Homeಕರ್ನಾಟಕವಿದ್ಯಾರ್ಥಿನಿಯನ್ನು ರಾತ್ರಿ ವೇಳೆ ಬಸ್‌ನಿಂದ ಕೆಳಗಿಳಿಸಿದ ಬಿಎಂಟಿಸಿ ಕಂಡಕ್ಟರ್‌‌: ದೂರು, ಪ್ರತಿದೂರು ದಾಖಲು

ವಿದ್ಯಾರ್ಥಿನಿಯನ್ನು ರಾತ್ರಿ ವೇಳೆ ಬಸ್‌ನಿಂದ ಕೆಳಗಿಳಿಸಿದ ಬಿಎಂಟಿಸಿ ಕಂಡಕ್ಟರ್‌‌: ದೂರು, ಪ್ರತಿದೂರು ದಾಖಲು

ಈ ಇಡೀ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದು ವೈರಲ್ ಆಗಿದೆ. ಜೊತೆಗೆ ದೂರು, ಪ್ರತಿದೂರಿನ ಅನ್ವಯ ಎರಡು ಪ್ರಕರಣಗಳು ದಾಖಲಾಗಿವೆ.

- Advertisement -
- Advertisement -

ಪಾಸ್ ಇದ್ದರೂ ಸಹ ಶುಲ್ಕ ಪಾವತಿ ರಸೀದಿ ಜೆರಾಕ್ಸ್‌ ಪ್ರತಿ ಇಲ್ಲವೆಂಬ ಕಾರಣವೊಡ್ಡಿ ವಿದ್ಯಾರ್ಥಿನಿಯನ್ನು ರಾತ್ರಿ ವೇಳೆ ಬಸ್‌ನಿಂದ ಕೆಳಗಿಳಿಸಿದ ಬಿಎಂಟಿಸಿ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಕಂಡಕ್ಟರ್‌ ನೀಡಿದ ದೂರಿನ ಆಧಾರದಲ್ಲಿ ವಿದ್ಯಾರ್ಥಿನಿ ಮೇಲೂ ಸಹ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಜನನಿ ವತ್ಸಲ ಅವರು ಡಿ.3ರಂದು ರಾತ್ರಿ ಸುಮಾರು 9.30 ವೇಳೆಯಲ್ಲಿ ಬೆಂಗಳೂರಿನ ಕಾರ್ಪೋರೇಷನ್‌ ಸರ್ಕಲ್‌ನಿಂದ ಬಿಎಂಟಿಸಿ ಬಸ್‌‌ನಲ್ಲಿ (ಕೆಎ-57-ಎಫ್‌‌-3447) ಬೊಮ್ಮಸಂದ್ರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

“ಶಾಂತಿನಗರದ ಬಸ್ ನಿಲ್ದಾಣದ ಬಳಿ ನಿರ್ವಾಹಕರಾದ ಮನೋಜ್‌ ಅವರು ವಿದ್ಯಾರ್ಥಿನಿಯ ಬಸ್ ಪಾಸ್‌ ಕಿತ್ತುಕೊಂಡು, ಶುಲ್ಕ ರಸೀದಿ ಇಲ್ಲದ ಕಾರಣಕ್ಕೆ ಕೆಳಗೆ ಇಳಿಸಿ ಜಗಳ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಕೆಲ ಯುವಕರು ಜನನಿಯವರನ್ನು ಎಳೆದಾಡಿ ಮೊಬೈಲ್‌ ಫೋನ್‌ ಕಸಿದುಕೊಳ್ಳಲು ಯತ್ನಿಸಿದ್ದಾರೆ” ಎಂದು ಎಫ್‌ಐಆರ್‌ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.

“ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವುದಲ್ಲದೆ ನನ್ನ ಮೇಲೆ ಯುವಕರು ಹಲ್ಲೆ ನಡೆಸುತ್ತಿದ್ದವರಿಗೆ ಕಂಡಕ್ಟರ್ ಕುಮ್ಮಕ್ಕು ನೀಡಿದ್ದಾರೆ” ಎಂದು ವತ್ಸಲ ದೂರಿದ್ದು, ಅವರು ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್‌‌ 109, 34, 504, 393, 354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನನ್ನ ಮೊಬೈಲ್‌ನಲ್ಲಿ ಶುಲ್ಕ ಪಾವತಿ ರಸೀದಿಯ ಪ್ರತಿ ಇದೆ. ಆದರೂ ಕಂಡಕ್ಟರ್‌‌ ಪಾಸ್‌ ಕಿತ್ತುಕೊಂಡಿದ್ದಾರೆಂದು ಫೇಸ್‌ಬುಕ್‌ನಲ್ಲಿ ಜನನಿಯವರು ಲೈವ್‌ ಮಾಡಿರುವುದು ವೈರಲ್ ಆಗಿದೆ. ಅದರಲ್ಲಿ “ನನ್ನ ಪಾಸ್ ಯಾಕೆ ಕಿತ್ತುಕೊಂಡಿರಿ” ಎಂದು ವತ್ಸಲ ಪ್ರಶ್ನಿಸಿದ್ದಾರೆ. ಆಗ ಕಂಡಕ್ಟರ್ “ಮೊಬೈಲ್‌ ಫೋಟೋ ಪ್ರತಿಯನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಹೇಳುತ್ತಾರೆ.


ಇದನ್ನೂ ಓದಿರಿ: ಸುಳ್ಳುಗಳಿಗೆ ಕುಖ್ಯಾತವಾಗಿರುವ ‘ಮೇಘ್ ಅಪ್ಡೇಟ್ಸ್’ ಚಕ್ರವರ್ತಿ ಸೂಲಿಬೆಲೆಯವರ ನೆಚ್ಚಿನ ಟ್ವಿಟ್ಟರ್‌ ಅಕೌಂಟ್‌!


“ಕಲರ್‌ ಜೆರಾಕ್ಸ್‌ ಕಾಪಿಯನ್ನು ಮೊಬೈಲ್‌‌ನಲ್ಲಿ ತೆಗೆದುಕೊಂಡು ಬಂದರೆ ಸಾಕು ಎನ್ನುತ್ತಾರೆ” ಎಂದು ಜನನಿ ತಿಳಿಸುತ್ತಾರೆ. ಬಸ್‌ ಸಿಬ್ಬಂದಿ ನಿರಾಕರಿಸುತ್ತಾರೆ. “ಇಷ್ಟು ಹೊತ್ತಲ್ಲಿ ಕೆಳಗೆ ಇಳಿಸುತ್ತೀರಲ್ಲ ಇದು ಸರಿಯೇ? ಏನಾದರೂ ಅನಾಹುತವಾದರೆ ಯಾರು ಹೊಣೆ?” ಎಂದು ಜನನಿ ಕೇಳುತ್ತಾರೆ. “ನೀನು ಯಾವ ಟೈಮ್‌ಗಾದರೂ ಬಾ ನನಗೇನು?” ಎಂದು ಕಂಡಕ್ಟರ್ ದಬಾಯಿಸುತ್ತಾರೆ.

ವತ್ಸಲ ಅವರ ಪ್ರಶ್ನೆಗಳಿಗೆ ಉತ್ತರ ನೀಡದ ಸಿಬ್ಬಂದಿ ಬಸ್‌ನಿಂದ ಇಳಿಸುವ ಯತ್ನ ಮಾಡಿದ್ದಾರೆ. ಆಗ ಬಸ್‌ ಮುಂದಕ್ಕೆ ಹೋಗಲು ಬಿಡದೆ ಜನನಿಯವರು ಪ್ರತಿಭಟಿಸಿದ್ದಾರೆ. ಕೆಲವು ಯುವಕರು ಕಂಡಕ್ಟರ್‌ ಪರ ವಾದಿಸುತ್ತಾ, ಜನನಿಯವರ ಮೇಲೆ ಜಗಳವಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಒಂದು ರಸೀದಿ ಕಾರಣಕ್ಕೆ ರಸ್ತೆ ಮಧ್ಯೆಯಲ್ಲಿ ಕೆಳಗಿಳಿಸಲು ಯತ್ನಿಸಿದ ಬಿಎಂಟಿಸಿ ಸಿಬ್ಬಂದಿಯ ನಡೆಯನ್ನು ಖಂಡಿಸಿ, ವಿಲ್ಸನ್‌ ಗಾರ್ಡನ್ ಪೊಲೀಸ್‌ ಠಾಣೆಯಲ್ಲಿ ಜನನಿ ವತ್ಸಲ ಅವರು ಪ್ರಕರಣ ದಾಖಲಿಸಿದ್ದಾರೆ. ಜನನಿಯವರ ಲೈವ್‌ ನೋಡಿ, ಜನನಿಯವರ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಾಗುವವರೆಗೂ ಸಹಾಯ ಮಾಡಿದ್ದಾರೆ ಎಂದು ಅವರು ನಾನುಗೌರಿ.ಕಾಂಗೆ ತಿಳಿಸಿದ್ದಾರೆ.


ಇದನ್ನೂ ಓದಿರಿ: ದಕ್ಷಿಣ ಕನ್ನಡ: ಯುವಕರ ಮೇಲೆ ತಲವಾರ್‌‌ ದಾಳಿ; ಐವರಿಗೆ ಗಾಯ


ಪ್ರತಿ ದೂರು ದಾಖಲು

ನಂತರ ಕಂಡಕ್ಟರ್ ಮನೋಜ್‌ರವರು ನನ್ನ ಮೇಲೆ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ಜನನಿಯವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಲ್ಸನ್‌ ಗಾರ್ಡನ್‌ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಠಪತಿ ಅವರನ್ನು ನಾನುಗೌರಿ.ಕಾಂ ಸಂಪರ್ಕಿಸಿದಾಗ, “ಕೌಂಟರ್‌ ಕೇಸ್‌ ದಾಖಲಾಗಿರುವುದು” ಖಚಿತವಾಗಿದೆ ಎಂದರು. “ಕೌಂಟರ್‌ ಕೇಸ್‌ಗೆ ಆಧಾರವೇನು?” ಎಂದು ಕೇಳಿದ್ದಕ್ಕೆ ಉತ್ತರಿಸಲು ನಿರಾಕರಿಸಿದರು.

ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಆರೋಪದ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಜನನಿಯವರು, “ವಿಜಯ ಕರ್ನಾಟಕ ಪತ್ರಿಕಾ ವರದಿ ಸುಳ್ಳುಗಳಿಂದ ಕೂಡಿದೆ. ನಾನು ಜೋರು ದನಿಯಲ್ಲಿ ಪ್ರಶ್ನಿಸಿದ್ದು ನಿಜ. ಇಡೀ ಘಟನೆ ಫೇಸ್‌ಬುಕ್‌ನಲ್ಲಿ ಲೈವ್ ಆಗಿದೆ. ನಾನು ಕರೆ ಮಾಡಿ ನನ್ನ ಸ್ನೇಹಿತರನ್ನು ಕರೆಸಿಕೊಂಡಿರುವುದಾಗಿ ಪತ್ರಿಕೆಯಲ್ಲಿ ಆರೋಪಿಸಲಾಗಿದೆ. ನನ್ನ ಸ್ನೇಹಿತರು ನನ್ನ ಲೈವ್ ನೋಡಿ ಸ್ಥಳಕ್ಕೆ ಧಾವಿಸಿದರೆ ಹೊರತು ನಾನು ಯಾರಿಗೂ ಫೋನ್ ಮಾಡಿಲ್ಲ. ಇಡೀ ಘಟನೆ ಅರ್ಧ ಗಂಟೆಗೂ ಹೆಚ್ಚು ಸಮಯ ಲೈವ್ ಆಗುತ್ತಿದ್ದಾಗ ನಾನು ಹೇಗೆ ಫೋನ್ ಮಾಡಲು ಸಾಧ್ಯ? ಇನ್ನು ನಾನು ಯಾರಿಗೂ ಹಲ್ಲೆ ನಡೆಸಿಲ್ಲ. ಬೇಕಾದರೆ ಲೈವ್ ಪೂರ್ತಿ ನೋಡಿ. ಆದರೆ ಸುಳ್ಳು ವರದಿ ಮಾಡಲಾಗಿದೆ” ಎಂದರು.

ಒಂದು ಬಟ್ಟೆ ಅಭಿಯಾನದ ಕರ್ತೃ ಜನನಿ

ಜನನಿ ವತ್ಸಲ ಅವರು ಮೊದಲಿನಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರೂ ಹೌದು. ಈ ಹಿಂದೆಯೂ ಹಲವು ದೌರ್ಜನ್ಯಗಳನ್ನು ಪ್ರಶ್ನಿಸಿ ವಿಡಿಯೊಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಜನನಿಯವರು ಕಳೆದ ಎರಡು ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಬಡವರಿಗಾಗಿ “ಒಂದು ಬಟ್ಟೆ ಅಭಿಯಾನ, ಮತ್ತು ಒಂದು ಜೊತೆ ಚಪ್ಪಲಿ ಅಭಿಯಾನ”ವನ್ನು ನಿರಂತವಾಗಿ ಜನನಿ ನಡೆಸುತ್ತಿದ್ದಾರೆ. ಈಗ ಮನೆ ಇಲ್ಲದೆ ರಸ್ತೆ ಬದಿ ವಾಸಿಸುವವರಿಗೆ `ಒಂದು ಹೊದಿಗೆ ನೀಡುವ ಅಭಿಯಾನ’ ಸಹ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

“ಹೆಣ್ಣು ಮಕ್ಕಳನ್ನು ಈ ಸಣ್ಣಪುಟ್ಟ ಕಾರಣ ನೀಡಿ ರಾತ್ರಿ ವೇಳೆ ಬಸ್‌ನಿಂದ ಕೆಳಗಿಳಿಸಿದರೆ ಏನಾದರೂ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ?” ಎಂಬ ಪ್ರಶ್ನೆಯಲ್ಲಿ ಅರ್ಥವಿದೆ. ಈ ನಿಟ್ಟಿನಲ್ಲಿ ದೆಹಲಿ, ತಮಿಳುನಾಡು, ತೆಲಂಗಾಣ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಿರ್ಧಾರವನ್ನು ನಮ್ಮ ರಾಜ್ಯ ಸರ್ಕಾರವೂ ತೆಗೆದುಕೊಳ್ಳುವುದು ಸೂಕ್ತ. ದೆಹಲಿ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ಇದೆ. ಇನ್ನು ತೆಲಂಗಾಣ ಸರ್ಕಾರ, “ಸಂಜೆ ಏಳು ಗಂಟೆಯ ಬಳಿಕ ಮಹಿಳೆಯರು ಕೇಳಿದ ಕಡೆ ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು” ಎಂದು ತಿಳಿಸಿದೆ. ಇಂತಹ ನಿರ್ಧಾರಗಳನ್ನು ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡರೆ ಮಹಿಳೆಯರಿಗೆ ಬಹಳ ಅನುಕೂಲವಾಗುತ್ತದೆ.


ಇದನ್ನೂ ಓದಿರಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...