Homeಚಳವಳಿನೂತನ ಪಠ್ಯ: ರಾಜ್ಯದ ಜಿಲ್ಲೆಗಳ ಮಾಹಿತಿಗೆ ಕತ್ತರಿ, ದೇವೇಗೌಡರ ಭಾವಚಿತ್ರ ಸೇರಿದಂತೆ ಹಲವು ವಿವರಗಳಿಗೆ ಕೋಕ್‌!

ನೂತನ ಪಠ್ಯ: ರಾಜ್ಯದ ಜಿಲ್ಲೆಗಳ ಮಾಹಿತಿಗೆ ಕತ್ತರಿ, ದೇವೇಗೌಡರ ಭಾವಚಿತ್ರ ಸೇರಿದಂತೆ ಹಲವು ವಿವರಗಳಿಗೆ ಕೋಕ್‌!

ಇದು ಪ್ರಾದೇಶಿಕ ವಾದವನ್ನು ಕಿತ್ತುಹಾಕಿ ಒಂದು ದೇಶ- ಒಂದು ಸಂಸ್ಕೃತಿ ಎಂಬ ಸಿದ್ದಾಂತ ಹೇರಲು ನಡೆಸುತ್ತಿರುವ ಯತ್ನವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -
- Advertisement -

ಬಿಜೆಪಿ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಅದ್ವಾನಗಳು ದಿನೇ ದಿನೇ ಹೊರಬರುತ್ತಿವೆ. ಸರ್ಕಾರವೇನೂ ಸಮಿತಿ ವಿಸರ್ಜನೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಅವರು ಮಾಡಿರುವ ಅದ್ವಾನಗಳನ್ನು ಸರಿಪಡಿಸಲು ತೀವ್ರ ಕಸರತ್ತು ಮಾಡಲಾಗಿದೆ. ಸಮಿತಿಯು ನೂತನ ಪಠ್ಯದ 6 ನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕ ಭಾಗ-1 ರಲ್ಲಿದ್ದ ‘ನಮ್ಮ ಕರ್ನಾಟಕ’ ಪಾಠಕ್ಕೇ ಕತ್ತರಿ ಆಡಿಸಿದ್ದು, ಕರ್ನಾಟಕ ಎನ್ನುವ ಪರಿಕಲ್ಪನೆಗೆ ಧಕ್ಕೆ ತರುವ ರೀತಿಯಲ್ಲಿ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ನಮ್ಮ ಕರ್ನಾಟಕ ಪಠ್ಯದಲ್ಲಿ ಕರ್ನಾಟಕದ ಸಮಸ್ತ 28 ಜಿಲ್ಲೆಗಳ ಬಗ್ಗೆ ಸಂಪೂರ್ಣ ಚಿತ್ರ ಸಹಿತ ಮಾಹಿತಿ ನೀಡಿತ್ತು. ಜಿಲ್ಲೆಗಳು ಯಾವ ಸಂದರ್ಭದಲ್ಲಿ ರಚನೆಯಾದವು? ಪ್ರತಿ ಜಿಲ್ಲೆಗಳ ಸಾಂಸ್ಕೃತಿಕ ಕೊಡುಗೆಯೇನು ಎಂಬುದನ್ನು ಸವಿವರವಾಗಿ ಉಲ್ಲೇಖಿಸಲಾಗಿತ್ತು. ಪ್ರತಿ ಜಿಲ್ಲೆಗಳ ಸಾಧಕರನ್ನು ಚಿತ್ರ ಸಮೇತ ಪರಿಚಯಿಸಲಾಗಿತ್ತು. ಅದನ್ನು ಓದಿದ ಮಕ್ಕಳಿಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಅನಿಸುತ್ತಿತ್ತು. ನಾಡಿನ ಬಗೆಗಿನ ಪ್ರೀತಿ, ಗೌರವ ಹಿಮ್ಮಡಿಯಾಗುತ್ತಿತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಆ ಪಠ್ಯಕ್ಕೆ ಕತ್ತರಿ ಹಾಕಿಬಿಟ್ಟಿದೆ.

ಪಠ್ಯದಲ್ಲಿ ಉಲ್ಲೇಖಿಸಲಾಗಿದ್ದ ಜಿಲ್ಲೆಗಳ ಮಹತ್ವವನ್ನು ಕಿತ್ತು ಹಾಕಲಾಗಿದೆ. ಬದಲಿಗೆ ನಾಲ್ಕು ವಲಯಗಳಾಗಿ ಮಾತ್ರ ವಿಂಗಡಿಸಿ ಅಲ್ಪಸ್ವಲ್ಪ ಮಾಹಿತಿ ಮಾತ್ರ ಉಳಿಸಿಕೊಳ್ಳಲಾಗಿದೆ. ಅಲ್ಲದೆ ಮಂಡ್ಯ ಜಿಲ್ಲೆಯ ಅಸ್ಮಿತೆ ಟಿಪ್ಪು ಸುಲ್ತಾನ್, ಹಾಸನ ಜಿಲ್ಲೆಯಲ್ಲಿ ಹುಟ್ಟಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಎಚ್.ಡಿ ದೇವೇಗೌಡರವರ ಭಾವಚಿತ್ರ ಸೇರಿದಂತೆ ಅಪರೂಪದ, ಮಹತ್ವದ ಭಾವಚಿತ್ರಗಳನ್ನು ಪಠ್ಯದಿಂದ ಕಿತ್ತು ಹಾಕಲಾಗಿದೆ. ಅದರ ವಿವರ ಇಲ್ಲಿದೆ.

ಹಳೆಯ ಪಠ್ಯಪುಸ್ತಕದಲ್ಲಿದ್ದ ವಿವರಗಳು

ನೂತನ ಪಠ್ಯದಲ್ಲಿ ಕೈಬಿಡಲಾಗಿರುವ ಮಾಹಿತಿಗಳು ಮತ್ತು ಭಾವಚಿತ್ರಗಳು

ಬೆಂಗಳೂರು ನಗರ: ಜಿಲ್ಲೆಯ ವಿಧಾನಸೌಧ, ಟಿಪ್ಪು ಅರಮನೆ, ಸೆಂಟ್ ಮೆರೀಸ್ ಚರ್ಚ್, ಜಾಮೀಯ ಮಸೀದಿ ಮಾಹಿತಿ ಮತ್ತು ಫೋಟೊಗಳನ್ನು ಕೈಬಿಡಲಾಗಿದೆ.

ರಾಮನಗರ: ಜಿಲ್ಲೆಯ ಚನ್ನಪಟ್ಟಣ ಗೊಂಬೆಗಳು.

ಚಿಕ್ಕಬಳ್ಳಾಪುರ: ಜಿಲ್ಲೆಯ ಕೈವಾರ ತಾತಯ್ಯ, ಕೈವಾರ ದೇವಾಲಯ, ವಿಧುರಾಶ್ವತ್ಥ ವೀರಸೌಧ, ನಂದಿದುರ್ಗ.

ಕೋಲಾರ: ಜಿಲ್ಲೆಯ ಅಂತರಗಂಗೆ, ಹೈದರಾಲಿ ದರ್ಗಾ.

ತುಮಕೂರು: ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟ, ದೇವರಾಯನ ದುರ್ಗ.

ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ಬೆಟ್ಟ, ಮದಕರಿ‌ ನಾಯಕ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ದಾವಣಗೆರೆ: ಜಿಲ್ಲೆಯ ಶಾಂತಿಸಾಗರ ಕೆರೆ.

ಶಿವಮೊಗ್ಗ: ಜಿಲ್ಲೆಯ ಜೋಗ್ ಜಲಪಾತ, ಕುಪ್ಪಳ್ಳಿ ಕುವೆಂಪು ಮನೆ.

ಮೈಸೂರು: ಜಿಲ್ಲೆಯ ಸಂತ ಫಿಲೊಮಿನ ಚರ್ಚ್, ಜಗನ್ ಮೋಹನ ಪ್ಯಾಲೇಸ್, ಚಾಮುಂಡಿಬೆಟ್ಟ, ಬೈಲಕುಪ್ಪೆ ಬುದ್ಧವಿಹಾರ.

ಚಾಮರಾಜನಗರ: ಜಿಲ್ಲೆಯ ಮಲೈ ಮಹದೇಶ್ವರ ದೇವಾಲಯ, ಬಂಡೀಪುರ.

ಹಾಸನ: ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ, ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡರು.

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾಂಬಾ ದೇವಾಲಯ, ಬಾಬಾಬುಡನ್ ಗಿರಿ ದರ್ಗಾ, ಸೇಂಟ್ ಆಂಡ್ರೂಸ್ ಚರ್ಚ್.

ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ ದೇವಾಲಯ, ದರಿಯಾ ದೌಲತ್ ಬಾಗ್.

ಕೊಡಗು: ಜಿಲ್ಲೆಯ ವಿರಾಜಪೇಟೆ ಚರ್ಚ್, ತಲಕಾವೇರಿ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ದಕ್ಷಿಣ ಕನ್ನಡ: ಜಿಲ್ಲೆಯ ಮೂಡಬಿದಿರೆ ಸಾವಿರ ಕಂಬಗಳ ಬಸದಿ, ಧರ್ಮಸ್ಥಳ ಮಂಜುನಾಥ ದೇವಾಲಯ, ಉಲ್ಲಾಳ ಜುಮ್ಮಾ ಮಸೀದಿ, ಸಂತ ಅಲೋಸಿಯಸ್ ಚರ್ಚ್.

ಉಡುಪಿ‌: ಜಿಲ್ಲೆಯ ಶ್ರೀಕೃಷ್ಣ ದೇವಾಲಯ, ಕಾರ್ಕಳದ ಗೊಮ್ಮಟ, ಸೇಂಟ್ ಲಾರೆನ್ಸ್ ಚರ್ಚ್, ಮಂಗಳೂರು ಬಂದರು.

ಕಲಬುರಗಿ: ಜಿಲ್ಲೆಯ ಖ್ವಾಜಾ ಬಂದೇ ನವಾಜ್

ಬೀದರ್: ಜಿಲ್ಲೆಯ ಬಿದರಿ ಕಲೆ, ಗುರುದ್ವಾರ, ಬೀದರ್ ಕೋಟೆ.

ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಮಸ್ಕಿ ಅಶೋಕ ಶಿಲಾಶಾಸನ.

ಕೊಪ್ಪಳ: ಜಿಲ್ಲೆಯ ಇಟಗಿ ಮಹಾದೇವ ದೇವಾಲಯ.

ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ‌ ಕಾರ್ಖಾನೆ.

ವಿಜಯನಗರ: ಜಿಲ್ಲೆಯ ಹಂಪಿ, ಕನ್ನಡ ವಿಶ್ವವಿದ್ಯಾಲಯ.

ಹಿಂದಿನ ಪಠ್ಯದಲ್ಲಿದ್ದ ಮಾಹಿತಿ

ಹಾವೇರಿ: ಜಿಲ್ಲೆಯ ಕನಕದಾಸ, ಸರ್ವಜ್ಞ ಕವಿ.

ಗದಗ: ಜಿಲ್ಲೆಯ ಕುಮಾರವ್ಯಾಸ, ವೀರನಾರಾಯಣ ಗುಡಿ.

ವಿಜಯಪುರ: ಜಿಲ್ಲೆಯ ಗೋಳಗುಮ್ಮಟ, ಕೂಡಲಸಂಗಮ ಐಕ್ಯ ಮಂಟಪ.

ಬಾಗಲಕೋಟೆ: ಜಿಲ್ಲೆಯ ಅಬೂಬಕರ್ ದರ್ಗಾ, ಐಹೊಳೆ ದೇವಾಲಯ.

ಬೆಳಗಾವಿ: ಜಿಲ್ಲೆಯ ಸಕ್ಕರೆ ಕಾರ್ಖಾನೆ.

ಉತ್ತರ ಕನ್ನಡ: ಜಿಲ್ಲೆಯ ಕೈಗಾ ವಿದ್ಯುತ್ ಕೇಂದ್ರ, ಸೀಬರ್ಡ್ ನೌಕಾನೆಲೆ.

ಇದಿಷ್ಟೇ ಅಲ್ಲದೆ ಹಿಂದಿನ ಪಠ್ಯದಲ್ಲಿ ಪ್ರತಿ‌ ಜಿಲ್ಲೆಯ ಪ್ರಸಿದ್ಧ ದೇಗುಲ, ಚರ್ಚ್, ಬಸದಿ, ಮಸೀದಿ, ವಿಹಾರ, ಗುರುದ್ವಾರಗಳ ಬಗ್ಗೆ ಪರಿಚಯವಿತ್ತು. ಪ್ರತಿ ಜಿಲ್ಲೆ ಸ್ಥಾಪನೆಗೊಂಡ ವರ್ಷವಿತ್ತು. ಪ್ರತಿ ಜಿಲ್ಲೆಯ ಪ್ರಸಿದ್ಧ ಆಚರಣೆಗಳಿದ್ದವು. ನದಿಗಳ ಹೆಸರಿತ್ತು, ಅಣೆಕಟ್ಟೆಗಳಿತ್ತು, ಸಾಹಿತಿಗಳ ಹೆಸರಿತ್ತು, ಕಾಡುಗಳ ಹೆಸರಿತ್ತು, ಬೆಳೆಯುವ ಬೆಳೆ, ತಿನ್ನುವ ಆಹಾರ, ಆಳಿದ ರಾಜಮನೆತನ ಇತ್ಯಾದಿ ಇತ್ಯಾದಿಗಳಿತ್ತು. ಇಡೀ ಕರ್ನಾಟಕದ ಚಿತ್ರಣವೇ ಕಣ್ಣ ಮುಂದೆ ಬರುವಂತಿತ್ತು. ಅದೆಲ್ಲವನ್ನು ನೂತನ ಸಮಿತಿ ಕಿತ್ತು ಹಾಕಿದೆ.

ಈ ‘ನಮ್ಮ ಕರ್ನಾಟಕ’ ಪಾಠದ ಜಿಲ್ಲೆಗಳ ವಿಶಿಷ್ಟತೆ ತಿಳಿಸುವ ಈ ಭಾಗಗಳನ್ನು ಏಕೆ ತೆಗೆದು ಹಾಕಲಾಗಿದೆ? ನಮ್ಮ ಜಿಲ್ಲೆಗಳಿಂದ ರಾಜ್ಯ, ರಾಜ್ಯದಿಂದ ದೇಶ ಅಲ್ಲವೇ? ಬರೀ ದೇಶದ ಮಾಹಿತಿ ಇದ್ದು ರಾಜ್ಯಗಳ, ಜಿಲ್ಲೆಗಳ ಮಾಹಿತಿಯನ್ನು ನಮ್ಮ ಮಕ್ಕಳು ತಿಳಿಯಬಾರದೆ? ಇದು ಪ್ರಾದೇಶಿಕ ವಾದವನ್ನು ಕಿತ್ತುಹಾಕಿ ಒಂದು ದೇಶ- ಒಂದು ಸಂಸ್ಕೃತಿ ಎಂಬ ಸಿದ್ದಾಂತ ಹೇರಲು ನಡೆಸುತ್ತಿರುವ ಯತ್ನವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಮಕ್ಕಳ ಎದೆಗೆ ಬೀಳುವ ಅಕ್ಷರ ತಮ್ಮ ಸಹಜೀವಿಗಳ ಬಗೆಗೆ ಅಂತಃಕರಣ ಹಾಗೂ ಪ್ರೀತಿಯನ್ನಷ್ಟೇ ಕಲಿಸುವಂತಾಗಬೇಕು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. India is becoming one more Talibhan type style working.
    Present trend and events happening in our state . It is the sign of Talibhan type of culture.
    For this solution is counter action like Indipendentce movement i.e non cooperation movement to start from public against the Govt.

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ನೊಟೀಸ್‌ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...