Homeಮುಖಪುಟದೇಶವನ್ನು ಒಡೆಯುವ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸಲು ನಾವು ಬಿಡುವುದಿಲ್ಲ. ನಾಳೆ ದೆಹಲಿಗೆ ಬರುತ್ತೇನೆ: ಅಜಾದ್‌

ದೇಶವನ್ನು ಒಡೆಯುವ ಬಿಜೆಪಿ ದೆಹಲಿಯಲ್ಲಿ ಸರ್ಕಾರ ರಚಿಸಲು ನಾವು ಬಿಡುವುದಿಲ್ಲ. ನಾಳೆ ದೆಹಲಿಗೆ ಬರುತ್ತೇನೆ: ಅಜಾದ್‌

- Advertisement -
- Advertisement -

ನಾನು ನಾಳೆ ದೆಹಲಿಗೆ ಬರುತ್ತಿದ್ದೇನೆ, ದೇಶವನ್ನು ಒಡೆಯಲು ಕೆಲಸ ಮಾಡುವ ಬಿಜೆಪಿ ದೆಹಲಿಯಲ್ಲಿ ಸರ್ಕಾರವನ್ನು ರಚಿಸಲು ನಾವು ಅನುಮತಿಸುವುದಿಲ್ಲ ಎಂದು ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ ಘೋಷಿಸಿದ್ದಾರೆ.

ಸಂವಿಧಾನವನ್ನು ಹಿಡಿದುಕೊಂಡು ಒಂದು ನಿಮಿಷದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು ಜೈ ಭೀಮ್ ಸ್ನೇಹಿತರೇ, ಗೌರವಾನ್ವಿತ ನ್ಯಾಯಾಲಯವು ನನಗೆ ದೆಹಲಿಗೆ ಬರಲು ಅವಕಾಶ ನೀಡಿದೆ, ನಾನು ನ್ಯಾಯಾಂಗಕ್ಕೆ ಧನ್ಯವಾದ ಹೇಳುತ್ತೇನೆ, ಇದು ನ್ಯಾಯಾಂಗದಲ್ಲಿ ಜನರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಸಂವಿಧಾನದ ವಿಜಯ ಎಂದು ತಿಳಿಸಿದ್ದಾರೆ.

ನಾನು ದೆಹಲಿಗೆ ಬಂದು ಅಕ್ಕಂದಿರನ್ನು, ಅಮ್ಮಂದಿರುನ್ನು ಸಹೋದರರನ್ನು ಭೇಟಿಯಾಗುತ್ತೇನೆ. ಇವರು ಬಹಳ ದಿನಗಳಿಂದ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಸಂಘರ್ಷದೊಂದಿಗೆ ನಾನು ಪಾಲುದಾರನಾಗುತ್ತೇನೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಇದು ಸಂವಿಧಾನದ ವಿರುದ್ಧವಿದ್ದು ರಾಜ್ಯದಲ್ಲಿಯೂ ಅದೇ ಸರ್ಕಾರ ಜಾರಿಗೆ ಬಂದರೆ ಜನರ ಗೋಳು ಹೇಳತೀರದು. ಸಂವಿಧಾನದ ಆಶಯಗಳು ಮಣ್ಣುಪಾಲಾಗುತ್ತವೆ. ಹಾಗಾಗಿ ಅದನ್ನು ತಡೆಯುವುದು ನಮ್ಮ ಜವಬ್ದಾರಿ ಎಂದು ಅಜಾದ್‌ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...