Homeಮುಖಪುಟಬಿಎಸ್‌ಎಫ್ ಕಾರ್ಯವ್ಯಾಪ್ತಿಯ ವಿಸ್ತರಣೆ ಮತ್ತು ಒಕ್ಕೂಟ ವ್ಯವಸ್ಥೆ

ಬಿಎಸ್‌ಎಫ್ ಕಾರ್ಯವ್ಯಾಪ್ತಿಯ ವಿಸ್ತರಣೆ ಮತ್ತು ಒಕ್ಕೂಟ ವ್ಯವಸ್ಥೆ

- Advertisement -
- Advertisement -

ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಗಡಿ ಭದ್ರತಾ ಪಡೆಯ (BSF) ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೆಚ್ಚಿಸಿ 11.10.2021 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳ ಮುಖಂಡರು ಈ ನಡೆಯನ್ನು ವಿರೋಧಿಸಿ ಈ ನಡೆಯನ್ನು ಅಸಂವಿಧಾನಿಕ ಎಂದು ಕರೆದಿದ್ದಾರೆ.

ಒಕ್ಕೂಟ ಸರ್ಕಾರದ ನೋಟಿಫಿಕೇಶನ್ ಏನು ಹೇಳುತ್ತದೆ?

ಗೃಹ ವ್ಯವಹಾರಗಳ ಸಚಿವಾಲಯವು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಗಡಿಯಿಂದ ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿಯನ್ನು 15 ಕಿ.ಮೀನಿಂದ 50 ಕಿ.ಮೀಗಳವರೆಗೆ ವಿಸ್ತರಿಸಿದೆ. ಆದರೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಗುಜರಾತ್‌ನಲ್ಲಿ ಬಿಎಸ್‌ಎಫ್‌ನ ಕಾರ್ಯವ್ಯಾಪ್ತಿಯನ್ನು 80 ಕಿ.ಮೀನಿಂದ 50 ಕಿ.ಮೀಗೆ ಇಳಿಸಿದೆ. ಇಲ್ಲಿ ಕಾರ್ಯವ್ಯಾಪ್ತಿ ಎಂದರೆ ಗಡಿಯಿಂದ 50 ಕಿ.ಮೀ ಪ್ರದೇಶದೊಳಗೆ ಶೋಧನೆ ನಡೆಸುವ, ವಶಪಡಿಸಿಕೊಳ್ಳುವ ಮತ್ತು ಬಂಧಿಸುವ ಅಧಿಕಾರ ಬಿಎಸ್‌ಎಫ್‌ಗೆ ಇರುತ್ತದೆ. 2021ರ ಅಧಿಸೂಚನೆಯು 03.07.2014ರ ಅಧಿಸೂಚನೆಯ ತಿದ್ದುಪಡಿಯಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ತೀವ್ರವಾಗಿ ವಿರೋಧಿಸಿವೆ. ಇದು ಒಕ್ಕೂಟ ವ್ಯವಸ್ಥೆ ಮೇಲಿನ ವಿಚಾರಹೀನ ದಾಳಿ ಎಂದು ಕರೆದಿವೆ.

ಈ ನಿರ್ಧಾರದಿಂದ ತೊಂದರೆಯೇನು?

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾದ ಬಿಎಸ್‌ಎಫ್‌ಅನ್ನು 1965ರಲ್ಲಿ ಸ್ಥಾಪಿಸಲಾಯಿತು. ಕೇವಲ ರಾಜ್ಯ ಸಶಸ್ತ್ರ ಪೊಲೀಸ್ ಪಡೆಗಳು ಅಂತಾರಾಷ್ಟ್ರೀಯ ಗಡಿಗಳನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಕೇಂದ್ರ ಸರ್ಕಾರ, ವಿಶೇಷ ಕೇಂದ್ರೀಕೃತ ನಿಯಂತ್ರಿತ ಪಡೆಯ ಅಗತ್ಯವಿದೆ ಎಂದು ಬಿಎಸ್‌ಎಫ್‌ಅನ್ನು ಸ್ಥಾಪಿಸಿತು. ಬಿಎಸ್‌ಎಫ್ ಪ್ರಾರಂಭವಾದಾಗಿನಿಂದಲೂ ಕೇಂದ್ರ ನಿಯಂತ್ರಿಸುವ ವಿಶೇಷ ಪಡೆ ಅದು ಎಂಬುದು ಅದರ ಮುಖ್ಯ ಅಂಶವಾಗಿತ್ತು. ಆದರೂ 2011ರ ತಿದ್ದುಪಡಿ ವಿಧೇಯಕವು ಭಾರತದ ಗಡಿ ಅಥವಾ ಅದರ ಪಕ್ಕದ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಬಿಎಸ್‌ಎಫ್ ನಿಯೋಜನೆಗಾಗಿ ಪೋಷಕ ಕಾಯಿದೆಯನ್ನು ತಿದ್ದುಪಡಿ ಮಾಡಲು ಪ್ರಯತ್ನಿಸಿತು. ಮಸೂದೆಯನ್ನು ಅಂಗೀಕರಿಸದಿದ್ದರೂ, ಈ ಹಿಂದೆ ಕೂಡ ಬಿಎಸ್‌ಎಫ್‌ಗೆ ಹೆಚ್ಚಿನ ಅಧಿಕಾರವನ್ನು ನೀಡುವ ಉದ್ದೇಶವನ್ನು ಕೇಂದ್ರ ಸರ್ಕಾರಗಳು ಹೊಂದಿದ್ದವು ಎಂಬುದನ್ನು ನಾವು ಗಮನಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಬಿಎಸ್‌ಎಫ್‌ಗೆ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುವುದನ್ನು ನಾವು ಗಮನಿಸಬೇಕು. ಅದರ ಪ್ರಮಾಣ ಎಷ್ಟೇ ಇರಲಿ ಮತ್ತು ಅದು ಅಷ್ಟು ಗಮನೀಯವಲ್ಲದ್ದಾಗಿದ್ದರೂ, ಭಾರತದ ರಾಜ್ಯಗಳಿಗೆ ಅದು ಅಶುಭವಾಗಿ ಪರಿಣಮಿಸಬಹುದು. ಇದರಿಂದ ರಾಜ್ಯಗಳ ಸಾರ್ವಭೌಮತ್ವಕ್ಕೆ ಧಕ್ಕೆ ಬರುವುದರ ಜೊತೆಗೆ ಆ ಪ್ರದೇಶಗಳಲ್ಲಿ ಮಿಲಟರೀಕರಣ ಹೆಚ್ಚುತ್ತದೆ ಎಂಬುದು ಪ್ರಜಾತಂತ್ರವಾದಿಗಳ ಚಿಂತೆಯಾಗಿದೆ.

ಗಡಿ ಭದ್ರತಾ ಪಡೆ ಕಾಯ್ದೆ 1968 ಏನು ಹೇಳುತ್ತದೆ?

ಕಾಯಿದೆಯ ಸೆಕ್ಷನ್ 139 (1) ಕೇಂದ್ರ ಸರ್ಕಾರಕ್ಕೆ ಅಧಿಕೃತ ಗೆಜೆಟ್‌ನಲ್ಲಿನ ಆದೇಶದ ಮೂಲಕ 1967ರ ಪಾಸ್ಪೋರ್ಟ್ ಕಾಯ್ದೆ, 1946ರ ವಿದೇಶಿಯರ ಕಾಯಿದೆ, 1947ರ ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆಯಂತಹ ಶಾಸನಗಳಿಗೆ ಸಂಬಂಧಿಸಿದಂತೆ ಬಿಎಸ್‌ಎಫ್‌ನ ಯಾವುದೇ ಸದಸ್ಯ ನೇರವಾಗಿ ಅಧಿಕಾರ ಅಥವಾ ಕರ್ತವ್ಯ ಚಲಾಯಿಸುವಂತೆ ನಿರ್ದೇಶಿಸುತ್ತದೆ. ಅಂತಹ ಆದೇಶವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ, ಅಂಗೀಕರಿಸಬೇಕು ಎಂದು ಈ ನಿಬಂಧನೆಯು ಆದೇಶಿಸುತ್ತದೆ.

ಸೆಕ್ಷನ್ 139ರ ಅಡಿಯಲ್ಲಿನ ನಿಬಂಧನೆಗಳು ಈ ಪಡೆಗಳ ಅಧಿಕಾರವನ್ನು ವಿಸ್ತರಿಸುವ ಮೊದಲು ರಾಜ್ಯಗಳೊಂದಿಗೆ ಸಮಾಲೋಚಿಸುವುದು ಶಾಸನಬದ್ಧ ಅಗತ್ಯವೆಂದು ಮಾಡಿಲ್ಲ ಎಂಬುದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಬದಲಿಗೆ ಈ ಕಾಯ್ದೆ ’ಕಾನೂನು ಮತ್ತು ಸುವ್ಯವಸ್ಥೆಗೆ’ ಸಂಬಂಧಿಸಿದ ವಿಷಯಗಳ ಮೇಲೆ ಕಾನೂನು ರೂಪಿಸುವ ರಾಜ್ಯಗಳ ಅಧಿಕಾರವನ್ನು ನಿರ್ಬಂಧಿಸುತ್ತದೆ ಎಂದು ವಾದಿಸಬಹುದು. ಕೇಂದ್ರವು ಆದೇಶಗಳನ್ನು ಅಂಗೀಕರಿಸುವ ಮೊದಲು ಸಂಬಂಧಿತ ರಾಜ್ಯದೊಂದಿಗೆ ಸಮಾಲೋಚನೆ ಮಾಡುವ ಅಗತ್ಯವಿಲ್ಲ ಎಂದಿರುವುದರಿಂದ ಈ ಕಾಯ್ದೆಯನ್ನು ಮರುಪರಿಶೀಲಿಸಬೇಕೆಂದು ಬಲವಾಗಿ ಒತ್ತಾಯಿಸಬೇಕಿದೆ.

ಒಕ್ಕೂಟ ವ್ಯವಸ್ಥೆಯ ಮೂಲ ರಚನೆ

ಸಂವಿಧಾನದ ಭಾಗ IX (ಆರ್ಟಿಕಲ್ 245-263) ಕೇಂದ್ರ ಹಾಗೂ ರಾಜ್ಯಗಳ ಸಂಬಂಧಗಳ ಬಗ್ಗೆ ವ್ಯವಹರಿಸುತ್ತದೆ ಮತ್ತು ಶಾಸಕಾಂಗ ಮತ್ತು ಆಡಳಿತಾತ್ಮಕ ಸಂಬಂಧಗಳನ್ನು ಅದು ಒಳಗೊಂಡಿದೆ. 246ನೇ ವಿಧಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸಕಾಂಗ ಅಧಿಕಾರಗಳ ವಿಭಜನೆಯನ್ನು ವರ್ಗೀಕರಿಸಿದೆ. ಸೆವೆಂತ್ ಶೆಡ್ಯೂಲ್ ಆ ರೀತಿಯಾಗಿ ಮೂರು ಪಟ್ಟಿ ಮಾಡುತ್ತದೆ: ಅವುಗಳೆಂದರೆ I. ಕೇಂದ್ರ ಪಟ್ಟಿ, II. ರಾಜ್ಯ ಪಟ್ಟಿ ಮತ್ತು III. ಸಮವರ್ತಿ ಪಟ್ಟಿ.

ಇದರಲ್ಲಿ ಕೇಂದ್ರ ಪಟ್ಟಿಯ 20ಗೆ ಸೇರಿಸಿರುವ ಅಂಶಗಳನ್ನು ತುರ್ತುಪರಿಸ್ಥಿತಿಯ ಸಮಯದಲ್ಲಿ 42ನೇ ತಿದ್ದುಪಡಿಯ ಮೂಲಕ ತಂದಿರುವುದು ಆಸಕ್ತಿದಾಯಕವಾಗಿದೆ. ಅದು ಹೀಗೆ ಹೇಳುತ್ತದೆ: ಕೇಂದ್ರಕ್ಕೆ ಸೇರಿದ ಯಾವುದೇ ಸಶಸ್ತ್ರ ಪಡೆಯಾಗಲೀ ಅಥವಾ ಕೇಂದ್ರದ ನಿಯಂತ್ರಣದಲ್ಲಿರುವ ಯಾವುದೇ ಪಡೆಯಾಗಲೀ ಅಥವಾ ನಾಗರಿಕ ಅಧಿಕಾರದ ಸಹಾಯದಿಂದ ಇರುವ ಯಾವುದೇ ರಾಜ್ಯ ಪಡೆಯ ನಿಯೋಜನೆ; ನಿಯೋಜನೆಗೊಂಡ ಪಡೆಗಳ ಸದಸ್ಯರ ಅಧಿಕಾರಗಳು, ಕಾರ್ಯವ್ಯಾಪ್ತಿ, ಸವಲತ್ತುಗಳು ಮತ್ತು ಬಾಧ್ಯತೆಗಳು. ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥಗೆ ಸಂಬಂಧಿಸಿದಂತೆ ಕ್ರಮವಾಗಿ ರಾಜ್ಯಪಟ್ಟಿಯ ಎಂಟ್ರಿ 1 ಮತ್ತು 2.

ಈ ಹಿನ್ನೆಲೆಯಲ್ಲಿ 2021ರ ಅಧಿಸೂಚನೆ ಉಲ್ಲೇಖಿಸಿರುವಂತೆ ಪಾಸ್ಪೋರ್ಟ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆ ಸೇರಿ ಇತರ ಕಾಯ್ದೆಗಳ ಅಡಿಯಲ್ಲಿ ಸಾಮಾನ್ಯವಾಗಿ ಅಪರಾಧಗಳನ್ನು ತನಿಖೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂಬುದನ್ನು ನಾವು ಗಮನಿಸಬೇಕು. ಆದರೆ ಅದೇ ಅಧಿಸೂಚನೆಯು ಬಿಎಸ್‌ಎಫ್‌ಗೆ ಏಕಪಕ್ಷೀಯವಾಗಿ ಶೋಧಿಸುವ, ವಶಪಡಿಸಿಕೊಳ್ಳುವ ಮತ್ತು ಬಂಧಿಸುವ ಅನಿಯಂತ್ರಿತ ಅಧಿಕಾರ ನೀಡಿರುವುದು ವಿರೋಧಾಭಾಸವಾಗಿದೆ. ಒಟ್ಟಿನಲ್ಲಿ ರಾಜ್ಯಗಳು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ಸಂಬಂಧಿತ ವಿಷಯಗಳಲ್ಲಿ ತಮ್ಮ ಅಧಿಕಾರ ಕಳೆದುಕೊಂಡು ಕೇಂದ್ರದೆದುರು ಶರಣಾಗುವಂತೆ ಮಾಡಲಾಗುತ್ತಿದೆ. ಅಲ್ಲದೇ ಯಾವುದೇ ತನಿಖೆಗಳು ಕೇಂದ್ರದ ಅನುಕೂಲಕ್ಕೆ ತಕ್ಕಂತೆ ನಡೆಯಲು ಈ ಅಧಿಸೂಚನೆ ಕಾರಣವಾಗಲಿದೆ.

ಸಂವಿಧಾನ ಸಭೆಯ ಚರ್ಚೆಗಳಲ್ಲಿ ಭಾರತದಲ್ಲಿ ಫೆಡರಲಿಸಂನ ಸ್ವರೂಪವನ್ನು ವಿವರಿಸುವಾಗ, ಅಂಬೇಡ್ಕರ್ ಅವರು, “ಸಂವಿಧಾನವು ಒಕ್ಕೂಟ ಸಂವಿಧಾನ ಎಂದು ನಾವು ಹೇಳಿದಾಗ, ಇದರ ಅರ್ಥವೇನೆಂದರೆ, ಪ್ರಾಂತ್ಯಗಳು ತಮ್ಮ ಕ್ಷೇತ್ರಗಳಲ್ಲಿ ಸಾರ್ವಭೌಮವಾಗಿದ್ದು, ಸಂವಿಧಾನವು ನಿಯೋಜಿಸಲಾದ ಕ್ಷೇತ್ರಗಳಲ್ಲಿ ಮಾತ್ರ ಕೇಂದ್ರವು ಇರಬೇಕು” ಎಂದು ಹೇಳಿದ್ದಾರೆ. ಸಂವಿಧಾನವು ಪ್ರಾಂತ್ಯಗಳನ್ನು ಸಾರ್ವಭೌಮರನ್ನಾಗಿ ಮಾಡಿ ಮತ್ತು ಪ್ರಾಂತ್ಯದ ಶಾಂತಿ, ಸುವ್ಯವಸ್ಥೆ ಮತ್ತು ಉತ್ತಮ ಸರ್ಕಾರಕ್ಕಾಗಿ ಯಾವುದೇ ಕಾನೂನನ್ನು ಮಾಡಲು ಅವರಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿರುವಾಗ ಕೇಂದ್ರದ ಮಧ್ಯಸ್ಥಿಕೆ ಅಥವಾ ಯಾವುದೇ ಇತರ ಪ್ರಾಧಿಕಾರದ ಹಸ್ತಕ್ಷೇಪವನ್ನು ನಿರ್ಬಂಧಿಸಲಾಗಿದೆ ಎಂದು ನಾವು ಪರಿಗಣಿಸಬೇಕು. ಏಕೆಂದರೆ ಅದು ಪ್ರಾಂತ್ಯಗಳ ಸಾರ್ವಭೌಮ ಅಧಿಕಾರದ ಮೇಲಿನ ಆಕ್ರಮಣವಾಗುತ್ತದೆ. ಈಗ ಕೇಂದ್ರ ಸರ್ಕಾರವು ರಾಜ್ಯಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವಾಗ, ’ಆಕ್ರಮಣವು ಹಠಾತ್, ಅನಿಯಂತ್ರಿತ ಮತ್ತು ಕಾನೂನಿನಿಂದ ಅನಧಿಕೃತವಾದ ಆಕ್ರಮಣವಾಗಿರಬಾರದು’ ಎಂಬ ಅಂಬೇಡ್ಕರ್ ಮಾತನ್ನು ನೆನಪಿಸಿಕೊಳ್ಳಬೇಕಿದೆ.

ಈಗ ಬಿಎಸ್‌ಎಫ್ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಗೃಹ ಇಲಾಖೆಯ ನಿರ್ಧಾರವು ರಾಜ್ಯಗಳ ಸಾರ್ವಭೌಮತ್ವವನ್ನು ಮೊಟಕುಗೊಳಿಸುವ ಕೇಂದ್ರ ಸರ್ಕಾರದ ದೊಡ್ಡ ಹುನ್ನಾರದ ಭಾಗವಾಗಿದೆ. ಕೃಷಿ ಕಾಯ್ದೆಗಳಿಂದ ಹಿಡಿದು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯವರೆಗೂ ಕೇಂದ್ರವು ರಾಜ್ಯಗಳ ವಿಷಯಗಳಲ್ಲಿ ಸ್ಪಷ್ಟವಾಗಿ ಆಕ್ರಮಣ ಮಾಡುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಕೇಂದ್ರ ಸರ್ಕಾರ ಸಂವಿಧಾನದ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಯ ಹಿತದೃಷ್ಟಿಯಿಂದ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದೆ. ಆದರೆ ಅದನ್ನು ರಾಜ್ಯಗಳ ಸಾರ್ವಭೌಮತೆ ಮೇಲೆ ದಾಳಿ ಮಾಡುವ ನಿರಂಕುಶ ಸಾಧನಗಳಾಗಿ ಬಳಸಬಾರದು. ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಸಮಗ್ರತೆಯ ವಿಚಾರಗಳು ಒಕ್ಕೂಟ ತತ್ವದಂತಹ ಇತರ ಪ್ರಮುಖ ಸಾಂವಿಧಾನಿಕ ತತ್ವಗಳಿಗೆ ಸಂಬಂಧಿಸಿರಬೇಕು ಮತ್ತು ಇತರ ಮೌಲ್ಯಗಳನ್ನು ಬುಡಮೇಲು ಮಾಡಿ ಅವುಗಳನ್ನು ಎತ್ತಿಹಿಡಿಯಲಾಗುವುದಿಲ್ಲ.

(ಕನ್ನಡಕ್ಕೆ): ಮುತ್ತುರಾಜು

ಪೂರ್ಣ ರವಿಶಂಕರ್

ಪೂರ್ಣ ರವಿಶಂಕರ್
ವಕೀಲರು ಮತ್ತು ಸಂಶೋಧಕರು, ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು


ಇದನ್ನೂ ಓದಿ: ಜಮ್ಮು-ಕಾಶ್ಮೀರವನ್ನು ಬಿಜೆಪಿ ದಶಕಗಳಷ್ಟು ಹಿಂದಕ್ಕೆ ಒಯ್ದಿದೆ: ಮೆಹಬೂಬಾ ಮುಫ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...