Homeಕರ್ನಾಟಕಸಂಘ ಕಟ್ಟಿ ಹಕ್ಕು ಕೇಳಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಬೆಂಗಳೂರಿನ ITI ಕಂಪೆನಿ: ಕಾರ್ಮಿಕರ ಆರೋಪ- ಪ್ರತಿಭಟನೆ

ಸಂಘ ಕಟ್ಟಿ ಹಕ್ಕು ಕೇಳಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ ಬೆಂಗಳೂರಿನ ITI ಕಂಪೆನಿ: ಕಾರ್ಮಿಕರ ಆರೋಪ- ಪ್ರತಿಭಟನೆ

- Advertisement -
- Advertisement -

ಒಕ್ಕೂಟ ಸರ್ಕಾರದ ಮಾಲಿಕತ್ವದ ದೂರಸಂಪರ್ಕ ಉಪಕರಣಗಳ ತಯಾರಿಕಾ ಕಂಪನಿಯಾದ ‘ಐಟಿಐ ಲಿಮಿಟೆಡ್‌‌’ನ (ITI) ಸುಮಾರು 80 ಗುತ್ತಿಗೆ ಕಾರ್ಮಿಕರನ್ನು ಯಾವುದೆ ನೊಟೀಸ್‌‌ ನೀಡದೆ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕಳೆದ ಬುಧವಾರ ಕಾರ್ಮಿಕರು ಕೆಲಸಕ್ಕೆ ತೆರಳುವಾಗ ವಜಾ ಮಾಡಲಾಗಿದೆ ಎಂದು ಹೇಳಿ ಕಂಪೆನಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಕಾರ್ಮಿಕರು ಐದು ದಿನಗಳಿಂದ AICCTU ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

“ಈ ಹಿಂದೆ ಗುತ್ತಿಗೆಯಲ್ಲಿ ಹಗರಣ ನಡೆದಿದೆ ಎಂದು ಕಾರ್ಮಿಕರು ದಾವೆ ಹೂಡಿದ್ದರು. ಆ ಪ್ರಕರಣ ನ್ಯಾಯಾಲಯದಲ್ಲಿದೆ. ಆದ್ದರಿಂದ ಸಂಘಟನೆಯಲ್ಲಿರುವ ಮತ್ತು ದಾವೆ ಹೂಡಿರುವ ಕಾರ್ಮಿಕರನ್ನು ಗುರುತಿಸಿ ಕೆಲಸಕ್ಕೆ ಹಾಜರಾಗಲು ಬಿಡುತ್ತಿಲ್ಲ” ಎಂದು AICCTU ಕಾರ್ಮಿಕ ಸಂಘಟನೆಯ ನಾಯಕಿ ಮೈತ್ರೇಯಿ ಕೃಷ್ಣನ್‌ ಹೇಳಿದ್ದಾರೆ.

ಇದನ್ನೂ ಓದಿ:2 ತಿಂಗಳಿನಿಂದ ವೇತನವಿಲ್ಲ: ಎಐಸಿಸಿಟಿಯು ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಕಾರ್ಮಿಕರ ಪ್ರತಿಭಟನೆ

ಹಲವಾರು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರೂ, ಸುಮಾರು 30 ವರ್ಷಗಳಿಂದ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಕಂಪೆನಿಯ ಉನ್ನತಿಗೆ ಶ್ರಮಿಸಿದ್ದಾರೆ. ಅವರನ್ನು ಯಾವುದೆ ನೋಟಿಸ್‌ ನೀಡದೆ ಕೆಲಸಕ್ಕೆ ಹಾಜರಾಗಲು ಬಿಡುತ್ತಿಲ್ಲ. ಕಾರ್ಮಿಕರು ಹೂಡಿರುವ ಪ್ರಕರಣವನ್ನು ವಾಪಾಸು ಪಡೆಯುವಂತೆ ಅವರಿಗೆ ಒತ್ತಡ ತರಲಾಗಿದೆ ಎಂದು ಮೈತ್ರೇಯಿ ಕೃಷ್ಣನ್‌ ಆರೋಪಿಸಿದ್ದಾರೆ.

ಕಂಪನಿಯು ಈ ಹಿಂದೆ ಬಾಕಿ ಇರುವ ಸಂಬಳ, ಭವಿಷ್ಯ ನಿಧಿ ಅಥವಾ ನೌಕರರ ರಾಜ್ಯ ವಿಮೆಯನ್ನು ಪಾವತಿಸದೆ ಕಾರ್ಮಿಕರನ್ನು ಶೋಷಿಸುತ್ತಿತ್ತು ಎಂದು ಆರೋಪಿಸಲಾಗಿದೆ. ಜುಲೈ 2020 ರಲ್ಲಿ, ಒಪ್ಪಂದದ ಮುಕ್ತಾಯದ ನೆಪದಲ್ಲಿ ಸುಮಾರು 400 ಕಾರ್ಮಿಕರನ್ನು ಕಂಪೆನಿಯು ವಜಾಗೊಳಿಸಿತ್ತು. ಆದರೆ ನಂತರ 400 ಕಾರ್ಮಿಕರಲ್ಲಿ 150 ಮಂದಿಯನ್ನು ಆಯ್ಕೆ ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿತ್ತು. ಈ ವೇಳೆ ಕಾರ್ಮಿಕರು ತಮ್ಮ ಬಾಕಿ ವೇತನವನ್ನು ಕೇಳಿದ್ದರು, ಆದರೆ ಕಂಪನಿಯು ಅವರಿಗೆ ಪಾವತಿಸಲು ನಿರಾಕರಿಸಿತು. ಕಂಪೆನಿಯು ಪ್ರತಿ ಕಾರ್ಮಿಕರಿಗೆ ಸುಮಾರು 1.5 ಲಕ್ಷ ರೂನಷ್ಟು ಬಾಕಿಯಿಟ್ಟಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಕಾರ್ಮಿಕರು ಒಗ್ಗೂಡಿ ಕೆಜಿಎಲ್‌ಯು ಅಡಿಯಲ್ಲಿ ಯೂನಿಯನ್‌ ರಚಿಸಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಕಾರ್ಮಿಕರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಮೈತ್ರೇಯಿ ಆರೋಪಿಸಿದ್ದಾರೆ. ಡಿಸೆಂಬರ್ 1 ರಂದು ಯೂನಿಯನ್ ಸದಸ್ಯರನ್ನು ಪ್ರತ್ಯೇಕವಾಗಿ ಗುರುತಿಸಿ ಉಳಿದವರನ್ನು ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗೌರವದಿಂದ ವರ್ತಿಸಿ; ಘನತೆಯುತ್ತ ಕೆಲಸದ ವಾತಾವರಣ ನಿರ್ಮಿಸಿ: ಬೆಂಗಳೂರು ಪೌರ ಕಾರ್ಮಿಕರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...