Homeಅಂತರಾಷ್ಟ್ರೀಯಇಸ್ರೇಲ್‌ ಅಮಾಯಕ ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ: ಆಂಟೋನಿ ಬ್ಲಿಂಕೆನ್

ಇಸ್ರೇಲ್‌ ಅಮಾಯಕ ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡಿದೆ: ಆಂಟೋನಿ ಬ್ಲಿಂಕೆನ್

- Advertisement -
- Advertisement -

ಗಾಝಾ ಮೇಲೆ ಇಸ್ರೇಲ್‌ ನಡೆಸುವ ಯುದ್ಧ ಅಪರಾಧಕ್ಕೆ ಅಮೆರಿಕಾ ಬೆಂಬವನ್ನು ನೀಡುತ್ತಿದೆ. ಈ ಮೊದಲು ಅಮೆರಿಕ ಇಸ್ರೇಲ್‌ಗೆ ಶಸ್ತ್ರಶಸ್ತ್ರಗಳನ್ನು, ಯುದ್ಧ ವಿಮಾನಗಳನ್ನು ಕಳುಹಿಸಿತ್ತು. ಕದನ ವಿರಾಮಕ್ಕೆ ಆಗ್ರಹಿಸಿದ ಯುಎನ್‌ ನಿರ್ಣಯವನ್ನು ಕೂಡ ಯುಎಸ್‌ ತನ್ನ ವಿಟೋ ಅಧಿಕಾರ ಬಳಸಿ ತಡೆ ನೀಡಿತ್ತು. ಇದೀಗ ಇಸ್ರೇಲ್‌ ಹತ್ಯಾಕಾಂಡದ ಬಗ್ಗೆ US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಕಳವಳ ವ್ಯಕ್ತಪಡಿಸಿದ್ದು, ಗಾಝಾದಲ್ಲಿನ ನಾಗರಿಕರನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.

ಕತಾರ್‌ಗೆ ಬೇಟಿ ನೀಡಿದ ಆಂಟೋನಿ ಬ್ಲಿಂಕೆನ್, ಹಲವಾರು ಅಮಾಯಕ ಪ್ಯಾಲೆಸ್ತೀನ್‌ ನಾಗರಿಕರು ಈಗಾಗಲೇ ಕೊಲ್ಲಲ್ಪಟ್ಟಿದ್ದಾರೆ. ಅಲ್ ಜಜೀರಾ ಪತ್ರಕರ್ತರಾದ ಹಮ್ಜಾ ವೇಲ್ ಅಲ್-ದಹದೌ ಮತ್ತು ಮುಸ್ತಫಾ ತುರಾಯ ಅವರ ಹತ್ಯೆ ಊಹಿಸಲಾಗದ ದುರಂತ ಎಂದು ಆಂಟೋನಿ ಬ್ಲಿಂಕೆನ್ ಅವರು ಹೇಳಿದ್ದಾರೆ.

ಪ್ಯಾಲೆಸ್ತೀನ್‌ ನಾಗರಿಕರಿಗೆ ತಮ್ಮ ಮನೆಗೆ ಮರಳಲು ಅವಕಾಶ ನೀಡಬೇಕು ಮತ್ತು ನಾಗರಿಕರನ್ನು ಗಾಝಾ ಪಟ್ಟಿಯಿಂದ ಸ್ಥಳಾಂತರಿಸಬಾರದು ಎಂದು ಬ್ಲಿಂಕನ್ ಹೇಳಿದ್ದಾರೆ. ಒಂದು ವಾರದ ಬಳಿಕ ಆಂಟೋನಿ ಬ್ಲಿಂಕೆನ್ ಇಸ್ರೇಲ್‌ಗೆ ಭೇಟಿ ನೀಡಲಿದ್ದು, ಗಾಝಾದಲ್ಲಿ ನಾಗರಿಕರ ಸಾವುನೋವುಗಳನ್ನು ತಡೆಗಟ್ಟಲು ಹೆಚ್ಚಿನದನ್ನು ಮಾಡುವ ಅಗತ್ಯವನ್ನು ಹೇಳಿದ್ದಾರೆ.

ಅದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ, ಮಂಗಳವಾರ ಲೆಬನಾನ್‌ನಲ್ಲಿ ಹಿರಿಯ ಹಮಾಸ್ ಅಧಿಕಾರಿಯ ಹತ್ಯೆಯು ಇಸ್ರೇಲ್ ಮತ್ತು ಹಮಾಸ್ ನಡುವೆ ಮಾತುಕತೆ ನಡೆಸುವ ಕತಾರ್ ಪ್ರಯತ್ನಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಇಬ್ಬರು ಪತ್ರಕರ್ತರ ಹತ್ಯೆ

ಗಾಝಾದ ಸ್ವತಂತ್ರ ಪತ್ರಕರ್ತರಾದ ಹಮ್ಜಾ ವೇಲ್ ಅಲ್-ದಹದೌಹ್ ಮತ್ತು ಮುಸ್ತಫಾ ತುರಾಯಾ ಅವರು ದಕ್ಷಿಣ ಗಾಝಾದಲ್ಲಿ ರಫಾ ಮತ್ತು ಖಾನ್ ಯೂನಿಸ್ ನಡುವೆ ತೆರಳುವಾಗ ಮೃತಪಟ್ಟಿದ್ದಾರೆ. ಇತ್ತೀಚೆಗೆ ಇಸ್ರೇಲ್‌ ಬಾಂಬ್ ದಾಳಿ ಮಾಡಿದ ವಲಯಕ್ಕೆ ವರದಿ ಮಾಡಲು ಹೊರಟಿದ್ದ ವೇಳೆ ಇಸ್ರೇಲ್‌ ದಾಳಿಗೆ ಇವರು ಬಲಿಯಾಗಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಪೋಸ್ಟ್ ಮಾಡಲಾದ ವೀಡಿಯೊವು ವೇಲ್ ಅಲ್-ದಹದೌಹ್ ತನ್ನ ಮಗನ ದೇಹದ ಪಕ್ಕದಲ್ಲಿ ಅಳುತ್ತಿರುವುದನ್ನು ಮತ್ತು ಅವನ ಕೈಯನ್ನು ಹಿಡಿದಿರುವುದನ್ನು ತೋರಿಸಿದೆ.

ಅಲ್ ಜಝೀರಾ ಮೀಡಿಯಾ ನೆಟ್‌ವರ್ಕ್, ಇಸ್ರೇಲ್‌ ಪಡೆಗಳು ಪ್ಯಾಲೆಸ್ತೀನ್‌ ಪತ್ರಕರ್ತರ ಕಾರನ್ನು ಗುರಿಯಾಗಿಸಿಕೊಂಡಿರುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದು, ಇಸ್ರೇಲ್ ಪತ್ರಿಕಾ ಸ್ವಾತಂತ್ರ್ಯದ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.

ಘಟನೆಯ ಬಗ್ಗೆ ಇಸ್ರೇಲ್‌ ಸೇನೆಯು ತಕ್ಷಣ ಪ್ರತಿಕ್ರಿಯಿಸಲಿಲ್ಲ. ಶನಿವಾರದವರೆಗೆ 77 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಸಂಘರ್ಷವನ್ನು ವರದಿ ಮಾಡುವಾಗ ಕೊಲ್ಲಲ್ಪಟ್ಟಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮ ಹಕ್ಕುಗಳ ವಾಚ್‌ಡಾಗ್‌ನ ಪತ್ರಕರ್ತರ ರಕ್ಷಣಾ ಸಮಿತಿ ಹೇಳಿದೆ. ಇದರಲ್ಲಿ 70 ಪ್ಯಾಲೆಸ್ತೀನಿಯನ್ನರು, ನಾಲ್ವರು ಇಸ್ರೇಲ್‌ ಪತ್ರಕರ್ತರು ಮತ್ತು ಮೂವರು ಲೆಬನಾನಿ ಪತ್ರಕರ್ತರು ಮೃತಪಟ್ಟಿದ್ದಾರೆ. ಇವರು ರಾಯಿಟರ್ಸ್, ಏಜೆನ್ಸ್ ಫ್ರಾನ್ಸ್-ಪ್ರೆಸ್ ಮತ್ತು ಟರ್ಕಿಯ ಅನಾಡೋಲು ಸುದ್ದಿ ಸಂಸ್ಥೆ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನು ಓದಿ: ಬಿಲ್ಕಿಸ್ ಬಾನು ಪ್ರಕರಣ; 2 ವಾರಗಳಲ್ಲಿ ಜೈಲಿಗೆ ಮರಳುವಂತೆ 11 ಅಪರಾಧಿಗಳಿಗೆ ಸುಪ್ರೀಂ ಸೂಚನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...