Homeಮುಖಪುಟಶಾಹೀನ್‌ ಬಾಗ್‌ ಪ್ರತಿಭಟನಾಕಾರರೊಂದಿಗೆ ಮಾತುಕತೆ ಸಾಧ್ಯವಿಲ್ಲ: ಸಚಿವೆ ಸ್ಮೃತಿ ಇರಾನಿ

ಶಾಹೀನ್‌ ಬಾಗ್‌ ಪ್ರತಿಭಟನಾಕಾರರೊಂದಿಗೆ ಮಾತುಕತೆ ಸಾಧ್ಯವಿಲ್ಲ: ಸಚಿವೆ ಸ್ಮೃತಿ ಇರಾನಿ

ಪಾಕಿಸ್ತಾನದಂತಹ ದೇಶದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರರಿಗೆ ಆಶ್ರಯ ನೀಡುವ ಸಿಎಎಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

- Advertisement -
- Advertisement -

ಸಿಎಎ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಶಾಹೀನ್ ಬಾಗ್‌ನಲ್ಲಿ ವಿಷಕಾರಿ ವಾತಾವರಣ ಇರುವುದರಿಂದ ಅವರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

“ನಾವು ಮೋದಿಯನ್ನು ಕೊಲ್ಲುತ್ತೇವೆ” ಎಂಬ ಘೋಷಣೆಗಳನ್ನು ಕೂಗುವಂತೆ ಮಕ್ಕಳನ್ನು ತರಬೇತುಗೊಳಿಸುವವರ ಬಗ್ಗೆ ನೀವು ಏನು ಹೇಳುತ್ತೀರಿ? ಜನರು ‘ಭಾರತ್ ತೇರೆ ತುಕ್ಡೆ ಹೊಂಗೆ’ ಎಂದು ಹೇಳಿದಾಗ ನೀವು ಏನು ಹೇಳುತ್ತೀರಿ. ನಾವು 15 ಕೋಟಿ ಎಂದು ಹೇಳುವವರಿಗೆ ನೀವು ಏನು ಹೇಳುತ್ತೀರಿ…?” ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು ತಮ್ಮ ಮಕ್ಕಳನ್ನು ಪ್ರತಿಭಟನಾ ಸ್ಥಳಕ್ಕೆ ಏಕೆ ಕರೆತರುತ್ತಾರೆ ಎಂದು ಪ್ರಶ್ನಿಸಿದ ಅವರು, ಚಳಿಗಾಲದಲ್ಲಿ ಮಹಿಳೆಯೊಬ್ಬಳು ತನ್ನ ನಾಲ್ಕು ತಿಂಗಳ ಮಗುವನ್ನು ಪ್ರತಿಭಟನಾ ಸ್ಥಳಕ್ಕೆ ಕರೆತಂದದ್ದು ಅಂತಿಮವಾಗಿ ಶಿಶುವಿನ ಸಾವಿಗೆ ಕಾರಣವಾಯಿತು ಎಂಬುದು ವಿವರಿಸಲಾಗದಷ್ಟು ಆಘಾತಕಾರಿ ಎಂದಿದ್ದಾರೆ.

ಪ್ರತಿಭಟನಾಕಾರರಿಗೆ ಪ್ರತಿಭಟಿಸುವ ಹಕ್ಕಿದೆ ಎಂದು ಒಪ್ಪಿಕೊಂಡ ಅವರು, ಆದರೆ ಕಾಂಗ್ರೆಸ್ ನ ಸಲ್ಮಾನ್ ಖುರ್ಷಿದ್ ಅವರಂತಹ ನಾಯಕರು ಶಾಹೀನ್ ಬಾಗ್ ನಲ್ಲಿ ವಿಭಜಕ ಘೋಷಣೆಗಳೊಂದಿಗೆ ಭಾವೋದ್ರೇಕದ ಮಾತುಗಳನ್ನಾಡುತ್ತಾರೆ ಎಂದು ಆರೋಪಿಸಿದರು.

“ಪಂಡಿತರನ್ನು ಕಾಶ್ಮೀರದಿಂದ ಹೊರಹಾಕಿದಾಗ ಖುರ್ಷಿದ್‌ ಅದೇ ಕಾಳಜಿಯನ್ನು ಏಕೆ ತೋರಿಸಲಿಲ್ಲ?” ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

ಶಹೀನ್ ಬಾಗ್‌ ಪ್ರತಿಭಟನೆಯ ಜಾಗವನ್ನು ಬದಲಾಯಿಸುವಂತೆ ಪರಿಹಾರವನ್ನು ಕಂಡುಕೊಳ್ಳಲು ಪ್ರತಿಭಟನಾಕಾರರೊಂದಿಗೆ ಮಾತನಾಡಲು ಸುಪ್ರೀಂ ಕೋರ್ಟ್‌ ಮೂರು ಮಧ್ಯವರ್ತಿಗಳನ್ನು ನೇಮಿಸಿದೆ. ಆದರೆ ಗುರುವಾರ ಮತ್ತು ಶುಕ್ರವಾರದ ಎರಡು ಸುತ್ತಿನ ಮಾತುಕತೆಗಳು ಸಹ ವಿಫಲವಾಗಿವೆ.

ಪಾಕಿಸ್ತಾನದಂತಹ ದೇಶದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರರಿಗೆ ಇದು ಆಶ್ರಯ ನೀಡುತ್ತದೆ ಎಂಬ ಬಗ್ಗೆ ಹೆಮ್ಮೆ ಇದೆ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಸಮರ್ಥಿಸಿಕೊಂಡಿದ್ದಾರೆ.

“ಸಿಖ್ ಅಥವಾ ಹಿಂದೂ ಹುಡುಗಿಯರ ಮೇಲೆ ಅತ್ಯಾಚಾರ ಮತ್ತು ಅವಳ ಅತ್ಯಾಚಾರಿಗಳನ್ನು ಮದುವೆಯಾಗುವಂತೆ ಒತ್ತಾಯಿಸಿದ ಪ್ರಕರಣಗಳು ನಡೆದಿವೆ. ಅವರು ಭಾರತದಲ್ಲಿ ಆಶ್ರಯ ಬಯಸುವ ಜನರು. ಅವರಿಗೆ ಅಗತ್ಯವಾದ ಆಶ್ರಯವನ್ನು ನೀಡುವ ಈ ಕಾನೂನು ನನಗೆ ಹೆಮ್ಮೆ ತಂದಿದೆ ”ಎಂದು ಲಖನೌದ ಹಿಂದೂಸ್ತಾನ್ ಸಮಾಗಂನಲ್ಲಿ ಇರಾನಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...