Homeಮುಖಪುಟಮುಸ್ಲಿಂ ಬಾಲಕಿಯ ಅಪಹರಣ; ಆರ್‌ಎಸ್ಎಸ್‌ ಮುಖಂಡ ಸೇರಿ ಐವರ ಬಂಧನ

ಮುಸ್ಲಿಂ ಬಾಲಕಿಯ ಅಪಹರಣ; ಆರ್‌ಎಸ್ಎಸ್‌ ಮುಖಂಡ ಸೇರಿ ಐವರ ಬಂಧನ

- Advertisement -
- Advertisement -

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್ಎಸ್‌) ಮುಖಂಡ ಸೇರಿದಂತೆ ಐವರನ್ನು ಮುಸ್ಲಿಂ ಬಾಲಕಿಯ ಅಪಹರಣ ಆರೋಪದ ಮೇಲೆ ತ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಆರ್‌ಎಸ್‌ಎಸ್ ಸಂಘಟನೆಯ ಸ್ಥಳೀಯ ಮುಖಂಡ ತಾಪನ್ ದೇಬ್ನಾಥ್ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಸೆಪಹಿಜಾಲ ಜಿಲ್ಲೆಯ ಬಿಷಾಲ್ ಘರ್‌ನ ಚಿರಿಲಾಮ್ ನಿಂದ ಬಾಲಕಿಯನ್ನು ಅಪರಿಸಲಾಗಿದೆ.

16 ವರ್ಷಗಳ ಮುಸ್ಲಿಂ ಬಾಲಕಿಯನ್ನು ಬಿಷಾಲ್ ಘರ್ ಭಾಗದ ಚಂಡದ್ತಿಲ್ನ 23 ವರ್ಷದ ಯುವಕ ಸುಮನ್ ಸರ್ಕಾರ್ ಅಪರಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಕಾರ್ ಅವರನ್ನು ಬಂಧಿಸಿದ ಬಳಿಕ ಇಲ್ಲಿನ ಆಗರ್ತಲ ಪ್ರಾಂತ್ಯದ ಇಂದ್ರನಗರ ನಿವಾಸಿ, ಆರ್.ಎಸ್.ಎಸ್. ಮುಖಂಡ ತಾಪೇನ್ ದೇಬ್ನಾಥ್ ಅವರನ್ನು ಬಂಧಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಿಂದೂ ಧರ್ಮಕ್ಕೆ ಮತಾಂತರಿಸಿ ಸುಮನ್ ಸರ್ಕಾರ್ ಬಾಲಕಿಯನ್ನು ವಿವಾಹವಾಗಿದ್ದಾನೆ ಎಂದು ವರದಿಯಾಗಿದೆ. ಘಟನೆಯಲ್ಲಿ ದೇಬ್ನಾಥ್‌ ಮತ್ತು ಚಂದ್ರಶೇಖರ್ ಕಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಪಾತ್ರ ವಹಿಸಿದ ಐವರನ್ನು ಬಂಧಿಸಲಾಗಿದ್ದು, ಯುವಕ ಹಾಗೂ ಬಾಲಕಿ ಪತ್ತೆಯಾಗಿಲ್ಲ ಎಂದು ಸೆಪಹಿಜಾಲ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಬೆಂಡು ಚಕ್ರಭರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ’ಸಬಿಯಾ’ ಹೆಣ್ಣಲ್ಲವೇ?: ಅತ್ಯಾಚಾರ, ಕೊಲೆಗೆ ಮೌನ ತಾಳಿದ ಸಮಾಜಕ್ಕೆ ಪ್ರಜ್ಞಾವಂತರ ಪ್ರಶ್ನೆ

ಬಾಲಕಿ ಅಪಹರಣವಾದ ಒಂದು ದಿನದ ಬಳಿಕ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮವನ್ನು ಮೊದಲು ಕೈಗೊಂಡಿರಲಿಲ್ಲ. ನಂತರ ಹೈಕೋರ್ಟ್‌ನಲ್ಲಿ ದೂರ ದಾಖಲಿಸಿದ್ದರು. ಸೆಪ್ಟೆಂಬರ್ 2ರೊಳಗೆ ಬಾಲಕಿಯನ್ನು ಪತ್ತೆಹಚ್ಚಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು. ಆದರೆ ನಿಗದಿತ ಅವಧಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸೋತಿದ್ದರು. ತ್ರಿಪುರ ಹೈಕೋರ್ಟ್ ಹೆಬಿಯಸ್ ಕಾರ್ಪಸ್‌ ರಿಟ್ ನೋಂದಾಯಿಸಿತು. ಸೆ.7ರೊಳಗೆ ಬಾಲಕಿಯನ್ನು ಪತ್ತೆ ಹಚ್ಚುವಂತೆ ಕೋರ್ಟ್ ಸೂಚಿಸಿತ್ತು. ಪೊಲೀಸರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...