Homeಅಂತರಾಷ್ಟ್ರೀಯಕೊರೊನಾ ನಿಯಂತ್ರಣ: WHO ವಿರುದ್ಧದ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

ಕೊರೊನಾ ನಿಯಂತ್ರಣ: WHO ವಿರುದ್ಧದ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

- Advertisement -
- Advertisement -

ಕೊರೊನಾ ಸಾಂಕ್ರಾಮಿಕದ ನಿಯಂತ್ರಣಯಕ್ಕೆ ಸಂಬಂಧಿಸಿದಂತೆ ಇದುವರೆಗು WHO ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ವತಂತ್ರ ವಿಚಾರಣೆಗೆ ಕರೆ ನೀಡಲಾಗಿದ್ದು, ಇದಕ್ಕೆ ಇಂದಿನಿಂದ ಪ್ರಾರಂಭವಾಗುವ 73 ನೇ ವಿಶ್ವ ಆರೋಗ್ಯ ಅಸೆಂಬ್ಲಿ (ಡಬ್ಲ್ಯುಎಚ್‌ಎ) ಸಭೆಯಲ್ಲಿ ಪ್ರಸ್ತಾಪಿಸಲಾದ ಕರಡು ನಿರ್ಣಯದ ಪ್ರಕಾರ ಭಾರತ ಸೇರಿದಂತೆ 62 ದೇಶಗಳು ಬೆಂಬಲ ಸೂಚಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಮಾರ್ಗಸೂಚಿಗಳು ಕೊರೊನಾ ಸಾಂಕ್ರಾಮಿಕವನ್ನು ಕಾಲಮಿತಿಗಳೊಳಗೆ ತಡೆಯಲು ಎಷ್ಟು ಸಹಕಾರಿಯಾಗಿದೆ ಅಥವಾ ಇಲ್ಲ ಎಂಬುದರ ಬಗ್ಗೆ “ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ” ತನಿಖೆ ನಡೆಸಬೇಕೆಂದು ಕರಡು ಹೇಳುತ್ತದೆ.

ಆರಂಭಿಕವಾಗಿ ಅಂತರರಾಷ್ಟ್ರೀಯ ಆರೋಗ್ಯದ ಕುರಿತಂತೆ WHO ನ ಸಂಘಟಿತ ಪ್ರತಿಕ್ರಿಯೆಯಿಂದ ಕಲಿತ ಪಾಠಗಳನ್ನು ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಬಳಸುವುದು ಸೇರಿದಂತೆ, ಸೂಕ್ತವಾದ ಅನುಭವವನ್ನು ಪಡೆದುಕೊಳ್ಳುವುದು ಮತ್ತು ಪಡೆದ ಅನುಭವವನ್ನು ಪರಿಶೀಲಿಸಲು ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನದ ತನಿಖೆ ಅಗತ್ಯವಿದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾ ಹಾಗೂ ಯುರೋಪಿಯನ್ ರಾಷ್ಟ್ರಗಳು ಕೊರೊನಾಗೆ WHO ವಿರುದ್ಧದ ತನಿಖೆಗೆ ಇತರ ರಾಷ್ಟ್ರಗಳ ಬೆಂಬಲವನ್ನು ಯಾಚಿಸಿವೆ. ಕಳೆದ ತಿಂಗಳು, ಕೊರೊನಾ ವೈರಸ್ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ ಸ್ವತಂತ್ರ ವಿಚಾರಣೆಗೆ ಕರೆ ನೀಡಿದ ಮೊದಲ ದೇಶ ಆಸ್ಟ್ರೇಲಿಯಾವಾಗಿದೆ.

ಯುರೋಪಿಯನ್ ಯುನಿಯನ್ ಬೆಂಬಲಿತ ಕರಡಿನಲ್ಲಿ ಇತರ ಪ್ರಮುಖ ದೇಶಗಳಾದ ಜಪಾನ್, ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಕೆನಡಾ ಸೇರಿವೆ.


ಓದಿ: ರಾಹುಲ್‌ ಗಾಂಧಿ ಗಟ್ಸ್‌ ಪರೀಕ್ಷಿಸಿಲು ಹೋಗಿ ಅಪಹಾಸ್ಯಕ್ಕೊಳಗಾದ TV9 ರಂಗನಾಥ್ ಭಾರದ್ವಾಜ್!


ವಿಡಿಯೊ ನೋಡಿ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡ ರೈತರಿಗೆ ೨೦ ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಸಿಕ್ಕಿದ್ದು ಏನು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...