Homeಮುಖಪುಟಫ್ಯಾಕ್ಟ್‌ಚೆಕ್‌: ದೆಹಲಿಯ ರಘುಬೀರ್ ನಗರದ ಪ್ರಕರಣ ಕೋಮು ದ್ವೇಷವೇ?

ಫ್ಯಾಕ್ಟ್‌ಚೆಕ್‌: ದೆಹಲಿಯ ರಘುಬೀರ್ ನಗರದ ಪ್ರಕರಣ ಕೋಮು ದ್ವೇಷವೇ?

ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯ ಅಮಿತ್ ದೀಕ್ಷಿತ್ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಟ್ವೀಟ್ ಲೇಖನವನ್ನು ಪ್ರಕಟಿಸುವ ಸಮಯದಲ್ಲಿ 3,600 ರಿಟ್ವೀಟ್ ಗಳಿಸಿದೆ.

- Advertisement -
- Advertisement -

ಪಶ್ಚಿಮ ದೆಹಲಿಯ ರಘುಬೀರ್ ನಗರದಲ್ಲಿ ಇಬ್ಬರು ಹುಡುಗರು ಒಬ್ಬ ವ್ಯಕ್ತಿಯನ್ನು ಇರಿದಿದ್ದಾರೆ ಎಂದು ತೋರಿಸುವ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣದ ಆರೋಪಿ ಬಾಲಾಪರಾಧಿಗಳು, ಮುಸ್ಲಿಮರು ಎಂಬ ಕೋಮು ಸಾಮರಸ್ಯವನ್ನು ಹಾಳುಗೆಡಹುವ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗಿದೆ.

ಆದರೆ ದಿ ಕ್ವಿಂಟ್ ಜೊತೆ ಮಾತನಾಡಿದ ದೆಹಲಿ ಪೊಲೀಸ್ ಹೆಚ್ಚುವರಿ ಪಿ ಆರ್ ಒ ಅನಿಲ್ ಮಿತ್ತಲ್ ಈ ಘಟನೆಗೆ, ಕೋಮು ದ್ವೇಷವನ್ನು ಹೆಣೆಯಲಾಗುತ್ತಿದೆ. ಆರೋಪಿ ಮತ್ತು ಬಲಿಪಶು ಒಂದೇ ಸಮುದಾಯಕ್ಕೆ ಸೇರಿದವರು ಎಂದು ದೃಢಪಡಿಸಿದ್ದಾರೆ.

ವೈರಲ್ ವೀಡಿಯೋದಲ್ಲಿ “ದೆಹಲಿಯ ಮಡಿಪುರದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮೂವರು ಬಾಲಾಪರಾಧಿ ಜಿಹಾದಿಗಳು ಒಬ್ಬ ವ್ಯಕ್ತಿಯನ್ನು ಇರಿದು ಕೊಂದಿದ್ದಾರೆ. ಜಾತಿವಾದದಿಂದಾಗಿ ನಾವು ಸಾಯುತ್ತಿದ್ದೇವೆ, ಅಲ್ಲಿ ಈ ‘ಶಾಂತಿ ಧೂತರು’ ಉತ್ತಮ ತರಬೇತಿ ಪಡೆಯುತ್ತಿದ್ದಾರೆ” ಎಂದು ಬರೆಯಲಾಗಿದೆ.

ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯ ಅಮಿತ್ ದೀಕ್ಷಿತ್ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಟ್ವೀಟ್ ಲೇಖನವನ್ನು ಪ್ರಕಟಿಸುವ ಸಮಯದಲ್ಲಿ 3,600 ರಿಟ್ವೀಟ್ ಗಳಿಸಿದೆ.

ಹಲವಾರು ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಆದರೆ ಇಲ್ಲಿ ಆರೋಪಿಗಳು ಮತ್ತು ಸಂತ್ರಸ್ತ್ರ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಮುದ್ವೇಷ ಹರಡಬಾರದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಬಿಜೆಪಿ ಧ್ವಜವನ್ನು ಬ್ರಾಹ್ಮಣರು ಸುಟ್ಟು ಹಾಕಿದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಫ್ಯಾಕ್ಟ ಚೆಕ್ ನಲ್ಲಿ ಬರುವ ಸುದ್ದಿಗಳು ಪ್ರಸ್ತುತ ಈಗಿನ ಘಟನೆಗಳಲ್ಲ, ಬಹಳ ಹಿಂದೆ ನಡೆದಿರುವ ಬೇರೆ ಬೇರೆ ಘಟನೆಗಳಿಗೆ ಸಂಬಂಧ ಪಟ್ಟಿದ್ದು ಎಂದು ತಿಳಿದಾಗ್ಯು ಏಕೆ ಈ ತಪ್ಪು ವಿಷಯ ಹರಡಿದವರ ಮೇಲೆ ಕ್ರಮ ಜರುಗಿಸುವುದಿಲ್ಲ. ಕೆಲವೊಮ್ಮೆ ಕೊಮುಸೌಹಾರ್ದತೆಯನ್ನು ಕೆಡಿಸುವ ಉದ್ಧೆಶದಿಂದಲೂ ಇಂತಹ ಕಾರ್ಯಗಳೂ ನಡೆಯುತ್ತವೆ ಅನಿಸುತ್ತದೆ.
    ಒಂದು ವೇಳೆ ಫ್ಯಾಕ್ಟ ಚೆಕ್ ಇಲ್ಲದೇ ಇದ್ದ ಪಕ್ಷದಲ್ಲಿ ಸಾಮಾನ್ಯರು ಜನರು ಅದನ್ನೇ ನಿಜವೆಂದು ನಂಬುವುದಿಲ್ಲವೆ.

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...