Homeಮುಖಪುಟಸ್ಟ್ರೆಚ್ಚರ್‌ ತಳ್ಳಲು 30ರೂ ಲಂಚ ಬೇಡಿಕೆ; ತಾತನ ಸ್ಟ್ರೆಚ್ಚರ್‌ ತಳ್ಳಿದ 6 ವರ್ಷದ ಬಾಲಕ!

ಸ್ಟ್ರೆಚ್ಚರ್‌ ತಳ್ಳಲು 30ರೂ ಲಂಚ ಬೇಡಿಕೆ; ತಾತನ ಸ್ಟ್ರೆಚ್ಚರ್‌ ತಳ್ಳಿದ 6 ವರ್ಷದ ಬಾಲಕ!

ಪ್ರತಿ ಬಾರಿ ಡ್ರೆಸ್ಸಿಂಗ್‌ಗೆ ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ 30 ರೂಪಾಯಿ ಕೇಳುತ್ತಿದ್ದು, ಸಿಬ್ಬಂದಿಗೆ ಹಣ ನೀಡಲು ಒಪ್ಪದಿದ್ದಾಗ ಚೆಡಿಯನ್ನು ಡ್ರೆಸ್ಸಿಂಗ್‌ಗೆ ಕರೆದೊಯ್ಯಲು ನಿರಾಕರಿಸಿದರು ಎಂದು ಬಿಂದು ದೇವಿ ಹೇಳಿದ್ದಾರೆ.

- Advertisement -
- Advertisement -

ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ 6 ವರ್ಷದ ಮಗು ತನ್ನ ತಾತನನ್ನು ಸ್ಟ್ರೆಚ್ಚರ್‌ನಲ್ಲಿ ಮಲಗಿಸಿ ತಳ್ಳಿಕೊಂಡು ಹೋಗುವ ಅಘಾತಕಾರಿ ವೀಡಿಯೊ ವೈರಲಾಗಿದ್ದು, ದೇಶದಾದ್ಯಂತ ಭಾರೀ ಆಕ್ರೋಶ ಹುಟ್ಟಿಸಿದೆ.

ರೋಗಿಯ ಡ್ರೆಸ್ಸಿಂಗ್‌ ಮಾಡಿಸಲು ಸ್ಟ್ರೆಚ್ಚರ್‌ ಅನ್ನು ತಳ್ಳಲು ಆಸ್ಪತ್ರೆಯ ಸಿಬ್ಬಂದಿಯು 30ರೂ ಲಂಚ ಕೇಳಿದ್ದರಿಂದ ರೋಗಿಯ ಮಗಳು ಮತ್ತು ಆಕೆಯ ಆರು ವರ್ಷದ ಮಗು ಸೇರಿ ಸ್ಟ್ರೆಚ್ಚರ್‌ ನೂಕಿಕೊಂಡು ಹೋಗಿದ್ದಾರೆ.

ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಸಂಬಂಧಪಟ್ಟ ನೌಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

ಡ್ರೆಸ್ಸಿಂಗ್ ಮಾಡಿಸುವ ಸಲುವಾಗಿ ಸ್ಟ್ರೆಚರ್ ತಳ್ಳಲು 30 ರೂ ಲಂಚ ಕೇಳಿದ ಸಿಬ್ಬಂದಿ. ಲಂಚ ಕೊಡಲು ಹಣವಿಲ್ಲದೇ ತನ್ನ 6 ವರ್ಷದ ಮಗ ಶಿವಂ ಯಾದವ್…

Posted by Naanu Gauri on Tuesday, July 21, 2020

ಘಟನೆ ಏನು ?

ಉತ್ತರ ಪ್ರದೇಶದ ಡಿಯೋರಿಯಾದ ಬರ್ಹಾಜ್ ಪ್ರದೇಶದ ಗೌರಾ ಗ್ರಾಮದ ನಿವಾಸಿ ಚೆಡಿ ಯಾದವ್ ಗಾಯಗೊಂಡಿದ್ದು, ಅವರನ್ನು ಡಿಯೋರಿಯಾ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಚೆಡಿ ಯಾದವ್ ಪುತ್ರಿ ಬಿಂದುದೇವಿ ಮೂರು ನಾಲ್ಕು ದಿನಗಳಿಂದ ತಂದೆಯೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿದ್ದು, ತನ್ನ ತಂದೆಯನ್ನು ಗಾಯದ ಡ್ರೆಸ್ಸಿಂಗ್‌ಗಾಗಿ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಬೇಕಾಗಿತ್ತು.

ಆದರೆ ಪ್ರತಿ ಬಾರಿ ಡ್ರೆಸ್ಸಿಂಗ್‌ಗೆ ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ 30 ರೂಪಾಯಿ ಕೇಳುತ್ತಿದ್ದು, ಸಿಬ್ಬಂದಿಗೆ ಹಣ ನೀಡಲು ಒಪ್ಪದಿದ್ದಾಗ ಚೆಡಿಯನ್ನು ಡ್ರೆಸ್ಸಿಂಗ್‌ಗೆ ಕರೆದೊಯ್ಯಲು ನಿರಾಕರಿಸಿದರು ಎಂದು ಬಿಂದು ದೇವಿ ಹೇಳಿದ್ದಾರೆ.

ನಂತರ ಬಿಂದು ತನ್ನ ಆರು ವರ್ಷದ ಮಗು ಶಿವಂ ಯಾದವ್ ಸಹಾಯದಿಂದ ತಂದೆಯನ್ನು ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ದಿದ್ದರು. ಅಷ್ಟರಲ್ಲಿ ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಾರೆ.

ದೇಶದಾದ್ಯಂತ ಭಾರಿ ಆಕ್ರೋಶ

ಘಟನೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ದೇಶದ ಪ್ರಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಯುಪಿಯಲ್ಲಿ ಗೂಂಡಾ ರಾಜ್ಯ ಮುಂದುವರೆದಿದ್ದು ಸಾಮಾನ್ಯ ಆರೋಗ್ಯ ಸೇವೆಗಳು ಕುಸಿಯುತ್ತಿದೆ ಎಂದು ಹೇಳಿದ್ದಾರೆ.

ಯುಪಿ ಯಲ್ಲಿ ಸಾಮಾನ್ಯವಾಗಿ ಆರೋಗ್ಯ ಸೇವೆಗಳು ಕುಸಿಯುತ್ತಿದೆ. ನಿರ್ದಿಷ್ಟವಾಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಯುಪಿಯಲ್ಲಿ ಗೂಂಡಾ ರಾಜ್ ಮುಂದುವರೆದಿದೆ. ಡಾ. ಕಫೀಲ್ ಖಾನ್ ಅವರಂತಹ ಉತ್ತಮ ವೈದ್ಯರು ಜೈಲಿನಲ್ಲಿ ಇದ್ದಾರೆ ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.

ಮೊಹಮ್ಮದ್ ಆತಿಫ್ ಎಂಬುವವರು ತಪ್ಪಿತಸ್ಥರನ್ನು ಬಂಧಿಸದಿದ್ದರೆ ಅವಮಾನಕರ ಎಂದು ಟ್ವೀಟ್ ಮಾಡಿದ್ದಾರೆ.

ಮೊಹುವ ಮೊಹಿತ್ರ ಫ್ಯಾನ್ ಪೇಜ್ ನಿಂದ “ಆತ್ಮನಿರ್ಭರ ಭಾರತ ಅಂದರೆ ಇದು” ಎಂದು ವ್ಯಂಗ್ಯ ಮಾಡಲಾಗಿದೆ.

ಪತ್ರಕರ್ತನಿಖಿಲ್ ಚೌದರಿ “ನಾಲ್ಕು ವರ್ಷದ ಬಾಲಕ ಸ್ಟ್ರೆಚ್ಚರ್ ತಳ್ಳುತ್ತಿದ್ದಾನೆ. ಇದು ಆತ್ಮನಿರ್ಭರ ಭಾರತದ ಉದಾಹರಣೆ” ಎಂದು ಟ್ವೀಟ್ ಮಾಡಿದ್ದಾರೆ.


ಓದಿ:ಉತ್ತರ ಪ್ರದೇಶವನ್ನು ಬಿಜೆಪಿ ’ಅಪರಾಧ ಪ್ರದೇಶ’ವನ್ನಾಗಿ ಮಾಡಿದೆ: ಪ್ರಿಯಾಂಕ ಗಾಂಧಿ ಆಕ್ರೋಶ


 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...