Homeಮುಖಪುಟಜಮ್ಮು-ಕಾಶ್ಮೀರದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಪೊಲೀಸ್ ಸೇರಿ ನಾಲ್ವರ ಬಂಧನ

ಜಮ್ಮು-ಕಾಶ್ಮೀರದಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಪೊಲೀಸ್ ಸೇರಿ ನಾಲ್ವರ ಬಂಧನ

- Advertisement -
- Advertisement -

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್ ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ  ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಖಾಜಿಗುಂಡ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ’ಬೊನಿಗಾಮ್ ಖಾಜಿಗುಂಡ್‌ನಲ್ಲಿ ತನ್ನ ಮಗಳ ಮೇಲೆ ಮೂವರು ಅತ್ಯಾಚಾರವೆಸಗಿದ್ದಾರೆ. ಇದಕ್ಕೆ ಡ್ಯಾಮ್ಜೆನ್ ಪ್ರದೇಶದ ಮಹಿಳೆಯೊಬ್ಬರು ಸಹಾಯ ಮಾಡಿದ್ದಾರೆ” ಎಂದು ಲಿಖಿತ ದೂರು ನೀಡಿದ್ದರು.

“ಬಾಲಕಿಯ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೂಲಕ ಅತ್ಯಾಚಾರ ಪ್ರಕರಣ ಹೊರಬಂದಿದೆ” ಎಂದು ಪೊಲೀಸ್ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಇದನ್ನೂ ಓದಿ: ಚೆಕ್‌ ಬೌನ್ಸ್ ಕೇಸ್: ಖ್ಯಾತ ನಟ ಶರತ್‌ಕುಮಾರ್ ಮತ್ತು ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಜೈಲು

ದೂರು ಸ್ವೀಕರಿಸಿದ ನಂತರ, ಪೊಲೀಸ್ ಠಾಣೆ ಖಾಜಿಗುಂಡ್‌ನಲ್ಲಿ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಯಿತು, ತನಿಖೆ ನಡೆಸಿ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಬೀಬ್ರಾಡಾ ಪರಿಗಂ ನಿವಾಸಿ ಜಹೂರ್ ಅಹ್ಮದ್ ಮಿರ್, ಚೆಯಾನ್ ದೇವ್ಸರ್ ನಿವಾಸಿ ಈಜಾಜ್ ಅಹ್ಮದ್ ಶಾ, ಕಿಫಾಯತ್ ಅಹ್ಮದ್ ಮಲ್ಲಿಕ್ ಮತ್ತು ಶಬ್ರೂಜಾ ಎಂದು ಗುರುತಿಸಲಾಗಿದೆ. ಆದರೆ, ಇದರಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಯಾರು ಎಂದು ತಿಳಿಸಿಲ್ಲ.

ಅತ್ಯಾಚಾರ ಕೃತ್ಯ ನಡೆದಾಗ ಆರೋಪಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ ಮತ್ತು ಕೃತ್ಯ ಪೊಲೀಸ್ ಆವರಣದೊಳಗೆ ನಡೆದಿಲ್ಲ. ಕ್ರಿಮಿನಲ್ ಮೊಕದ್ದಮೆಗಳ ಜೊತೆಗೆ, ಆತನ ವಿರುದ್ಧ ಇಲಾಖಾ ಕ್ರಮಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


 ಇದನ್ನೂ ಓದಿ: ಸಿಡಿ ಕೇಸ್: FIR ದಾಖಲಿಸದ ಕಮಲ್ ಪಂತ್ ವಿರುದ್ಧ ಖಾಸಗಿ ದೂರು ನೀಡಿದ ಜನಾಧಿಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...