Homeಮುಖಪುಟವಂಚನೆ ಪ್ರಕರಣ: ಗುಜರಾತಿ ವಂಚಕ ಕಿರಣ್ ಭಾಯ್ ಪಟೇಲ್‌ ಪತ್ನಿ ಬಂಧನ

ವಂಚನೆ ಪ್ರಕರಣ: ಗುಜರಾತಿ ವಂಚಕ ಕಿರಣ್ ಭಾಯ್ ಪಟೇಲ್‌ ಪತ್ನಿ ಬಂಧನ

- Advertisement -
- Advertisement -

ಪ್ರಧಾನಿ ಕಚೇರಿಯ ಉನ್ನತ ಅಧಿಕಾರಿಯಂತೆ ಪೋಸ್ ನೀಡಿದ ಗುಜರಾತಿ ವಂಚಕ ಕಿರಣ್ ಭಾಯ್ ಪಟೇಲ್ ಅವರ ಪತ್ನಿಯನ್ನು 15 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ಕ್ರೈಂ ಬ್ರಾಂಚ್ ಮಂಗಳವಾರ ಬಂಧಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಿಜೆಪಿಯ ಮಾಜಿ ಸಚಿವ ಜವಾಹರ್ ಚಾವ್ಡಾ ಅವರ ಸಹೋದರ ಜಗದೀಶ್ ಚಾವ್ಡಾ ಅವರು, ಮಾಲಿನಿ ಪಟೇಲ್ ಮತ್ತು ಅವರ ಪತಿ, ವಂಚಕ ಕಿರಣ್ ಭಾಯ್ ಪಟೇಲ್ ವಿರುದ್ಧ ಮಾರ್ಚ್ 22ರಂದು ಪ್ರಕರಣ ದಾಖಲಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ವಂಚಕ ಕಿರಣ್ ಭಾಯ್ ಪಟೇಲ್ ವಿರುದ್ಧದ ನಾಲ್ಕನೇ ಪ್ರಕರಣ ಇದಾಗಿದೆ. ನಂಬಿಕೆಯ ಉಲ್ಲಂಘನೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಒಳಗೊಂಡಂತೆ ಅವರ ವಿರುದ್ಧ ಅವರ ತವರು ರಾಜ್ಯ ಗುಜರಾತ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

ಆರೋಪಿಗಳಾಗಿರುವ ಮಾಲಿನಿ ಪಟೇಲ್ ಮತ್ತು ಕಿರಣ್ ಭಾಯ್ ಪಟೇಲ್ ಅವರು, ಜಗದೀಶ್ ಚಾವ್ಡಾ ಅವರಿಗೆ ಕಳೆದ ವರ್ಷ ಅಹಮದಾಬಾದ್‌ನ ಶಿಲಾಜ್ ಪ್ರದೇಶದಲ್ಲಿನ ಅವರ ವಸತಿ ಆಸ್ತಿಯನ್ನು ನವೀಕರಿಸುವುದಾಗಿ ಭರವಸೆ ನೀಡಿ ಸುಮಾರು 15 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಇತ್ತೀಚಿನ ಎಫ್‌ಐಆರ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ: ಮೇ10ರಂದು ಮತದಾನ, 13ರಂದೇ ಫಲಿತಾಂಶ

ಕಿರಣ್ ಭಾಯ್ ಪಟೇಲ್ ಅವರು, ತಾವು ”ಅದಾನಿಯ ದೊಡ್ಡ ಯೋಜನೆ”ಯೊಂದಿಗೆ ಸಂಪರ್ಕ ಹೊಂದಿರುವ ಪ್ರಧಾನ ಮಂತ್ರಿ ಕಚೇರಿಯ ಕ್ಲಾಸ್ 1 ಅಧಿಕಾರಿ ಎಂದು ಹೇಳುವ ಮೂಲಕ ಚಾವ್ಡಾ ಅವರನ್ನು ವಂಚಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಸೇರಿಸಲಾಗಿದೆ.

ಇಂಟೀರಿಯರ್ ಡಿಸೈನರ್ ಜೊತೆಗೆ ದಂಪತಿಗಳು ನವೀಕರಣವನ್ನು ಪ್ರಾರಂಭಿಸಿದರು. ನವೀಕರಣದ ಕೆಲಸ ಪ್ರಾರಂಭವಾದಾಗ, ಚಾವ್ಡಾ ತನ್ನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡರು. ಈ ವೇಳೆ ಚಾವ್ಡಾ ಅವರಿಂದ ಕಂತು-ಕಂತುಗಳಲ್ಲಿ 35 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕೆಲ ದಿನಗಳ ಬಳಿಕ ಚಾವ್ಡಾ ಅವರು ತಮ್ಮ ಮನೆಯ ಬಳಿ ಬಂದಾಗ ವಂಚಕ ದಂಪತಿಗಳು ಅವರ ಮನೆ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಿಸಿದ್ದಾರೆ ಮತ್ತು ಮನೆಯ ಹೊರಗೆ ತಮ್ಮ ನಾಮಫಲಕವನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ. ಅವರು ಮನೆಯ ನವೀಕರಣವನ್ನು ಪೂರ್ಣಗೊಳಿಸದೆ ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಚಾವ್ಡಾ ಆರೋಪಿಸಿದ್ದಾರೆ.

ಗುಜರಾತಿ ವಂಚಕ ಕಿರಣ್ ಭಾಯ್ ಪಟೇಲ್ ಮತ್ತು ಅವರ ಪತ್ನಿ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ), 170 (ಸಾರ್ವಜನಿಕ ಸೇವಕರನ್ನು ಗುರುತಿಸುವುದು) ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಚೈತನ್ಯ ಮಾಂಡ್ಲಿಕ್ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ್ದು, ”ಮಾಲಿನಿ ಪಟೇಲ್ ಅವರನ್ನು ಮಂಗಳವಾರ ಬಂಧಿಸಿದ್ದೇವೆ” ಎಂದು ತಿಳಿಸಿದರು.

ಕಿರಣ್ ಭಾಯಿ ಪಟೇಲ್ ಅವರನ್ನು ಪ್ರಧಾನಿ ಕಚೇರಿಯಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕ ಎಂದು ಸುಳ್ಳು ಹೇಳಿ ಸರ್ಕಾರಿ ಸವಲತ್ತುಗಳನ್ನು ಪಡೆದಿದ್ದ ಕಾರಣಕ್ಕಾಗಿ ಮಾರ್ಚ್ 3ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ, ಬುಲೆಟ್ ಪ್ರೂಫ್ ಕಾರು, ಭದ್ರತಾ ಸಿಬ್ಬಂದಿ ಮತ್ತು ಅಧಿಕೃತ ವಸತಿ ಸೇರಿದಂತೆ ಪ್ರಧಾನಿ ಕಚೇರಿಯಿಂದ ಅಧಿಕಾರಿಗಳಿಗೆ ಸಾಮಾನ್ಯವಾಗಿ ನೀಡಲಾಗುವ ಸೌಲಭ್ಯಗಳನ್ನು ಕಿರಣ್ ಭಾಯಿ ಪಟೇಲ್ ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 2 ರಂದು ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...