ರಾಹುಲ್ ಗಾಂಧಿ
PC: Deccan Chronicle

ಒಂದು ಪರಿವಾರಲ್ಲಿ ಮಹಿಳೆಯರು ಹಾಗೂ ಹಿರಿಯರಿಗೆ ಗೌರವ, ಸಹಾನುಭೂತಿ ಮತ್ತು ವಾತ್ಸಲ್ಯವಿರುತ್ತದೆ, ಆದ್ದರಿಂದ ಆರ್‌ಎಸ್‌ಎಸ್ ಮತ್ತು ಅದರ ಸಂಬಂಧಿತ ಗುಂಪುಗಳನ್ನು ‘ಸಂಘ ಪರಿವಾರ’ ಎಂದು ಕರೆಯುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಸೇವೆಯಲ್ಲಿದ್ದ ಕೇರಳ ಮೂಲದ ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲ್ಪಟ್ಟ ಒಂದು ದಿನದ ನಂತರ ರಾಹುಲ್‌ ಗಾಂಧಿಯವರ ಹೇಳಿಕೆಗಳು ಬಂದಿದೆ. ಸಂಘ ಪರಿವಾರವು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ಅಲ್ಪಸಂಖ್ಯಾತರನ್ನು ತುಳಿಯುವ “ಪ್ರಪೊಗಾಂಡ”ದ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಧಿಕ್ಕಾರ ಕೂಗುವಂತೆ ಒತ್ತಾಯಿಸಿ ಹಲ್ಲೆ: ಬಂಧಿತ ದೆಹಲಿ ಗಲಭೆಯಲ್ಲೂ ಆರೋಪಿ!

ಗುರುವಾರ ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಮಾಡಿರುವ ಟ್ವೀಟ್‌ನಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇನ್ನು ಮುಂದೆ ‘ಸಂಘ ಪರಿವಾರ’ ಎಂದು ಉಲ್ಲೇಖಿಸುವುದಿಲ್ಲ ಎಂದು ಹೇಳಿದರು.

“ಆರ್‌‌ಎಸ್‌ಎಸ್‌‌ ಮತ್ತು ಸಂಬಂಧಿತ ಸಂಸ್ಥೆಗಳನ್ನು ಸಂಘ ಪರಿವಾರ ಎಂದು ಕರೆಯುವುದು ಸರಿಯಲ್ಲ ಎಂದು ನಾನು ನಂಬುತ್ತೇನೆ. ಒಂದು ಪರಿವಾರದಲ್ಲಿ ಮಹಿಳೆಯರಿರುತ್ತಾರೆ, ವೃದ್ಧರ ಬಗ್ಗೆ ಗೌರವವಿರುತ್ತದೆ, ಸಹಾನುಭೂತಿ ಮತ್ತು ವಾತ್ಸಲ್ಯದ ಭಾವನೆ ಇರುತ್ತದೆ. ಆದರೆ ಇದು ಯಾವುದೂ ಆರೆಸ್ಸೆಸ್‌‌ನಲ್ಲಿ ಇಲ್ಲ” ಎಂದು ಅವರು ಟ್ವಿಟರ್‌‌ನಲ್ಲಿ ಹೇಳಿದ್ದಾರೆ.

“ಈಗ ನಾನು ಆರೆಸ್ಸೆಸ್‌‌ ಅನ್ನು ‘ಸಂಘ ಪರಿವಾರ’ ಎಂದು ಕರೆಯುವುದಿಲ್ಲ!” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ABVP ಕಾರ್ಯಕರ್ತರಿಂದ ಕ್ರೈಸ್ತ ಸನ್ಯಾಸಿನಿಗಳಿಗೆ ಕಿರುಕುಳ: ವ್ಯಾಪಕ ಟೀಕೆ

LEAVE A REPLY

Please enter your comment!
Please enter your name here