HomeUncategorizedಭಾರತದೊಂದಿಗೆ ರಫೇಲ್ ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌; ಮೋದಿಗೆ ಹಿನ್ನಡೆ?

ಭಾರತದೊಂದಿಗೆ ರಫೇಲ್ ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌; ಮೋದಿಗೆ ಹಿನ್ನಡೆ?

- Advertisement -
- Advertisement -

ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನದ ಮೇಲೆ, 2016 ರ ಬಹು-ಶತಕೋಟಿ ಡಾಲರ್ ಮೊತ್ತದ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತಕ್ಕೆ ಮಾರಾಟ ಮಾಡಿದ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ‘ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿ’ (ಪಿಎನ್‌ಎಫ್) ಶುಕ್ರವಾರ ತಿಳಿಸಿದೆ. ‘ಪಿಎನ್‌ಎಫ್‌’  ಫ್ರಾನ್ಸ್‌ನ ನ್ಯಾಯಾಂಗ ಸಂಸ್ಥೆಯಾಗಿದ್ದು ಇದು ಗಂಭೀರ ಆರ್ಥಿಕ ಮತ್ತು ಹಣಕಾಸಿನ ಅಪರಾಧಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತದೆ.

ರಫೇಲ್‌ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ತನಿಖೆಯಲ್ಲಿ ಸಾಬಿತಾದರೆ ಭಾರತದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಲಿದ್ದು, ಪ್ರಧಾನಿ ಮೋದಿಗೆ ಹಿನ್ನಡೆ ಆಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಸರ್ಕಾರ ಮತ್ತು ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ನಡುವಿನ 36 ವಿಮಾನಗಳಿಗೆ 7.8 ಬಿಲಿಯನ್ ಯುರೋ ( 9.3 ಬಿಲಿಯನ್ ಡಾಲರ್‌‌) ಒಪ್ಪಂದವು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದೆ. ಇದು ರಾಜಕೀಯವಾಗಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತ್ತು.

ಇದನ್ನು ಓದಿ: ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ಫ್ರೆಂಚ್ ತನಿಖಾ ವೆಬ್‌ಸೈಟ್ ಆಗಿರುವ ಮೀಡಿಯಾಪಾರ್ಟ್‌ ಕಳೆದ ಏಪ್ರೀಲ್‌ನಲ್ಲಿ ರಫೇಲ್‌ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹಲವಾರು ವರದಿಗಳನ್ನು ಮಾಡಿತ್ತು. ಈ ಹಿನ್ನಲೆಯಲ್ಲಿ ‘ಪಿಎನ್‌ಎಫ್’ 2016 ರ ರಫೇಲ್‌ ಒಪ್ಪಂದದ ಸುತ್ತಲಿನ ಅನುಮಾನಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಿಸಿದೆ.

ಮೀಡಿಯಾಪಾರ್ಟ್ ವೆಬ್‌ಸೈಟ್‌ ಏಪ್ರಿಲ್‌ನಲ್ಲಿ ಮಾಡಿದ್ದ ವರದಿಯಲ್ಲಿ, “ಗುಪ್ತವಾಗಿ ಲಕ್ಷಾಂತರ ಯುರೋಗಳಷ್ಟು ಕಮೀಷನ್‌‌ಗಳನ್ನು ಮಾರಾಟ ಮಾಡಲು ಸಹಾಯ ಮಾಡಿದವರಿಗೆ ನೀಡಲಾಗಿದೆ” ಎಂದು ಹೇಳಿದೆ. ಈ ಹಣಗಳಲ್ಲಿ ಒಂದಷ್ಟು ಲಂಚವಾಗಿ ಭಾರತೀಯ ಅಧಿಕಾರಿಗಳಿಗೆ ಕೂಡಾ ನೀಡಲಾಗಿತ್ತು ಎಂದು ಅದು ಉಲ್ಲೇಖಿಸಿದೆ.

ಈ ವರದಿಗಳ ನಂತರ, ಹಣಕಾಸಿನ ಅಪರಾಧದಲ್ಲಿ ಪರಿಣತಿ ಹೊಂದಿರುವ ‘ಫ್ರಾನ್ಸ್‌ನ ಶೆರ್ಪಾ ಎನ್‌ಜಿಒ’, ಇತರ ಆರೋಪಗಳೊಂದಿಗೆ ಭ್ರಷ್ಟಾಚಾರ ಮತ್ತು ಪ್ರಭಾವ ಬೀರಿದ್ದಕ್ಕಾಗಿ ಅಧಿಕೃತ ದೂರು ದಾಖಲಿಸಿದ್ದು, ಒಪ್ಪಂದದ ತನಿಖೆಗಾಗಿ ತನಿಖಾ ಮ್ಯಾಜಿಸ್ಟ್ರೇಟ್‌ನನ್ನು ನೇಮಕ ಮಾಡಲು ಒತ್ತಾಯಿಸಿತ್ತು.

ಶೆರ್ಪಾ 2018 ರಲ್ಲಿ ಈ ಒಪ್ಪಂದದ ಬಗ್ಗೆ ತನಿಖೆ ತನಿಖೆ ನಡೆಸಬೇಕು ಎಂದು ಕೇಳಿದ್ದರು, ಆದರೆ ಪಿಎನ್‌ಎಫ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದು ತನ್ನ ಈ ಮೊದಲ ದೂರಿನಲ್ಲಿ, ಡಸಾಲ್ಟ್ ತನ್ನ ಭಾರತೀಯ ಪಾಲುದಾರನಾಗಿ ರಿಲಯನ್ಸ್ ಗ್ರೂಪ್ ಅನ್ನು ಆಯ್ಕೆ ಮಾಡಿದೆ ಎಂಬ ಅಂಶವನ್ನು ಖಂಡಿಸಿತ್ತು. ರಿಲಾಯನ್ಸ್‌‌ ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಾಗಿರುವ ಅನಿಲ್ ಅಂಬಾನಿ ನೇತೃತ್ವದ ಸಂಸ್ಥೆಯಾಗಿದೆ.

ಇದನ್ನು ಓದಿ: ರಫೇಲ್ ಒಪ್ಪಂದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1 ಮಿಲಿಯನ್ ಯೂರೋ ನೀಡಲಾಗಿದೆ: ವರದಿ

ಭಾರತಕ್ಕೆ 126 ಜೆಟ್‌ಗಳನ್ನು ಪೂರೈಸುವ ಒಪ್ಪಂದವನ್ನು ಡಸಾಲ್ಟ್ 2012 ರಲ್ಲಿ ಮಾಡಿಕೊಂಡಿತ್ತು ಮತ್ತು ಭಾರತೀಯ ಏರೋಸ್ಪೇಸ್ ಕಂಪನಿಯಾದ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್’ (ಎಚ್‌ಎಎಲ್) ನೊಂದಿಗೆ ಮಾತುಕತೆ ಕೂಡಾ ನಡೆಸಿತ್ತು.

ಮಾರ್ಚ್ 2015 ರ ಹೊತ್ತಿಗೆ, ಈ ಮಾತುಕತೆಗಳು ಬಹುತೇಕ ತೀರ್ಮಾನಕ್ಕೆ ಬಂದಿದ್ದವು ಎಂದು ಡಸಾಲ್ಟ್ ಹೇಳಿತ್ತು. ಆದರೆ ಅದೇ ವರ್ಷದ ಏಪ್ರಿಲ್‌ನಲ್ಲಿ, ಪ್ರಧಾನಿ ಮೋದಿ ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡಿದ ನಂತರ, ಈ ಒಪ್ಪಂದದ ಮಾತುಕತೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿತ್ತು.

ಈ ಮಧ್ಯೆ ಏರೋನಾಟಿಕ್ಸ್‌ನಲ್ಲಿ ಯಾವುದೇ ಅನುಭವವಿಲ್ಲದ ರಿಲಯನ್ಸ್ ಗ್ರೂಪ್ ಅನ್ನು ಆಯ್ಕೆ ಮಾಡಿ ಕೇವಲ 36 ಜೆಟ್‌ಗಳಿಗೆ ಹೊಸ ಒಪ್ಪಂದವನ್ನು ಅಂತಿಮಗೊಳಿಸಲಾಯಿತು. ಈ ಮಾತುಕತೆ ನಡೆಯುತ್ತಿದ್ದ ಜನವರಿ 2016 ರ ಸಮಯದಲ್ಲಿ ಫ್ರಾಸ್ಸ್‌ನ ಅಧ್ಯಕ್ಷರಾಗಿದ್ದ ಫ್ರಾಂಕೋಯಿಸ್ ಹೊಲಾಂಡ್ ಅವರ ಸಹ-ಪಾಲುದಾರ ಜೂಲಿ ಗಯೆಟ್ ನಿರ್ಮಿಸಿದ ಚಿತ್ರಕ್ಕೆ ರಿಲಯನ್ಸ್ ಹಣಕಾಸು ಒದಗಿಸಿತ್ತು.

ಒಪ್ಪಂದದ ಮಾತುಕತೆ ನಡೆಯುತ್ತಿರುವ ಸಮಯದಲ್ಲಿಯೆ, ರಿಲಾಯನ್ಸ್‌ಗೆ ಸೇರಿದ ಫ್ರೆಂಚ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು, 2015 ರಲ್ಲಿ ಫ್ರಾನ್ಸ್ ಸರ್ಕಾರವು 143.7 ಮಿಲಿಯನ್ ಯುರೋ ತೆರಿಗೆ ಹೊಂದಾಣಿಕೆಯನ್ನು ರದ್ದುಗೊಳಿಸಿದೆ ಎಂದು ಫ್ರಾನ್ಸ್‌ನ ಲೆ ಮಾಂಡೆ ಪತ್ರಿಕೆ ಬಹಿರಂಗಪಡಿಸಿದೆ.

ಇದನ್ನು ಓದಿ: ಸರ್ಕಾರದ ಪರವಾಗಿ ರಫೇಲ್, ಅಯೋಧ್ಯಾ, ಸಿಬಿಐ ತೀರ್ಪು ನೀಡಿದ ನಂತರ ನಿಮಗೆ ರಾಜ್ಯಸಭಾ ಸ್ಥಾನ ಮತ್ತು ಝಡ್ ಶ್ರೇಣಿಯ ಭದ್ರತೆ ನೀಡಲಾಗುತ್ತದೆ; ಇದರ ಅರ್ಥವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....