Homeಕರ್ನಾಟಕಮಾಜಿ ಸಚಿವ ಎಂ.ರಘುಪತಿ ನಿಧನ; ವರ್ಣ ರಂಜಿತ ಬದುಕಿಗೆ ತೆರೆ

ಮಾಜಿ ಸಚಿವ ಎಂ.ರಘುಪತಿ ನಿಧನ; ವರ್ಣ ರಂಜಿತ ಬದುಕಿಗೆ ತೆರೆ

- Advertisement -
- Advertisement -

ಕರ್ನಾಟಕ ರಾಜ್ಯದ ಮಾಜಿ ಸಚಿವ, ಮಲ್ಲೇಶ್ವರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಮಾಜಿ ಶಾಸಕರಾದ ಎಂ.ರಘುಪತಿ (82) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.

ಎಂ.ರಘುಪತಿಯವರ ಮೃತದೇಹವನ್ನು ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಬೆಳಿಗ್ಗೆ (ಜೂನ್‌‌ 19) ಅಂತ್ಯಸಂಸ್ಕಾರ ನೆರವೇರಲಿದೆ.

ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಎಂ.ರಘುಪತಿ ಅವರು ಮಲ್ಲೇಶ್ವರಂ ಮತ್ತು ಶಿವಾಜಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಶಾಸಕರಾಗಿದ್ದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಜನತಾ ಪರಿವಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಘುಪತಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್‌ ಅವರ ಆತ್ಮೀಯರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ಹೊರಗುಳಿದಿದ್ದರು.

ದಕ್ಷಿಣ ಭಾರತದಿಂದ ಅಖಿಲ ಭಾರತ ಯೂತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದವರು ರಘುಪತಿ. 1983ರಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ಚುನಾವಣೆಯಲ್ಲಿ ಗೆದ್ದರು. ನಂತರದಲ್ಲಿ ಅವರು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಕ್ಕೆ ಬರಬೇಕಾಯಿತು.

ಹೆಗಡೆಯವರ ಕ್ಯಾಬಿನೇಟ್‌ನಲ್ಲಿ ಶಿಕ್ಷಣ ಸಚಿವರಾಗಿದ್ದರು, ಮೀನುಗಾರಿಕೆ, ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ವಾರ್ತಾ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು.

ಸಂಚಾರಿ ಗ್ರಂಥಾಲಯವನ್ನು ಆರಂಭಿಸಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಯೋಜನೆಯನ್ನು ಆರಂಭಿಸಿದವರು ರಘುಪತಿಯವರೇ. ದೂರದರ್ಶನವನ್ನು ಬೆಂಗಳೂರಿನಲ್ಲಿ ಆರಂಭಿಸಿದರು.

ಶಿಕ್ಷಕರ ಸಮಸ್ಯೆಗಳು ಬಂದಾಗ ಮುಂದೆ ಬರುತ್ತಿದ್ದರು. ಮೌಲ್ಯಮಾಪನ ಮಾಡಿದಾಗ ಶಿಕ್ಷಕರ ಭತ್ಯೆಯನ್ನು  ಅಂದಿಗಂದಿಗೆ ನೀಡುವುದನ್ನು ಆರಂಭಿಸಿದರು. ಖಾಸಗಿ ಕಾಲೇಜುಗಳನ್ನು ವಶಕ್ಕೆ ಪಡೆದು ಸರ್ಕಾರಿ ಕೆಲಸಕ್ಕೆ ನೇಮಿಸಿದರು.

ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಆತ್ಮೀಯರಾಗಿದ್ದರು. ವಿ.ಪಿ.ಸಿಂಗ್ ಅವರು ಬೆಂಗಳೂರಿಗೆ ಬಂದಾಗ ರಘುಪತಿಯವರ ಮನೆಗೆ ಬರದೆ ಹಿಂತಿರುಗುತ್ತಿರಲಿಲ್ಲ. ಎನ್‌.ಟಿ.ರಾಮರಾವ್ ಸರ್ಕಾರ ಬಿಕ್ಕಟ್ಟಿನಲ್ಲಿದ್ದಾಗ ಎಲ್ಲ ಶಾಸಕರನ್ನು ಬೆಂಗಳೂರಿಗೆ ಕರೆತಂದು ಅವರನ್ನು ನೋಡಿಕೊಂಡು ವಾಪಸ್ ಕಳುಹಿಸಿದ್ದವರು ರಘುಪತಿ.

ಸಂಜಯ್‌ ಗಾಂಧಿಯವರಿಗೂ ಆತ್ಮೀಯರಾಗಿದ್ದರು. ಒಮ್ಮೆ ಅನಂತಕುಮಾರ್‌ ವಿರುದ್ಧ, ಮತ್ತೊಮ್ಮೆ ಗುಂಡೂರಾವ್ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್‌. ಅವರಿಗೂ ರಘುಪತಿ ಆತ್ಮೀಯರಾಗಿದ್ದರು. ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳೊಂದಿಗೆ ಯಾವುದಾದರೂ ಮಾತುಕತೆ ನಡೆಸಬೇಕಿದ್ದರೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ರಘುಪತಿಯವರನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಉಭಯ ರಾಜ್ಯಗಳ ನಡುವೆ ಸಂವಹನ ಸಾಧನವಾಗಿ ನಿಂತಿದ್ದವರು ರಘುಪತಿ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಮುಂಜಾನೆ ತಮ್ಮ ವರ್ಣರಂಜಿತ ಬದುಕಿಗೆ ತೆರೆ ಎಳೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...