ನಾಲ್ಕು ದಿನಗಳ ಹಿಂದೆ ಜನಿಸಿದ ತನ್ನ ನವಜಾತ ಅವಳಿಗಳ ಜನನವನ್ನು ನೋಂದಾಯಿಸಲು ಅಬು ಅಲ್-ಕುಮ್ಸನ್ ಮಂಗಳವಾರ ಸೆಂಟ್ರಲ್ ಗಾಜಾದ ದೇರ್ ಅಲ್-ಬಾಲಾಹ್‌ನಲ್ಲಿರುವ ತನ್ನ ಮನೆಯಿಂದ ಹೊರಟಿದ್ದರು. ಅವರಿಗೆ ಅಸ್ಸರ್ ಎಂಬ ಗಂಡು ಮತ್ತು ಐಸೆಲ್ ಎಂಬ ಹೆಣ್ಣು ಮಗು ಜನಿಸಿದ್ದವು.
ಅವರು ಮನೆ ಬಿಟ್ಟ ಗಂಟೆಗಳ ನಂತರ, ತನ್ನ ನೆರೆಹೊರೆಯವರಿಂದ ಕರೆ ಸ್ವೀಕರಿಸಿದ್ದು, ಅವರ ಕುಟುಂಬವು ಆಶ್ರಯ ಪಡೆದ ಮನೆ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂಬ ವಿಷಯ ತಿಳಿದು ಆಘಾತಗೊಂಡಿದ್ದಾರೆ.
ಅವರ ಪತ್ನಿ ಜೌಮಾನ ಅರಾಫಾ, ಆಕೆಯ ತಾಯಿ ಮತ್ತು ನವಜಾತ ಅವಳಿ ಮಕ್ಕಳು ಇಸ್ರೇಲಿ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದ್ದಾರೆ. “ಏನಾಯಿತು ಎಂದು ನನಗೆ ತಿಳಿದಿಲ್ಲ, ನನ್ನ ಮನೆಗೆ ಶೆಲ್ ದಾಳಿಯಾಗಿದೆ ಎಂದು ಮಾತ್ರ ನನಗೆ ಹೇಳಲಾಗಿದೆ” ಎಂದು ಅಲ್-ಕುಮ್ಸನ್ ಹೇಳಿದ್ದಾರೆ.
ಅರಾಫಾ ಎಂಬ ವೈದ್ಯ ತನ್ನ ನವಜಾತ ಶಿಶುಗಳ ಆಗಮನವನ್ನು ಆಗಸ್ಟ್ 10 ರಂದು ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿ, ತನ್ನ ಪೋಸ್ಟ್‌ನಲ್ಲಿ “ಪವಾಡ” ಎಂದು ಕರೆದಿದ್ದಾಳೆ. ಮಾಧ್ಯಮಗಳ ಪ್ರಕಾರ, ಯುದ್ಧ ಪ್ರಾರಂಭವಾಗುವ ತಿಂಗಳುಗಳ ಮೊದಲು ದಂಪತಿಗಳು ಕಳೆದ ಬೇಸಿಗೆಯಲ್ಲಿ ವಿವಾಹವಾಗಿದ್ದರು.
ಯುದ್ಧದ ಆರಂಭಿಕ ವಾರಗಳಲ್ಲಿ ಗಾಜಾ ನಗರವನ್ನು ಸ್ಥಳಾಂತರಿಸಲು ಇಸ್ರೇಲ್‌ನ ಆದೇಶಗಳನ್ನು ಅನುಸರಿಸಿದ ಸಾವಿರಾರು ಪ್ಯಾಲೆಸ್ಟೀನಿಯಾದವರಲ್ಲಿ ಅಲ್-ಕುಮ್ಸಾನ್ ಕೂಡ ಸೇರಿದ್ದಾನೆ. ಗಾಜಾ ಪಟ್ಟಿಯಾದ್ಯಂತ ಇಸ್ರೇಲ್‌ನ ಬಾಂಬ್ ದಾಳಿಯಿಂದ ತನ್ನ ಗರ್ಭಿಣಿ ಹೆಂಡತಿಯನ್ನು ರಕ್ಷಿಸುವ ಹತಾಶ ಪ್ರಯತ್ನದಲ್ಲಿ ಅವನು ತನ್ನ ಕುಟುಂಬವನ್ನು ಉತ್ತರ ಗಾಜಾದಿಂದ ದೇರ್ ಅಲ್-ಬಾಲಾಹ್‌ನಲ್ಲಿರುವ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಿಸಿದ್ದನು.
ಮಂಗಳವಾರ, ಅಲ್-ಕುಮ್ಸನ್ ತನ್ನ ಮಕ್ಕಳ ಜನನ ಪ್ರಮಾಣಪತ್ರಗಳನ್ನು ಸ್ವೀಕರಿಸಲು ಸ್ಥಳೀಯ ಸರ್ಕಾರಿ ಕಚೇರಿಗೆ ಹೋದರು. ನಂತರ, ಅವರು ತಮ್ಮ ಕುಟುಂಬದ ದುರಂತ ಸಾವಿನ ತಿಳಿದುಕೊಳ್ಳಲು ಮಾತ್ರ ಸಾಧ್ಯವಾಯಿತು.
ನಂತರ ಅವರು ತಮ್ಮ ಕುಟುಂಬಸ್ಥರ ದೇಹ ಸ್ವೀಕರಿಸಲು ಸೆಂಟ್ರಲ್ ಗಾಜಾದ ಅಲ್ ಅಕ್ಸಾ ಹುತಾತ್ಮರ ಆಸ್ಪತ್ರೆಗೆ ಬಂದರು, ಅಲ್ಲಿ ಅವರು ತಮ್ಮ ಕುಟುಂಬವನ್ನು ಕೊನೆಯ ಬಾರಿಗೆ ನೋಡುವ ಹಂಬಲದಿಂದ ಅಳುತ್ತಿದ್ದರು.
“ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ. ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಅವರನ್ನು ನೋಡಲು ಅವಕಾಶ ಮಾಡಿಕೊಡಿ… ಅವಳು ಈಗಷ್ಟೇ ಜನ್ಮ ನೀಡಿದಳು. ದಯವಿಟ್ಟು ನನಗೆ ಅವಳನ್ನು ನೋಡಲು ಅವಕಾಶ ಮಾಡಿಕೊಡಿ” ಎಂದು ಅವರು ಬೇಡಿಕೊಳ್ಳುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Aser and Aysal, twins born four days ago, were killed this morning in an Israeli airstrike, along with their mother Dr. Jumana, east of Deir al-Balah. The father was out of the house preparing their birth certificates, he returned home to find that his family is no longer there. pic.twitter.com/q4AnfZRt9h
— Yousef D. Hammash (@YousefHammash) August 13, 2024
ಅಲ್-ಕುಮ್ಸನ್ ಮತ್ತು ಅವರ ಕುಟುಂಬವು ಅಂತಿಮ ಪ್ರಾರ್ಥನೆ ಸಲ್ಲಿಸಿದ ನಂತರ ನವಜಾತ ಶಿಶುಗಳನ್ನು ಅವರ ತಾಯಿಯ ಜೊತೆಗೆ ಸಮಾಧಿ ಮಾಡಲಾಯಿತು.
ಅಲ್ ಜಜೀರಾ ಜೊತೆ ಮಾತನಾಡುತ್ತಾ, ದಿಗ್ಭ್ರಮೆಗೊಂಡ ಅಲ್-ಕುಮ್ಸನ್, ತನ್ನ ಮಕ್ಕಳ ಜನ್ಮವನ್ನು ಆಚರಿಸಲು ಎಂದಿಗೂ ಅವಕಾಶವನ್ನು ಹೊಂದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
“ನಾನು ನನ್ನ ಮಕ್ಕಳ ಜನನ ಪ್ರಮಾಣಪತ್ರವನ್ನು ಪಡೆಯಲು ಹೋಗಿದ್ದೆ, ನನ್ನ ಹೆಂಡತಿ ದಿನಗಳ ಹಿಂದೆ ಜನ್ಮ ನೀಡಿದ್ದಳು, ಅವರ ಜನ್ಮವನ್ನು ಆಚರಿಸಲು ನನಗೆ ಅವಕಾಶವಿರಲಿಲ್ಲ, ಅವಳಿಗೆ ಸಿ-ಸೆಕ್ಷನ್ ಹೆರಿಗೆಯಾಗಿತ್ತು. ದಾಳಿ ಸಂದರ್ಭದಲ್ಲಿ ಆಕೆ ತುಂಬಾ ಸುಸ್ತಾಗಿದ್ದಳು, ಅವಳು ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ” ಎಂದು ಅವರು ಅಲ್ ಜಜೀರಾಗೆ ತಿಳಿಸಿದರು.
ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯ ಕಾರ್ಯಾಚರಣೆಯಿಂದಾಗಿ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಮತ್ತು ಅನೇಕರು ತಮ್ಮ ಹೆಂಡತಿಯರನ್ನು ಕಳೆದುಕೊಂಡಿದ್ದಾರೆ, ಇದೀಗ ಯುದ್ಧದ 11 ನೇ ತಿಂಗಳಿನಲ್ಲಿದೆ.
ಮಂಗಳವಾರದ ಗಾಜಾ ಆರೋಗ್ಯ ಸಚಿವಾಲಯದ ಇತ್ತೀಚಿನ ನವೀಕರಿಸಿದ ವರದಿಯ ಪ್ರಕಾರ, ಯುದ್ಧದಲ್ಲಿ ಕನಿಷ್ಠ 39,929 ಜನರು ಸಾವನ್ನಪ್ಪಿದ್ದಾರೆ, ಸತ್ತವರಲ್ಲಿ ಗಮನಾರ್ಹ ಭಾಗವು ಮಹಿಳೆಯರು ಮತ್ತು ಮಕ್ಕಳೆ ಇದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7, 2023 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 115 ಶಿಶುಗಳು ಕೊಲ್ಲಲ್ಪಟ್ಟಿವೆ. ಇಸ್ರೇಲ್‌ನ ಕ್ರೂರ ಆಕ್ರಮಣವು ಸಾವಿರಾರು ಅನಾಥರನ್ನು ಬಿಟ್ಟಿದೆ. ಗಾಜಾದಲ್ಲಿ ಸುಮಾರು 17,000 ಮಕ್ಕಳು ತಮ್ಮ ಪೋಷಕರ ಜೊತೆಯಲ್ಲಿಲ್ಲ ಎಂದು ಯುಎನ್ ಫೆಬ್ರವರಿಯಲ್ಲಿ ಅಂದಾಜಿಸಿದೆ.
ಇದನ್ನೂ ಓದಿ; ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿಯಿಂದ 100ಕ್ಕೂ ಹೆಚ್ಚು ‘ಇಸ್ಲಾಮೋಫೋಬಿಕ್’ ಹೇಳಿಕೆ: ಹ್ಯೂಮನ್ ರೈಟ್ಸ್ ವಾಚ್