Homeಕರ್ನಾಟಕಕಾರಾಗೃಹವಾಗುತ್ತಿರುವ ಕಾರ್ಖಾನೆಗಳು: ಹಾಸನದಲ್ಲೊಂದು ಅಮಾನುಷ ಜೀತದ ಘಟನೆ

ಕಾರಾಗೃಹವಾಗುತ್ತಿರುವ ಕಾರ್ಖಾನೆಗಳು: ಹಾಸನದಲ್ಲೊಂದು ಅಮಾನುಷ ಜೀತದ ಘಟನೆ

ಈ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ಸ್ಥೀತಿ ತೀರಾ ಶೋಚನೀಯವಾಗಿದೆ. ಜೀತಪದ್ದತಿಯ ಮತ್ತೊಂದು ಉದಾಹರಣೆ ಇಲ್ಲಿದೆ.

- Advertisement -
- Advertisement -

ಬುಧವಾರ ಬೆಳಿಗ್ಗೆ ಹಾಸನದ ಹಿಮಂತ್ ಸ್ಟಿಂಗ್ಕಾ ಲೈನ್ಸ್ ಗಾರ್ಮೆಂಟ್ ನಲ್ಲಿ ಬಿಹಾರ ಮೂಲದ ಕಾರ್ಮಿಕರಿಂದ ಗೂಂಡಾಗಿರಿ, ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ, 7 ಪೊಲೀಸರಿಗೆ ಗಾಯ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಚ್, ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು, ಹಲವು ಪ್ರತಿಭಟನಾಕಾರರ ಬಂಧನ ಎಂಬ ಸುದ್ದಿ ಬಂತು. ಹೊರಗಿನ ರಾಜ್ಯದವರ ಅನಿಯಂತ್ರಿತ ವಲಸೆಯೇ ಇದಕ್ಕೆ ಕಾರಣ, ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂಬ ಸಲಹೆಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಓಡಾಡಿದವು.

ಆನಂತರ ಆ ಘಟನೆ ಜರುಗಲು ಕಾರಣವೇನು? ಅವರೆಲ್ಲಾ ಏಕೆ ಹಾಗೆ ಮಾಡಿದರು ಎಂಬುದನ್ನು ಕೇಳಿದರೆ ಎಂತವರ ಮನಸ್ಸು ಮರಗಟ್ಟುತ್ತದೆ. ಅಷ್ಟೊಂದು ಕ್ರೂರ ಆಳ್ವಿಕೆಯಲ್ಲಿ ಇಲ್ಲಿ ಸಾವಿರಾರು ಕಾರ್ಮಿಕರು ಜೀತ ಮಾಡುತ್ತಿದ್ದಾರೆ. ಆ ಕಾರ್ಮಿಕರ ಮೇಲಿನ ಅನಿಯಂತ್ರಿತ ಹಿಂಸೆ ಮತ್ತು ಒತ್ತಡದ ಪರಿಣಾಮವಾಗಿ ಆ ಘಟನೆ ನಡೆದಿದೆ ಅಷ್ಟೇ. ಅದಕ್ಕೂ ಮೊದಲು ಆ ಗಾರ್ಮೆಂಟ್ ಕಂಪನಿಯಲ್ಲಿನ ಕಾರ್ಮಿಕರನ್ನು ಅದರಲ್ಲೂ ಮಹಿಳಾ ಕಾರ್ಮಿಕರನ್ನು ನಡೆಸಿಕೊಂಡ ರೀತಿ ತಿಳಿದರೆ ಅಯ್ಯೋ ಅನಿಸದೇ ಇರಲಾರದು.

ರಾಜ್ಯದ ಹಲವು ಭಾಗಗಳಲ್ಲಿ ಆರಂಭವಾದಂತೆ ಹಾಸನದಲ್ಲಿಯೂ ಎರಡು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಆರಂಭವಾದರು. ಸದ್ಯ ಅಲ್ಲಿ 4 ಸಾವಿರ ಜನ ದುಡಿಯುತ್ತಿದ್ದಾರೆ. ಸುಮಾರು ಅರ್ಧದಷ್ಟು ಜನರು ಉತ್ತರ ಭಾರತದಿಂದ ವಲಸೆ ಬಂದು ಈ ಫ್ಯಾಕ್ಟರಿ ಸೇರಿದ್ದಾರೆ. ಅವರಿಗೆ ಫ್ಯಾಕ್ಟರಿ ವತಿಯಿಂದಲೇ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.

ಆ ಹಾಸ್ಟೆಲ್ ಗಳ ಭಯಾನಕ ವ್ಯವಸ್ಥೇ ಬೆಚ್ಚಿ ಬೀಳುಸುತ್ತದೆ. ಗಾರ್ಮೆಂಟ್ ನಲ್ಲಿ 12 ಗಂಟೆ ದುಡಿಯಬೇಕು. ಅದು ಸಹ ನಿಂತುಕೊಂಡೆ. ಇಷ್ಟಕ್ಕೂ ಅವರಿಗೆ ಸಿಗುವ ಸಂಬಳ ಸರಾಸರಿ 8000 ಮಾತ್ರ. ಸುಮಾರು 700 ಜನರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಕೆಲಸ ಮುಗಿಸಿದ ಕೂಡಲೇ ಫ್ಯಾಕ್ಟರಿಯ ವಾಹನ ಬಂದು ಅವರನ್ನು ಹಾಸ್ಟೆಲ್ ಗಳಿಗೆ ಸಾಗಿಸಲಾಗುತ್ತದೆ. ಯಾರು ಕೂಡ ಹೊರಹೋಗುವಂತಿಲ್ಲ.

ಹಾಸ್ಟೆಲ್ ಗಳಲ್ಲಿಯೂ ಸಹ 24/7 ಅವಧಿಯು ಸಿಸಿಟಿವಿಗಳು ಆ ಕೆಲಸಗಾರರ ಮೇಲೆ ಕಣ್ಣಿಟ್ಟಿರುತ್ತವೆ. ಅವರ್ಯಾರು ಫೋನ್ ಕೂಡ ಬಳಸುವಂತಿಲ್ಲ. ವಾರಕ್ಕೊಮ್ಮೆ ಫ್ಯಾಕ್ಟರಿಯವರೇ ನೀಡುವ ಬೇಸಿಕ್ ಪೋನ ಮೂಲಕವೇ ತಮ್ಮ ಪೋಷಕರೊಡನೆ ಮಾತನಾಡಲು ಅವರಿಗೆ ಅವಕಾಶ..

ಇನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗಲೇ ಪ್ರತಿ ಹೆಣ್ಣು ಮಕ್ಕಳು ಸಹ ತಮ್ಮ ಕುಟುಂಬದವರ ಭಾವಚಿತ್ರ ನೀಡಿರಬೇಕು. ಒಂದು ವೇಳೆ ಯಾರಾದರೂ ಪೋಷಕರು ಇಲ್ಲಿ ಕೆಲಸ ಮಾಡುತ್ತಿರುವ ತಮ್ಮ ಮಕ್ಕಳನ್ನು ನೋಡಲು ಬಂದರೆ, ಅವರ ಭಾವಚಿತ್ರ ಇಲ್ಲಿ ಇದ್ದಲ್ಲಿ ಮಾತ್ರ ಅವರಿಗೆ ಅವಕಾಶ. ಇಲ್ಲಿನ ಮಹಿಳಾ ಕಾರ್ಮಿಕರು ಏನಾದರೂ ಕೊಂಡುಕೊಳ್ಳಲು ಪೇಟೆಗೆ ಹೋಗಲು ಸಹ ಸಾಧ್ಯವಿಲ್ಲ. ಯಾವಾಗಲಾದರೊಮ್ಮೆ ನಾಲ್ಕೈದು ಜನರೊಡನೆ ಮಾತ್ರ ಹೋಗಬಹದು.

ಹಾಸ್ಟೆಲ್ ನಲ್ಲಿ ಯಾವ ರೂಮಿಗೆ ಬಾಗಿಲುಗಳಿಲ್ಲ. ಕೇಳಿದರೆ ನಿಮ್ಮ ಸೆಫ್ಟಿಗಾಗಿ ಹೀಗೆ ಮಾಡಿದ್ದೇವೆ ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಕೊಠಡಿಗಳಲ್ಲಿ ಫ್ಯಾನ್ ಗಳಿಲ್ಲ. ಏಕೆಂದರೆ ಮತ್ತೆ ಅದೇ ಭದ್ರತೆಯ ಉತ್ತರ. ಇಲ್ಲಿರುವ ಯಾರಾದರೂ ಹೆಣ್ಣು ಮಕ್ಕಳು ಮದುವೆಯಾಗುತ್ತಾರೆಂದರೆ ಅವರು ಇಲ್ಲಿಂದ ಕೆಲಸ ಬಿಡಬೇಕು ಅಷ್ಟೇ. ನಂತರ ಅವರು ತಮ್ಮ ಹಣಕ್ಕಾಗಿ ಅಲೆದು ಅಲೆದು ಸುಸ್ತಾಗಿ ಅದರ ಆಸೆ ಕೈಬಿಡಬೇಕು ಅಷ್ಟೇ.

ನೀವು ನಂಬುತ್ತೀರೊ ಬಿಡುತ್ತಾರೆ ಇದಕ್ಕೆಲ್ಲಾ ಈ ಕುತಂತ್ರ ಕಂಪನಿಗಳು ಅವರ ಪೋಷಕರಿಂದ ಒಪ್ಪಿಗೆ ಪಡೆದಿರುತ್ತಾರೆ. ಏಕೆಂದರೆ ಅವರ ಪೋಷಕರ ಬಳಿ ನಿಮ್ಮ ಮಕ್ಕಳನ್ನು ದೂರದೂರಿಗೆ ಕೆಲಸಕ್ಕೆ ಕಳಿಸಿದಾಗ ಅವರ ಭದ್ರತೆ ಬಹಳ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರೀತಿ-ಮದುವೆ ಅಂತ ಯಾವುದೇ ಕೆಲಸಕ್ಕೆ ಕೈಹಾಕಬಾರದು, ಯಾರ ಜೊತೆಯೂ ಓಡಿ ಹೋಗಬಾರದು ನೋಡಿ ಅದಕ್ಕೆ ಈ ನಿಬಂಧನೆಗಳನ್ನು ಹಾಕಿದ್ದೇವೆ ಎಂದು ಹೇಳಿ ಪೋಷಕರನ್ನು ಈ ಟ್ರಾಪ್ ಗೆ ಬೀಳಿಸುತ್ತಿರುವುದು ದುರಂತವಾಗಿದೆ.

ಹಾಸ್ಟೆಲ್ ನಲ್ಲಾಗಲಿ, ಗಾರ್ಮೆಂಟ್ ಫ್ಯಾಕ್ಟರಿಯಲ್ಲಾಗಲಿ ಸ್ಮಾರ್ಟ್ ಫೋನ್ ಗಳನ್ನು ಬ್ಯಾನ್ ಮಾಡಲಾಗಿದೆ. ಏಕೆಂದರೆ ಅವು ತೊಂದರೆಗಳಿಗೆ ಆಹ್ವಾನ ನೀಡುವುದಲ್ಲದೇ, ಅಹಿತಕರ ಘಟನೆಗಳಿಗೆ ಕಾರಣವಾಗುತ್ತವೆ ಅಂತೆ..

ಇನ್ನು ಪುರುಷ ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅವರು ನತದೃಷ್ಟರೆ. ಯಾರಾದರೂ ಕೆಲಸದಲ್ಲಿ ಅಪ್ಪಿ ತಪ್ಪಿ ತಪ್ಪು ಮಾಡಿದರೆ ಅವರನ್ನು ಬೆಡ್ ರೂಂ ನಲ್ಲಿ ಕೂಡಿಹಾಕಿಕೊಂಡು ಮನಬಂದಂತೆ ಥಳಿಸಲಾಗುತ್ತದೆ. ಯಾರಾದರೂ ಹುಡುಗಿಯನ್ನೇನಾದರೂ ಮಾತಾಡಿಸಿದರೆ ಆತನಿಗೆ ಚೆನ್ನಾಗಿ ಥಳಿಸಲಾಗುತ್ತದೆ, ಆತನ ಉಗುರುಗಳನ್ನು ಕೀಳುವ ಮೂಲಕ ಚಿತ್ರಹಿಂಸೆ ನೀಡಲಾಗುತ್ತದೆ. ಆತ ಸುಲಭವಾಗಿ ಕೆಲಸ ಬಿಟ್ಟು ಸಹ ಹೋಗುವಂತಿಲ್ಲ. ಮರು ಮಾತಾಡದೇ ಕತ್ತೆ ದುಡಿದಂಗೆ ದುಡಿದರೆ ಮಾತ್ರ ಇಲ್ಲಿ ಬದುಕಲಿಕ್ಕೆ ಸಾಧ್ಯ.

ಎರಡು ಮೂರು ವಾರದ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲಕ ಯುವತಿಯೊಬ್ಬಳು ಫ್ಯಾಕ್ಟರಿಯೊಳಗೆ ಸತ್ತು ಹೋಗಿದ್ದಾಳೆ. ಆದರೆ ವಿಷಯ ಹೊರಗೆ ಬರದಂತೆ ಮುಚ್ಚಿ ಹಾಕಲಾಗಿದೆ. ಅದಾದ ನಂತರ ಸೋಮವಾರ ರಾತ್ರಿ ಅಲ್ಲಿ ಗಲಾಟೆಯಾಗಿದ್ದು ಐದಾರು ಜನ ಕಾರ್ಮಿಕರಿಗೆ ಥಳಿಸಲಾಗಿದೆ. ಅದರಲ್ಲಿ ಒಬ್ಬ ಕಾಣೆಯಾಗಿದ್ದು ಆತ ಕೂಡ ಸತ್ತುಹೋಗಿರಬೇಕೆಂಬ ಶಂಕೆಯಿದೆ. ಅದೇ ಕಾರಣಕ್ಕಾಗಿಯೇ ಅಲ್ಲಿನ ಕಾರ್ಮಿಕರು ಇಷ್ಟು ದಿನ ತಮ್ಮೊಳಗೆ ಅದುಮಿಟ್ಟುಕೊಂಡಿದ್ದ ಆಕ್ರೋಶ, ಸಿಟ್ಟು, ಹತಾಶೆಯನ್ನು ಪ್ರತಿಭಟನೆಯ ಮೂಲಕ ಹೊರಹಾಕಿದ್ದಾರೆ.

ಆದರೆ ಅವರ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಲು ಫ್ಯಾಕ್ಟರಿ ಅಧಿಕಾರಿಗಳು ಮುಂದಾಗಿದ್ದಾರೆ. ಸೆಕ್ಯುರಿಟಿಗಳು ಪ್ರತಿಭಟನಾಕಾರರ ಮೇಲೆ ಬೇಕಾಬಿಟ್ಟಿ ಥಳಿಸಿದ್ದಾರೆ. ಇದಕ್ಕೆ ಪೊಲೀಸರು ಜೊತೆಗೂಡಿದ್ದಾರೆ. ಇದು ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿದೆ. ನೋವುಂಡವರ ಮೇಲೆಯೇ ಮತ್ತಷ್ಟು ದೌರ್ಜನ್ಯದಿಂದ ಅವರು ತಿರುಗಿಬಿದ್ದಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ. ಆದರೆ ಬಡವರ ಸಿಟ್ಟು ದವಡೆಗೆ ಮೂಲ ಎಂಬಂತೆ ಆ ಕಾರ್ಮಿಕರನ್ನು ಬಗ್ಗುಬಡಿದು ಆ ಸೆರಮನೆಯಿಂದ ಪೊಲೀಸ್ ಸೆರೆಮನೆಗೆ ತಂದು ಬಿಡಲಾಗಿದೆ. ಮಾತ್ರವಲ್ಲ ಅವರದೇ ತಪ್ಪು ಎಂಬ ರೀತಿ ಬಿಂಬಸಲಾಗುತ್ತಿದೆ.

ಇದಕ್ಕೆಲ್ಲಾ ಕಾರಣ ಎಸ್.ಇ.ಜೆಡ್

ಈ ಗಾರ್ಮೆಂಟ್ ಕಾರ್ಖಾನೆ ವಿಶೇಷ ಆರ್ಥಿಕ ವಲಯ(ಸ್ಪೆಷಲ್ ಎಕಾನಾಮಿಕ್ ಜೋನ್) ವ್ಯಾಪ್ತಿಗೆ ಬರುತ್ತಿದೆ. ಅದರೊಳಗೆ ಪ್ರವೇಶಿಸಲು ಪೊಲೀಸರು ಸಹ ಹೆದರುತ್ತಾರೆ. ಅಂತಹ ಸ್ವಂತ ಕ್ರೂರ ಸಾಮ್ರಾಜ್ಯ ಅವರದು. ಇದು ಕೇವಲ ಹಾಸನ ಗಾರ್ಮೆಂಟ್ಸ್ ನ ಕಥೆಯಲ್ಲ, ಬದಲಿಗೆ ರಾಜ್ಯದ ನೂರಾರು ಫ್ಯಾಕ್ಟರಿಗಳು ಸಹ ಇದೇ ರೀತಿ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿವೆ. ಆದರೆ ಹಾಸನದಲ್ಲಿ ಈ ಕಾರ್ಖಾನೆಯ ದುರ್ವತನೆ ಮಾತ್ರ ಮಿತಿ ಮೀರಿದೆ

ಡಿ.ಕೆ ಹಿಮಂತ್ ಸ್ಟಿಂಗ್ಕಾ ಎನ್ನವ ಬಂಡವಾಳಶಾಹಿಯ ಕಾರ್ಖಾನೆಯಾದ ಇದು ಹಲವು ಕಡೆ ಬ್ರಾಂಚ್ ಗಳನ್ನು ಹೊಂದಿದೆ. ಶ್ರೀಕಾಂತ್ ಹಿಮಂತ್ ಸ್ಟಿಂಗ್ಕಾ ಇದರ ಸಿಇಓ. ತಮ್ಮ ಲಾಭದ ದುರಾಸೆಗಾಗಿ ಇಲ್ಲಿ ಕಾರ್ಖಾನೆ ಹಾಕಿರುವ ಇವರು ಕನಿಷ್ಠ ಕೂಲಿ ನೀಡಿ ಇಲ್ಲಿನ ಜನರಿಂದ ಜೀತ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿರುವ ಕಾರ್ಮಿಕರಿಗೆ ಯಾವ ಸ್ವಾತಂತ್ರ್ಯವೂ ಸಹ ಇಲ್ಲ. ಯಾವ ಕಾರ್ಮಿಕ ಕಾನೂನಗಳು ಇಲ್ಲಿ ಅನ್ವಯವಾಗುವುದಿಲ್ಲ. ಇಂತಹ ಕಿರಾತಕರು ಸೇರಿಯೇ ಇದ್ದಬದ್ದ ಕಾರ್ಮಿಕ ಕಾನೂನುಗಳನ್ನೆಲ್ಲಾ ಕಿತ್ತಾಕುವಂತೆ ಆಳುವವರಿಗೆ ಒತ್ತಾಯಿಸುತ್ತಿದ್ದಾರೆ. ಆಳುವವರು ಸಹ ಇಂಥವರ ತಾಳಕ್ಕೆ ಕುಣಿಯುತ್ತಿರುವುದರಿಂದಲೇ ಈ ದುಸ್ಥಿತಿ ಬಂದಿದೆ.

ಲಾಭ ಕೊಡದ ಕೃಷಿ, ಮಿತಿ ಮೀರಿದ ನಿರುದ್ಯೋಗವೂ ಇದಕ್ಕೆ ಕಾರಣ

ಇಂತಹ ಜೈಲಿನಂತಹ ವಾತವಾರಣದಲ್ಲಿ ಈ ಜೀತ ಮಾಡಲು ಆ ಕಾರ್ಮಿಕರು ಏಕೆ ಮುಂದಾಗುತ್ತಾರೆ? ಕೆಲಸ ಬಿಟ್ಟು ಬರಬಹುದಲ್ಲವೇ ಎಂದು ಹಲವರು ಕೇಳಬಹುದು. ಆದರೆ ಭಾರತದ ಬಡಜನರ ಬದುಕು ದಿನೇ ದಿನೇ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಎಷ್ಟೇ ಪರದಾಡಿ ಕೃಷಿ ಮಾಡಿದರು ಲಾಭವಿರಲಿ ಅಸಲೇ ಕೈಗತ್ತುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಇಂತಹ ಫ್ಯಾಕ್ಟರಿಗಳ ದಳ್ಳುರಿಗೆ ತಳ್ಳಲ್ಪಡುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ತಮ್ಮ ಕಸುವನ್ನೆಲ್ಲ ಬಸಿದು ದುಡಿಯುತ್ತಿದ್ದಾರೆ. ತಮ್ಮ ಜೀವಚೈತನ್ಯವನ್ನೇ ಹಿಂಡಿಕೊಳ್ಳುತ್ತಿದ್ದಾರೆ.

ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದಾಗಿ ಇಂತಹ ಉದ್ಯೋಗಗಳಿಗೆ ಭಾರೀ ಬೇಡಿಕೆ ಬಂದುಬಿಟ್ಟಿದೆ. ಏನು ಉದ್ಯೋಗ ಸಿಗದಿದ್ದಾಗ ಇಂತಹ ಕಾರ್ಖಾನೆಗಳಲ್ಲಿ ಜೀತ ಮಾಡುವುದು ಬಡವರಿಗೆ ಅನಿವಾರ್ಯವಾಗುತ್ತಿದೆ. ಗೇಟಿನ ಹೊರಗೆ ಕೆಲಸಕ್ಕಾಗಿ ಕಾಯುತ್ತಿರುವ ಸಂಖ್ಯೆ ಹೆಚ್ಚಿದಂತೆ ಒಳಗಿನವರ ಸಂಬಳ ಕಡಿಮೆಯಾಗುತ್ತದೆ ಮತ್ತು ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾಧನೀಯ.

ಸತ್ತು ಹೋದ ಕಾರ್ಮಿಕ ಇಲಾಖೆ

ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಗಮನಹರಿಸಿಲ್ಲ. ಏಕೆಂದರೆ ಅದು ಸತ್ತು ಹೋಗಿದೆ. ಹಾಸನದ ಈ ಘಟನೆಯಲ್ಲಿ ಹೆಣ್ಣು ಮಗಳೊಬ್ಬಳ ಅನುಮಾನಾಸ್ಪದ ಸಾವಿನ ಕುರಿತು ಕಾರ್ಮಿಕ ಇಲಾಖೆಯ ಮುಖ್ಯ ಅಧಿಕಾರಿಗಳ ಗಮನಕ್ಕೆ ವಾರದ ಮುಂಚೆಯೇ ತಂದರು ಅವರು ಕೈಚೆಲ್ಲಿ ಕುಳಿತಿದ್ದಾರೆ. ನಮಗೆ ಯಾರು ದೂರು ನೀಡುತ್ತಿಲ್ಲ ನಾವೇನು ಮಾಡುವುದು ಎನ್ನುವ ನೆಪ ಹೇಳುತ್ತಿದ್ದಾರೆ. ಹೋಗಿ ವಿಚಾರಿಸಿದೆವು ಎಲ್ಲಾ ಚೆನ್ನಾಗಿದೆ ಏನು ಸಮಸ್ಯೆಯಿಲ್ಲ ಎಂದು ಫ್ಯಾಕ್ಟರಿ ಪರ ಸರ್ಟಿಫಿಕೆಟ್ ಕೂಡ ನೀಡುತ್ತಾರೆ.

ಪೊಲೀಸರ ಕಣ್ಣಿಗೆ ಈ ಕಾರ್ಮಿಕರು ಉಗ್ರಗಾಮಿಗಳಂತೆ ಕಾಣುತ್ತಾರೆ. ಅದಕ್ಕಾಗಿಯೇ ಈ ಹಾಸನದ ಘಟನೆಗೆ ಮೇಲ್ನೋಟಕ್ಕೆ ಕಾರ್ಮಿಕರೇ ಕಾರಣ ಎಂದು ತೋರುತ್ತದೆ. ಮುಖ್ಯವಾಹಿನಿ ಮಾಧ್ಯಮವೂ ಸಹ ಸತ್ಯ ತಿಳಿಸುವುದಿಲ್ಲ. ಏಕೆಂದರೆ ಪೊಲೀಸರು, ಕಾರ್ಮಿಕ ಇಲಾಖೆಯವರು, ಆಳುವವರು ಇಂತಹ ಬಂಡವಾಳಶಾಹಿಗಳ ಋಣದಲ್ಲಿಯೇ ಬದುಕುತ್ತಿದ್ದಾರೆ. ಹಾಗಾಗಿ ಬಡ ಕಾರ್ಮಿಕರ ನೋವಿಗಿಂತ ತಮ್ಮ ಧಣಿಗಳ ಹಿತ ಅವರಿಗೆ ಮುಖ್ಯ.

ಇಂತಹ ಘೋರ ಸಂದರ್ಭದಲ್ಲಿ ಇದನ್ನು ದಿನ ನಡೆಯುವ ಒಂದು ಘಟನೆಯಾಗಿ ನೋಡಿ ಸುಮ್ಮನಿರವುದ? ಇಲ್ಲಾ ಇದರ ವಿರುದ್ಧ ಏನಾದರೂ ಮಾಡುವುದಾ? ನಮ್ಮ ಪಾತ್ರವೇನು ನೀವೇ ಹೇಳಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. This is real fact sir, I now but i am helpless
    Company ge ondhu Union madodu thumba mukya bekadre nammadu pakkada company precot meridian, namma union inda union madodakke support madthivi.

  2. Avarannu kole maadidru tappilla sir badavaru nemdiyag jeevana maadtare..Nam hassan police lancha tagondirodhu 100/200% Nija.Naanu a factory alle 1 year kelsa maadi sattu badhkidini….

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...