Homeಅಂತರಾಷ್ಟ್ರೀಯಒತ್ತೆಯಾಳುಗಳ ಬಿಡದಿದ್ದರೆ ಈಜಿಫ್ಟ್ ಗೆ 20 ಲಕ್ಷ ಫೆಲೆಸ್ತೀನಿಯನ್ನರ ಸ್ಥಳಾಂತರಿಸುವ ಟ್ರಂಪ್ ಯೋಜನೆ ಜಾರಿ :...

ಒತ್ತೆಯಾಳುಗಳ ಬಿಡದಿದ್ದರೆ ಈಜಿಫ್ಟ್ ಗೆ 20 ಲಕ್ಷ ಫೆಲೆಸ್ತೀನಿಯನ್ನರ ಸ್ಥಳಾಂತರಿಸುವ ಟ್ರಂಪ್ ಯೋಜನೆ ಜಾರಿ : ಇಸ್ರೇಲ್ 

- Advertisement -
- Advertisement -

ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇಸ್ರೇಲಿ “ಬೆದರಿಕೆಗಳಿಗೆ” ಮಣಿಯುವುದಿಲ್ಲ ಎಂದು ಹಮಾಸ್ ಹೇಳಿದ ಸ್ವಲ್ಪ ಸಮಯದ ನಂತರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರ ಹೇಳಿಕೆ.

ಜೆರುಸಲೆಮ್: ಈ ವಾರಾಂತ್ಯದಲ್ಲಿ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಹಮಾಸ್ ವಿರುದ್ಧ “ಹೊಸ” ಯುದ್ಧವನ್ನು ಪ್ರಾರಂಭಿಸುವುದಾಗಿ ಮತ್ತು ಧ್ವಂಸಗೊಂಡ ಗಾಜಾಪಟ್ಟಿಯಿಂದ ಫೆಲೆಸ್ತೀನಿಯನ್ನರ ಸ್ಥಳಾಂತರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯನ್ನು ಜಾರಿಗೆ ತರುವುದಾಗಿ ಇಸ್ರೇಲ್ ಬುಧವಾರ ಬೆದರಿಕೆ ಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇಸ್ರೇಲಿ “ಬೆದರಿಕೆಗಳಿಗೆ” ಮಣಿಯುವುದಿಲ್ಲ ಎಂದು ಫೆಲೆಸ್ತೀನಿ ಗುಂಪು ಹಮಾಸ್ ಹೇಳಿದ ಸ್ವಲ್ಪ ಸಮಯದ ನಂತರ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮ ಒಪ್ಪಂದವನ್ನು ಮುಂದುವರಿಸುವುದಕ್ಕಾಗಿ ಮಧ್ಯವರ್ತಿಗಳಾದ ಕತಾರ್ ಮತ್ತು ಈಜಿಪ್ಟ್ ಒತ್ತಾಯಿಸುತ್ತಿವೆ ಎಂದು ಫೆಲೆಸ್ತೀನಿ ಮೂಲ ಮತ್ತು ಮಾತುಕತೆಗಳ ಬಗ್ಗೆ ಪರಿಚಿತವಾಗಿರುವ ರಾಜತಾಂತ್ರಿಕರೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ. ಆದರೆ ಹಮಾಸ್ ತನ್ನ ಉನ್ನತ ಸಂಧಾನಕಾರ ಕೈರೋದಲ್ಲಿದ್ದಾರೆ ಎಂದು ಹೇಳಿದೆ.

ಈ ಕದನ ವಿರಾಮವು 15 ತಿಂಗಳಿಗಿಂತಲೂ ಹೆಚ್ಚು ಕಾಲ ನಡೆದ ಯುದ್ಧವನ್ನು ನಿಲ್ಲಿಸಿದೆ ಮತ್ತು ಇಸ್ರೇಲಿ ಬಂಧನದಲ್ಲಿರುವ ಫೆಲೆಸ್ತೀನಿಯನ್ನರಿಗೆ ಬದಲಾಗಿ ಇಸ್ರೇಲಿ ಬಂಧಿತರನ್ನು ಸಣ್ಣ ಗುಂಪುಗಳಲ್ಲಿ ಬಿಡುಗಡೆ ಮಾಡುವುದು ನಡೆಯುತ್ತಿತ್ತು.

ಆದರೆ ಪ್ರಸ್ತುತ 42 ದಿನಗಳ ಮೊದಲ ಹಂತದಲ್ಲಿರುವ ಈ ಒಪ್ಪಂದವು ಹೆಚ್ಚುತ್ತಿರುವ ಒತ್ತಡಕ್ಕೆ ಒಳಗಾಗಿದೆ. ಕದನ ವಿರಾಮದ ಮುಂದಿನ ಹಂತಗಳ ಬಗ್ಗೆ ಇನ್ನೂ ಒಪ್ಪಂದಕ್ಕೆ ಬರದ ಎರಡೂ ಕಡೆಯವರು, ಉಲ್ಲಂಘನೆಗಳ ಆರೋಪಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದು, ಹಿಂಸಾಚಾರ ಪುನರಾರಂಭಗೊಳ್ಳಬಹುದೆಂಬ ಕಳವಳವನ್ನು ಹುಟ್ಟುಹಾಕಿದೆ.

ಒಪ್ಪಂದದ ನಿಯಮಗಳ ಅಡಿಯಲ್ಲಿ ಆರನೇ ಒತ್ತೆಯಾಳು-ಖೈದಿ ವಿನಿಮಯ ಪ್ರಕ್ರಿಯೆ ನಿಗದಿಪಡಿಸಿದಾಗ ಶನಿವಾರ ಹಮಾಸ್ ಬಂಧಿತರನ್ನು ಬಿಡಗಡೆಗೊಳಿಸಲು ವಿಫಲವಾದರೆ ಇಸ್ರೇಲ್ ತನ್ನ ಯುದ್ಧವನ್ನು ಪುನರಾರಂಭಿಸುತ್ತದೆ ಎಂದು ಕ್ಯಾಟ್ಜ್ ಹೇಳಿದ್ದಾರೆ.

ಇಸ್ರೇಲ್ ಉಲ್ಲಂಘನೆಗಳನ್ನು ಉಲ್ಲೇಖಿಸಿ ಹಮಾಸ್ ಬಿಡುಗಡೆಯನ್ನು ಮುಂದೂಡುವುದಾಗಿ ಹೇಳಿದೆ ಮತ್ತು  ಹಮಾಸ್ “ಎಲ್ಲಾ” ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ವಿಫಲವಾದರೆ “ನರಕ” ನೋಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಹೊಸ ಗಾಜಾ ಯುದ್ಧದಲ್ಲಿ ಹಮಾಸ್‌ ಸೋಲುತ್ತದೆ ಮತ್ತು ಅದು ಎಲ್ಲಾ ಒತ್ತೆಯಾಳುಗಳ ಬಿಡುಗಡೆಯಿಲ್ಲದೆ ಕೊನೆಗೊಳ್ಳುವುದಿಲ್ಲ ಎಂದು ಕ್ಯಾಟ್ಜ್ ಹೇಳಿದರು.

ಇದು ಗಾಜಾ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹ ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.

2023ರ ಅಕ್ಟೋಬರ್ 7ರಂದು ಫೆಲೆಸ್ತೀನಿನ ಹಮಾಸ್ ದಾಳಿಯು ಯುದ್ಧಕ್ಕೆ ಕಾರಣವಾದಾಗಿನಿಂದ ಇಸ್ರೇಲ್ ಹಮಾಸ್ ಅನ್ನು ಸೋಲಿಸಲು ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಪದೇ ಪದೇ ಪ್ರತಿಜ್ಞೆ ಮಾಡಿದೆ.

ಅಂತರರಾಷ್ಟ್ರೀಯ ಬಿಕ್ಕಟ್ಟು ಗುಂಪಿನ ವಿಶ್ಲೇಷಕ ಮೈರಾವ್ ಝೋನ್ಸ್‌ಜೆನ್ ಪ್ರತಿಕ್ರಿಯಿಸುತ್ತಾ ಅವರು, ಇಸ್ರೇಲ್ ಮತ್ತು ಹಮಾಸ್ ಗಳು ತಮ್ಮ ಸಾರ್ವಜನಿಕ ವಿವಾದಗಳ ಹೊರತಾಗಿಯೂ ಯುದ್ಧ ನಿರತ ಪಕ್ಷಗಳು ಇನ್ನೂ ಕದನ ವಿರಾಮವನ್ನು ಕಾಯ್ದುಕೊಳ್ಳಲು ಆಸಕ್ತಿ ಹೊಂದಿದ್ದು “ಇನ್ನೂ ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಅವರು ಕೇವಲ ಅಧಿಕಾರದ ಆಟಗಳನ್ನು ಆಡುತ್ತಿದ್ದಾರೆ” ಎಂದಿದ್ದಾರೆ.

ಟೆಲ್ ಅವಿವ್‌ನಲ್ಲಿ 28 ವರ್ಷದ ಇಸ್ರೇಲಿ ವಿದ್ಯಾರ್ಥಿ ಮಾಲಿ ಅಬ್ರಮೊವಿಚ್, “ಇಸ್ರೇಲ್ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿರುವುದರಿಂದ, ಒತ್ತೆಯಾಳುಗಳ ಮುಂದಿನ ಗುಂಪನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಯೋಚಿಸುವುದು ಭಯಾನಕವಾಗಿದೆ”. ಇದು ಅಸಂಬದ್ಧವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

“ನಾವು ಅವರನ್ನು (ಹಮಾಸ್) ನಮ್ಮೊಂದಿಗೆ ಈ ರೀತಿ ಆಟವಾಡಲು ಬಿಡಲು ಸಾಧ್ಯವಿಲ್ಲ… ಇದು ಸ್ವೀಕಾರಾರ್ಹವಲ್ಲ.” ಎಂದಿದ್ದಾರೆ.

ದಕ್ಷಿಣ ಗಾಜಾದ ಖಾನ್ ಯೂನಿಸ್‌ನಲ್ಲಿ 48 ವರ್ಷದ ಸಲೇಹ್ ಅವಾದ್ ಅವರು ಪ್ರತಿಕ್ರಿಯಿಸುತ್ತಾ, “ಇಸ್ರೇಲ್ ಯುದ್ಧವನ್ನು ಮತ್ತೆ ಪ್ರಚೋದಿಸಲು ಮತ್ತು ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸಲು ಯಾವುದಾದರೂ ನೆಪಗಳನ್ನು ಹುಡುಕುತ್ತಿದೆ” ಎಂದಿದ್ದಾರೆ.

ಇಸ್ರೇಲ್ ಒಪ್ಪಂದವನ್ನು ಪಾಲಿಸದೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹಮಾಸ್ ವಕ್ತಾರ ಹಜೆಮ್ ಖಾಸೆಮ್ ಎಚ್ಚರಿಸಿದ್ದಾರೆ.

ನಮ್ಮ ನಿಲುವು ಸ್ಪಷ್ಟವಾಗಿದೆ ಮತ್ತು ನಾವು ಅಮೆರಿಕ ಮತ್ತು ಇಸ್ರೇಲಿ ಬೆದರಿಕೆಗಳ ಭಾಷೆಯನ್ನು ಸ್ವೀಕರಿಸುವುದಿಲ್ಲ. ನೆತನ್ಯಾಹು ಶನಿವಾರದೊಳಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ “ತೀವ್ರ ಹೋರಾಟವನ್ನು ಪುನರಾರಂಭಿಸುತ್ತೇವೆ” ಎಂಬ ಬೆದರಿಕೆಗೆ ಖಾಸೆಮ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ವಾರ ಇಸ್ರೇಲಿನ ಒತ್ತೆಯಾಳುಗಳ ಬಿಡುಗಡೆ ಸಂದರ್ಭ ತನ್ನ ಮೂವರು ಸಣಕಲು ಒತ್ತೆಯಾಳುಗಳನ್ನು ಜನಸಮೂಹದ ಮುಂದೆ ಮೆರವಣಿಗೆ ಮಾಡಿ ಅವರನ್ನು ಮಾತನಾಡುವಂತೆ ಹಮಾಸ್ ಒತ್ತಾಯಿಸಿದ ನಂತರ ಇಸ್ರೇಲಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದೇ ವೇಳೆ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ತನ್ನ ನೆರವು ಬದ್ಧತೆಗಳನ್ನು ಪೂರೈಸಲು ವಿಫಲವಾಗಿದೆ ಎಂದು ಹಮಾಸ್ ಆರೋಪಿಸಿದೆ.

ನಾವು “ಕದನ ವಿರಾಮಕ್ಕೆ ಬದ್ಧವಾಗಿದ್ದೇವೆ” ಮತ್ತು ತನ್ನ ಮುಖ್ಯ ಸಂಧಾನಕಾರ ಖಲೀಲ್ ಅಲ್-ಹಯಾ ಬುಧವಾರ ಕೈರೋದಲ್ಲಿ ಸಭೆ ನಡೆಸಲು ಮತ್ತು “ಕದನ ವಿರಾಮ ಒಪ್ಪಂದದ ಅನುಷ್ಠಾನ”ವನ್ನು ಮೇಲ್ವಿಚಾರಣೆ ಮಾಡಲು ಇದ್ದಾರೆ ಎಂದು ಹಮಾಸ್ ಹೇಳಿದೆ.

ಕೈರೋ ಮತ್ತು ದೋಹಾದಲ್ಲಿನ ಮಧ್ಯವರ್ತಿಗಳು “ಗಾಜಾ ಕದನ ವಿರಾಮ ಒಪ್ಪಂದವನ್ನು ಉಳಿಸುವ ಪ್ರಯತ್ನದಲ್ಲಿ ತಮ್ಮ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಾರೆ” ಎಂದು ಈಜಿಪ್ಟ್‌ನ ಅಧಿಕಾರಿಯನ್ನು ಉಲ್ಲೇಖಿಸಿ ಈಜಿಪ್ಟ್‌ನ ರಾಜ್ಯ-ಸಂಬಂಧಿತ ಅಲ್-ಕಹೇರಾ ನ್ಯೂಸ್ ಹೇಳಿದೆ.

ಯೋಜಿತ ಬಿಡುಗಡೆಯೊಂದಿಗೆ ಮುಂದುವರಿಯುವಂತೆ ಮತ್ತು “ಗಾಜಾದಲ್ಲಿ ಯುದ್ಧ ಪುನರಾರಂಭವನ್ನು ಯಾವುದೇ ಬೆಲೆ ತೆತ್ತಾದರೂ ತಪ್ಪಿಸುವಂತೆ” ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಹಮಾಸ್ ಅನ್ನು ಒತ್ತಾಯಿಸಿದ್ದಾರೆ.

ಒತ್ತೆಯಾಳು-ಖೈದಿಗಳ ವಿನಿಮಯವನ್ನು ಸುಗಮಗೊಳಿಸಿದ ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯು ಕದನ ವಿರಾಮವನ್ನು ಕಾಯ್ದುಕೊಳ್ಳಲು ಎರಡು ಕಡೆಯವರನ್ನು ಒತ್ತಾಯಿಸಿದೆ.

ಟ್ರಂಪ್ ಯೋಜನೆ 

ಟ್ರಂಪ್ ಗಾಜಾವನ್ನು ವಶಪಡಿಸಿಕೊಳ್ಳುವ ಮತ್ತು ಅದರ ಎರಡು ಮಿಲಿಯನ್‌ಗಿಂತಲೂ ಹೆಚ್ಚು ನಿವಾಸಿಗಳನ್ನು ಜೋರ್ಡಾನ್ ಅಥವಾ ಈಜಿಪ್ಟ್‌ಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಮಾಡಿದ್ದರು. ಈ ಯೋಜನೆಯು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು “ಕ್ರಾಂತಿಕಾರಿ” ಎಂದು ಕರೆದಿದ್ದಾರೆ.

“ನಮ್ಮ ಫೆಲೆಸ್ತೀನಿ ಜನರನ್ನು ಅವರ ಭೂಮಿಯಿಂದ ಸ್ಥಳಾಂತರಿಸುವ ಯೋಜನೆಗಳನ್ನು ಖಂಡಿಸಲು ಹಮಾಸ್ ವಾರಾಂತ್ಯದಲ್ಲಿ ವಿಶ್ವಾದ್ಯಂತ “ಐಕಮತ್ಯ ಮೆರವಣಿಗೆ”ಗಳಿಗೆ ಕರೆ ನೀಡಿದೆ.

ಇಸ್ರೇಲ್‌ನ ರಕ್ಷಣಾ ಮಂತ್ರಿ ಕಾಟ್ಜ್ ಅವರು ಕಳೆದ ವಾರ ತಮ್ಮ ಸೈನ್ಯಕ್ಕೆ ಗಾಜಾದಿಂದ ಫೆಲೆಸ್ತೀನಿಯನ್ನರ “ಸ್ವಯಂಪ್ರೇರಿತ” ನಿರ್ಗಮನಗಳಿಗೆ ಸಿದ್ಧರಾಗುವಂತೆ ಆದೇಶಿಸಿದರು. ಸೇನೆಯು ಈಗಾಗಲೇ ಗಾಜಾದ ಸುತ್ತಲೂ ತನ್ನ ಸೈನ್ಯವನ್ನು ಬಲಪಡಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಮಂಗಳವಾರ ಜೋರ್ಡಾನ್  ರಾಜ ಅಬ್ದುಲ್ಲಾ-II ಅವರು ಭೇಟಿಯಾದ ಸಂದರ್ಭದಲ್ಲಿ ಒತ್ತೆಯಾಳು ಬಿಡುಗಡೆಗೆ ಶನಿವಾರ ವಿಧಿಸಲಾಗಿದ್ದ ಗಡುವನ್ನು ಟ್ರಂಪ್ ಪುನರುಚ್ಚರಿಸಿದರು.

ಬುಧವಾರ ನಡೆದ ದೂರವಾಣಿ ಕರೆಯಲ್ಲಿ ಅಬ್ದುಲ್ಲಾ ಮತ್ತು ಈಜಿಪ್ಟ್‌ನ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು,  ಕದನ ವಿರಾಮದ “ಪೂರ್ಣ ಅನುಷ್ಠಾನ”, “ಒತ್ತೆಯಾಳುಗಳು ಮತ್ತು ಕೈದಿಗಳ ನಿರಂತರ ಬಿಡುಗಡೆ ಮತ್ತು ಮಾನವೀಯ ನೆರವು ಪ್ರವೇಶವನ್ನು ಸುಗಮಗೊಳಿಸುವುದನ್ನು ಬೆಂಬಲಿಸುವಲ್ಲಿ ಒಗ್ಗಟ್ಟಾಗಿದ್ದೇವೆ” ಎಂಬ ಅವರ ಮಾತುಕತೆಯನ್ನು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಸ್ರೇಲಿ ಅಧಿಕೃತ ಅಂಕಿಅಂಶಗಳ AFP ಲೆಕ್ಕಾಚಾರದ ಪ್ರಕಾರ, ಅಕ್ಟೋಬರ್ 2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,211 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ ಎಂದಿದೆ.

ಹಮಾಸ್ 251 ಇಸ್ರೇಲಿ ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಅವರಲ್ಲಿ ಈಗ 73 ಜನರು ಗಾಜಾದಲ್ಲಿಯೇ ಉಳಿದಿದ್ದಾರೆ, ಇವರಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಇಸ್ರೇಲ್‌ನ ಪ್ರತೀಕಾರದ ಕಾರ್ಯಾಚರಣೆಯು ಗಾಜಾದಲ್ಲಿ ಕನಿಷ್ಠ 48,222 ಜನರನ್ನು ಕೊಂದಿದೆ. ಅವರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ಆಡಳಿತದಲ್ಲಿರುವ ಪ್ರದೇಶದ ಆರೋಗ್ಯ ಸಚಿವಾಲಯದ  ಅಂಕಿಅಂಶಗಳನ್ನು ವಿಶ್ವಾಸಾರ್ಹವೆಂದು ವಿಶ್ವಸಂಸ್ಥೆ ತಿಳಿಸಿದೆ.

ನಮಗೆ, ಕೇಜ್ರಿವಾಲ್‌ಗೆ ಏನಾಗಿದೆಯೋ, ಅದು ನಿತೀಶ್, ನಾಯ್ಡುಗೂ ಆಗಬಹುದು : ಆದಿತ್ಯ ಠಾಕ್ರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -