Homeಮುಖಪುಟಮುಜಫರ್‌ನಗರ ಶಾಲೆಯ ವಿಡಿಯೋ ತೆಗೆದುಹಾಕುವಂತೆ ಸರ್ಕಾರ ತುರ್ತು ಆದೇಶ ಹೊರಡಿಸಿದೆ; ಕಾಂಗ್ರೆಸ್ ಆರೋಪ

ಮುಜಫರ್‌ನಗರ ಶಾಲೆಯ ವಿಡಿಯೋ ತೆಗೆದುಹಾಕುವಂತೆ ಸರ್ಕಾರ ತುರ್ತು ಆದೇಶ ಹೊರಡಿಸಿದೆ; ಕಾಂಗ್ರೆಸ್ ಆರೋಪ

- Advertisement -
- Advertisement -

ಮುಜಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿ ವಿದ್ಯಾರ್ಥಿಗಳಿಗೆ ಸೂಚಿಸುವ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ವಿಡಿಯೋವನ್ನು ತಕ್ಷಣದಿಂದ ತೆಗೆದುಹಾಕುವಂತೆ ಎಕ್ಸ್ ( ಟ್ವಿಟರ್‌) ಗೆ ಸರಕಾರ ತುರ್ತು ಆದೇಶ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದಲ್ಲದೆ  ಶಿಕ್ಷಕಿಯನ್ನು ಬಂಧಿಸಲು ಆಗ್ರಹಿಸಿದ  ಯುಆರ್‌ಎಲ್‌ಗಳು ಮತ್ತು ಹ್ಯಾಶ್‌ಟ್ಯಾಗ್‌ಗಳಿಗೆ ನಿರ್ಬಂಧಿಸಲು ಸರ್ಕಾರ ಹೆಚ್ಚುವರಿ ಆದೇಶಗಳನ್ನು ನೀಡಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ  ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ ಘಟನೆಯು ಟ್ವಿಸ್ಟ್‌ನ್ನು ಪಡೆದುಕೊಂಡಿದೆ. ಶಿಕ್ಷಕಿಯ ನಡೆಯನ್ನು ಹಲವು ಪ್ರಬಲ ವ್ಯಕ್ತಿಗಳು ಖಂಡಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಶಿಕ್ಷಕಿ ತ್ರಿಪ್ತ ತ್ಯಾಗಿ ಮುಸ್ಲಿಂ ಮಗುವಿಗೆ ಥಳಿಸಲು ಇತರ ಮಕ್ಕಳನ್ನು ಪ್ರೇರೇಪಿಸಿದ್ದಾರೆ ಎನ್ನುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಶಿಕ್ಷಕಿ ತಾನು ಅಂಗವಿಕಲೆ ಎಂದು ಹೇಳಿಕೊಂಡಿದ್ದಾಳೆ ಮತ್ತು ಅದಕ್ಕಾಗಿಯೇ ಬಾಲಕನಿಗೆ ಇತರ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

ವೈರಲ್ ಮಾಡಿದ ವೀಡಿಯೊವನ್ನು ಎಡಿಟ್ ಮಾಡಿ ಕತ್ತರಿಸಲಾಗಿದೆ, ನನಗೆ ಅಂತಹ ಉದ್ದೇಶ ಇರಲಿಲ್ಲ. ನಮ್ಮಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಇರುತ್ತಾರೆ ಮತ್ತು ನಮ್ಮ ಶಾಲೆಯಲ್ಲಿ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಮಗುವಿನ ಬಗ್ಗೆ ಕಟ್ಟು ನಿಟ್ಟಾಗಿರುವಂತೆ ಪೋಷಕರು ಹೇಳಿದ್ದರು. ಬಾಲಕ ಕಳೆದ 2 ತಿಂಗಳಿಂದ ಹೋಮ್‌ವರ್ಕ್ ಮಾಡುತ್ತಿರಲಿಲ್ಲ. ಹಾಗಾಗಿ ನಾನು 2-3 ವಿದ್ಯಾರ್ಥಿಗಳಿಗೆ ಅವನನ್ನು ಥಳಿಸಲು ಹೇಳಿದೆ ಎಂದು ಆರೋಪಿತ ಶಿಕ್ಷಕಿ ಹೇಳಿದ್ದಾರೆ.

ಇದನ್ನು ಓದಿ; ಮುಜಾಫರ್‌ನಗರ ಶಾಲಾ ವೀಡಿಯೊ ಜಿ 20 ಸಭೆಯಲ್ಲಿ ತೋರಿಸಿ: ಬಿಜೆಪಿಗೆ ಅಖಿಲೇಶ್ ಯಾದವ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...