Homeಮುಖಪುಟಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಹಿಂಡೆನ್‌ಬರ್ಗ್ ಸಂಸ್ಥೆಯು 2020 ರಿಂದ ಟೆಸ್ಲಾ, ಟ್ವಿಟರ್ ಸೇರಿದಂತೆ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ.

- Advertisement -
- Advertisement -

ಕಳೆದ ನಾಲ್ಕು ದಿನಗಳಲ್ಲಿ ದಿಢೀರ್ ಪ್ರಚಲಿತಕ್ಕೆ ಬಂದ ಅಮೆರಿಕದ ಕಂಪನಿಯ ಹೆಸರು ಹಿಂಡೆನ್‌ಬರ್ಗ್ ರಿಸರ್ಚ್. ಭಾರತದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿಯವರ ಹಣಕಾಸು ಅಕ್ರಮಗಳನ್ನು ಬಯಲಿಗೆಳೆಯುವ ವರದಿ ಪ್ರಕಟಿಸುವ ಮೂಲಕ ಅದು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇತ್ತ ಆ ಒಂದು ವರದಿಯಿಂದ ಅದಾನಿ ಕಂಪನಿಯ ಷೇರುಗಳೆಲ್ಲ ಪ್ರಪಾತಕ್ಕೆ ಕುಸಿಯುತ್ತಿದ್ದು, ಈ ನಾಲ್ಕು ದಿನದಲ್ಲಿ ಕನಿಷ್ಟ 4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಎಸ್‌ಬಿಐ, ಎಲ್‌ಐಸಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮೌಲ್ಯಗಳು ಕುಸಿಯುತ್ತಿದ್ದು, ಇಡೀ ಭಾರತದ ಆರ್ಥಿಕತೆ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ ಹಿಂಡೆನ್‌ಬರ್ಗ್ ಕಂಪನಿಯನ್ನು ‘ಶಾರ್ಟ್ ಸೆಲ್ಲಿಂಗ್’ ಕಂಪನಿ ಎಂದು ಸಂಭೋದಿಸಲಾಗುತ್ತಿದೆ. ಅದು ಅದಾನಿಗೆ ಶಾರ್ಟ್ ಸೆಲ್ಲಿಂಗ್ ಮಾಡುವ ಮೂಲಕ ಮಿಲಿಯನ್‌ ಡಾಲರ್‌ಗಟ್ಟಲೇ ಹಣ ಸಂಪಾದಿಸಿದೆ ಎಂದು ವರದಿಯಾಗಿದೆ. ಆಗಿದ್ದರೆ ಶಾರ್ಟ್‌ ಸೆಲ್ಲಿಂಗ್ ಎಂದರೇನು? ಆ ಕಂಪನಿಯ ಹಿನ್ನೆಲೆಯೇನು ಎಂಬುದನ್ನು ನೋಡೋಣ.

ಹಿಂಡೆನ್‌ಬರ್ಗ್ ಹಿನ್ನೆಲೆ

2017ರಲ್ಲಿ ನಾಥನ್ ಆಂಡರ್ಸನ್ ಎಂಬುವವರು ಸ್ಥಾಪಿಸಿದ ಹಿಂಡೆನ್‌ಬರ್ಗ್ ರಿಸರ್ಚ್ ತನ್ನನ್ನು ಸಂಶೋಧನಾ ಮತ್ತು ತನಿಖಾ ಸಂಸ್ಥೆ ಎಂದು ಕರೆದುಕೊಂಡಿದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ತಪ್ಪಿಸಬಹುದಾದ ಆರ್ಥಿಕ ಅವಘಡಗಳನ್ನು ಗುರುತಿಸುವುದು, ಸಂತ್ರಸ್ತರನ್ನು ರಕ್ಷಿಸುವುದು ತನ್ನ ಕೆಲಸ ಎಂದು ಹೇಳಿಕೊಂಡಿದೆ. ಕೇವಲ ಬೆರಳೆಣಿಕೆಯ ಸಿಬ್ಬಂದಿಗಳನ್ನು ಹೊಂದಿರುವ ಈ ಸಂಸ್ಥೆಯು ದೈತ್ಯ ಕಂಪನಿಗಳ ಕುರಿತಾದ ಆಳವಾದ ಸಂಶೋಧನೆ ಮಾಡುವುದರಲ್ಲಿ ಪಳಗಿದ ಕೈ ಎನಿಸಿಕೊಂಡಿದೆ. ಆರ್ಥಿಕ ಅವ್ಯವಹಾರಗಳನ್ನು ಬಯಲಿಗೆಳೆಯುವುದು, ವರದಿಗಳನ್ನು ಬಿಡುಗಡೆ ಮಾಡುವ ವಿಶಲ್ ಬ್ಲೋಯರ್ ಕೆಲಸ ಮಾಡುತ್ತಲೇ ಅದು ‘ಶಾರ್ಟ್ ಸೆಲ್ಲರ್ ಆಕ್ಟಿವಿಸಂ’ ಅನ್ನು ಮಾಡುತ್ತಾ ಬಂದಿದೆ. ಅದಾನಿ ಕಂಪನಿಯ ವಿರುದ್ಧ ಸಹ ಅದು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಏನಿದು ಶಾರ್ಟ್ ಸೆಲ್ಲಿಂಗ್?

ಶಾರ್ಟ್ ಸೆಲ್ಲಿಂಗ್ ಎನ್ನುವುದು ಒಂದು ಮಾರುಕಟ್ಟೆ ತಂತ್ರವಾಗಿದ್ದು ಭಾರತ ಮತ್ತು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಯಾರು ಬೇಕಾದರೂ ಮಾಡಬಹುದಾಗಿದೆ. ಅಂದರೆ ಕೆಲವು ಕಂಪನಿಗಳ ಷೇರುಗಳ ಬೆಲೆ ಕುಸಿಯುತ್ತವೆ ಎಂದು ಅಧ್ಯಯನ, ಸಂಶೋಧನೆ ನಡೆಸುವುದು. ತನ್ನದಲ್ಲದ ಆ ಷೇರುಗಳನ್ನು ದಲ್ಲಾಳಿಗಳ ಮೂಲಕ ಎರವಲು ಪಡೆದು ಸದ್ಯದ ಬೆಲೆಗೆ ಮಾರುವುದು. ನಂತರ ಅವುಗಳ ಬೆಲೆ ಕುಸಿದಾಗ ಕಡಿಮೆ ಬೆಲೆಗೆ ಕೊಂಡು ದಲ್ಲಾಳಿಗಳಿಗೆ ಹಿಂದಿರುಗಿಸುವ ಮೂಲಕ ಲಾಭ ಗಳಿಸುವುದನ್ನು ಶಾರ್ಟ್ ಸೆಲ್ಲಿಂಗ್ ಎನ್ನಲಾಗುತ್ತದೆ.

ಉದಾಹರಣೆಯ ಮೂಲಕ ನೋಡುವುದಾದರೆ ಅಆ ಎಂಬ ಕಂಪನಿಯ ಷೇರುಗಳು 1000 ರೂಗೆ ಮಾರಾಟವಾಗುತ್ತಿರುತ್ತವೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಆ ಕಂಪನಿಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಅದರ ಷೇರುಗಳ ಬೆಲೆ ಕುಸಿಯುತ್ತದೆ ಎಂದು ಅಂದಾಜಿಸುತ್ತಾರೆ. ಆಗ ಆ ಕಂಪನಿಯ 1000 ರೂ ಬೆಲೆಯ 100 ಷೇರುಗಳನ್ನು ಬ್ರೋಕರ್‌ಗಳ ಮೂಲಕ ಎರವಲು ಪಡೆದು ಮಾರಿ 1 ಲಕ್ಷ ರೂ ಗಳಿಸುತ್ತಾರೆ. ಆನಂತರ ಆ ಕಂಪನಿಯ ಷೇರುಗಳ ಬೆಲೆ 600 ರೂಗಳಿಗೆ ಕುಸಿದ ಸಂದರ್ಭದಲ್ಲಿ ತಾವೇ 60,000 ರೂಗಳಿಗೆ 100 ಷೇರುಗಳನ್ನು ಖರೀದಿಸಿ ದಲ್ಲಾಳಿಗೆ ಹಿಂದಿರುಗಿಸುತ್ತಾರೆ. ಆಗ ಅವರಿಗೆ 40,000 ರೂ ಲಾಭವಾಗುತ್ತದೆ. ಇದನ್ನು ಶಾರ್ಟಿಂಗ್ ಎನ್ನುತ್ತಾರೆ.

ಇದೊಂದು ಜೂಜಿನಂತಿರುತ್ತದೆ ಮತ್ತು ಇಂತಿಷ್ಟು ಸಮಯದಲ್ಲಿ ದಲ್ಲಾಳಿಗೆ ಷೇರುಗಳನ್ನು ಮರಳಿ ನೀಡುವ ಒಪ್ಪಂದವಾಗಿತ್ತದೆ. ಒಂದು ವೇಳೆ ಅವರ ಅಂದಾಜು ತಪ್ಪಿ ಆ ಕಂಪನಿಯ ಷೇರಿನ ಬೆಲೆ ಕುಸಿಯುವ ಬದಲು 1,400 ರೂ ಏರಿಕೆಯಾದಲ್ಲಿ ಶಾರ್ಟ್ ಮಾಡಿದ ವ್ಯಕ್ತಿ ಅಥವಾ ಸಂಸ್ಥೆ ತನ್ನ ಕೈಯಿಂದಲೇ 40,000 ದುಡ್ಡು ಹಾಕಿ ಷೇರುಗಳನ್ನು ಕೊಳ್ಳುವ ಮೂಲಕ ನಷ್ಟಕ್ಕೆ ಸಿಲುಕುವ ಸಂದರ್ಭವೂ ಎದುರಾಗಬಹುದಾಗಿದೆ.

ಪ್ರಸ್ತುತ ಹಿಂಡೆನ್‌ಬರ್ಗ್ ಅದಾನಿ ಕಂಪನಿಗೆ ಮಾಡಿರುವುದು ಇದೇ ಶಾರ್ಟಿಂಗ್ ಆಗಿದೆ. ಎರಡು ವರ್ಷಗಳ ಕಾಲ ಸತತ ಅಧ್ಯಯನ ಮಾಡಿದ ಅದು ಅದಾನಿ ಕಂಪನಿಯ ಅಕ್ರಮಗಳ ಕುರಿತು ದಾಖಲೆಗಳನ್ನು ಶೇಖರಿಸಿಟ್ಟುಕೊಂಡಿತ್ತು. ಆನಂತರ ಷೇರು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ಲಕ್ಷಾಂತರ ಷೇರುಗಳನ್ನು ಎರವಲು ಪಡೆದು ಮಾರಾಟ ಮಾಡಿ ಹಣ ಸಂಗ್ರಹಿಸಿಟ್ಟುಕೊಂಡಿದೆ. ಜನವರಿ 24 ರಂದು ವರದಿ ಬಿಡುಗಡೆ ಮಾಡಿದ ನಂತರ ಪ್ರಪಂಚದಾದ್ಯಂತ ಅದು ಸುದ್ದಿಯಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅದಾನಿ ಬಹುತೇಕ ಸಾಲದ ಮೇಲೆಯೇ ಸಾಮ್ರಾಜ್ಯ ಕಟ್ಟಿದ್ದು ಅದರ ಅಡಿಪಾಯವೇ ಅಲ್ಲಾಡುತ್ತಿದೆ ಎಂಬ ಕಥನ ಬಿತ್ತರಿಸಲಾಯಿತು. ಇದರಿಂದ ಭಯಗೊಂಡ ಲಕ್ಷಾಂತರ ಜನ ಏಕಕಾಲದಲ್ಲಿ ಅದಾನಿ ಕಂಪನಿಯ ತಮ್ಮ ಷೇರುಗಳನ್ನು ಮಾರಲು ಮುಂದಾದರು. ಆಗ ಸಹಜವಾಗಿ ಅವುಗಳ ಬೆಲೆ ಕುಸಿಯುತ್ತಾ ಹೋಯಿತು. ಸುಮಾರು ಶೇ. 20%ಗೂ ಹೆಚ್ಚಿನ ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಅದೆಲ್ಲವೂ ಹಿಂಡೆನ್‌ಬರ್ಗ್‌ ಕಂಪನಿಗೆ ಲಾಭವಾಗುತ್ತಿದೆ. ಏಕೆಂದರೆ ಹೆಚ್ಚು ಬೆಲೆಗೆ ಮಾರಿರುವ ಅದು ಕಡಿಮೆ ಬೆಲೆ ಕೊಂಡು ದಲ್ಲಾಳಿಗೆ ಹಿಂದಿರುಗಿಸುತ್ತದೆ. ಅಂದರೆ ಅದಾನಿ ಷೇರುಗಳ ಬೆಲೆ ಕುಸಿದಷ್ಟು ಅದರ ಲಾಭ ಹಿಂಡೆನ್‌ಬರ್ಗ್‌ಗೆ ದಕ್ಕುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ ಮತ್ತು ಕಡಿಮೆ ಬೆಲೆ ಕೊಳ್ಳುವುದು ನಡೆಯುತ್ತಿದೆ.

ಇದೇ ಮೊದಲಲ್ಲ

ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹಿಂಡೆನ್‌ಬರ್ಗ್ 2020 ರಿಂದ ಈ ರೀತಿಯಲ್ಲಿ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿದೆ. ಅದು ತನಿಖೆಗಳನ್ನು ಸಾರ್ವಜನಿಕಗೊಳಿಸಿದ ಮರುದಿನವೇ ಆಯಾ ಕಂಪನಿಗಳು ಸರಾಸರಿಯಾಗಿ ತಮ್ಮ ಮೌಲ್ಯದ ಸುಮಾರು 15 ಪ್ರತಿಶತವನ್ನು ಕಳೆದುಕೊಂಡಿವೆ. ಅಂದರೆ ಅವುಗಳಲ್ಲೆಲ್ಲ ಅದು ಲಾಭ ಗಳಿಸಿದೆ. ಟೆಸ್ಲಾ, ಟ್ವಿಟರ್‌ನಂತಹ ಕಂಪನಿಗಳ ಮೇಲೆ ಸಹ ಅದು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ ಎನ್ನಲಾಗಿದೆ. ನಿಕೋಲಾ ಎಂಬ ಕಂಪನಿಯ ಮೇಲೆ ಹಿಂಡೆನ್‌ಬರ್ಗ್ ಶಾರ್ಟಿಂಗ್ ಮಾಡಿತ್ತು. ಹಾಗಾಗಿ ಸುಮಾರು 34 ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ನಿಕೋಲಾ ಕಂಪನಿಯು ಸದ್ಯ 1.3 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಕುಸಿದಿದೆ ಎಂದರೆ ಹಿಂಡೆನ್‌ಬರ್ಗ್ ಕಂಪನಿಯ ಸಂಶೋಧನೆಗಳು, ತಂತ್ರಗಳು ಎಷ್ಟು ಕರಾರುವಕ್ಕಾರಿಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This company has been banned in usa as per recent news, how india had allowed it to investigate by short selling method, no shares of india/USA are not allowed to allot or sell or buy to us entity or indian entity or investors at present. It seems that unknown rival entity is hand in glove. M

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...