ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೇಲ್ವಿಚಾರಣೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ನ್ಯಾಯಪೀಠ ನಡೆಸುತ್ತಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯಾಲಯದಲ್ಲೇ ಬೆದರಿಕೆ ಹಿನ್ನೆಲೆ, ಸದ್ಯ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಯುಪಿ ಜಿಲ್ಲೆಯಿಂದ ಸ್ಥಳಾಂತರಿಸುವ ಬಗ್ಗೆ ಯೋಚಿಸುವುದಾಗಿ ನ್ಯಾಯಪೀಠ ಹೇಳಿದೆ.
ಈ ತಿಂಗಳ ಆರಂಭದಲ್ಲಿ ಹತ್ರಾಸ್ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಕುಟುಂಬ ಮತ್ತು ಅವರ ವಕೀಲರಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ಮುಂದೆ ನೀಡಿದ ಅಫಿಡವಿಟ್‌ನಲ್ಲಿ, ಮಾರ್ಚ್ 5 ರಂದು ಹತ್ರಾಸ್ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆಯ ಸಹೋದರ ಆರೋಪಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣ: ಸಿಎಎ ವಿರೋಧಿ ಮಹಿಳಾ ನಾಯಕಿಯರಿಗೆ ನೋಟಿಸ್!
ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಆಪಾದಿತ ಘಟನೆಯ ವರದಿಯನ್ನು ಕೋರಿದ್ದಾರೆ. ವರದಿ ಬಳಿಕ ವಿಚಾರಣೆಯನ್ನು ತಡೆಹಿಡಿಯಬೇಕೇ ಮತ್ತು ಬೇರೆಡೆಗೆ ವರ್ಗಾಯಿಸಬೇಕೇ ಎಂದು ಪರಿಗಣಿಸುವುದಾಗಿ ಹೇಳಿದರು. “ವಿಚಾರಣೆಯನ್ನು ಜಿಲ್ಲಾ ಹತ್ರಾಸ್‌ನಿಂದ ರಾಜ್ಯದೊಳಕ್ಕೆ ಬೇರೆಡೆಗೆ ವರ್ಗಾಯಿಸಲು” ಸಿಬಿಐ ಅರ್ಜಿಯನ್ನು ಸಲ್ಲಿಸಲು ಉದ್ದೇಶಿಸಿದೆ ಎಂದು ನ್ಯಾಯಪೀಠ ತಿಳಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ ಈ ಅಫಿಡವಿಟ್‌ನ ವಿಷಯಗಳನ್ನು ವಿವರವಾಗಿ ವಿವರಿಸಿದೆ. ಇದರಲ್ಲಿ ಸಂತ್ರಸ್ತೆಯ ಕುಟುಂಬದ ಪ್ರಮುಖ ಸಲಹೆಗಾರದ ಸೀಮಾ ಕುಶ್ವಾಹಾ ಬೆದರಿಕೆ ಹಾಕಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ ಎಂದು ತಿಳಿಸಿದೆ.
“ತರುಣ್ ಹರಿ ಶರ್ಮಾ ಎಂಬ ವಕೀಲರು ನ್ಯಾಯಾಲಯದ ಕೋಣೆಗೆ ನುಗ್ಗಿ ಅರ್ಜಿದಾರರ ಮತ್ತು ದೂರುದಾರರ ಪರ ವಕೀಲರ ಮೇಲೆ ಆರೋಪ ಹೊರಿಸಿ, ಕೂಗುತ್ತಾ ಮತ್ತು ಬೆದರಿಕೆ ಹಾಕಿದ್ದಾನೆ. ಹಾಗಾಗಿ ಹತ್ರಾಸ್ ಜಿಲ್ಲಾ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ವಿಚಾರಣೆ ನಿಲ್ಲಿಸಿದ್ದಾರೆ” ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಜೊತೆಗೆ ಆ ವ್ಯಕ್ತಿ ಮದ್ಯದ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದೆ.
“ವಕೀಲರು ಸೇರಿದಂತೆ ಜನರ ದೊಡ್ಡ ಗುಂಪು ನ್ಯಾಯಾಲಯದ ಕೋಣೆಗೆ ಪ್ರವೇಶಿಸಿ ಅರ್ಜಿದಾರರನ್ನು ಮತ್ತು ದೂರುದಾರರ ಸಲಹೆಗಾರರನ್ನು ಸುತ್ತುವರಿದು ಅವರಿಗೆ ಬೆದರಿಕೆ ಹಾಕಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ಈ ಪ್ರಕರಣವನ್ನು ಏಪ್ರಿಲ್ 7 ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. “ಯಾವುದೇ ಅಡೆತಡೆಗಳಿಲ್ಲದೆ ವಿಚಾರಣೆಯನ್ನು ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನ್ಯಾಯಾಲಯದ ಮುಂದೆ ನಡೆಸಲು ಅವಕಾಶವಿದೆಯೇ” ಎಂದು ಖಚಿತಪಡಿಸಿಕೊಳ್ಳಲು ಹತ್ರಾಸ್ ಜಿಲ್ಲಾ ನ್ಯಾಯಾಧೀಶರನ್ನು ಕೇಳಿದೆ.
ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ ಮೇಲ್ಜಾತಿ ಸಮುದಾಯದವರು ಎಂದು ಕರೆಯಲ್ಪಡುವ ನಾಲ್ವರು ವ್ಯಕ್ತಿಗಳು, ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ಅಂತ್ಯಸಂಸ್ಕಾರವನ್ನು ಪೊಲೀಸರು ಸಂತ್ರಸ್ತ ಕುಟುಂಬದ ಒಪ್ಪಿಗೆ ಇಲ್ಲದೇ ಸೆಪ್ಟೆಂಬರ್ 30 ರಂದು ತನ್ನ ಮನೆಯ ಬಳಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಹತ್ರಾಸ್: ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ – ವಕೀಲರ ಹೇಳಿಕೆ
ಉತ್ತರ ಪ್ರದೇಶ ಗೂಂಡಾಗಳ ರಾಜ್ಯವಾಗಿದೆ.