Homeಮುಖಪುಟ41 ಕಾರ್ಮಿಕರ ರಕ್ಷಣೆ: ಸಿಎಂ ಬಹುಮಾನ ಹಣ ತಿರಸ್ಕರಿಸಿದ ರ‍್ಯಾಟ್ ಹೋಲ್ ಮೈನರ್ಸ್‌ ಮುಖ್ಯಸ್ಥ

41 ಕಾರ್ಮಿಕರ ರಕ್ಷಣೆ: ಸಿಎಂ ಬಹುಮಾನ ಹಣ ತಿರಸ್ಕರಿಸಿದ ರ‍್ಯಾಟ್ ಹೋಲ್ ಮೈನರ್ಸ್‌ ಮುಖ್ಯಸ್ಥ

- Advertisement -
- Advertisement -

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವಗಳನ್ನು ರಕ್ಷಿಸಿದ ಬಳಿಕ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿರುವ ಇಲಿ ಬಿಲ ಗಣಿಗಾರಿಕೆ ತಂಡವು ಮತ್ತೊಂದು ವಿಚಾರಕ್ಕೆ ಗಮನ ಸೆಳೆದಿದೆ.

ಇಲಿ ಬಿಲ ತಂಡದ ಮುಖ್ಯಸ್ಥ ವಕೀಲ್ ಹಸನ್ ಅವರು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದ ಬಹುಮಾನದ ಹಣವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಕಾರ್ಮಿಕರ ರಕ್ಷಣೆಯಲ್ಲಿ ನಮ್ಮ ತಂಡದ ಎಲ್ಲರ ಒಗ್ಗಟ್ಟಿನ ಶ್ರಮವಿದೆ. ನನ್ನನ್ನು ಒಬ್ಬನನ್ನೇ ಹೀರೋ ಮಾಡುವುದು ಬೇಡ ಎಂದು ಅವರು ಹೇಳಿದ್ದಾರೆ.

ಇಲಿ ಬಿಲ ತಂಡದ ಮುಖ್ಯಸ್ಥ ವಕೀಲ್ ಹಸನ್‌ ಸೇರಿ 12 ಕಾರ್ಮಿಕರಿಗೆ ತಲಾ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಉತ್ತರಾಖಂಡ ಸಿಎಂ ಘೋಷಿಸಿದ್ದರು.

ಹಣಕ್ಕಿಂತ ವೃತ್ತಿಗೆ, ಮಾನವೀಯತೆಗೆ ಆದ್ಯತೆ ಕೊಟ್ಟಿರುವ ವಕೀಲ್ ಹಸನ್, ನಮ್ಮ ತಂಡದಲ್ಲಿ ಯಾರೋ ಒಬ್ಬರಿಂದ ಕಾರ್ಮಿಕರ ರಕ್ಷಣೆ ಆಗಿಲ್ಲ. ಹಿಂದೂ-ಮುಸ್ಲಿಂ ಧರ್ಮಗಳ ಕಾರ್ಮಿಕರು ಜಾತಿ, ಮತ, ಪಂಥವನ್ನು ಬದಿಗಿಟ್ಟು ಕೆಲಸ ಮಾಡಿದ್ದಾರೆ. ನಾವೆಲ್ಲರೂ ದ್ವೇಷದ ವಿಷ ಬಿಟ್ಟು ಸೌಹಾರ್ದತೆಯಿಂದ ಬಾಳೋಣ. ಇದೇ ನನ್ನ ಸಂದೇಶ ಎಂದು ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

“ನಮ್ಮ ತಂಡದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಇದ್ದಾರೆ. ಎರಡೂ ಧರ್ಮಗಳ ಜನರು 41 ಜೀವಗಳನ್ನು ಉಳಿಸಲು ಶ್ರಮಿಸಿದ್ದಾರೆ. ಅವರಲ್ಲಿ ಯಾರೂ ಇದನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ನಾವೆಲ್ಲರೂ ಸಾಮರಸ್ಯದಿಂದ ಬದುಕಬೇಕು. ದ್ವೇಷದ ವಿಷ ಹರಡಬಾರದು. ದೇಶಕ್ಕಾಗಿ ನಮ್ಮ 100 ಶೇಖಡ ಶ್ರಮ ಹಾಕಬೇಕು. ಇದು ನನ್ನ ಸಂದೇಶ, ದಯವಿಟ್ಟು ಇದನ್ನು ಎಲ್ಲರಿಗೂ ತಲುಪಿಸಿ” ಎಂದು ದೆಹಲಿ ಮೂಲದ ರಾಕ್‌ವೆಲ್ ಎಂಟರ್‌ಪ್ರೈಸಸ್ ಮಾಲೀಕರಾದ ವಕೀಲ್ ಹಸನ್ ಈ ಹಿಂದೆ ಹೇಳಿದ್ದರು.

ಕೊನೆಯ ಹಂತದ ಸುರಂಗ ಕೊರೆದ ಇಲಿ ಬಿಲ ತಂಡದಲ್ಲಿ ಹಸನ್, ಮುನ್ನಾ ಖುರೇಷಿ, ನಸೀಮ್ ಮಲಿಕ್, ಮೋನು ಕುಮಾರ್, ಸೌರಭ್, ಜತಿನ್ ಕುಮಾರ್, ಅಂಕುರ್, ನಾಸಿರ್ ಖಾನ್, ದೇವೇಂದ್ರ, ಫಿರೋಜ್ ಖುರೇಷಿ, ರಶೀದ್ ಅನ್ಸಾರಿ ಮತ್ತು ಇರ್ಷಾದ್ ಅನ್ಸಾರಿ ಎಂಬ 20 ರಿಂದ 45 ವರ್ಷ ವಯಸ್ಸಿನವರು ಇದ್ದರು.

ದೆಹಲಿ ಜಲ ಮಂಡಳಿಯಲ್ಲಿ ಪೈಪ್ ಅಳವಡಿಕೆ ಕೆಲಸ ಮಾಡುವ ವಕೀಲ್ ಹಸನ್ ಅವರ ತಂಡ ಇಲಿ ಬಿಲ ಸುರಂಗ ಕೊರೆಯುವುದರಲ್ಲಿ ಸಾಕಷ್ಟು ಅನುಭವ ಹೊಂದಿದೆ. ಆದರೆ, ಅವರು ಸಿಲ್ಕ್ಯಾರದಷ್ಟು ದೊಡ್ಡ ರಕ್ಷಣಾ ಕಾರ್ಯ ಮಾಡಿಲ್ಲ ಎನ್ನಲಾಗಿದೆ.

ಇಲಿ ಬಿಲ ಗಣಿಗಾರಿಕೆ ಎಂಬುವುದು ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಕಲ್ಲಿದ್ದಲಿನ ತೆಳುವಾದ ಪದರಗಳನ್ನು ಹೊರತೆಗೆಯಲು ವ್ಯಾಪಕವಾಗಿ ಬಳಸಲಾಗುತ್ತಿದ್ದ ಅಪಾಯಕಾರಿ ಗಣಿಗಾರಿಕೆ ವಿಧಾನವಾಗಿದೆ. ಕಾರ್ಮಿಕರ ಸಾವು, ಪರಿಸರ ಹಾನಿಯ ಕಾರಣ ನೀಡಿ, ಹಸಿರು ನ್ಯಾಯಾಧೀಕರಣ 2014 ರಲ್ಲಿ ಇದನ್ನು ನಿಷೇಧ ಮಾಡಿದೆ.

ಇದನ್ನೂ ಓದಿ : ಜೀವ ರಕ್ಷಣೆಯ ಬಳಿಕ ಅತಂತ್ರ ಸ್ಥಿತಿಯಲ್ಲಿ ಸಿಲ್ಕ್ಯಾರ ಸುರಂಗ ಕಾರ್ಮಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...