Homeಮುಖಪುಟಭೀಮಾ ಕೋರೆಗಾಂವ್ ಪ್ರಕರಣ: ಆರೋಪಿಗಳ ಡಿವೈಸ್‌ಗಳಿಗೆ ಪೊಲೀಸರಿಂದಲೇ ನಕಲಿ ದಾಖಲೆ ವರ್ಗಾವಣೆ!?

ಭೀಮಾ ಕೋರೆಗಾಂವ್ ಪ್ರಕರಣ: ಆರೋಪಿಗಳ ಡಿವೈಸ್‌ಗಳಿಗೆ ಪೊಲೀಸರಿಂದಲೇ ನಕಲಿ ದಾಖಲೆ ವರ್ಗಾವಣೆ!?

ರೋನಾ ವಿಲ್ಸನ್, ವರವರ ರಾವ್ ಮತ್ತು ಹನಿ ಬಾಬು ಅವರ ಎಲೆಕ್ಟ್ರಾನಿಕ್‌ ಡಿವೈಸ್‌ಗಳಿಗೆ ಪೊಲೀಸರೇ ನಕಲಿ ದಾಖಲೆಗಳನ್ನು ತುರುಕಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮ ‘ವೈರ್ಡ್ ಮ್ಯಾಗಜೀನ್’ ವರದಿ ಮಾಡಿದೆ.

- Advertisement -
- Advertisement -

ಹೋರಾಟಗಾರರಾದ ರೋನಾ ವಿಲ್ಸನ್, ವರವರ ರಾವ್ ಮತ್ತು ಹನಿ ಬಾಬು ಅವರಿಗೆ ಸೇರಿದ ಎಲೆಕ್ಟ್ರಾನಿಕ್ ಸಾಧನಗಳನ್ನು ಹ್ಯಾಕ್ ಮಾಡಿದ ಪುಣೆ ಪೊಲೀಸರು, ಅವುಗಳಲ್ಲಿ ನಕಲಿ ಪುರಾವೆಗಳನ್ನು ಹಾಕಿದ್ದಾರೆ ಎಂದು ಯುಎಸ್ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿಯೊಂದು ಹೇಳಿರುವುದಾಗಿ ಅಮೆರಿಕ ಮೂಲದ ‘ವೈರ್ಡ್ ಮ್ಯಾಗಜೀನ್’ ವರದಿ ಮಾಡಿದೆ.

2018ರ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಚು ರೂಪಿಸಿದ ಆರೋಪವನ್ನು ವಿಲ್ಸನ್, ರಾವ್ ಮತ್ತು ಬಾಬು ಅವರ ಮೇಲೆ ಹೊರಿಸಲಾಗಿದೆ.

ಈ ಹೋರಾಟಗಾರರನ್ನು ಬಂಧಿಸಿದ ವ್ಯಕ್ತಿಗಳಿಗೂ, ನಕಲಿ ಪುರಾವೆಗಳನ್ನು ವಾಮಮಾರ್ಗದಲ್ಲಿ ಎಲೆಕ್ಟ್ರಾನಿಕ್‌ ಡಿವೈಸ್‌ಗಳಿಗೆ ಹಾಕಿದ ವ್ಯಕ್ತಿಗಳಿಗೂ ಸಂಬಂಧವಿದೆ ಎಂದು ಸೈಬರ್‌ ಸೆಕ್ಯುರಿಟಿ ಸಂಸ್ಥೆ ಸೆಂಟಿನೆಲ್‌ಒನ್‌ನ ಭದ್ರತಾ ಸಂಶೋಧಕ ಜುವಾನ್ ಆಂಡ್ರೆಸ್ ಗೆರೆರೊ-ಸಾಡೆ ಅವರು ‘ದಿ ವೈರ್ಡ್‌’ಗೆ ತಿಳಿಸಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವಕೀಲರು, ಹೋರಾಟಗಾರರು ಸೇರಿದಂತೆ 16 ಮಂದಿಯನ್ನು ಪುಣೆ ಪೊಲೀಸರು ಬಂಧಿಸಿದ್ದರು.

ಯುನೈಟೆಡ್ ಸ್ಟೇಟ್ಸ್ ಮೂಲದ ಡಿಜಿಟಲ್ ಫೊರೆನ್ಸಿಕ್ಸ್ ಕಂಪನಿಯಾದ ಆರ್ಸೆನಲ್ ಕನ್ಸಲ್ಟಿಂಗ್, ಫೆಬ್ರವರಿ 2021ರಲ್ಲಿ ಆತಂಕಕಾರಿ ಸಂಗತಿಯೊಂದನ್ನು ಹೊರಗೆಡವಿತ್ತು. ವಿಲ್ಸನ್ ಅವರ ಲ್ಯಾಪ್‌ಟಾಪ್‌ಗೆ ನುಸುಳಲು ಹ್ಯಾಕರ್‌ಗಳು ಮಾಲ್‌ವೇರ್ ಬಳಸಿದ್ದಾರೆ. ಕನಿಷ್ಠ 10 ದೋಷಾರೋಪಣೆ ಪತ್ರಗಳನ್ನು ಡಿವೈಸ್‌ನಲ್ಲಿ ಇರಿಸಿದ್ದಾರೆ ಎಂದು ವರದಿ ಹೇಳಿತ್ತು.

ಬಂದೂಕು ಮತ್ತು ಮದ್ದುಗುಂಡುಗಳ ಅಗತ್ಯವನ್ನು ಚರ್ಚಿಸಿ ನಿಷೇಧಿತ ಮಾವೋವಾದಿ ಉಗ್ರಗಾಮಿ ಗುಂಪಿಗೆ ಉದ್ದೇಶಿಸಿ ಬರೆದ ಪತ್ರ, ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ವಿವರಗಳೂ ಈ ದಾಖಲೆಗಳಲ್ಲಿ ಇದ್ದವು.

ಜೂನ್ 2018ರಲ್ಲಿ ಬಂಧಿಸುವ ಮೊದಲು ವಿಲ್ಸನ್ ಅವರನ್ನು ಎರಡು ಪ್ರತ್ಯೇಕ ಹ್ಯಾಕರ್‌ಗಳ ಗುಂಪುಗಳು ಟಾರ್ಗೆಟ್ ಮಾಡಿಕೊಂಡಿದ್ದವು ಎಂದು ಸೆಂಟಿನೆಲ್ ಒನ್ ಹೇಳಿಕೊಂಡಿದೆ.

ಸೆಂಟಿನೆಲ್ ಒನ್ ಪ್ರಕಾರ, ಹ್ಯಾಕಿಂಗ್ ನಡೆಸಿದ ಗುಂಪುಗಳಲ್ಲಿ ಒಂದಾದ ModifiedElephant (ಮಾಡಿಫೈಯ್ಡ್‌‌ ಎಲಿಫೆಂಟ್‌) ವಿಲ್ಸನ್ ಅವರ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ನಕಲಿ ದಾಖಲೆಗಳನ್ನು ತುರುಕಿದೆ. ಇನ್ನೊಂದು ಗುಂಪನ್ನು ಸೈಬರ್‌ ಸೆಕ್ಯುರಿಟಿ ಸಂಸ್ಥೆಯು ‘ಸೈಡ್‌ವಿಂಡರ್‌’ ಎಂದು ಗುರುತಿಸಿರುವುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ದಾಳಿಯನ್ನು ಯಾರು ನಡೆಸಿದರು ಅಥವಾ ದಾಳಿ ನಡೆಸಲು ಯಾರು ಆದೇಶಿಸಿದರು ಎಂದು ಸೆಂಟಿನೆಲ್ ಒನ್ ಸಂಸ್ಥೆ ಹೇಳಿಲ್ಲ. ಆದರೆ ಮಾಡಿಫೈಯ್ಡ್‌‌ ಎಲಿಫೆಂಟ್‌ ಗುಂಪಿನ ಚಟುವಟಿಕೆಯು ಭಾರತ ಸರ್ಕಾರದೊಂದಿಗೆ ಹಿಸಾಸಕ್ತಿ ಹೊಂದಿರುವಂತೆ ಕಾಣುತ್ತಿರುವುದಾಗಿ ತನಿಖೆ ಬಹಿರಂಗಪಡಿಸಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿರುವ ಪುಣೆ ಪೊಲೀಸ್ ಅಧಿಕಾರಿಯೊಬ್ಬರು  ಹ್ಯಾಕಿಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸೆಂಟಿನೆಲ್ ಒನ್ ಹೇಳಿಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...