Homeಮುಖಪುಟ'ಇದು ಗಲಭೆಕೋರರು, ದಂಗೆಕೋರರು ಮತ್ತು ಲೂಟಿಕೋರರ ಸರ್ಕಾರ..'; ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ

‘ಇದು ಗಲಭೆಕೋರರು, ದಂಗೆಕೋರರು ಮತ್ತು ಲೂಟಿಕೋರರ ಸರ್ಕಾರ..’; ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ

- Advertisement -
- Advertisement -

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಕೇಂದ್ರವು ಗಲಭೆಕೋರರು, ದಂಗೆಕೋರರು ಮತ್ತು ಲೂಟಿಕೋರರ ಸರ್ಕಾರವಾಗಿದೆ” ಎಂದು ಆಕ್ರೋಶ ಹೊರಹಾಕಿದರು.

ಕಳೆದ ವರ್ಷದಿಂದ ಭಾರೀ ಜನಾಂಗೀಯ ಹಿಂಸಾಚಾರ ಕಂಡಿರುವ ಮಣಿಪುರದ ಪಕ್ಕದ ರಾಜ್ಯವಾದ ಅಸ್ಸಾಂನ ಸಿಲ್ಚಾರ್‌ನಲ್ಲಿ ತನ್ನ ಪಕ್ಷದ ಅಭ್ಯರ್ಥಿಯ ಪರವಾಗಿ ಮಾತನಾಡಿದ ಅವರು “ಪ್ರಧಾನಿ ನರೇಂದ್ರ ಮೋದಿ ನಿಮಗೆ ನ್ಯಾಯ ನೀಡುತ್ತಾರೆ ಎಂದು ನೀವು ಭಾವಿಸುತ್ತೀರಾ” ಎಂದು ಜನರನ್ನು ಪ್ರಶ್ನಿಸಿದರು.

ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬ್ಯಾನರ್ಜಿ, “ಈ ಚುನಾವಣೆ ಭಯಾನಕವಾಗಲಿದೆ. ನೀವು ಈ ರೀತಿಯ ಕಳಂಕಿತ ಚುನಾವಣೆಯನ್ನು ನೋಡಿಲ್ಲ. ಇದು ಏಜೆನ್ಸಿಯ ಸರ್ಕಾರ, ಏಜೆನ್ಸಿಗಾಗಿ ಮತ್ತು ಏಜೆನ್ಸಿಯಿಂದ” ಎಂದು ಹೇಳಿದರು.

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರವನ್ನು ಕುರಿತು ಮಾತನಾಡಿದ ಅವರು, “ಮೋದಿ ನಿಮಗೆ ನ್ಯಾಯ ಕೊಡುತ್ತಾರೆ ಎಂದು ನೀವು ಭಾವಿಸುತ್ತೀರಾ? ನೀವು ಇದನ್ನು ನಂಬುತ್ತೀರಾ? ನೀವು ಈಗ ಸಾಯುತ್ತಿದ್ದೀರಿ ಎಂದು ನೀವು ಭಾವಿಸಿದರೆ, ನೀವು ಅದನ್ನು ನಂಬಬಹುದು. ಆದರೆ, ಮೋದಿ ಯಾರಿಗಾದರೂ ಏನಾದರೂ ಮಾಡುತ್ತಾರೆ ಎಂಬ ನಂಬಿಕೆಯೂ ಬೇಡ. ಏಕೆಂದರೆ ಇದು ಗಲಭೆಕೋರರ, ದುರುಳರ, ಲೂಟಿಕೋರರ ಸರ್ಕಾರ, ಇದು ಜುಮ್ಲಾಬಾಜ್ ಸರ್ಕಾರ; ಅವರು ಕ್ಷಮೆಗೆ ಅರ್ಹರಲ್ಲ” ಎಂದು ಆಕ್ರೋಶ ಹೊರಹಾಕಿದರು.

ಇಂಡಿಯಾ ಮೈತ್ರಿ ಕುರಿತು ಮಾತನಾಡಿ, “ಒಟ್ಟಾಗಿರುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ಮೈತ್ರಿ ಎಂದರೆ ತೃಣಮೂಲ ಕಾಂಗ್ರೆಸ್. ನಾವು ಇಂಡಿಯಾಕ್ಕೆ ದಾರಿ ತೋರಿಸುತ್ತೇವೆ. ಬಂಗಾಳದಲ್ಲಿ ನಾವು ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದೇವೆ. ಕಾಂಗ್ರೆಸ್ ಅಥವಾ ಬಿಜೆಪಿ ಇಲ್ಲ, ಕಾಂಗ್ರೆಸ್ ಅಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಅಖಿಲ ಭಾರತ ಮಟ್ಟದಲ್ಲಿ ನಾವು ಇಂಡಿಯಾಕ್ಕೆ ನಾಯಕತ್ವವನ್ನು ನೀಡುತ್ತೇವೆ” ಎಂದರು.

ಸಿಲ್ಚಾರ್ ಕ್ಷೇತ್ರದ ಕುರಿತು:

ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ರಾಧೇಶ್ಯಾಮ್ ಬಿಸ್ವಾಸ್ ಅವರು ಸಿಲ್ಚಾರ್ ಕ್ಷೇತ್ರಕ್ಕೆ ಪ್ರವೇಶಿಸಿರುವುದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿಗೆ. 90ರ ದಶಕದವರೆಗೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸಿಲ್ಚಾರ್, ನಂತರದ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ.

ಬಿಜೆಪಿಯ ರಾಜ್‌ದೀಪ್ ರಾಯ್ ಹಾಲಿ ಸಂಸದರಾಗಿದ್ದು, ಪಕ್ಷವು ಈಗಾಗಲೇ ಅರ್ಧದಷ್ಟು ಗೆದ್ದಿದೆ ಎಂದು ಪರಿಗಣಿಸಿರುವ ಯುದ್ಧಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಆದಾಗ್ಯೂ, ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ. ಅಸ್ಸಾಂ ಸಚಿವ ಪರಿಮಳ್ ಸುಕ್ಲಬಾದ್ಯ ಅವರನ್ನು ಕಣಕ್ಕಿಳಿಸಲು ಆಯ್ಕೆ ಮಾಡಿದ್ದು, ಅವರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಸೂರ್ಯಕಾಂತ ಸರ್ಕಾರ್ ಅವರನ್ನು ಹೆಸರಿಸಿದೆ.

ಇದನ್ನೂ ಓದಿ; ಭೀಮಾ ಕೋರೆಗಾಂವ್ ಪ್ರಕರಣ: 6 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾದ ಶೋಮಾ ಸೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...