Homeಅಂತರಾಷ್ಟ್ರೀಯಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಭಾರತ, ಯುಎಇ ಜಂಟಿಯಾಗಿ ಕರೆ

ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಭಾರತ, ಯುಎಇ ಜಂಟಿಯಾಗಿ ಕರೆ

- Advertisement -
- Advertisement -

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಗಾಝಾ ಪಟ್ಟಿಯಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಜಂಟಿಯಾಗಿ ಕರೆ ನೀಡಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಬುಧವಾರ ಸಂಜೆ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ.

ಗಾಝಾದಲ್ಲಿ ಕದನವಿರಾಮಕ್ಕೆ ಆಗ್ರಹಿಸಿ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಯುಎಇ ಅಧ್ಯಕ್ಷರು ಗುಜರಾತ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದರು ಮತ್ತು ಎರಡು ದಿನಗಳ ಅಧಿಕೃತ ಭೇಟಿಯನ್ನು ಮುಗಿಸಿದ ನಂತರ ಅವರು ಬುಧವಾರ ಭಾರತದಿಂದ ನಿರ್ಗಮಿಸಿದ್ದರು.

ಉಭಯ ರಾಷ್ಟ್ರಗಳ ನಡುವಿನ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ ಮತ್ತು ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಉಭಯ ನಾಯಕರು ಮಾತುಕತೆ ನಡೆಸಿದರು ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಕುರಿತು ವಿಶ್ವಸಂಸ್ಥೆಯ (ಯುಎನ್) ಭದ್ರತಾ ಮಂಡಳಿಯ ನಿರ್ಣಯ ಪ್ರಸ್ತಾಪಿಸಿದ್ದಕ್ಕೆ ಯುಎಇ ನಾಯಕತ್ವವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಈ  ಜಂಟಿ ಹೇಳಿಕೆಯು ಭಾರತ-ಯುಎಇ ಜಂಟಿ ಸಹಭಾಗಿತ್ವದ ಹಲವಾರು ಅಂಶಗಳನ್ನು ಹೊಂದಿದೆ, ಇದರಲ್ಲಿ ಎರಡು ದೇಶಗಳ ಸರ್ಕಾರದ ಮುಖ್ಯಸ್ಥರು ಸಹಿ ಮಾಡಿದ ತಿಳುವಳಿಕೆ ಪತ್ರಗಳ ಟಿಪ್ಪಣಿಯೂ ಸೇರಿದೆ. ಮೋದಿ ಮತ್ತು ಅಲ್ ನಹ್ಯಾನ್ ಇಬ್ಬರೂ ದ್ವಿಪಕ್ಷೀಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ. ಗಾಝಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಯುಎಇ ಉಲ್ಲೇಖಿಸಿದೆ.

ಗಾಜಾದ ಜನರಿಗೆ ಯಾವುದೇ ಅಡೆತಡೆಯಿಲ್ಲದ ಮಾನವೀಯ ನೆರವು  ಮತ್ತು ಕದನ ವಿರಾಮವನ್ನು ಬೆಂಬಲಿಸುವ ನಿರ್ಧಾರವನ್ನು ಎರಡೂ ದೇಶಗಳು ಜಂಟಿಯಾಗಿ ಬೆಂಬಲಿಸಿದೆ.

ಈ ಮೊದಲು ಗಾಝಾ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಿ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತ ಹಾಕಿತ್ತು. ನ್ಯೂಯಾರ್ಕ್‌ನಲ್ಲಿ ಮಂಗಳವಾರ ನಡೆದ ವಿಶ್ವಸಂಸ್ಥೆಯ 10ನೇ ತುರ್ತು ವಿಶೇಷ ಅಧಿವೇಶದಲ್ಲಿ ಸುಮಾರು 80% ಸದಸ್ಯ ರಾಷ್ಟ್ರಗಳು ” ಗಾಝಾದ ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ನೆರವನ್ನು ಎತ್ತಿಹಿಡಿಯುವ” ನಿರ್ಣಯದ ಪರವಾಗಿ ಮತ ಚಲಾಯಿಸಿವೆ.

ಕಳೆದ ಅಕ್ಟೋಬರ್‌ನಲ್ಲಿ ಗಾಝಾದಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದ ವಿಶ್ವಸಂಸ್ಥೆಯ ನಿರ್ಣಯದ ಮತದಾನಕ್ಕೆ ಗೈರು ಹಾಜರಾದ 45 ರಾಷ್ಟ್ರಗಳಲ್ಲಿ ಭಾರತವೂ ಸೇರಿತ್ತು. ಅಕ್ಟೋಬರ್ 26ರಂದು ಮಂಡಿಸಿದ ಈ ನಿರ್ಣಯದ ಪರವಾಗಿ 120 ಮತ್ತು ವಿರುದ್ಧವಾಗಿ 14 ರಾಷ್ಟ್ರಗಳು ಮತ ಹಾಕಿತ್ತು.

ಇದನ್ನು ಓದಿ: ‘ಶಾಸ್ತ್ರ’ಗಳಿಗೆ ವಿರುದ್ಧವಾಗಿ ‘ರಾಮಮಂದಿರ’ದ ಪ್ರಾಣ ಪ್ರತಿಷ್ಠಾನ: ಹಿಂದೂ ಮಠಾಧೀಶರ ಆರೋಪ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...