Homeಮುಖಪುಟಪ್ರವಾಹ ಪೀಡಿತ ಬಿಹಾರ, ಅಸ್ಸಾಂಗೆ ಸಹಾಯ ಮಾಡಿ: ಸಚಿನ್ ಪೈಲಟ್

ಪ್ರವಾಹ ಪೀಡಿತ ಬಿಹಾರ, ಅಸ್ಸಾಂಗೆ ಸಹಾಯ ಮಾಡಿ: ಸಚಿನ್ ಪೈಲಟ್

- Advertisement -
- Advertisement -

ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಹಿರಂಗ ಬಂಡಾಯ ನಡೆಸುತ್ತಿರುವ ಸಚಿನ್ ಪೈಲಟ್, ಅಸ್ಸಾಂ ಮತ್ತು ಬಿಹಾರದಲ್ಲಿ ಪ್ರವಾಹದಿಂದ ಹಾನಿಗೊಳಗಾದವರಿಗೆ ಬೆಂಬಲ ನೀಡಬೇಕೆಂದು ದೇಶದ ಜನರನ್ನು ಕೋರಿದ್ದಾರೆ.

“ಅಸ್ಸಾಂ ಮತ್ತು ಬಿಹಾರ ಪ್ರವಾಹದಿಂದ ಹಾನಿಗೊಳಗಾದ ಎಲ್ಲ ಕುಟುಂಬಗಳೊಂದಿಗೆ ನಾನಿದ್ದು, ಅವರಿಗಾಗಿ ಪ್ರಾರ್ಥಿಸುತ್ತೇನೆ. ಅಸ್ಸಾಂವೊಂದರಲ್ಲೇ 68 ಕ್ಕೂ ಹೆಚ್ಚು ಜೀವಹಾನಿಯಾಗಿದ್ದು, 3.6 ಮಿಲಿಯನ್ ಜನರು ಬಾಧಿತರಾಗಿದ್ದಾರೆ. ಈ ವಿಪರೀತ ಪ್ರವಾಹ ಸಂದರ್ಭದಲ್ಲಿ ನಾವೆಲ್ಲ ಒಟ್ಟಿಗೆ ಸೇರಿ ಪ್ರವಾಹ ಪೀಡಿತರಿಗೆ ಸಹಾಯವಾಗುವ ಪ್ರಯತ್ನ ಮಾಡೋಣ ಎಂದು ಎಲ್ಲಾ ಭಾರತೀಯರಿಗೆ ಮನವಿ ಮಾಡುತ್ತೇನೆ” ಎಂದು ಪೈಲಟ್ ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಸಚಿನ್ ಪೈಲಟ್ ದೆಹಲಿಯಲ್ಲಿದ್ದಾರಾದರೂ ಅವರನ್ನು ಬೆಂಬಲಿಸಿರುವ ಹಲವಾರು ಶಾಸಕರು ಎಲ್ಲಿದ್ದಾರೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ರಾಜಸ್ಥಾನ ಪೊಲೀಸರು ಹರಿಯಾಣದಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ. ಅಲ್ಲದೇ ಬಂಡಾಯ ಶಾಸಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವರ್ಷದ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯ ನೇತೃತ್ವದಲ್ಲಿ ಕೆಲ ಶಾಸಕರು ಸರ್ಕಾರದ ವಿರುದ್ಧ ಬಂಡಾಯವೆದ್ದಾಗಲೂ ಸಹ ಅವರನ್ನು ಬೆಂಗಳೂರಿನ ಹೋಟೆಲ್‌ನಲ್ಲಿ ಇರಿಸಲಾಗಿತ್ತು.

ಸದ್ಯಕ್ಕೆ ಸಚಿನ್ ಪೈಲಟ್ ತಮ್ಮೊಡನೆ 30 ಶಾಸಕರು ಇದ್ದಾರೆ ಎಂದು ತಿಳಿಸಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್‌ ಕೂಡ ತನಗೆ 101 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಇಂದು ರಾಜ್ಯಪಾಲರನ್ನು ಸಿಎಂ ಭೇಟಿಯಾಗಿದ್ದು ಮುಂದಿನ ವಾರ ವಿಶ್ವಾಸಮತ ಯಾಚನೆ ನಡೆಯುವ ಸಂಭವವಿದೆ.


ಇದನ್ನೂ ಓದಿ : ರಾಜಸ್ಥಾನ ಬಿಕ್ಕಟ್ಟು: ಇಬ್ಬರು ಪ್ರಾದೇಶಿಕ ಪಕ್ಷಗಳ ಶಾಸಕರ ಬೆಂಬಲವಿದೆಯೆಂದ ಗೆಹ್ಲೋಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...