Homeಅಂತರಾಷ್ಟ್ರೀಯಪಾಕಿಸ್ತಾನದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಲಾಕ್ ಡೌನ್ ಘೋಷಣೆ

ಪಾಕಿಸ್ತಾನದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಲಾಕ್ ಡೌನ್ ಘೋಷಣೆ

- Advertisement -
- Advertisement -

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯದಿಂದಾಗಿ ದಟ್ಟ ಹೊಗೆ ಆವರಿಸಿಕೊಂಡು ಜನರಿಗೆ ಉಸಿರುಗಟ್ಟಿಸುವ ವಾತಾವರಣದಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದ್ದು, ಲಾಕ್ ಡೌನ್ ಅನ್ನು ಶುಕ್ರವಾರ ಜಾರಿ  ಮಾಡಲಾಗಿದೆ.

ವಾರದಲ್ಲಿ ಮೂರು ದಿನಗಳ ಕಾಲ ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ ಈ ಲಾಕ್ ಡೌನ್ ಅನ್ನು ಘೋಷಿಸಲಾಗಿದೆ. ಈ ವಾತಾವರಣದಿಂದಾಗಿ ಅಂದಾಜು 20ರಿಂದ25 ಲಕ್ಷ ಜನರು ಅನಾರೋಗ್ಯಕ್ಕೆ ತುತ್ತಾಗಿರುವುದಾಗಿ ವರದಿಯಾಗಿದೆ.

ಪರಿಸ್ಥಿತಿ ಕೈ ಮೀರಿರುವ ಕಾರಣ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಮತ್ತು ಲಾಹೋರ್ ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪರಿಸರ ಸಂರಕ್ಷಣೆ ಸಚಿವೆ ಮರಿಯುಮ್ ಔರಂಗಜೇಬ್ ಮಾಹಿತಿ ನೀಡಿದ್ದಾರೆ.

ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಒಂದು ವಾರಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಈ ಪರಿಸ್ಥಿತಿಯ ಸಾಧಕ ಬಾಧಕಗಳನ್ನು ಕಾದು ನೋಡುತ್ತೇವೆ. ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಪರಿಸ್ಥಿತಿಯು ತಿಂಗಳಗಟ್ಟಲೆ ಮುಂದುವರಿಯುವ ಸಾಧ್ಯತೆ ಇರುವುದು ಕಂಡುಬರುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.

ವಾಹನಗಳಿಂದುಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ ದೀರ್ಘಾಕಾಲಿಕ ತಂತ್ರಗಳನ್ನು ಕಂಡುಕೊಳ್ಳಲಾಗುವುದು. ಪೆಟ್ರೋಲ್ ಪಂಪ್‌ ಗಳಲ್ಲಿನ ಅಯಿಲ್ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಲಾಗುವುದು ಎಂದು ಸಚಿವೆ ಹೇಳಿದ್ದಾರೆ.

ಈ ನಗರಗಳ ವೈದ್ಯಕೀಯ ಸಿಬ್ಬಂದಿಗಳ ರಜೆಯನ್ನು ಕಡಿತಗೊಳಿಸಲಾಗಿದೆ. ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು 600ರ ಗಡಿ ದಾಟಿದೆ. ಇದು 300ನ್ನು ದಾಟಿದರೆ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಹೆಚ್ಚಿನ ಸಂಖ್ಯೆಯ ವಾಹನಗಳು, ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳು ಹಾಗೂ ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಹೊಗೆಯು ಹೆಚ್ಚಾಗಿದೆ ಎಂದು ವರದಿಯಾಗಿದೆ.

ಜಾಗತೀಕ ತಾಪಮಾನಕ್ಕೆ ಸಂಬಂಧಿಸಿದಂತೆ ನವೆಂಬರ್ 11ರಿಂದ 20 ರವರೆಗೆ ನಡೆಯುತ್ತಿರುವ ಶೃಂಗಸಭೆಯ ಹಿನ್ನಲೆಯಲ್ಲಿ ವಾಯುಮಾಲಿನ್ಯ ಸಂಬಂಧಿಸಿ ಪಾಕ್ ನಲ್ಲಿ ಲಾಕ್ ಡೌನ್ ಘೋಷಣೆ ಹಲವು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ…ಪಾಕಿಸ್ತಾನದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಲಾಕ್ ಡೌನ್ ಘೋಷಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಅಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ತನಿಖೆಗೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಈ ಬಹುಕೋಟಿ ನೇಮಕಾತಿ...

ಲಕ್ನೋದಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ಹಲ್ಲೆ, ಮಾಂಸದ ಅಂಗಡಿಗಳ ವಿರುದ್ಧ ಪ್ರತಿಭಟನೆ: ತೀವ್ರಗೊಂಡ ಬಜರಂಗದಳದ ‘ಆಹಾರ ಭಯೋತ್ಪಾದನೆ’

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಂಸ ಸಾಗಿಸುತ್ತಿದ್ದ ಬಿರಿಯಾನಿ ಅಂಗಡಿ ಮಾಲೀಕರೊಬ್ಬರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ....

ಟಿಎಂಸಿ ಹೆಸರು – ಚಿಹ್ನೆ ‘ಫ್ರೀಜ್‌’ ಪ್ರಶ್ನಿಸಿ ಮಮತಾ ಬ್ಯಾನರ್ಜಿ ಅರ್ಜಿ; ತುರ್ತು ವಿಚಾರಣೆಗೆ ಒಪ್ಪಿಗೆ ಸುಪ್ರೀಂ ಕೋರ್ಟ್‌

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಎರಡು ಬಣಗಳ ನಡುವಿನ ವಿವಾದದ ನಡುವೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ...

ಸೌಜನ್ಯ ಪ್ರಕರಣ: ಸುಪ್ರೀಂ ಆದೇಶದ ಪ್ರತಿ ಸಿಕ್ಕ ತಕ್ಷಣ SIT ರಚನೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅವರ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮರುತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿ ಕೈ ಸೇರಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ...

ದೆಹಲಿ| ಸಾಮೂಹಿಕ ಮತಾಂತರ ಆರೋಪ; ಕ್ರಿಶ್ಚಿಯನ್ನರ ವಾರಾಂತ್ಯದ ಪ್ರಾರ್ಥನೆಗೆ ಅಡ್ಡಿಪಡಿಸಿದ ಹಿಂದುತ್ವ ಗುಂಪು

ದೆಹಲಿಯ ಜನಕಪುರಿಯಲ್ಲಿರುವ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ (ಸೆಪ್ಟೆಂಬರ್ 20 ರಂದು) ಕ್ರಿಶ್ಚಿಯನ್ನರ ಭಾನುವಾರದ ವಾಡಿಕೆಯ ಪ್ರಾರ್ಥನಾ ಸಭೆಗೆ ನುಗ್ಗಿದ ಹಿಂದುತ್ವ ಗುಂಪು ಪ್ರಾರ್ಥನೆಗೆ ಅಡ್ಡಪಿಡಿಸಿದೆ. ಹಿಂದೂಗಳ ಸಾಮೂಹಿಕ ಮತಾಂತರ ನಡೆಯುತ್ತಿದೆ...

ಕಸ್ತೂರಿ ರಂಗನ್ ವರದಿ ತಿರಸ್ಕಾರ, ಮಲೆನಾಡಿನ ಜನರ ಬದುಕಿಗೆ ಶಾಶ್ವತ ಪರಿಹಾರ : ಡಾ. ಜಿ. ಪರಮೇಶ್ವರ್

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗಳನ್ನು ಪದೇ ಪದೇ ಹೊರಡಿಸುತ್ತಿರುವುದು ಮಲೆನಾಡಿನ ಜನರ ನೆಮ್ಮದಿ ಕೆಡಿಸಿದೆ. ರಾಜ್ಯ ಸರ್ಕಾರವು...

‘ಇದು ಸಂಸ್ಕೃತಿಯಲ್ಲ, ಪಿತೃಪ್ರಭುತ್ವ’: ಜಮುಯಿ ಅಪ್ರಾಪ್ತ ಬಾಲಕಿ ಮೇಲಿನ ಕಿರುಕುಳದ ವಿಡಿಯೋಗೆ ರಾಹುಲ್ ಗಾಂಧಿ ಆಕ್ರೋಶ 

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಯನ್ನು ರಸ್ತೆಯಲ್ಲಿ ತಡೆದು ಪುರುಷರ ಗುಂಪೊಂದು ಕಿರುಕುಳ ನೀಡಿದೆ ಎಂದು ಆರೋಪಿಸಲಾದ ವೈರಲ್ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ...

ನಕಲಿ ಔಷಧಗಳ ವಿತರಣೆ ಜಾಲದೊಂದಿಗೆ ನಂಟು; 16 ಫಾರ್ಮಸಿಗಳ ಪರವಾನಗಿ ರದ್ದು

ಬಿಡದಿಯ ಫಾರ್ಮ್‌ಹೌಸ್ (ತೋಟದ ಮನೆ) ಒಂದರಲ್ಲಿ ಪತ್ತೆಯಾದ ನಕಲಿ ಔಷಧಗಳ ವಿತರಣೆಯ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಸಂಸ್ಥೆಯು 16 ಫಾರ್ಮಸಿಗಳ...

ಚಾಮರಾಜನಗರ: ಬಂಡಿ ಪೂಜೆ ಹಬ್ಬದಲ್ಲಿ ದಲಿತ ಮಕ್ಕಳಿಗೆ ಅಸ್ಪೃಶ್ಯತೆ ಆಚರಣೆ – ಊಟ ನೀಡದೆ ಅಪಮಾನಿಸಿದ ಆರೋಪ

ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ. ಹೌದು ಚಾಮರಾಜನಗರ ಜಿಲ್ಲೆಯ...

ಥಾಣೆ ಗಣೇಶೋತ್ಸವ 2026: ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ವೇಳೆ 2 ಗುಂಪುಗಳ ಘರ್ಷಣೆ, ಬಿಜೆಪಿ ಮಾಜಿ ಉಪಮೇಯರ್ ಸೇರಿ 70-80 ಜನರ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಉಪಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ಉಪೇಕ್ಷಾ ಭೋಯಿರ್...