Homeಮುಖಪುಟಸೇನೆಯ ಕೆಲಸ ರಾಜಕೀಯ ಮಾಡುವುದಲ್ಲ: ರಾವತ್‌ಗೆ ತಿರುಗೇಟು ಕೊಟ್ಟ ಪಿ.ಚಿದಂಬರಂ

ಸೇನೆಯ ಕೆಲಸ ರಾಜಕೀಯ ಮಾಡುವುದಲ್ಲ: ರಾವತ್‌ಗೆ ತಿರುಗೇಟು ಕೊಟ್ಟ ಪಿ.ಚಿದಂಬರಂ

- Advertisement -
- Advertisement -

ಸೈನ್ಯದ ಜನರಲ್ ಬಿಪಿನ್‌ ರಾವತ್‌ ಅವರು ಸಿಎಎ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸುವಂತೆ ಕೇಳಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಜನರಲ್ ರಾವತ್‌ಗೆ ಮನವಿ ಮಾಡುತ್ತೇನೆ. ನೀವು ಸೈನ್ಯದ ಮುಖ್ಯಸ್ಥರಾಗಿರಿ ಮತ್ತು ನಿಮ್ಮ ಕೆಲಸವನ್ನು ಗಮನವಿಟ್ಟು ಮಾಡಿ. ನಾವು ಏನು ಮಾಡಬೇಕು ಎಂದು ರಾಜಕಾರಣಿಗಳಿಗೆ ಹೇಳುವುದು ಸೈನ್ಯದ ಕೆಲಸವಲ್ಲ. ಅದೇ ರೀತಿ ಯುದ್ಧವನ್ನು ಹೇಗೆ ಮಾಡಬೇಕೆಂದು ಹೇಳುವುದು ನಮ್ಮ ಕೆಲಸವಲ್ಲ ಎಂದು ಪಿ ಚಿದಂಬರಂ ಹೇಳಿದ್ದಾರೆ.

ಮೊನ್ನೆ ಬಿಪಿನ್‌ ರಾವತ್‌ರವರು ಸಿಎಎ ಹಿಂಸಾಚಾರವನ್ನು ವಿರೋಧಿಸಿದ್ದರು ಮತ್ತು ನಾಯಕತ್ವ ಹೇಗಿರಬೇಕೆಂದು ವಿರೋಧ ಪಕ್ಷಗಳಿಗೆ ಪಾಠ ಮಾಡಿದ್ದರು.

ಚಿಂತಕ ಯೋಗೇಂದ್ರ ಯಾದವ್‌ ಸೇರಿದಂತೆ ಹಲವರು ಬಿಪಿನ್‌ ರಾವತ್‌ರವರ ನಡೆಯನ್ನು ಖಂಡಿಸಿದ್ದರು. ಸೈನ್ಯವು ದೇಶದ ರಾಜಕೀಯದಲ್ಲಿ ತಲೆದೂರಿಸುತ್ತಿರುವುದು ಇದೇ ಮೊದಲು ಎಂದು ಕಿಡಿಕಾರಿದ್ದರು. ಮತ್ತೊಬ್ಬ ಕಾಂಗ್ರೆಸ್‌ ಮುಖಂಡರು ಪಾಕಿಸ್ತಾನ, ಬಾಂಗ್ಲಾದೇಶದಂತೆ ಮುಂದೆ ಸೈನ್ಯವು ಭಾರತದ ಅಧಿಕಾರವನ್ನು ವಶಪಡಿಸಿಕೊಳ್ಳಲು ಇದು ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

0
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ...