Homeಎಕಾನಮಿಸರ್ಕಾರ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದೆ: ಕೋವಿಡ್‌ ಪ್ಯಾಕೇಜ್‌ ಟೀಕಿಸಿದ ಆರ್‌ಎಸ್‌ಎಸ್ ಅಂಗಸಂಸ್ಥೆ ಬಿಎಂಎಸ್

ಸರ್ಕಾರ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದೆ: ಕೋವಿಡ್‌ ಪ್ಯಾಕೇಜ್‌ ಟೀಕಿಸಿದ ಆರ್‌ಎಸ್‌ಎಸ್ ಅಂಗಸಂಸ್ಥೆ ಬಿಎಂಎಸ್

- Advertisement -
- Advertisement -

8 ವಲಯಗಳಲ್ಲಿನ ಕಾರ್ಪೋರೇಟಿಕರಣ ಮತ್ತು ಖಾಸಗೀಕರಣದ ಕುರಿತ ನಿರ್ಮಲಾ ಸೀತಾರಾಮನ್‌ರವರ ಪ್ರಕಟಣೆಗಳಿಗೆ ಆರ್‌ಎಸ್‌ಎಸ್ ಅಂಗಸಂಸ್ಥೆ ಬಿಎಂಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರವು ಕಾರ್ಮಿಕ ಸಂಘಗಳೊಂದಿಗೆ ಸಮಾಲೋಚಿಸುವುದರಿಂದ ದೂರ ಸರಿಯುತ್ತಿದೆ ಎಂದು ಅದು ಆರೋಪಿಸಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‌ನ ನಾಲ್ಕನೇ ಹಂತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತೀಯ ಮಜ್ದೂರ್ ಸಂಘವು ಸರ್ಕಾರವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ವಿಚಾರಗಳ ಕೊರತೆ ಎದುರಿಸುತ್ತಿದೆ ಎಂದು ಹೇಳಿದೆ.

ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಗಳನ್ನು ಸಡಿಲಿಸುವುದು, ಆರು ವಿಮಾನ ನಿಲ್ದಾಣಗಳ ಖಾಸಗೀಕರಣ, ವಿಮಾನಯಾಗಳಲ್ಲಿ ಖಾಸಗಿಯವರಿಗೆ ಹೆಚ್ಚಿನ ಅವಕಾಶ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ವಲಯಕ್ಕೆ ಅವಕಾಶ ನೀಡುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೇಂದ್ರ ಸಚಿವೆ ಶನಿವಾರ ಪ್ರಕಟಿಸಿದ್ದರು. ಕರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನ ನಾಲ್ಕನೇ ಹಂತದ ವಿವರಗಳನ್ನು ಹಂಚಿಕೊಳ್ಳುವಾಗ ಅವರು ಈ ಪ್ರಕಟಣೆಗಳನ್ನು ಮಾಡಿದ್ದಾರೆ.

ಪ್ರಕಟಣೆಗಳಿಗೆ ಪ್ರತಿಕ್ರಿಯಿಸಿದ ಬಿಎಂಎಸ್, ಕಾರ್ಪೋರೇಟಿಕರಣ ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ವು ಖಾಸಗೀಕರಣ ಮತ್ತು “ವಿದೇಶೀಕರಣ” ದ ಮಾರ್ಗಗಳಾಗಿವೆ ಎಂದು ಹೇಳಿದೆ.

ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ಪುನರುಜ್ಜೀವನದ ಕುರಿತ ಆಲೋಚನೆಗಳ ಕೊರತೆಯನ್ನು ಸರ್ಕಾರ ಹೊಂದಿದೆ ಎಂದು ಇದು ತೋರಿಸುತ್ತದೆ ಎಂದು ಆರ್‌ಎಸ್‌ಎಸ್ ಬೆಂಬಲಿತ ಸಂಸ್ಥೆ ಆರೋಪಿಸಿದೆ.

ಎಂಟು ಕ್ಷೇತ್ರಗಳಲ್ಲಿನ ಕಾರ್ಪೋರೇಟಿಕರಣ ಮತ್ತು ಖಾಸಗೀಕರಣದ ಕುರಿತ ಪ್ರಕಟಣೆಗಳನ್ನು ಬಿಎಂಎಸ್ ಬಲವಾಗಿ ಆಕ್ಷೇಪಿಸುತ್ತದೆ ಎಂದು ಟ್ರೇಡ್ ಯೂನಿಯನ್ ಹೇಳಿಕೆಯಲ್ಲಿ ತಿಳಿಸಿದೆ.

ಖಾಸಗೀಕರಣ ಎಂದರೆ ಉದ್ಯೋಗಿಗಳಿಗೆ ಭಾರಿ ಉದ್ಯೋಗ ನಷ್ಟ, ಕಳಪೆ ಗುಣಮಟ್ಟದ ಉದ್ಯೋಗ, ಲಾಭ ಮತ್ತು ಶೋಷಣೆಯ ನಿಯಮವಾಗಿರುತ್ತದೆ ಎಂದು ಬಿಎಂಎಸ್ ಹೇಳಿದೆ.

ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಖಾಸಗಿ ಕಂಪನಿಗಳು ಮತ್ತು ಮಾರುಕಟ್ಟೆ ಸಂಕಷ್ಟಕ್ಕೊಳಗಾದಾಗ  “ಸಾರ್ವಜನಿಕ ವಲಯವು ನಿರ್ಣಾಯಕ ಪಾತ್ರ ವಹಿಸಿದೆ” ಎಂದು ಬಿಎಂಎಸ್‌ ಪ್ರತಿಪಾದಿಸಿದೆ.

ಕಾರ್ಮಿಕ ಸಂಘಗಳು, ಸಾಮಾಜಿಕ ಪ್ರತಿನಿಧಿಗಳು ಮತ್ತು ಭಾದ್ಯಸ್ಥರೊಂದಿಗೆ ಸಮಾಲೋಚಿಸುವುದರಿಂದ ಸರ್ಕಾರ ದೂರ ಸರಿಯುತ್ತಿದೆ ಎಂದು ಅದು ಹೇಳಿದೆ.

ಆದಾಗ್ಯೂ, ಹಣಕಾಸು ಸಚಿವರು ಘೋಷಿಸಿದ ಪ್ಯಾಕೇಜಿನ ಮೊದಲ ಮೂರು ಹಂತದ ಬಗ್ಗೆ ಬಿಎಂಎಸ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು.


ಇದನ್ನೂ ಓದಿ: ಸ್ನೇಹಿತನ ತೊಡೆಮೇಲೆ ಪ್ರಾಣಬಿಟ್ಟ ಯುವಕ : ನಿಲ್ಲದ ವಲಸೆ ಕಾರ್ಮಿಕರ ಕಣ್ಣೀರ ಕಥೆಗಳು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...