ವಿಶ್ವಕಪ್ : ವಿಜಯ್ ಶಂಕರ್ ಸೇರಿಸಿದ್ಯಾಕೆ? ಅಂಬಾಟಿ ರಾಯುಡು ಬಿಟ್ಟಿದ್ಯಾಕೆ?

| ಅಂತಃಕರಣ |
ಈ ಬಾರಿಯ ಭಾರತದ ವಿಶ್ವಕಪ್ ತಂಡದ ಸುಮಾರು 13 ಆಟಗಾರರು ಎಲ್ಲರೂ ನಿರೀಕ್ಷಿಸಿದವರೇ ಆಗಿದ್ದರು. ಆದರೆ ಉಳಿದ ಇಬ್ಬರ ಆಯ್ಕೆ ಕೆಲವು ಅಭಿಪ್ರಾಯ ಬೇಧಗಳನ್ನು (ಒಪಿನಿಯನ್ ಡಿಫರೆನ್ಸ್) ಹುಟ್ಟುಹಾಕಿದೆ.
ಭಾರತದ 13 ಜನರು, ಯಾರ ಆಯ್ಕೆಯನ್ನು ಹೆಚ್ಚಾಗಿ ಪ್ರಶ್ನಿಸಲಾಗಿಲ್ಲವೋ – ಅವರು ಹೀಗಿದ್ದಾರೆ. ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಎಂ ಎಸ್ ಧೋನಿ, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್‍ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ.

ವಿಜಯ್ ಶಂಕರ್
ಒಪಿನಿಯನ್ ಡಿಫರೆನ್ಸ್ ಅನ್ನು ಹುಟ್ಟುಹಾಕಿರುವ ಆ ಎರಡು ಹೆಸರುಗಳೆಂದರೆ ವಿಜಯ್ ಶಂಕರ್ ಹಾಗೂ ದಿನೇಶ್ ಕಾರ್ತಿಕ್‍ರದ್ದು. ಇಬ್ಬರ ಆಯ್ಕೆಗಳೂ ಸಹ ಒಂದು ಮಟ್ಟಿಗೆ ಅಚ್ಚರಿಯೇ ತಂದಿತು. ಅದಕ್ಕಿಂತ ಹೆಚ್ಚಾಗಿ ಆಶ್ಚರ್ಯವಾದ ಸಂಗತಿಯೇನೆಂದರೆ ಮಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡುರನ್ನು ಕೆಲ ತಿಂಗಳಗಳ ಮುಂಚೆ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿ ನಂಬರ್ 4 ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದಿದ್ದರು. ಆದರೆ ರಾಯುಡುರವರು ಫಾರ್ಮ್ ಕಳೆದುಕೊಂಡ ನಂತರ ಆ ಸ್ಥಾನಕ್ಕೆ ಅವರು ಇರಬೇಕೋ ಇಲ್ಲವೋ ಎಂಬ ಪ್ರಶ್ನೆ ಉದ್ಭವವಾಯಿತು. ಹಾಗೂ ಕೊನೆಗೂ ಸಹ ಅವರನ್ನು ತಂಡದಿಂದ ತೆಗೆಯಲಾಯಿತು. ಈಗ ಅವರು 15ರ ತಂಡಕ್ಕೆ ಯಾರಾದರೂ ಗಾಯಗೊಂಡರೆ ಅವರ ಬದಲಿಗೆ ಪ್ರವೇಶಿಸುವ 5 ಆಟಗಾರರ ಪಟ್ಟಿಯಲ್ಲಿದ್ದಾರೆ.
ವಿಜಯ್ ಶಂಕರ್‍ರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಿದ್ದು ಸಮಂಜಸವಲ್ಲ ಎನ್ನುವುದು ಹಲವರ ಅಭಿಪ್ರಾಯ. ಯಾಕೆಂದರೆ ಅಂಬಾಟಿ ರಾಯುಡು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್. ಏಕದಿನ ಕ್ರಿಕೆಟ್‍ನಲ್ಲಿ 47ರ ಸರಾಸರಿಯನ್ನು ಹೊಂದಿರುವ ರಾಯುಡು ಭಾರತದ ಪರ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸರಾಸರಿಯನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲ ಬ್ಯಾಟ್ಸ್‍ಮನ್‍ಗಳ ಕೆರಿಯರ್‍ನಲ್ಲಿ ಕೆಲವೊಮ್ಮೆ ಫಾರ್ಮ್ ಇಲ್ಲದಿರುವುದು ಸಹಜ, ಆದರೆ ವಿಶ್ವಕಪ್‍ನಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್ ಆಗಿ ಇಂಗ್ಲೆಂಡ್‍ನಲ್ಲಿ ಉತ್ತಮ ದಾಖಲೆ ಸಹ ಹೊಂದಿರುವ ಅಂಬಾಟಿ ರಾಯುಡುರನ್ನು ಆಡಿಸಬೇಕಿತ್ತು ಎಂಬುದು ಕೆಲವರ ಅಭಿಪ್ರಾಯ.

ಅಂಬಾಟಿ ರಾಯುಡು
ಆದರೆ ಆಯ್ಕೆಗಾರ ಎಂ.ಎಸ್.ಕೆ ಪ್ರಸಾದ್ ಹೇಳಿರುವ ಹಾಗೆ ವಿಜಯ್ ಶಂಕರ್ ಮೂರು ದೃಷ್ಟಿಕೋನಗಳಲ್ಲಿ (ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್) ತಂಡಕ್ಕೆ ಸಹಾಯ ಮಾಡುವುದರಿಂದ ಅವರನ್ನು ಅಂಬಾಟಿ ರಾಯುಡುರವರ ಬದಲಿಗೆ ಆಯ್ಕೆ ಮಾಡಲಾಯಿತು ಎಂಬುದು ಕೆಲವರ ಅಭಿಪ್ರಾಯ.
ನನ್ನ ಅಭಿಪ್ರಾಯದಲ್ಲಿ ಇವರಿಬ್ಬರ ಮಧ್ಯೆ ಅಂಬಾಟಿ ರಾಯುಡುರನ್ನು ಆಡಿಸಬೇಕಾಗಿತ್ತು. ಯಾಕೆಂದರೆ ವಿಜಯ್‍ರವರು ಮೂರು ವಿಭಾಗಗಳಲ್ಲಿ ತಂಡಕ್ಕೆ ಸಹಾಯ ಮಾಡಿದರೂ ಸಹ ಅಂಬಾಟಿರವರು ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್‍ಮನ್ ಆಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಫ್ಲೋಟರ್ ಆಗಿ ಕಾರ್ಯನಿರ್ವಹಿಸಬಲ್ಲರು. ಆದುದರಿಂದ ನನ್ನ ಪ್ರಕಾರ ಅಂಬಾಟಿ ರಾಯುಡುರವರು ಈ ಟೂರ್ನಿಯಲ್ಲಿ ಆಡಬೇಕಿತ್ತು.
ಇನ್ನೊಬ್ಬ ದಿನೇಶ್ ಕಾರ್ತಿಕ್ ಅವರ ಆಯ್ಕೆ ನನಗೆ ಚೂರೂ ಸಹ ಸಮಂಜಸವೆನಿಸಲಿಲ್ಲ. ಯಾಕೆಂದರೆ ತಂಡದಲ್ಲಿ ಧೋನಿಯವರು ವಿಕೆಟ್ ಕೀಪರ್ ಆಗಿದ್ದರು ಹಾಗೂ ಅವರಿಗೆ ಗಾಯವಾದರೆ ರಿಪ್ಲೇಸ್‍ಮೆಂಟ್ ಆಗಿ ಬೇರೆಯವರನ್ನು ಆಗ ಕಳಿಸಬಹುದಿತ್ತು ಅಥವಾ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಬಹುದಿತ್ತು. ಯಾಕೆಂದರೆ ಧೋನಿಯವರು ನೀಡುವ ಮಾರ್ಗದರ್ಶನವನ್ನು ಯಾವ ಕೀಪರ್ ಸಹ ನೀಡಲಾಗುವುದಿಲ್ಲ. ಕಾರ್ತಿಕ್‍ರವರು ರಾಹುಲ್‍ಗಿಂತ ಸ್ವಲ್ಪ ಮಟ್ಟಿಗೆ ಮಾತ್ರ ಅತ್ಯುತ್ತಮ ಕೀಪರ್ ಎನ್ನುವುದು ನನ್ನ ಅಭಿಪ್ರಾಯ. ಇಬ್ಬರನ್ನೂ ಹೋಲಿಸಿದರೆ ರಾಹುಲ್ ಪ್ರಬುದ್ಧ ಬ್ಯಾಟ್ಸ್‍ಮನ್ ಸಹ. ಹಾಗಾಗಿ ನನಗೆ ದಿನೇಶ್ ಕಾರ್ತಿಕ್‍ರಿಗೆ ಯಾಕೆ ಸ್ಥಾನ ಸಿಕ್ಕಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಕಾರ್ತಿಕ್‍ರ ಬದಲಿಗೆ ಅಂಬಾಟಿ ರಾಯುಡುರನ್ನು ಆಡಿಸಬಹುದಿತ್ತು. ಅಥವಾ ನಾನು ಹಿಂದೊಮ್ಮೆ ನನ್ನ ಲೇಖನದಲ್ಲಿ ಹೇಳಿದ ಹಾಗೆ ಆಜಿಂಕ್ಯ ರಹಾನೆಯವರನ್ನು ಆಡಿಸಬಹುದಾಗಿತ್ತು. ರಹಾನೆ, ರಾಯುಡು ಹಾಗೂ ಇನ್ನೊಬ್ಬ ಆಟಗಾರ ರೈನಾ, ಮೂವರೂ ಸಹ ಇಂಗ್ಲೆಂಡ್‍ನಲ್ಲಿ ಅನುಭವ ಹೊಂದಿದ್ದಾರೆ. ಆದುದರಿಂದ ದಿನೇಶ್‍ರ ಆಯ್ಕೆ ನನಗೆ ಗೊಂದಲವಾಗಿಯೇ ಉಳಿದಿದೆ.
ದಿನೇಶ್ ಕಾರ್ತಿಕ್
ತಂಡದ ಹೆಚ್ಚುವರಿ ಆಟಗಾರರಲ್ಲಿ ಅಕ್ಷರ್ ಪಟೇಲ್‍ರನ್ನು ಆಯ್ಕೆ ಮಾಡಿದ್ದು ನನಗಷ್ಟು ಸಮಂಜಸವೆನಿಸಲಿಲ್ಲ. ಯಾಕೆಂದರೆ ಅಕ್ಷರ್ ಇತ್ತೀಚಿಗೆ ಭಾರತ ತಂಡದಲ್ಲಿ ಆಡಿಲ್ಲ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅವರೇನೂ ಅತ್ಯುತ್ತಮ ಫಾರ್ಮ್‍ನಲ್ಲಿಲ್ಲ. ಅವರ ಬದಲಿಗೆ ಈಗ ಇನ್ನಷ್ಟು ಪ್ರಬುದ್ಧರಾಗಿರುವ ರವಿಚಂದ್ರನ್ ಅಶ್ವಿನ್‍ರನ್ನು ಆಯ್ಕೆ ಮಾಡಬಹುದಾಗಿತ್ತು.
ಇನ್ನು ಇದೇ ಹೆಚ್ಚುವರಿ ಆಟಗಾರರಲ್ಲಿ ಆಯ್ಕೆಯಾಗಿರುವ ನವದೀಪ್ ಸೈನಿಯವರ ಬದಲಿಗೆ ದೀಪಕ್ ಚಹಾರ್ ಅಥವಾ ಅವರದ್ದೇ ರೀತಿಯ ಒಬ್ಬ ಸ್ವಿಂಗ್ ಬೌಲರ್‍ನ್ನು ಆಯ್ಕೆ ಮಾಡಬೇಕಾಗಿತ್ತು. ಯಾಕೆಂದರೆ ನವದೀಪ್ ವೇಗವಾಗಿ ಮಾತ್ರ ಬೌಲ್ ಮಾಡಬಲ್ಲರು. ಇಂಗ್ಲೆಂಡ್ ಕಂಡೀಷನ್‍ಗಳು ಹೆಚ್ಚಾಗಿ ಬೆಂಬಲ ನೀಡುವುದು ಸ್ವಿಂಗ್‍ಗೆ. ಹೀಗಾಗಿ ಭುವನೇಶ್ವರ್ ಕುಮಾರ್‍ಗೆ ತಕ್ಕ ಸಾಥ್ ಕೊಡಬಲ್ಲ ಒಬ್ಬ ಸ್ವಿಂಗ್ ವೇಗಿಯನ್ನು ಆಯ್ಕೆ ಮಾಡಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ.
ಒಟ್ಟಾರೆಯಾಗಿ ಇಲ್ಲಿಯ ತನಕ ಘೋಷಣೆಯಾಗಿರುವ ತಂಡಗಳಲ್ಲಿ ಭಾರತ ಒಂದು ಮಟ್ಟಿಗೆ ಅತ್ಯುತ್ತಮ ಬ್ಯಾಲೆನ್ಸ್ ಹೊಂದಿರುವ ತಂಡವಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಅತ್ಯಂತ ಉತ್ತಮ ಬೌಲಿಂಗ್ ಲೈನಪ್‍ಗಳನ್ನು ಕಟ್ಟಿಕೊಂಡಿವೆ ಹಾಗೂ ಇವೆರಡೂ ಲೈನಪ್‍ಗಳನ್ನು ಎದುರಿಸುವುದು ಇತರ ತಂಡಗಳಿಗೆ ದೊಡ್ಡ ಸವಾಲಾಗುವುದಂತೂ ಸರಿ. ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ನನ್ನ ಆಶಯ. ಈ ಆಶಯ ನಿಜವಾಗುತ್ತದಾ ಇಲ್ಲವಾ ಎಂಬುದು ನಾವು ನೋಡಬೇಕು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here