Homeಕರ್ನಾಟಕಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

ಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

1992 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡು ಅದು ಹೆಚ್ಚಾಗುತ್ತಾ ಇದ್ದು, ಈಗ ಹುಣ್ಣು ಆಗಿ, ಕೀವು ಆಗುತ್ತಿದೆ ಎಂದು ಅವರು ಹೇಳಿದರು

- Advertisement -
- Advertisement -

ಭಾಷೆಗಳು ಸಾಯುತ್ತಿದ್ದಾಗ ಭಾಷೆಗೆ ಸಂಬಂಧ ಪಟ್ಟಂತಹ ಸಂಘ-ಸಂಸ್ಥೆಗಳು ಏನು ಮಾಡುತ್ತಿವೆ ಎಂಬುವುದು ಬಹಳ ಮುಖ್ಯವಾದ ಪ್ರಶ್ನೆಯಾಗಿದ್ದು, ಕಾಟಾಚಾರಕ್ಕೆ ಯಾವುದೋ ಕಾರ್ಯಕ್ರಮಗಳನ್ನು ಮಾಡಿದರೆ ಅದನ್ನು ಬಹಿಷ್ಕರಿಸುವುದೇ ಸರಿ ಎಂದು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಜೆಎನ್‌ಯು ನಿವೃತ್ತ ಪ್ರಾದ್ಯಾಪಕ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಭಾನುವಾರ ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

“ಅಲ್ಲಿ ಹೋಗಿ ಏನು ಮಾಡುವುದಿದೆ? ಅಲ್ಲಿಗೆ ಹೋಗಬೇಕಾಗಿಲ್ಲ. ಹಾಗಾಗಿ ಜನಸಾಹಿತ್ಯ ಸಮ್ಮೇಳನದಂತಹ ಸಮಾವೇಶಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಲ್ಲಿ ಏರ್ಪಡಿಸುವುದರ ಜೊತೆಗೆ ಕರ್ನಾಟಕಕ್ಕೆ ಅತ್ಯಗತ್ಯವಾದ ಭಾಷಾ ನೀತಿಯನ್ನು ರೂಪಿಸುವ ಹಾಗೆ ಸರ್ಕಾರ, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮೇಲೆ ನಾವು ಒತ್ತಡ ಹಾಕಬೇಕಾಗಿದೆ” ಎಂದು ಅವರು ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚೆ ಮಾಡಲು ಸೂಕ್ತ ವೇದಿಕೆ ಇಲ್ಲ. ವಿಶ್ವವಿದ್ಯಾಲಯಗಳು, ಸರ್ಕಾರದಿಂದ ಅನುದಾನ ಪಡೆಯುವ ಇತರ ಅಕಾಡೆಮಿಗಳು ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಏನಾಗುತ್ತಿದೆ ಎಂಬುವುದನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಹೇಳಬೇಕಾಗಿತ್ತು. ಆದರೆ ಇಂದಿನ “ಹಾವೇರಿ ಸಾಹಿತ್ಯ ಸಮ್ಮೇಳನ ಕಾಟಾಚಾರದ ಸಮ್ಮೇಳನ”ಳಾಗಿವೆ. ಅವರು ಕರ್ನಾಟದ ಭವಿಷ್ಯವನ್ನು ಕಟ್ಟುವುದಕ್ಕೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಮಾರ್ಗದರ್ಶನ ಮಾಡಬಲ್ಲಂತಹ ಯಾವ ವಿಚಾರಗಳನ್ನು ಕೂಡಾ ಒಳಗೊಂಡಿಲ್ಲ ಎಂದು ಪ್ರೊ. ಬಿಳಿಮಲೆ ಹೇಳಿದರು.

2011 ರ ಜನಗಣತಿಯ ಪ್ರಕಾರ ಭಾರತದ ದೇಶದಲ್ಲಿ ತಾಯಿನುಡಿಗಳ ಸಂಖ್ಯೆ 19,659. ಇವುಗಳಲ್ಲಿ ನಮ್ಮ ದೇಶದ ಸಂವಿಧಾನ ಅಂಗೀಕರಿಸಿದ ಭಾಷೆಗಳು 22 ಆಗಿದೆ. ಈ 22 ಭಾಷೆಗಳಲ್ಲಿ ಉತ್ತರ ಭಾರತದ ಭಾಷೆಗಳು 18 ದಕ್ಷಿಣ ಭಾರತದ ಭಾಷೆಗಳು ಕೇವಲ 4. ಆದರೆ ಕರ್ನಾಟಕ ಒಂದರಲ್ಲೇ 72 ಭಾಷೆಗಳಿವೆ. ಇವುಗಳಲ್ಲಿ ಅನೇಕ ಭಾಷೆಗಳು ಅವಸಾನದತ್ತ ಚಲಿಸುತ್ತಾ ಇವೆ. 1871 ರಲ್ಲೇ 58 ಸಾವಿರದಷ್ಟು ಕೊರಗ ಭಾಷೆ ಮಾತನಾಡುತ್ತಿದ್ದ ಜನರ ಸಂಖ್ಯೆ 3 ಸಾವಿರಕ್ಕೆ ತಲುಪಿದೆ. ಅದಲ್ಲದೆ ಕೊರಗ ಸಮುದಾಯದ ಸಂಖ್ಯೆ ಕೂಡಾ 11 ಸಾವಿರಕ್ಕೆ ತಲುಪಿದೆ ಎಂದು ಅವರು ವಿಷಾದಿಸಿದರು.

ಕರ್ನಾಟಕದ ಜೀವ ಚೈತನ್ಯವಾಗಿದ್ದ ಭಾಷೆ ನಮ್ಮ ಮುಂದೆಯೆ ಪತನಮುಖಿಯಾಗುತ್ತಿದ್ದಾಗ ಪರಿಷತ್ತು ಹಾಗೂ ಅಕಾಡೆಮಿಗಳು ಇದರ ಬಗ್ಗ ಯೋಚನೆ ಮಾಡಿ ವಿದ್ವಾಂಸರನ್ನು ಕರೆಸಿ, ಚರ್ಚೆ ಮಾಡಿ ಈ ಭಾಷೆಯನ್ನು ಉಳಿಸುವ ಬಗೆ ಹೇಗೆ ಎಂಬುದಕ್ಕೆ ಸೂಕ್ತವಾದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕೊಟ್ಟು ಸರ್ಕಾರದಿಂದ ಅವುಗಳನ್ನು ಇಂಪ್ಲಿಮೆಂಟ್ ಆಗುವ ಹಾಗೆ ಮಾಡಬೇಕು. ಇವು ಸ್ವಾಯತ್ತ ಸಂಸ್ಥೆಗಳ ಕೆಲಸ. ಆದರೆ ಅಲ್ಲಿರುವವರು ಅವುಗಳನ್ನು ಮಾಡದೆ, ತಮಗೆ ಮಂತ್ರಿ ಪದವಿಯ ಸಮಾನವಾದ ಸ್ಥಾನಮಾನ ಬೇಕು ಎಂದು ಅದನ್ನು ಪತ್ರಿಕೆ ಹಾಗೂ ಲೆಟರ್‌ಹೆಡ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಹಿತಿಗಳು ಹಾಗೂ ಕಲಾವಿದರು ನಾಚಿಕೊಳ್ಳಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“2011 ಜನಗಣತಿಯ ಪ್ರಕಾರ ತುಳು, ಕೊಡವ, ಬಂಜಾರ ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೇಳುತ್ತಿವೆ. ಒಟ್ಟು 99 ಭಾಷೆಗಳು ಇವತ್ತು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೋರಾಟ ಮಾಡುತ್ತಿವೆ. ಉರ್ದು ವಿಚಾರ ಹೇಳಬೇಕಾದರೆ, ಅದು ಕರ್ನಾಟಕದ ದಖ್ಖನಿ ಭಾಷೆ. ಈಗ ಅದು ವಿಶ್ವದ ಭಾಷೆಯಾಗಿದೆ. ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಭಾಷೆ. ನಮ್ಮದಲ್ಲದ ಸಂಸ್ಕೃತ ಭಾಷೆ ಆಗುತ್ತದೆ, ಆದರೆ ನಮ್ಮದೆ ಭಾಷೆಯಾದ ಉರ್ದು ಯಾಕೆ ಆಗಬಾರದು? ಇವೆಲ್ಲವೂ ನಮ್ಮ ಸಣ್ಣತನ ಎಂದು ಅವರು ಹೇಳಿದರು.

ನಾನೇನು ಸಂಸ್ಕೃತದ ವಿರೋಧಿ ಏನಲ್ಲ. ಯಾಕೆಂದರೆ ಪಂಪ, ಪೊನ್ನ, ಕುಮಾರವ್ಯಾಸನನ್ನು ಓದಿದವರು ಹೇಗೆ ಸಂಸ್ಕೃತದ ಜೊತೆಗೆ ಸಂವಾದ ಬೆಳೆಸಿಕೊಂಡಿದ್ದೇವೆ ಎಂಬವುದು ನನಗೆ ಗೊತ್ತಿದೆ ಎಂದು ಪ್ರೊ. ಬಿಳಿಮಲೆ ತಿಳಿಸಿದರು.

ರಾಜ್ಯದಲ್ಲಿರುವ 72 ಭಾಷೆಗಳಲ್ಲಿ ಒಂದು ಭಾಷೆ ಸತ್ತರು ಕೂಡಾ ಕರ್ನಾಟಕ ಅಷ್ಟರ ಮಟ್ಟಿಗೆ ಬಡವಾಗುತ್ತದೆ. ಕರ್ನಾಟಕ ಎಂಬುವುದು ಅನೇಕ ಬಣ್ಣಗಳು ಒಂದು ರಂಗೋಲಿ. ಅದಕ್ಕೆ ಹೆಚ್ಚು ಹೆಚ್ಚು ಬಣ್ಣ ಹಾಕಿದಷ್ಟು ರಂಗೋಲಿ ಚಂದವಾಗಿ ಕಾಣುತ್ತದೆ ಎಂದು ಅವರು ತಿಳಿಸಿದರು.

90 ದಶಕದಲ್ಲಿ ಪ್ರಾರಂಭವಾದ ಜಾಗತೀಕರಣದ ನಂತರ ನಮ್ಮ ಬದುಕಿನಲ್ಲಿ ಅಮೂಲಗ್ರ ಬದಲಾವಣೆ ನಡೆಯಿತು. ಇದರ ನಂತರ 92 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡಿತು ಮತ್ತು ಇದು ಹೆಚ್ಚಾಗುತ್ತಾ ಇದೆ, ಅಲ್ಲದೆ ಅದೀಗ ಹುಣ್ಣು ಆಗುತ್ತಿದೆ, ಕೀವು ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ಹಾಗೂ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಲೇಖಕನ ಜವಾಬ್ದಾರಿ ಏನು ಎಂಬ ಪ್ರಶ್ನೆಯನ್ನು ಕರ್ನಾಟಕದ ಪ್ರತಿಯೊಬ್ಬ ಲೇಕನನಿಗೂ ಕೇಳಬೇಕು ಎಂದು ಅವರು ಕರೆ ನೀಡಿದರು.

ಗೀತಾ ಹರಿಹರ ಅವರು ಎಂಎಂ ಕಲಬುರ್ಗಿ ಅವರ ಸಾವನ್ನು ಇಟ್ಟುಕೊಂಡು ಒಂದು ಕಾದಂಬರಿ ಬರೆದಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಕನ್ನಡದಲ್ಲಿ ಯಾವ ಕತೆ ಅಥವಾ ಕಾದಂಬರಿ ಬಂದಿದೆ? ಸೃಜನಶೀಲ ಕೃತಿಗಳಲ್ಲಿ ಲೇಖಕರ ಜವಾಬ್ದಾರಿಯನ್ನು ಪುನರ್‌ವಿವೇಚಿಸಿ, ನಮ್ಮ ಚಿಂತನಾ ಕ್ರಮಗಳನ್ನು ಜನರ ಕಡೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಈ ಮೂಲಕ ನಮ್ಮ ಬರಹಗಳಿಗೆ ಚೈತ್ಯನ್ಯವನ್ನು ತಂದುಕೊಳ್ಳಬೇಕಾಗಿದೆ. ಇಲ್ಲವೆಂದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.

ಈಗ ಸಂಸ್ಕೃತಿಯ ಬಗ್ಗೆ ಅಪವ್ಯಾಖ್ಯಾನಗಳು ಹೆಚ್ಚಾದ್ದು, ಅವುಗಳೇ ನಂಬಿಕೆಯಾಗಿ, ನಿಜವಾದ ವ್ಯಾಖ್ಯಾನಗಳು ಹಿನ್ನಲೆಗೆ ಸರಿದಿವೆ. ಕರ್ನಾಟಕದ ‘ಕರ್ನಾಟ’ ಎಂಬುವುದರ ಹಳೆಯ ಶಬ್ಧ, ಆ ಕಾಲಗಟ್ಟದಲ್ಲಿ ಗುಲ್ಬರ್ಗದ ಸನ್ನತಿಯಿಂದ, ಕೊಪ್ಪಳದ ಗವೀಮಠದಿಂದ, ಮಸ್ಕಿಯಿಂದ, ಚಿತ್ರದುರ್ಗದಿಂದ, ಮಂಗಳೂರಿನ ಕದ್ರಿಯಿಂದ ಈ ಸಂಸ್ಕೃತಿಯ ಮೂಲಭೂತ ಗುಣಗಳನ್ನು ಕಟ್ಟಿದವರು ಬೌದ್ಧರಾಗಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಜನಪದ ಕಾವ್ಯದಲ್ಲಿ ಕಾಣುವ ಜ್ಯೋತ್ಯಪ್ಪ, ಬೆಳಕಪ್ಪ, ಅದು ಬೌದ್ಧ ಧರ್ಮದಿಂದ ಬಂದಿದೆ. ಆಮೇಲೆ ಕ್ರಿ.ಶ. 3 ನೇ ಶತಮಾನದಲ್ಲಿ ಬಿಹಾರದಿಂದ ವಲಸೆ ಬಂದಂತಹ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ನೆಲೆ ನಿಂತಿದ್ದು ಕರ್ನಾಟಕದಲ್ಲಿ. ಮುಂದೆ ಜಿನ ಧರ್ಮ ಕರ್ನಾಟಕದಲ್ಲಿ ಬೆಳೆಯಿತು. ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ, ರತ್ನಾಕರವರ್ಣಿ ಸೇರಿದಂತೆ ಕನ್ನಡ ಸಾಹಿತ್ಯವೆಂದರೆ ಅದು ಜೈನ ಸಾಹಿತ್ಯ ಎಂಬಂತೆ ಒಳಗೊಂಡಿತ್ತು. ಆಮೇಲೆ ಧಾರ್ಮಿಕವಾಗಿ ತಮಿಳುನಾಡಿನಿಂದ ಚೋಳರು ಓಡಿಸಿದ ರಾಮನುಜಾಚಾರ್ಯರಿಗೆ ನಾವು ಮೇಲುಕೋಟೆಯಲ್ಲಿ ನೆಲೆಕೊಟ್ಟೆವು ಎಂದು ಅವರು ತಿಳಿಸಿದರು.

ಉತ್ತರದ ಬಿಹಾರದಿಂದ ಬಂದ ಸುರೇಶಾಚಾರ್ಯರು ಶೃಂಗೇರಿಯಲ್ಲಿ ನೆಲೆನಿಂತರು. ದ್ವೈತವನ್ನು ನಾವು ಒಳಗೊಂಡಿದ್ದೇವೆ. ಕ್ರಿಶ್ಚಿಯನ್ನರು ಆ ಕಾಲದಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿದರು. ಆ ಕಾಲದಲ್ಲಿ ಅವರು ಶಾಲೆಗಳನ್ನು ಆರಂಭ ಮಾಡದೆ ಇದ್ದರೆ ನಾನು  ಈಗ ಈ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಮುನ್ನೂರು ವರ್ಷಗಳ ಬಿಜಾಪುರದ ಸುಲ್ತಾನರು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಚನ ಚಳವಳಿ ಬಂತು. ಇವೆಲ್ಲವೂ ನಮ್ಮ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಬೇರೆ ರಾಜ್ಯಗಳಿಗಿಂತ ಕರ್ನಾಟಕ 72 ಭಾಷೆಗಳನ್ನು ಒಳಗೊಂಡಿದೆ. ಇದು ನಮ್ಮ ರಾಜ್ಯ ಒಳಗೊಳ್ಳುವ ಗುಣವನ್ನು ಹೇಳುತ್ತದೆ. ಈ ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ನಮ್ಮ ಪರಂಪರೆಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ. ಯಾರು ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೋ ಅವರು ಪರಂಪರೆಯ ದುಷ್ಕೃತ್ಯಗಳನ್ನು ಹೇಳುತ್ತಿದ್ದರೆ, ನಾವು ಪರಂಪರೆಯಲ್ಲಿರವ ಒಳ್ಳೆಯ ಗುಣಗಳನ್ನು ಹೇಳಬೇಕು. ಅದಕ್ಕಾಗಿ ನಾವು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಕುವೆಂಪು ಅವರು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಒಳಗೊಳ್ಳುವ ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಪ್ರತಿರೋಧಿಸುತ್ತಾ, ಜಾಗತಿಕವಾಗಿ ಭಾಷೆ ಎದುರಿಸುವ ಸಮಸ್ಯೆಗಳನ್ನು ಅರಿತು ಮುನ್ನಡೆಯಬೇಕಿದೆ ಎಂದು ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...