Homeಮುಖಪುಟಯುದ್ಧ ಪೀಡಿತ ಗಾಝಾದಲ್ಲಿ 61% ಉದ್ಯೋಗ ನಷ್ಟ: ILO ವರದಿ

ಯುದ್ಧ ಪೀಡಿತ ಗಾಝಾದಲ್ಲಿ 61% ಉದ್ಯೋಗ ನಷ್ಟ: ILO ವರದಿ

- Advertisement -
- Advertisement -

ಗಾಝಾ ಮೇಲೆ ಇಸ್ರೇಲ್‌ ಯುದ್ಧ ಘೋಷಣೆ ಬಳಿಕ ಗಾಝಾ ಪಟ್ಟಿಯಲ್ಲಿ 1,82,000 ಜನರು ಉದ್ಯೋಗ ಕಳೆದುಕೊಂಡಿದ್ದು ಅಂದರೆ 61 ಪ್ರತಿಶತದಷ್ಟು ಉದ್ಯೋಗಗಳು ನಷ್ಟವಾಗಿದೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ILO) ವರದಿ ತಿಳಿಸಿದೆ.

ಯುದ್ಧ ಪ್ರಾರಂಭವಾದಾಗಿನಿಂದ ಗಾಝಾ ಕನಿಷ್ಠ 61 ಪ್ರತಿಶತದಷ್ಟು ಉದ್ಯೋಗಗಳನ್ನು ಕಳೆದುಕೊಂಡಿದೆ ಎಂದು ವಿಶ್ವಸಂಸ್ಥೆಯ ಕಾರ್ಮಿಕ ಸಂಸ್ಥೆ ಹೇಳಿದ್ದು, ಈ ಆರ್ಥಿಕ ಕುಸಿತವು ಮುಂದಿನ ಹಲವು ವರ್ಷಗಳವರೆಗೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.

ಪ್ಯಾಲೆಸ್ತೀನ್‌ನ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ನಮ್ಮ ಆರಂಭಿಕ ಮೌಲ್ಯಮಾಪನವು ಅತ್ಯಂತ ಆತಂಕಕಾರಿ ಫಲಿತಾಂಶಗಳನ್ನು ನೀಡಿದೆ. ಸಂಘರ್ಷ ಮುಂದುವರಿದರೆ  ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಅರಬ್ ರಾಜ್ಯಗಳ ILOನ ಪ್ರಾದೇಶಿಕ ನಿರ್ದೇಶಕಿ ರೂಬಾ ಜರಾದತ್ ಹೇಳಿದ್ದಾರೆ.

ಸಂಘರ್ಷವು ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಉಂಟು ಮಾಡಿದೆ. ಇದು ಉದ್ಯೋಗಗಳು ಮತ್ತು ವ್ಯವಹಾರಗಳಿಗೆ ಅಪಾರ ಹಾನಿಯನ್ನುಂಟುಮಾಡಿದೆ. ಇದು ಹಲವು ವರ್ಷಗಳವರೆಗೆ ಮುಂದವರಿಯುವ ಭೀತಿ ಇದೆ ಎಂದು ಹೇಳಿದ್ದಾರೆ.

ವೆಸ್ಟ್ ಬ್ಯಾಂಕ್‌ ಕೂಡ ಅಂದಾಜು 24% ಜನರು ಉದ್ಯೋಗಗಳನ್ನು ಕಳೆದುಕೊಂಡಿದೆ. ಅಂದರೆ ಇದು 2,08,000 ಉದ್ಯೋಗಗಳಿಗೆ ಸಮಾನವಾಗಿದೆ ಎಂದು ILO ಹೇಳಿದೆ.

ಯುದ್ಧದಿಂದಾಗಿ ಗಾಝಾ ಪಟ್ಟಿ ಮತ್ತು ವೆಸ್ಟ್‌ ಬ್ಯಾಂಕ್‌ನಲ್ಲಿ ಒಟ್ಟು ಅಂದಾಜು 3,90,000 ಉದ್ಯೋಗ ನಷ್ಟಗಳು ಸಂಭವಿಸಿದೆ. ದೈನಂದಿನ ಆದಾಯದಲ್ಲಿ 16 ಮಿಲಿಯನ್‌ ನಷ್ಟ ಆಗಿದೆ ಎಂದು ವರದಿ ಹೇಳುತ್ತದೆ. ಇಸ್ರೇಲ್ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದರೆ ಅಂಕಿ-ಅಂಶಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಕೆಲವೆಡೆ ಸಂಪೂರ್ಣ ಪ್ರದೇಶಗಳನ್ನು ಧ್ವಂಸ ಮಾಡಲಾಗಿದೆ, ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಉದ್ಯಮಗಳು ಮುಚ್ಚಲ್ಪಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಹೋಗಿದ್ದಾರೆ. ಗಾಝಾದಲ್ಲಿ ನೀರು, ಆಹಾರ ಮತ್ತು ಇಂಧನದ ಕೊರತೆಯಿಂದ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದೆ ಎಂದು ವರದಿ ತಿಳಿಸಿದೆ.

ಅ.7ರಂದು ಹಮಾಸ್‌ ಇಸ್ರೇಲ್‌ ಮೇಲೆ ನಡೆಸಿದ ರಾಕೆಟ್‌ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1400 ಮಂದಿ ಮೃತಪಟ್ಟಿದ್ದರು. ಆ ಬಳಿಕ ಇಸ್ರೇಲ್ ಯುದ್ಧ ಘೋಷಿಸಿ ಪ್ಯಾಲೆಸ್ತೀನ್‌ ಮೇಲೆ ನಡೆಸಿದ ದಾಳಿಯಲ್ಲಿ 10,022ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ.  25,408 ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು, ಯುಎನ್‌ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಮಾದ್ಯಮ ಪ್ರತಿನಿಧಿಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಜಪ್ತಿ: ಮಾರ್ಗಸೂಚಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...