Homeಮುಖಪುಟಕಾಶ್ಮೀರದ ನೈಜೀನ್ ಸರೋವರದಲ್ಲಿ ಸೋನಿಯಾ ಗಾಂಧಿ ದೋಣಿ ವಿಹಾರ

ಕಾಶ್ಮೀರದ ನೈಜೀನ್ ಸರೋವರದಲ್ಲಿ ಸೋನಿಯಾ ಗಾಂಧಿ ದೋಣಿ ವಿಹಾರ

- Advertisement -
- Advertisement -

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶನಿವಾರ ಶ್ರೀನಗರಕ್ಕೆ ತೆರಳಿದ್ದು, ನೈಜೀನ್ ಸರೋವರದಲ್ಲಿ ದೋಣಿ ವಿಹಾರ ಮಾಡಿದ್ದಾರೆ.

ಜಮ್ಮು –ಕಾಶ್ಮೀರ ಮತ್ತು ಲಡಾಖ್​​ನಲ್ಲಿರುವ ಕಾಂಗ್ರೆಸ್  ಪಕ್ಷದ ನಾಯಕ, ವಯನಾಡ್​ ಸಂಸದ ರಾಹುಲ್​ ಗಾಂಧಿ ಅವರು ಕಾಶ್ಮೀರಕ್ಕೆ ಬಂದಿಳಿದಿದ್ದು ಅವರನ್ನು ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ.

ಒಂದು ವಾರದ ಹಿಂದೆ ಲಡಾಖ್ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ, ಲೇಹ್‌ನ ಪ್ಯಾಂಗಾಂಗ್‌ ಸರೋವರದ ಬಳಿ ತಮ್ಮ ತಂದೆ ರಾಜೀವ್‌ ಗಾಂಧಿ ಅವರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದರು.

ಇದೀಗ ರಾಹುಲ್ ಕಾಶ್ಮೀರಕ್ಕೆ ಆಗಮಿಸಿದ್ದು, ಅಲ್ಲೇ ಎರಡು ದಿನ ಇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರ ಅವರ ಮನೆ, ಇಲ್ಲಿನ ಜನರನ್ನು ಮತ್ತು ಈ ನೆಲವನ್ನು ಅವರು ಪ್ರೀತಿಸುತ್ತಾರೆ, ಆದ್ದರಿಂದ ಅವರು ಇಲ್ಲಿ ಎರಡು ದಿನಗಳನ್ನು ಶಾಂತಿಯಿಂದ ಕಳೆಯಲು ಬಯಸುತ್ತಾರೆ. ಇದು ರಾಜಕೀಯ ಭೇಟಿಯಲ್ಲ, ಇದು ಸಂಪೂರ್ಣ ವೈಯಕ್ತಿಕ ಮತ್ತು ಖಾಸಗಿ ಭೇಟಿ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಹುಲ್ ಜಿ ಅವರು ಈಗಾಗಲೇ  ಶ್ರೀನಗರಕ್ಕೆ ಆಗಮಿಸಿದ್ದಾರೆ. ವಯನಾಡ್ ಸಂಸದರನ್ನು ಶನಿವಾರ ಅವರ ತಾಯಿ ಸೇರಲಿದ್ದಾರೆ ಎಂದು ಮಾದ್ಯಮ ಹೇಳಿಕೆಯಲ್ಲಿ ಶ್ರೀನಗರದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಮುಜಾಫರ್‌ನಗರ ಶಾಲಾ ವೀಡಿಯೊ ಜಿ 20 ಸಭೆಯಲ್ಲಿ ತೋರಿಸಿ: ಬಿಜೆಪಿಗೆ ಅಖಿಲೇಶ್ ಯಾದವ್ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...