Homeಮುಖಪುಟಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅಪ್ರಾಪ್ತರು ಸೇರಿದಂತೆ ಐವರ ಬಂಧನ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರು ಅಪ್ರಾಪ್ತರು ಸೇರಿದಂತೆ ಐವರ ಬಂಧನ

- Advertisement -
- Advertisement -

‘ಚಿಂದಿ ಆರಿಸುವ ಮಹಿಳೆಯೊಬ್ಬರು 12 ವರ್ಷದ ಬಾಲಕಿಯನ್ನು ಪುಸಲಾಯಿಸಿ ಪಾಳುಬಿದ್ದ ಕಟ್ಟಡದೊಳಕ್ಕೆ ಕರೆದೊಯ್ದಿದ್ದು, ಅಲ್ಲಿ ಒಬ್ಬ ಪುರುಷ ಮತ್ತು ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ’ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಹೊಸ ವರ್ಷದ ರಾತ್ರಿ ಈ ಘಟನೆ ನಡೆದಿದ್ದು, ಮೂವರು ಅಪ್ರಾಪ್ತರು, ಮಹಿಳೆ ಸೇರಿದಂತೆ ಎಲ್ಲ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಳೆ ದೆಹಲಿಯ ಸದರ್ ಬಜಾರ್‌ನಲ್ಲಿರುವ ಆರೋಪಿತ ವ್ಯಕ್ತಿಯ ಟೀ ಅಂಗಡಿಯಲ್ಲಿ ಮಹಿಳೆ ಗ್ರಾಹಕರಾಗಿದ್ದರು, 12, 14 ಮತ್ತು 15 ವರ್ಷ ವಯಸ್ಸಿನ ಮೂವರು ಬಾಲಕರು ಅಂಗಡಿಯಲ್ಲಿ ಕೆಲಸಗಾರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 1ರಂದು ಹುಡುಗಿಯನ್ನು ವ್ಯವಸ್ಥೆ ಮಾಡುವಂತೆ ಚಿಂದಿ ಆರಿಸುವ ಮಹಿಳೆಗೆ ಟೀ ಸ್ಟಾಲ್ ಮಾಲೀಕ ಕೇಳಿಕೊಂಡಿದ್ದಾನೆ. ’ಹೊಸ ವರ್ಷವನ್ನು ಆಚರಿಸಲು ಆರೋಪಿಗಳು ಪ್ರದೇಶದ ಪಾಳು ಬಿದ್ದ ಕಟ್ಟಡದೊಳಗೆ ಪ್ಲಾಸ್ಟಿಕ್ ಟಾರ್ಪಾಲ್‌ನಿಂದ ತಾತ್ಕಾಲಿಕ ಶೆಲ್ಟರ್ ನಿರ್ಮಿಸಿದ್ದರು ಎನ್ನಲಾಗಿದ್ದು, ಯುವತಿಯನ್ನು ತಮ್ಮ ಬಳಿಗೆ ಕರೆತರುವಂತೆ ಸ್ಟಾಲ್ ಮಾಲೀಕ ಮಹಿಳೆಗೆ ಸ್ವಲ್ಪ ಹಣ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮರುದಿನ ಮಹಿಳೆಯು ಚಿಂದಿ ಆಯುವ 12 ವರ್ಷದ ಬಾಲಕಿಯನ್ನು ಭೇಟಿಯಾಗಿದ್ದಾಳೆ. ಖುರ್ಷಿದ್ ಮಾರ್ಕೆಟ್‌ನ ಕಟ್ಟಡದ ಛಾವಣಿಯಿಂದ ಕಸ ಸಂಗ್ರಹಿಸುವಂತೆ ಹೇಳಿದ್ದಾಳೆ. ಹುಡುಗಿ ಅಲ್ಲಿಗೆ ತಲುಪಿದಾಗ, ನಾಲ್ವರು ಆರೋಪಿಗಳು ಸ್ಥಳದಲ್ಲೇ ಕಾಯುತ್ತಿದ್ದರು. ಅವರು ತಾತ್ಕಾಲಿಕವಾಗಿ ಕಟ್ಟಿಕೊಂಡಿದ್ದ ಟಾರ್ಪಲಿನ್ ಶೆಲ್ಟರ್‌ನಲ್ಲಿ ಆಕೆಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಬಳಿಕ, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಆ ನಂತರ, ಬಾಲಕಿ ವಾಯವ್ಯ ದೆಹಲಿಯಲ್ಲಿರುವ ತನ್ನ ಮನೆಗೆ ಹಿಂದಿರುಗಿದ್ದು, ಎರಡು ದಿನಗಳ ಕಾಲ ಮೌನವಾಗಿದ್ದಳು ಎನ್ನಲಾಗಿದೆ. ಜನವರಿ 5 ರಂದು ಸದರ್ ಬಜಾರ್‌ಗೆ ಚಿಂದಿ ಆರಿಸಲು ಬಂದಾಗ, ಆ ಪ್ರದೇಶದಲ್ಲಿ ವಾಸಿಸುವ ತನ್ನ ಸೋದರಸಂಬಂಧಿ ಬಳಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಸೋದರ ಸಂಬಂಧಿಯು ಆಕೆಯ ಪೋಷಕರಿಗೆ ವಿಚಾರ ತಿಳಿಸಿದ್ದು, ಮನೆಯವರು ಪೊಲೀಸರನ್ನು ಸಂಪರ್ಕಿಸಿದ ನಂತರ ವಿಚಾರ ಬೆಳಕಿಗೆ ಬಂದಿದೆ.

ಸಂತ್ರಸ್ತೆ ದೂರು ನೀಡಿದ ಗಂಟೆಗಳ ನಂತರ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟೀ ಅಂಗಡಿ ಮಾಲೀಕರು ಛತ್ತೀಸ್‌ಗಢದ ನಿವಾಸಿಯಾಗಿದ್ದು, ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹುಡುಗರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದವರಾಗಿದ್ದಾರೆ.

ಇದನ್ನೂ ಓದಿ; ಹುಬ್ಬಳ್ಳಿಯಲ್ಲಿ ಕ್ರಿಮಿನಲ್‌ ಪರ ಪ್ರತಿಭಟನೆ: ಆರ್‌.ಅಶೋಕ್‌ ಸೇರಿ 43 ಮಂದಿ ವಿರುದ್ಧ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...