Homeಕರ್ನಾಟಕವೈರಲ್ ಆದ 'ಹೌಡಿ' ಉತ್ತರ ಕರ್ನಾಟಕ..? ಕವನ ಓದಿ

ವೈರಲ್ ಆದ ‘ಹೌಡಿ’ ಉತ್ತರ ಕರ್ನಾಟಕ..? ಕವನ ಓದಿ

- Advertisement -
- Advertisement -

ನರೇಂದ್ರ ಮೋದಿಯವರು ನಿನ್ನೆ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು. ಭಾರತದ ಕುರಿತು  ಬಹುದೊಡ್ಡ ಮಾತುಗಳನ್ನು ಆಡಿದರು. ಅದಕ್ಕೆ ಸಾಕಷ್ಟು ಸಕರಾತ್ಮಕ ಪ್ರತಿಕ್ರಿಯೆಗಳು ಬಂದಂತೆಯೇ ಕೆಲವೊಂದು ಟೀಕೆಗಳು ಬಂದಿವೆ. ಅದರಲ್ಲಿ ಉತ್ತರ ಕರ್ನಾಟಕ ನೆರೆಯಿಂದ ತತ್ತಿರಿಸಿದರೂ ಪರಿಹಾರ ಹಣ ನೀಡದ ಮೋದಿ ಅಮೆರಿಕಾದಲ್ಲಿ ಹೋಗಿ ನಮ್ಮ ಬಗ್ಗೆ ಹೇಳುವುದೇನು ಎಂದು ಪ್ರಶ್ನಿಸಿದ್ದಾರೆ. ಅದರಲ್ಲಿ ಶಿವು ನೊಣ್ಣುರು ಎಂಬುವವರು ಬರೆದ ಹೌಡಿ ಉತ್ತರ ಕರ್ನಾಟಕ ಪದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ.

‘ಹೌಡಿ’ ಉತ್ತರ ಕರ್ನಾಟಕ..?
———-
Everything is (not fine) pain…!

ನಮ್ಮ ದೊರೆ
ದೂರದ ಅಮೆರಿಕದಲ್ಲಿ ಬಿದ್ದ
‘ಹೂವಿನ ಕಡ್ಡಿ’ ಎತ್ತಿಡುತ್ತಾರೆ..
ಆದರೆ,
25 ‘ಕಮಲ’ದ ಹೂಗಳನ್ನು
ಕೂಟ್ಟ ಕರ್ನಾಟಕದಲ್ಲಿ,
ನೆರೆಯಿಂದ ಬಿದ್ದ
ಸಂತ್ರಸ್ತರ ಮನೆಯ ‘ಗಳ’
ಎತ್ತಿಡಲು ಬರಲಿಲ್ಲ…
ಹಾಗಾಗಿ,
ಇಲ್ಲಿಯಾವುದೂಚೆನ್ನಾಗಿಲ್ಲ….

ಪರಿಹಾರ ‌ಕೊಡಿ ಅಂತಾ
ಅಂಗಲಾಚಿದರೂ
ಸಮೀಕ್ಷೆ ‌ನಡೆಸಿ ಸುಮ್ಮನಾದರೇ
ಹೊರತು ಶಾ”ಸಕರು ಬಿಡಿಗಾಸು ತರಲಿಲ್ಲ
ಹಾಗಾಗಿ,
ಇಲ್ಲಿಯಾವುದೂಚೆನ್ನಾಗಿಲ್ಲ….

‘ಬಂಡೆ’ಗೆ ಕಷ್ಟ ‘ಬಂಧಿ’ತೆಂದು
ಬೀದಿಗಿಳಿದವರು, ಊರು-ಸೂರು
ಕಳೆದುಕೊಂಡು ಬೀದಿಗೆ ಬಂದ
ನಮ್ಮವರ‌ ರಕ್ಷಿಸಲು ‘ಕೈ’
ಜೋಡಿಸಲಿಲ್ಲ..
ಹಾಗಾಗಿ,
ಇಲ್ಲಿ ಯಾವುದೂ ಚೆನ್ನಾಗಿಲ್ಲ….

ಅಧಿಕಾರ ಹೋಯಿತೆಂದು
ಕಣ್ಣೀರಿಡುತ್ತಿದ್ದಾರೆಯೇ
ಹೊರತು, ನೆರೆ ಸಂತ್ರಸ್ತರ
ದಳ”ಮಳ‌ ಅರ್ಥ ವಾಗುತ್ತಿಲ್ಲ…
ಹಾಗಾಗಿ,
ಇಲ್ಲಿ ಯಾವುದೂ ಚೆನ್ನಾಗಿಲ್ಲ….

“ಹೌಡಿ” ಎನ್ನಬೇಡಿ
ಉತ್ತರ ಕರ್ನಾಟಕದ ಸ್ಥಿತಿ
“ರಾಡಿ”ಯಾಗಿದೆ…
– ಶಿವು ನುಣ್ಣೂರು
(No politics plz…)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಚೆನ್ನಾಗಿದೆ ಕವನ, ಇದು ತಲುಪಬೇಕಾದ ಜನರಿಗೆ ತಲುಪಿದರೂ ತಲುಪಿಲ್ಲವೆಂದು ನಟಿಸುತ್ತಾರೆ, ಏನು ಮಾಡೋದು.

  2. ” ಮನೆಗೆ ಮಾರಿ ಪರರಿಗೆ ಉಪಕಾರಿ” ಎಂಬ ನಾಣ್ಣುಡಿಯಂತೆ ಮೋದಿಯವರು.ಕಾರ್ಪೊರೇಟ್ ಖದೀಮರಿಗೆ ತೆರಿಗೆ ವಿನಾಯಿತಿ ಕೊಡುವವರಿಗೆ ನಿಮ್ಮ ಸಂಕಟ ಎಲ್ಲಿ ಅರ್ಥವಾಗುತ್ತದೆ?

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...