HomeUncategorizedಪತ್ರಕರ್ತರಲ್ಲಿ ಎಷ್ಟು ಮಂದಿ ದಲಿತರು, ಒಬಿಸಿಗಳು ಇದ್ದಾರೆ? ರಾಹುಲ್ ಗಾಂಧಿ ಪ್ರಶ್ನೆ

ಪತ್ರಕರ್ತರಲ್ಲಿ ಎಷ್ಟು ಮಂದಿ ದಲಿತರು, ಒಬಿಸಿಗಳು ಇದ್ದಾರೆ? ರಾಹುಲ್ ಗಾಂಧಿ ಪ್ರಶ್ನೆ

- Advertisement -
- Advertisement -

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಅಲ್ಲಿ ಹಾಜರಿದ್ದ ಪತ್ರಕರ್ತರಲ್ಲಿ ದಲಿತರು, ಆದಿವಾಸಿಗಳು ಅಥವಾ ಇತರೆ ಹಿಂದುಳಿದ ವರ್ಗಗಳ ಎಷ್ಟು ಮಂದಿ ಇದ್ದಾರೆ ಎಂದು ಕೈ ಎತ್ತುವಂತೆ ಆಗ್ರಹಿಸಿದ್ದಾರೆ.

ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ದೇಶದ ಸಂಸ್ಥೆಗಳಲ್ಲಿ ಸರಿ
ಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಸಂದೇಶ ರವಾನಿಸಲು ಈ ಪ್ರಶ್ನೆಯನ್ನು ರಾಹುಲ್‌ ಗಾಂಧಿ ಕೇಳಿದ್ದಾರೆ.

ಕಾಂಗ್ರೆಸ್‌ X (ಟ್ವಿಟ್ಟರ್) ನಲ್ಲಿ ಈ ಕುರಿತ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ರಾಹುಲ್‌ ಗಾಂಧಿಯವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಒಬ್ಬ ವ್ಯಕ್ತಿಯೂ ಕೈ ಎತ್ತಲಿಲ್ಲ ಎಂದು ಪಕ್ಷವು ಹೇಳಿಕೊಂಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತಮ್ಮ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿಯನ್ನು ನಡೆಸುವ ನಿರ್ಧಾರದ ಹಿಂದಿನ ಕಾರಣ ಇದು ಎಂದು ಹೇಳಿದೆ. ಜಾತಿ ಗಣತಿಯಿಂದ ಸರಿಯಾದ ಪ್ರಾತಿನಿಧ್ಯ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

ಈ ಕೊಠಡಿಯಲ್ಲಿ ಈಗ ಎಷ್ಟು ಮಂದಿ ದಲಿತರಿದ್ದೀರಿ? ಒಬಿಸಿ ವರ್ಗಗಳಿಗೆ ಸೇರಿದವರು ಎಷ್ಟು ಜನ ಇದ್ದೀರಿ? ನಿಮ್ಮ ಕೈ ಎತ್ತಿ ತೋರಿಸಿ, ಅಲ್ಲಿ ಒಬ್ಬರು ಕ್ಯಾಮೆರಾ ಸಿಬ್ಬಂದಿ ಇದ್ದಾರೆ. ಅವರ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಪತ್ರಕರ್ತರನ್ನು ಉದ್ದೇಶಿಸಿ ಈ ಮಾತನ್ನು ಕೇಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ದೇಶದಾದ್ಯಂತ ಜಾತಿಗಣತಿ ನಡೆಸುವುದರ ಪರವಾಗಿ ನಾವು ನಿಲ್ಲುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಿಡಬ್ಲ್ಯುಸಿ ಸಭೆಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಜಾತಿ ಗಣತಿ ಮಾಡುವ ಪಕ್ಷದ ನಿರ್ಧಾರವನ್ನು ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಐತಿಹಾಸಿಕ ಎಂದು ಕರೆದ ಅವರು,  ದೇಶದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಜಾತಿಗಣತಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮಹಿಷ ದಸರಾ ವಿರೋಧಿಸುವ ಬಿಜೆಪಿಯ ನಡೆ ಸರಿಯಲ್ಲ: ಎಚ್ ವಿಶ್ವನಾಥ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. Bloody rascal he is everything comparing with caste… position will not come free it’s need to achieve and where ur party given opportunity to dalit and OBC when u were position for 60 years in Bharat

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...