Homeಅಂತರಾಷ್ಟ್ರೀಯಚೀನಾದ ಅಪ್ಲಿಕೇಷನ್‌ಗ‌ಳಾದ ಟಿಕ್‌ಟಾಕ್, ವೀಚಾಟ್ ಬ್ಯಾನ್!: ಅಮೇರಿಕ

ಚೀನಾದ ಅಪ್ಲಿಕೇಷನ್‌ಗ‌ಳಾದ ಟಿಕ್‌ಟಾಕ್, ವೀಚಾಟ್ ಬ್ಯಾನ್!: ಅಮೇರಿಕ

ಟಿಕ್‌ಟಾಕ್ ಮತ್ತು ವೀಚಾಟ್‌ನ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ಲಿಮಿಟೆಡ್‌ನೊಂದಿಗೆ ವಹಿವಾಟುಗಳನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6 ರಂದು ಸಹಿ ಹಾಕಿದ್ದರು.

- Advertisement -
- Advertisement -

ಚೀನಾದ ಜನಪ್ರಿಯ ಮೊಬೈಲ್ ಅಪ್ಲಿಕೇಶನ್‌ಗಳಾದ ವೀಚಾಟ್ ಮತ್ತು ಟಿಕ್‌ಟಾಕ್ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲು ಅಮೆರಿಕದ ಅಧಿಕಾರಿಗಳು ಶುಕ್ರವಾರ ಆದೇಶಿಸಿದ್ದಾರೆ.

ತಂತ್ರಜ್ಞಾನದ ಮೇಲಿನ ಅಮೇರಿಕ-ಚೀನಾ ಉದ್ವಿಗ್ನತೆ ಮತ್ತು ಅಮೆರಿಕದ ಹೂಡಿಕೆದಾರರಿಗೆ ಟಿಕ್‌ಟಾಕ್ ವಿಡಿಯೋ ಅಪ್ಲಿಕೇಶನ್‌ನ ಮಾರಾಟ ಮಾಡುವ ಟ್ರಂಪ್ ಆಡಳಿತದ ಪ್ರಯತ್ನದ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನು ಓದಿ: ಬೆಂಕಿ ಬರಹ-1: ಟಿಕ್‌ಟಾಕ್ v/s ಯೂಟ್ಯೂಬ್ – ಯುವಜನರ ಆನ್‌ಲೈನ್ ವರ್ಗ ಸಂಘರ್ಷ

“ಚೀನಾದ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಅಮೆರಿಕದ ಆರ್ಥಿಕತೆಗೆ ಧಕ್ಕೆ ತರಲು ಈ ಅಪ್ಲಿಕೇಶನ್‌ಗಳನ್ನು ಬಳಸುವ ಉದ್ದೇಶಗಳನ್ನು ಹೊಂದಿದೆ” ಎಂದು ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದು, ಚೀನೀ ಮಾತನಾಡುವವರಲ್ಲಿ ಭಾರಿ ಬಳಕೆಯಾಗುವ ಅಪ್ಲಿಕೇಶನ್ ವೀಚಾಟ್ ಮತ್ತು ಆಪಲ್, ಗೂಗಲ್ ನಿರ್ವಹಿಸುವ ಆನ್‌ಲೈನ್ ಮಾರುಕಟ್ಟೆಗಳಿಂದ ಟಿಕ್‌ಟಾಕ್ ಅನ್ನು ನಿಷೇಧಿಸುವ ಕ್ರಮವಾಗಿದೆ.

ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಮತ್ತು ವೀಚಾಟ್‌ನ ಮೂಲ ಕಂಪನಿಯಾದ ಬೈಟ್‌ಡ್ಯಾನ್ಸ್ ಲಿಮಿಟೆಡ್‌ನೊಂದಿಗೆ ವಹಿವಾಟುಗಳನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6 ರಂದು ಸಹಿ ಹಾಕಿದ್ದರು. ಈ ಆದೇಶವು 45 ದಿನಗಳ ನಂತರ ಜಾರಿಗೆ ಬರಲಿದೆ ಎಂದು ಅಮೇರಿಕಾ ಹೇಳಿತ್ತು.

ಗಾಲ್ವಾನ್ ವ್ಯಾಲಿ ಘರ್ಷಣೆಯ ನಂತರ ಭಾರತದಲ್ಲಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸಲಾಯಿತು.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕಿದ್ದನ್ನು ಉಲ್ಲೇಖಿಸಿ ಜೂನ್‌ನಲ್ಲಿ ಕೇಂದ್ರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಕಳೆದ ವಾರ, ನಿಷೇಧಿತ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿದ್ದ 47 ಅಪ್ಲಿಕೇಶನ್‌ಗಳನ್ನು ಸಹ ನಿರ್ಬಂಧಿಸಲಾಗಿದೆ.

ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು, ಚೀನಾ, ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಕರೆದಿದೆ.


ಇದನ್ನು ಓದಿ: ಟಿಕ್‌ಟಾಕ್‌ ಮಾರಾಟಕ್ಕೆ ಒರಾಕಲ್ ಅ‌ನ್ನು ಆಯ್ಕೆ ಮಾಡಿದ ಬೈಟ್‌ಡ್ಯಾನ್ಸ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...