Homeಕರ್ನಾಟಕಹಾವೇರಿ | ಹೆಚ್ಚುವರಿ ಶಾಲಾ ಕೊಠಡಿ ಕೇಳಿದ್ದ ಶಿಕ್ಷಕನ ಅಮಾನತು ವಿರೋಧಿಸಿ ಪ್ರತಿಭಟನೆ

ಹಾವೇರಿ | ಹೆಚ್ಚುವರಿ ಶಾಲಾ ಕೊಠಡಿ ಕೇಳಿದ್ದ ಶಿಕ್ಷಕನ ಅಮಾನತು ವಿರೋಧಿಸಿ ಪ್ರತಿಭಟನೆ

- Advertisement -
- Advertisement -

ಬೆಳಗಾವಿ ಜಿಲ್ಲೆಯ ನಿಡಗುಂದಿಯಲ್ಲಿ ಹೆಚ್ಚುವರಿ ಶಾಲಾ ಕೊಠಡಿಗಳಿಗಾಗಿ ಪ್ರತಿಭಟನೆ ನಡೆಸಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೀರಣ್ಣ ಮಡಿವಾಳರ್ ಅವರನ್ನು ಅಮಾನತುಗೊಳಿಸಿದ್ದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಪ್ರತಿಭಟನೆಯ ನಂತರ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತಹಶೀಲ್ದಾರ್ ಕಚೇರಿಯ ಮೂಲಕ ಮನವಿ ಸಲ್ಲಿಸಿದ್ದಾರೆ. ಶಿಕ್ಷಕ ಮಡಿವಾಳರ್ ಅವರ ಅಮಾನತು ರದ್ದುಗೊಳಿಸುವಂತೆ ಮತ್ತು ಅವರ ಸೇವಾ ದಾಖಲೆಗಳಲ್ಲಿ ಅಮಾನತು ದಾಖಲಿಸದಂತೆ ಒತ್ತಾಯಿಸಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ತಮ್ಮ ಶಾಲೆಯಲ್ಲಿ ಕೊಠಡಿಗಳಿಗೆ ಹಣ ಹಂಚಿಕೆ ಕೋರಿ ಧ್ವನಿ ಎತ್ತಿದ್ದಕ್ಕಾಗಿ ಶಿಕ್ಷಕನನ್ನು ಅಮಾನತು ಯಾಕೆ ಮಾಡಬೇಕು? ಇದು ಖಂಡನೀಯ. ರಾಜ್ಯ ಸರ್ಕಾರವು ತಕ್ಷಣವೇ ಅವರ ಅಮಾನತು ರದ್ದುಗೊಳಿಸಬೇಕು ಮತ್ತು ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಅವರ ಬೇಡಿಕೆಯನ್ನು ಈಡೇರಿಸಬೇಕು ಎಂದು ಹೋರಾಟಗಾರು ಆಗ್ರಹಿಸಿದ್ದಾರೆ.

ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ ಪೂಜಾರ, ಬರಹಗಾರ ಸತೀಶ್ ಕುಲಕರ್ಣಿ, ನಿವೃತ್ತ ಅಧಿಕಾರಿ ಎಂ. ಆಂಜನೇಯ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ, ಅಖಿಲ ಭಾರತ ವಕೀಲರ ಒಕ್ಕೂಟದ ನಾಯಕ ನಾರಾಯಣ ಕಾಳೆ, ರೈತ ಸಂಘಟನೆಯ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಸುರೇಶ್ ಚಲವಾದಿ, ಎಂ. ಕಲಂದರ್ ಮತ್ತು ಇತರರು ಹೋರಾಟದಲ್ಲಿ ಉಪಸ್ಥಿತರಿದ್ದಾರೆ.

ಸರ್ಕಾರದ ಈ ಕ್ರಮವನ್ನು ವಿದ್ಯಾರ್ಥಿ ಎಐಡಿಎಸ್‌ಒ ಖಂಡಿಸಿದ್ದು, ಇದನ್ನು ಅಸಂವೇದನಾಶೀಲ ಎಂದು ಕರೆದಿದೆ.

“ಕಳೆದ ಒಂಬತ್ತು ವರ್ಷಗಳಿಂದ ಆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವೀರಣ್ಣ ಮಡಿವಾಳರ್ ಅವರು ತಮ್ಮ ಸ್ನೇಹಿತರು ಮತ್ತು ಗ್ರಾಮದ ಜನರ ಸಹಾಯದಿಂದ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಕಷ್ಟಗಳನ್ನು ಅರಿತುಕೊಂಡು, ಕೊಠಡಿ ಹಂಚಿಕೆಗಾಗಿ ಹಲವು ಬಾರಿ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಆದರೆ ಅವರು ಯಶಸ್ವಿಯಾಗಲಿಲ್ಲ. ಈ ಎಲ್ಲಾ ಕ್ರಮಗಳು ವಿಫಲವಾದ ನಂತರ ಅವರು ಪ್ರತಿಭಟಿಸಿದ್ದಾರೆ” ಎಂದು ಅದು ಹೇಳಿದೆ.

ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ, ಅವರನ್ನು ಮರು ನಿಯೋಜಿಸುವಂತೆ ಮತ್ತು ಶಾಲೆಯಲ್ಲಿ ಕೊಠಡಿಗಳನ್ನು ತುರ್ತಾಗಿ ವ್ಯವಸ್ಥೆ ಮಾಡುವಂತೆ ಎಐಡಿಎಸ್‌ಒ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ಮತ್ತು ಶೈಕ್ಷಣಿಕ ವಿರೋಧಿ ಕ್ರಮದ ವಿರುದ್ಧ ಧ್ವನಿ ಎತ್ತುವಂತೆ ಎಐಡಿಎಸ್‌ಒ ನಗರ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದೆ ಎಂದು ಜಿಲ್ಲಾ ಸಂಯೋಜಕ ಮಹಾಂತೇಶ್ ಬಿಲೂರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಣ್ಣಾ ವಿಶ್ವವಿದ್ಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -