Homeಮುಖಪುಟಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದರೆ ಕೇರಳದಲ್ಲಿ ‘NYAY’ ಪ್ರಯೋಗ: ರಾಹುಲ್ ಗಾಂಧಿ

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆದ್ದರೆ ಕೇರಳದಲ್ಲಿ ‘NYAY’ ಪ್ರಯೋಗ: ರಾಹುಲ್ ಗಾಂಧಿ

ನ್ಯಾಯ್ ಯೋಜನೆಯಂತೆ ವರ್ಷಕ್ಕೆ 72,000 ರೂ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತದೆ ಎನ್ನಲಾಗಿದೆ.

- Advertisement -
- Advertisement -

ನೀವು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ತಂದರೆ ಪ್ರಸ್ತಾವಿತ ಕನಿಷ್ಠ ಆದಾಯ ಖಾತರಿ ಯೋಜನೆ- ‘NYAY’ (ನ್ಯಾಯುತ್ತಮ್ ಆಯ್ ಯೋಜನಾ) ಅನ್ನು ಕೇರಳ ರಾಜ್ಯದಲ್ಲಿ ಪ್ರಯೋಗಕ್ಕೆ ತರಲಾಗುವುದು ಎಂದು ಮಂಗಳವಾರ ರಾಹುಲ್ ಗಾಂಧಿ ಭರವಸೆ ನೀಡಿದರು.

ಕಳೆದ 50 ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಪ್ರತಿನಿಧಿಸುವ ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರದ ಮನಾರ್‌ಕಾಡ್‌ನಲ್ಲಿ ಆಯೋಜಿಸಿದ್ದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇದನ್ನು ಪರೀಕ್ಷಿಸಲು ನನಗೆ ಸ್ವಾರ್ಥ ಕಾರಣವಿದೆ ಎಂದಿದ್ದಾರೆ.

ಚಾಂಡಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರೊಂದಿಗೆ ತೆರೆದ ಪ್ರಚಾರ ವಾಹನದಲ್ಲಿ ಮಾತನಾಡಿದ ಅವರು, ಯೋಜನೆಯ ಯಶಸ್ಸಿನ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದರು

“ವರ್ಷಕ್ಕೆ 72,000 ರೂ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತದೆ. ಮತ್ತು ಮುಂದೆ ಏನಾಗಲಿದೆ ಎಂದು ನಮಗೆ ತಿಳಿದಿದೆ. ನಾವು ಕೇರಳದಲ್ಲಿ ಹೊಸ ಆಲೋಚನೆಯನ್ನು ಪರೀಕ್ಷಿಸುತ್ತಿದ್ದೇವೆ” ಹೇಳಿದ್ದಾರೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ವಿಚಾರವನ್ನು ರೂಪಿಸಿದ ಗಾಂಧಿ, ಬಡತನದ ಮೇಲಿನ ಅಂತಿಮ ದಾಳಿಯ ಆರಂಭವನ್ನು ಸೂಚಿಸುವ ಈ ಯೋಜನೆಯನ್ನು ಅಪ್ರತಿಮ (ಗ್ರೌಂಡ್ ಬ್ರೇಕಿಂಗ್) ಎಂದು ಬಣ್ಣಿಸಿದ್ದರು.

ಆದರೆ, ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ‘ನ್ಯಾಯ್’ ಭರವಸೆಯನ್ನು ಎತ್ತಿ ತೋರಿಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ವಿಫಲವಾಗಿತ್ತು.

ಈ ಯೋಜನೆಯನ್ನು ಕೇರಳದಲ್ಲಿ “ಪರೀಕ್ಷಿಸಲು” ಬಯಸಿದ್ದೇನೆ. ಅದು ಕೇರಳದಲ್ಲಿ ಸರಿಯಾಗಿ ಸ್ವೀಕಾರಾರ್ಹವಾದರೆ, ದೇಶದ ಎಲ್ಲಾ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿಯೂ ಅದನ್ನು ಪುನರಾವರ್ತಿಸಲು ಬಯಸುತ್ತೇನೆ ಎಂದು ರಾಹುಲ್ ಹೇಳಿದರು.

“ಇದು ಸಂಭವಿಸಿದರೆ, ಕೇರಳವು ಬಡತನದ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಕುರಿತು ಭಾರತದ ಉಳಿದ ಭಾಗಗಳಿಗೆ ತೋರಿಸಲಿದೆ” ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಇಲ್ಲಿನ ಪರುತುಂಪಾರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, “ನಾವು ಹಲವಾರು ದಿನಗಳಲ್ಲಿ ಸರ್ಕಾರ ರಚಿಸಿದಾಗ ಮೊದಲಿಗೆ ನ್ಯಾಯ್ ಯೋಜನೆಯನ್ನು ಆರಂಭಿಸಲಿದ್ದೇವೆ’ ಎಂದು ಹೇಳಿದರು. ಸೋಮವಾರ ನಡೆದ ಚುನಾವಣಾ ಪ್ರಚಾರದ ವೇಳೆಯೂ ನ್ಯಾಯ್ ಯೋಜನೆಗೆ ಅವರು ನೀಡುವ ಮಹತ್ವವನ್ನು ಒತ್ತಿಹೇಳಿದ್ದರು.

‘ಇದನ್ನೇನೂ ಒಂದು ರೀತಿಯ ದಾನಧರ್ಮವಾಗಿ ಮಾಡಲು ಹೋಗುವುದಿಲ್ಲ. ಇದು ದಾನವಲ್ಲ. ನಾವು ನಿಮಗೆ ನ್ಯಾಯಯುತವಾಗಿ ನ್ಯಾಯ್ ಮೂಲಕ ಹಣವನ್ನು ನೀಡುತ್ತಿದ್ದೇವೆ.. ನಾವು ಹಣವನ್ನು ನಿಮ್ಮ ಜೇಬಿನಲ್ಲಿ ಇಡುತ್ತಿದ್ದೇವೆ. ಆದ್ದರಿಂದ ನೀವು ಹಣವನ್ನು ಖರ್ಚು ಮಾಡಬಹುದು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯೀಕರಣ, ಅವರ ದೋಷಪೂರಿತ ಜಿಎಸ್‌ಟಿ ಅನುಷ್ಠಾನ ಮತ್ತು ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ “ಕುಸಿದ” ಭಾರತೀಯ ಆರ್ಥಿಕತೆಯನ್ನು ಉನ್ನತೀಕರಿಸುವ ಏಕೈಕ ಮಾರ್ಗ ನ್ಯಾಯ್ ಆಗಿದೆ ಎಂದು ರಾಹುಲ್ ಹೇಳಿದ್ದಾರೆ.

ಏಪ್ರಿಲ್ 6 ರ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯಲ್ಲಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೃಹಿಣಿಯರಿಗೆ 2000 ರೂ ‘ಪಿಂಚಣಿ’, ‘ನ್ಯಾಯ ಯೋಜನೆ’ ಅಡಿಯಲ್ಲಿ ಬಡವರಿಗೆ ವಾರ್ಷಿಕವಾಗಿ 72,000 ರೂ. ಮತ್ತು ದೀನದಲಿತರಿಗೆ ಐದು ಲಕ್ಷ ಮನೆಗಳ ನಿರ್ಮಾಣದ ಭರವಸೆ ನೀಡಿದೆ.


ಇದನ್ನೂ ಓದಿ: ರಾಹುಲ್‍ಗಾಂಧಿಯ `ನ್ಯಾಯ್’ ಸ್ವಾಗತಾರ್ಹ. ಆದರೆ, ಕೇಳಲೇಬೇಕಾದ ಪ್ರಶ್ನೆಗಳಿವೆ…..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...