನದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ರೈತರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಿಸಲಾಗಿದ್ದು, ಶಾಸಕರ ಮೇಲೆ ದೈಹಿಕ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಘರ್ಷಣೆ ನಡೆದ ಮರುದಿನ ರೈತರು ಶಾಸಕರ ಮನೆಗೆ ಮುತ್ತಿಗೆ ಹಾಕಿದ್ದು, ಈ ಕುರಿತು ಪ್ರಕರಣವನ್ನು ನೋಂದಾಯಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 30 ಜನ ಪ್ರತಿಭಟನಾಕಾರರನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಈ ಕುರಿತು ದೂರು ನೀಡಿದ್ದ ದೇವೇಂದ್ರ ಬಾಬ್ಲಿ ಅವರು, `ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಪ್ರತಿಭಟನಾಕಾರರು ನಮ್ಮ ವಾಹನದ ಮೇಲೆ ಮೂರು ಬಾರಿ ಹಲ್ಲೆ ನಡೆಸಿದರು ಹಾಗೂ ನನ್ನ ಜೊತೆಯಲ್ಲಿದ್ದವರನ್ನು ಗಾಯಗೊಳಿಸಿದ್ದಾರೆ’ ಎಂದು ಆರೋಪಿಸಿದ್ದರು. ಅಲ್ಲದೆ ತನ್ನ ಮೇಲಿನ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪವನ್ನು ಅವರು ನಿರಾಕರಿಸಿದ್ದರು.

ರೈತ ಮುಖಂಡ ಗುರ್ನಾಮ್‌ ಸಿಂಗ್‌ ಚಾದುನಿ ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಹೋರಾಟ ನಡೆಸುವಂತೆ ಮನವಿ ಮಾಡಿದ್ದಾರೆ. `ಈ ಆಂದೋಲನವನ್ನು ಮುರಿಯುವಂತಹ ಯಾವುದೇ ಹೆಜ್ಜೆಯನ್ನು ನಾವು ತೆಗೆದುಕೊಳ್ಳಬೇಕಾಗಿಲ್ಲ. ಒಂದು ಸಣ್ಣ ನಷ್ಟವು ಭಾರಿ ವೆಚ್ಚವನ್ನುಂಟು ಮಾಡುತ್ತದೆ. ಹಾಗಾಗಿ ನಾವು ಶಾಂತಿಯುತ ರೀತಿಯಲ್ಲಿ ಹೋರಾಟ ಮುಂದುವರೆಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರಿ ಪ್ರಮಾಣದಲ್ಲಿ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ಹರಿಯಾಣ, ಪಂಜಾಬ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೃಪೆ: ಅನ್ನದ ಋಣ


ಇದನ್ನೂ ಓದಿ; ರೈತ ಪ್ರತಿಭಟನೆಗೆ ಬೆದರಿದ ಹರಿಯಾಣ ಸಿಎಂ ಖಟ್ಟರ್: ನಿಗಧಿತ ಸಮಯಕ್ಕಿಂತ ಮುಂಚೆಯೇ ಕಾರ್ಯಕ್ರಮ ಮುಕ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...