Homeಮುಖಪುಟಹೆಸರು, ವಿಳಾಸ ಏನೂ ಇಲ್ಲದೆ 1.25 ಲಕ್ಷ ವಲಸೆ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ...

ಹೆಸರು, ವಿಳಾಸ ಏನೂ ಇಲ್ಲದೆ 1.25 ಲಕ್ಷ ವಲಸೆ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ ಹಂಚಿದ ಕರ್ನಾಟಕ ಸರ್ಕಾರ!: ಹೇಗೆ?

- Advertisement -
- Advertisement -

ಕೊರೊನಾ ವೈರಸ್ ಲಾಕ್‌ಡೌನ್ ಮಧ್ಯೆ ಸಾಮೂಹಿಕ ವಲಸೆ ಹೋಗುವುದನ್ನು ತಡೆಯಲು  1.25 ಲಕ್ಷ ವಲಸೆ ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ.ಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಹೆಸರುಗಳು, ವಿಳಾಸಗಳು ಅಥವಾ ಅವರು ವಾಸಿಸುತ್ತಿದ್ದ ಜಿಲ್ಲೆಗಳಂತಹ ಮೂಲಭೂತ ಸಂಪರ್ಕ ವಿವರಗಳು ಇಲ್ಲದೇ ಹೇಗೆ ಹಣ ವಿತರಣೆ ಮಾಡಿದ್ದೀರಿ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್‌.ಕೆ ಪಾಟೀಲ್‌ ಪ್ರಶ್ನಿಸಿದ್ದಾರೆ.

ಸರಿಯಾದ ವಿಳಾಸಗಳಿಲ್ಲದೆ 1.25 ಲಕ್ಷ ಕಾರ್ಮಿಕರಿಗೆ ತಲಾ 5,000 ರೂಗಳನ್ನು ಹೇಗೆ ನೀಡಲಾಯಿತು? ಎಂದು ಸರ್ಕಾರವನ್ನು ಪ್ರಶ್ನಿಸಿದ್ದು, ಈ ವಿಷಯದ ಬಗ್ಗೆ 15 ದಿನಗಳಲ್ಲಿ ಉತ್ತರಿಸುವಂತೆ ರಾಜ್ಯದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ)ಯು ಕಾರ್ಮಿಕ ಕಾರ್ಯದರ್ಶಿಗೆ ಸೂಚಿಸಿದೆ.

“ಇದು ನನಗೆ ಸಂಪೂರ್ಣ ಆಶ್ಚರ್ಯ ಉಂಟುಮಾಡಿದೆ. ಈ ಫಲಾನುಭವಿಗಳ ಜಿಲ್ಲೆಗಳ ಹೆಸರುಗಳು ಸಹ ತಿಳಿದುಬಂದಿಲ್ಲ. ಹಾಗಿದ್ದಮೇಲೆ ಅಷ್ಟೊಂದು ದೊಡ್ಡ ಹಣವನ್ನು ಹೇಗೆ ವಿತರಿಸಲಾಯಿತು? ಇಲ್ಲೇನೋ ನಡೆಯುತ್ತಿದೆ ಎಂದು ಸಮಿತಿ ಭಾವಿಸಿದೆ” ಎಂದು ಪಿಎಸಿ ಅಧ್ಯಕ್ಷ ಎಚ್.‌ಕೆ ಪಾಟೀಲ್ ಹೇಳಿದ್ದಾರೆ.

ಮೇ ತಿಂಗಳಲ್ಲಿ ಆರ್ಥಿಕತೆಯ ಕುಸಿತ ತಡೆಯಲು ಕೇಂದ್ರವು ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ ನಂತರ, ಕರ್ನಾಟಕದ ಬಿ.ಎಸ್ ಯಡಿಯೂರಪ್ಪ ನೇತೃಥ್ವದ ಸರ್ಕಾರವು ವಿಶೇಷ ರೈಲುಗಳನ್ನು ರದ್ದುಗೊಳಿಸಿತು. ಇಲ್ಲಿರುವ ವಲಸೆ ಕಾರ್ಮಿಕರು ಹೋಗಿಬಿಟ್ಟರೆ ಎಂಬ ಭಯ ಅವರಿಗಿತ್ತು. ಆದರೆ ಇದನ್ನು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿತ್ತು. ಕಾರ್ಮಿಕರನ್ನು ಸೆರೆಯಾಳುಗಳ ರೀತಿಯಲ್ಲಿ ಬಂಧನಲ್ಲಿ ಇರಿಸಿಕೊಳ್ಳುವುದು ಸರಿಯಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು.

ಇಂತಹ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳದೆ ಇಲ್ಲಿಯೇ ಉಳಿದುಕೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮನವಿ ಮಾಡಿದ್ದರು. ಅಲ್ಲದೇ 1,600 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇದರಲ್ಲಿ ವಲಸೆ ನಿರ್ಮಾಣ ಕಾರ್ಮಿಕರಿಗೆ ತಲಾ 5000 ರೂ ನೀಡುವುದು ಸಹ ಸೇರಿತ್ತು.

ಈ ಪ್ಯಾಕೇಜ್ ಅಡಿಯಲ್ಲಿ, “ನೋಂದಾಯಿತ” ಕಾರ್ಮಿಕರಿಗೆ ಅವರು ಮೊದಲು ಪಡೆದ 2,000 ರೂಗಳಿಗೆ ಹೆಚ್ಚುವರಿಯಾಗಿ 3,000 ರೂ. ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 15.8 ಲಕ್ಷ “ನೋಂದಾಯಿತ” ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲಿ 1.25 ಲಕ್ಷ ವಲಸೆ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ತಲಾ 5000 ತಲುಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಇದನ್ನು ಪ್ರಶ್ನಿಸಿದೆ. ಇದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 43,000 ಕಾರ್ಮಿಕರು ಮತ್ತು ಬೀದರ್ ಜಿಲ್ಲೆಯಲ್ಲಿ 66,000 ಕಾರ್ಮಿಕರು ನೋಂದಾಯಿಸಲಾಗಿದೆ ಎಂದು ತೋರಿಸುತ್ತದೆ. ಅತಿ ಹೆಚ್ಚು ನಿರ್ಮಾಣ ಕೆಲಸಗಳು ನಡೆಯುವ ಬೆಂಗಳೂರಿನಲ್ಲಿ ಬೀದರ್ ಮತ್ತು ಇತರ ಅನೇಕ ಸ್ಥಳಗಳಿಗಿಂತ ಅತ್ಯಂತ ಕಡಿಮೆ ಕಾರ್ಮಿಕರು ಇರಲು ಹೇಗೆ ಸಾರ್ಧಯ? ಎಂದು ಎಚ್‌.ಕೆ ಪಾಟೀಲ್ ಪ್ರಶ್ನಿಸಿದ್ದಾರೆ.

COVID-19 ವೈರಸ್ ಹರಡಿದ ಆರಂಭಿಕ ದಿನಗಳಲ್ಲಿನ ಅಂಕಿ ಅಂಶಗಳನ್ನು ನೀಡಲಾಗಿದೆ. ಸರ್ಕಾರವು “ಸಾಧ್ಯವಾದಷ್ಟು ಉತ್ತಮ ಅಭ್ಯಾಸ”ವನ್ನು ಅಳವಡಿಸಿಕೊಂಡಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ ನಾರಾಯಣ್ ಉತ್ತರಿಸಿದ್ದಾರೆ. ಇನ್ನೂ, ಅನುಮಾನವಿದ್ದರೆ, ನಾವು ಯಾವಾಗಲೂ ತನಿಖೆಗೆ ಸಿದ್ದರಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಕಟ್ಟಡ ಕಾರ್ಮಿಕರನ್ನು ಸಂಘಟಿಸುತ್ತಿರುವ ಸಿಐಟಿಯು ಬೆಂಗಳೂರು ದಕ್ಷಿಣ ಕಾರ್ಯದರ್ಶಿ ಉಮೇಶ್ ರವರನ್ನು ಮಾತನಾಡಿಸಿತು. ಅವರು “ಈ ಹಿಂದೆ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಬಿಬಿಎಂಪಿ ಮೂಲಕ ರೇಷನ್ ಕಿಟ್ ಕೊಟ್ಟಿದ್ದೇವೆ ಎಂದು ಘೋಷಿಸಿಕೊಂಡಿತ್ತು. ನಾವು ಆರ್‌ಟಿಐ ಮೂಲಕ ಅರ್ಜಿ ಹಾಕಿ ಎಷ್ಟು ಜನಕ್ಕೆ ನೀಡಿದ್ದೀರಿ ಎಂದು ಮಾಹಿತಿ ಕೇಳಿದರೆ ಬಿಬಿಎಂಪಿ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದೆ. ಈಗ ಕಟ್ಟಡ ಕಾರ್ಮಿಕರಿಗೆ ತಲಾ 5000 ಕೊಟ್ಟಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ನಮ್ಮ ಸುತ್ತಲಿನ ಕಾರ್ಮಿಕರಿಗೆ ಕೇವಲ 2000 ತಲುಪಿದೆಯೇ ಹೊರತು ಉಳಿದ 3000 ತಲುಪಿಲ್ಲ. ಲಾಕ್‌ಡೌನ್‌ನಿಂದ ಅತಿ ಹೆಚ್ಚಿನ ತೊಂದರೆಗೊಳಗಾದ ಈ ಅಸಂಘಟಿತ ಕಾರ್ಮಿಕರ ಹೆಸರಿನಲ್ಲಿ ಸರ್ಕಾರ ಮೋಸ ಮಾಡುವುದನ್ನು ಬಿಟ್ಟು ಅಧಿಕೃತ ದಾಖಲೆಗಳನ್ನು ಮುಂದಿಡಬೇಕು. ಇಲ್ಲದಿದ್ದರೆ ಸರ್ಕಾರ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: ವರ್ಣಭೇದ ನೀತಿ, ಫೇರ್‌ನೆಸ್ ಕ್ರೀಮ್‌ಗಳು, ಮತ್ತು ಬ್ಲಾಕ್ ಲೈವ್ಸ್‌ ಮ್ಯಾಟರ್‌ ಎನ್ನುವ ನಟಿಯರು! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...