Homeಮುಖಪುಟವಾಕ್ ಸ್ವಾತಂತ್ರ್ಯವು ದ್ವೇಷ ಭಾಷಣವಾಗಿ ಬದಲಾಗಬಾರದು; ಮದ್ರಾಸ್ ಹೈಕೋರ್ಟ್

ವಾಕ್ ಸ್ವಾತಂತ್ರ್ಯವು ದ್ವೇಷ ಭಾಷಣವಾಗಿ ಬದಲಾಗಬಾರದು; ಮದ್ರಾಸ್ ಹೈಕೋರ್ಟ್

- Advertisement -
- Advertisement -

ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಶೇಷಸಾಯಿ ಅವರು ಹೇಳಿದ್ದಾರೆ.

ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದ್ದು, ಸನಾತನ ಧರ್ಮವು ಒಂದು ಶಾಶ್ವತ ಕರ್ತವ್ಯಗಳ ಗುಂಪಾಗಿದೆ. ಅದರಲ್ಲಿ ದೇಶದ ಮೇಲಿನ ಕೆಲಸ, ರಾಜನ ಜವಾಬ್ಧಾರಿಗಳು, ತಂದೆ, ತಾಯಿಗಳು, ಗುರುವಿನ ಮೇಲಿನ ಕರ್ತವ್ಯ ಮತ್ತು ಬಡವರ ಬಗ್ಗೆ ಕಾಳಜಿ ವಹಿಸುವುದು ಸೇರಿದೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಎನ್ ಶೇಷಸಾಯಿ ಅವರು ಸನಾತನ ಧರ್ಮದ ಕುರಿತ  ಚರ್ಚೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸನಾತನ ಧರ್ಮವು ಕೇವಲ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆಯು ನೆಲೆಗೊಂಡಿದೆ. ಈ ಕಲ್ಪನೆಯನ್ನು ಅವರು ತಿರಸ್ಕರಿಸಿದ್ದಾರೆ.

ಒಂದು ವೇಳೆ ಸನಾತನ ಧರ್ಮದ ತತ್ವಗಳೊಳಗೆ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಎಲ್ಲೋ ಅನುಮತಿಸಲಾಗಿದೆ ಎಂದಾದರೆ ಸಂವಿಧಾನದ 17ನೇ ವಿಧಿಯಲ್ಲಿ ಅಸ್ಪೃಶ್ಯತೆಯನ್ನು ತೊಡೆದುಹಾಕಲಾಗಿದೆ ಎಂದು  ಹೇಳಿದ್ದಾರೆ. ಸಮಾನ ನಾಗರಿಕರ ದೇಶದಲ್ಲಿ ಅಸ್ಪೃಶ್ಯತೆಯ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು ಮತ್ತು ಧರ್ಮದ ವಿಚಾರಕ್ಕೆ ಬಂದಾಗ ಇಂತಹ ಭಾಷಣದಿಂದ ಯಾರಿಗೂ ಗಾಯವಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ನ್ಯಾಯಾಧೀಶರು ಒತ್ತಿ ಹೇಳಿದರು.

ಪ್ರತಿಯೊಂದು ಧರ್ಮವು ನಂಬಿಕೆಯ ಮೇಲೆ ಸ್ಥಾಪಿತವಾಗಿದೆ ಮತ್ತು ಸ್ವಭಾವತಃ ನಂಬಿಕೆಯು ತರ್ಕ ಹೀನವಾಗಿದೆ. ಆದ್ದರಿಂದ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸಿದಾಗ, ಯಾರಿಗೂ ಗಾಯವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನು ಓದಿ: ಅಂಬೇಡ್ಕರ್, ತಿರುವಳ್ಳುವರ್ ಬಗ್ಗೆ ಅವಹೇಳನ: ವಿಹೆಚ್‌ಪಿಯ ಮಾಜಿ ನಾಯಕನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...