HomeUncategorizedಹಿಂಡೆನ್‌ಬರ್ಗ್ ವರದಿ ಎಫೆಕ್ಟ್: $48 ಶತಕೋಟಿಗೆ ಕುಸಿದ ಅದಾನಿ ಆಸ್ತಿ

ಹಿಂಡೆನ್‌ಬರ್ಗ್ ವರದಿ ಎಫೆಕ್ಟ್: $48 ಶತಕೋಟಿಗೆ ಕುಸಿದ ಅದಾನಿ ಆಸ್ತಿ

- Advertisement -
- Advertisement -

ಉದ್ಯಮಿ ಗೌತಮ್ ಅದಾನಿ ಅವರ ನಿವ್ವಳ ಆಸ್ತಿ ಇಂದು (ಫೆ.20) ಮೊದಲ ಬಾರಿಗೆ $50 ಶತಕೋಟಿಗಿಂತ ಕಡಿಮೆಯಾಗಿದೆ. ಹಿಂಡೆನ್‌ಬರ್ಗ್ ವರದಿ ಪರಿಣಾಮವಾಗಿ ಅವರ ಆಸ್ತಿ $48 ಬಿಲಿಯನ್‌ ಡಾಲರ್‌ಗೆ (3.9 ಲಕ್ಷ ಕೋಟಿ ರೂಗಳು) ಇಳಿಕೆಯಾಗಿದೆ ಎಂದು ಫೋರ್ಬ್ಸ್ ಮತ್ತು ಬ್ಲೂಮ್‌ಬರ್ಗ್ ವರದಿ ಮಾಡಿವೆ.

ಇಂದು ಫೋರ್ಬ್ಸ್ ಮತ್ತು ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿರುವ ಬಿಲಿಯನೇರ್‌ಗಳ ಪಟ್ಟಿಗಳಲ್ಲಿ ಅದಾನಿಯು ವಿಶ್ವದ ಇಪ್ಪತ್ತೈದನೇ ಶ್ರೀಮಂತ ವ್ಯಕ್ತಿ ಎಂದು ಶ್ರೇಣೀಕರಿಸಿವೆ.

ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿ ಮತ್ತು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವಿಶ್ವದ ಶ್ರೀಮಂತ ಜನರ ದೈನಂದಿನ ಶ್ರೇಯಾಂಕಗಳಾಗಿವೆ. ಫೋರ್ಬ್ಸ್ ಪಟ್ಟಿಯಲ್ಲಿ ಸದ್ಯ ಅದಾನಿ ಗ್ರೂಪ್, ಚೀನಾದ ಜಾಂಗ್ ಯಿಮಿಂಗ್ ($49.5 ಶತಕೋಟಿ), ಮತ್ತು ಯುನೈಟೆಡ್ ಸ್ಟೇಟ್ಸ್‌ನ ಫಿಲ್ ನೈಟ್ ಮತ್ತು ಕುಟುಂಬ ($47.4 ಶತಕೋಟಿ) ನಡುವೆ ಇದ್ದಾರೆ.

ಮತ್ತೊಂದೆಡೆ, ಬ್ಲೂಮ್‌ಬರ್ಗ್ ಸೂಚ್ಯಂಕದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಮೈಕೆಲ್ ಡೆಲ್ ($49.2 ಶತಕೋಟಿ) ಮತ್ತು ಫ್ರಾನ್ಸ್‌ನ ಅಲೈನ್ ವರ್ತೈಮರ್ ($49 ಶತಕೋಟಿ) ನಡುವೆ ಅದಾನಿ ಸ್ಥಾನ ಪಡೆದಿದ್ದಾರೆ.

ಅದಾನಿಯವರ ಒಟ್ಟು ಸಂಪತ್ತಿನ ಭಾರೀ ಕುಸಿತಕ್ಕೆ ಕಾರಣ ಹಿಂಡೆನ್‌ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಯಾಗಿದೆ. ಈ ವರದಿಯಲ್ಲಿ ‘ಕಾರ್ಪೊರೇಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣವನ್ನು’ ಅದಾನಿ ಗ್ರೂಪ್ಸ್ ನಡೆಸುತ್ತಿದೆ ಎಂದು ಆರೋಪಿಸಸಲಾಗಿತ್ತು. ಹಾಗಾಗಿ ಕೃತಕವಾಗಿ ಏರಿಸಲಾಗಿದ್ದ ಅವರು ಷೇರುಗಳ ಮೌಲ್ಯ ಪ್ರತಿ ದಿನ ಕುಸಿಯುತ್ತಿದೆ.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

2023ರ ಆರಂಭದಲ್ಲಿ ಗೌತಮ್ ಅದಾನಿ ಅವರು, ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿ ಮತ್ತು ಏಷ್ಯನ್ನರಲ್ಲಿ ಅತ್ಯಧಿಕ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಯಾಗಿದ್ದರು. ಆದರೆ ಅವರು ಈಗ ಏಷ್ಯಾ ಖಂಡದಲ್ಲಿ ನಾಲ್ಕನೇ ಶ್ರೀಮಂತರಾಗಿದ್ದಾರೆ. ಮುಖೇಶ್ ಅಂಬಾನಿ ಮತ್ತು ಚೀನಾದ ಜೋಡಿಯಾದ ಜಾಂಗ್ ಶಾನ್ಶನ್ ಮತ್ತು ಜಾಂಗ್ ಯಿಮಿಂಗ್ ಅವರ ನಂತರ ಸ್ಥಾನದಲ್ಲಿ ಅದಾನಿ ಬಂದು ನಿಂತಿದ್ದಾರೆ.

ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ನಂತರದ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಅದಾನಿ 25ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಇದನ್ನೂ ಓದಿ:  ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು ಮತ್ತು ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...